ಎಸ್ ಎಸ್ ಎಲ್ ಸಿ ಪರೀಕ್ಷೆ -2 ಸಂಬಂಧಿಸಿದಂತೆ 2025 ಸಾಲಿನ ಹಾಜರಾತಿ ಕೊರತೆಯಿಂದಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ. ಈಗಾಗಲೇ 2025ರ ಎಸ್ ಎಸ್ ಎಲ್ ಸಿ ಪರೀಕ್ಷೆ -2 ರ ವೇಳಾಪಟ್ಟಿ ಬಿಡುಗಡೆಯಾಗಿದ್ದು ಮೇ 26ರಂದು ಪ್ರಾರಂಭವಾಗಿ 31 ಮೇ ದಿನಾಂಕದಂದು ಮುಕ್ತಾಯವಾಗಲಿದೆ .
ಪರೀಕ್ಷೆಗೆ ಸಂಬಂಧಿಸಿದಂತೆ ಶುಲ್ಕ ಹಾಗೂ ಖಾಸಗಿ ವಿದ್ಯಾರ್ಥಿಗಳ ವಯೋಮಿತಿ ಸಂಬಂಧಿಸಿದಂತೆ ಮಾಹಿತಿಯನ್ನು ವೀಕ್ಷಿಸಿ ಮತ್ತು ಫೇಲಾದ ವಿದ್ಯಾರ್ಥಿಗಳಿಗೆ ತಲುಪಿಸಿ
www.growwcontinue.com
welcome to www.growwcontinue.com this website will inform you about finance,health,and education our main goal is to imrove peoples health,wealth,education
ಎಸ್ ಎಸ್ ಎಲ್ ಸಿ ಪರೀಕ್ಷೆ-2 ಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ.....
ಮೆದುಳನ್ನು ಚುರುಕುಗೊಳಿಸುವದು ಹೇಗೆ?..ಹಲವು ಸರಳ ಕಾರ್ಯಗಳು ಸಾಕು ಚುರುಕುಗೊಳಿಸಲು.
ಮೆದುಳಿನ ಆರೋಗ್ಯ ಎಂದರೇನು
?
ಮೆದುಳಿನ ಆರೋಗ್ಯ ಎಂದರೆ ಯಾವುದೇ ಒಂದು ವಿಚಾರವನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವುದು, ಅರ್ಥೈಸಿಕೊಳ್ಳುವುದು ,ಭಾವನೆಗಳನ್ನು ಸಮತೋಲಿಸುವುದು. ಒಂದು ವಿಷಯದ ಕುರಿತಾಗಿ ಏಕಾಗ್ರತೆ ವಹಿಸುವುದು ಮತ್ತು ನಿರ್ಧಾರ ಕೈಗೊಳ್ಳುವುದು ಮತ್ತು ಯಾವುದೇ ಒಂದು ವಿಷಯವನ್ನು ವೇಗವಾಗಿ ಕಲಿಯುವುದು ,ಅನುಭವಿಸುವುದು ಆಗಿದೆ.
ನಿಮ್ಮ ಮೆದುಳು ಆರೋಗ್ಯವಾಗಿದ್ದರೆ ನೀವು ತುಂಬಾ ವೇಗವಾಗಿ ಆಲೋಚನೆ ಮಾಡುವವರಾಗಿರುತ್ತೀರಿ, ಹೆಚ್ಚು ಕ್ರಿಯಾಶೀಲರಾಗಿರುತ್ತೀರಿ ಹೆಚ್ಚು ಸೃಜನಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತೀರಿ. ಇವೆಲ್ಲವನ್ನೂ ನೀವು ಮಾಡದಿದ್ದರೆ ನಿಮ್ಮ ಮೆದುಳಿನ ಆರೋಗ್ಯ ಸಮಸ್ಯೆಯಲ್ಲಿದೆ ಎಂದು ಅರ್ಥ.
ಮೆದುಳಿನ ಆರೋಗ್ಯ ಮುಖ್ಯ ಏಕೆ?
ನಮ್ಮ ಮೆದುಳು ನಮ್ಮ ದೇಹದ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ. ನಮ್ಮ ನರವ್ಯೂಹ ವ್ಯವಸ್ಥೆ, ಹಾರ್ಮೋನುಗಳ ಉತ್ಪತ್ತಿ, ದೇಹಕ್ಕೆ ಹೆಚ್ಚು ರೋಗನಿರೋಧಕ ಶಕ್ತಿಯನ್ನು ಒದಗಿಸುವುದು ಮುಂತಾದ ಅನೇಕ ಕಾರ್ಯಗಳನ್ನು ಮೆದುಳು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿರುತ್ತದೆ. ನಾವು ಮೆದುಳಿನ ಆರೋಗ್ಯವನ್ನು ನಿರ್ಲಕ್ಷಿಸಿದರೆ ಹಲವಾರು ಶಾಶ್ವತ ತೊಂದರೆಗಳಿಗೆ ಒಳಗಾಗುತ್ತೇವೆ ಉದಾಹರಣೆಗೆ ಬ್ರೈನ್ ಫಾಗ್, ಮೂಡ್ ಸ್ವಿಂಗ್ಸ್ ,ಕಡಿಮೆ ನೆನಪಿನ ಶಕ್ತಿ ,ನರ ವ್ಯವಸ್ಥೆಗೆ ಸಂಬಂಧಿಸಿದ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತೇವೆ.
ಮೆದುಳಿನ ಆರೋಗ್ಯದ ನಾಶಕಾರಕಗಳು ಯಾವುವು?
ಜಗತ್ತಿನಲ್ಲಿ ಹಲವಾರು ಅನಾರೋಗ್ಯಕರ ವಸ್ತುಗಳನ್ನು ಆರೋಗ್ಯಕರ ಎಂದು ಬಿತ್ತರಿಸುವುದರ ಮೂಲಕ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಾರೆ. ವಸ್ತುಗಳ ಕುರಿತ ಅನೇಕ ವಿಷಯಗಳನ್ನು ಗಮನಕ್ಕೆ ತಾರದೆ ಜನರಿಗೆ ಖರೀದಿ ಮಾಡಿಸಲಾಗುತ್ತದೆ .ತೂಕ ಇಳಿಕೆ,ನೆನಪಿನ ಶಕ್ತಿ ವೃದ್ದಿಸುವುದು ಹೀಗೆ ಆನೇಕ ಉತ್ಪನ್ನಗಳ ಮಾರಟವು ಮೋಸಗೊಳಿಸುವ ಉದ್ದೇಶ ಹೊಂದಿವೆ.
ಮುಖ್ಯವಾಗಿ ಮೆದುಳಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ತೊಂದರೆ ಕಾರಕಗಳು ಯಾವುವೆಂದರೆ?
ಕಡಿಮೆ ನಿದ್ರೆ ಮಾಡುವುದು, ಪದೇ ಪದೇ ಒತ್ತಡಕ್ಕೆ ಒಳಗಾಗುವುದು, ಮೊಬೈಲ್ ಅಥವಾ ಕಂಪ್ಯುಟರ್ ಗಳಲ್ಲಿ ಹೆಚ್ಚಿನ ಸಮಯದ ವೀಕ್ಷಣೆ ಹೆಚ್ಚು, ಸಕ್ಕರೆ ಆಧಾರಿತ, ಅಥವಾ ಕೃತಕ ಬಣ್ಣ ಆಧಾರಿತ ವಸ್ತುಗಳ ಸೇವನೆ ಮಾಡುವುದು. ಬಹಳಷ್ಟು ಸಮಯದ ಕುಳಿತುಕೊಂಡಿರುವುದು ಮುಂತಾದ ಚಟುವಟಿಕೆಗಳು ನಮ್ಮ ಮೆದುಳಿನಲ್ಲಿ ನಿಷ್ಕ್ರಿಯತೆ ಉಂಟುಮಾಡುತ್ತವೆ.
ನಮ್ಮ ಮೆದುಳಿನ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
ನಮ್ಮ ಮೆದುಳು ಎಲ್ಲಾ ಸನ್ನಿವೇಶಗಳಲ್ಲೂ ಹೊಂದಾಣಿಕೆ ಮಾಡಿಕೊಳ್ಳುವ ಗುಣವನ್ನು ಹೊಂದಿದೆ. ಸರಿಯಾದ ಮಾರ್ಗದಲ್ಲಿ ಚಿಕಿತ್ಸೆ ಹಾಗೂ ನಿರ್ದೇಶನ ಕೊಟ್ಟಾಗ ಸಂಪೂರ್ಣವಾಗಿ ಕ್ರಿಯಾಶೀಲವಾಗುತ್ತದೆ .ಹಾಗೂ ಹಲವಾರು ವಿಷಯಗಳ ಮೇಲೆ ನಿಯಂತ್ರಣ ಹೊಂದುತ್ತದೆ. ಮುಖ್ಯವಾಗಿ ಕೆಲವು ಬದಲಾವಣೆಗಳನ್ನು ನಮ್ಮ ಜೀವನದಲ್ಲಿ ಮಾಡಿಕೊಳ್ಳಬೇಕು ಅವು ಯಾವುವೆಂದರೆ.
ನಿದ್ರೆ : ಮೆದುಳಿಗೆ ದಿನಕ್ಕೆ ಏಳರಿಂದ ಎಂಟು ತಾಸುಗಳ ಕಾಲ ವಿಶ್ರಾಂತಿ ಅಗತ್ಯವಿದೆ ಈ ವಿಶ್ರಾಂತಿಯು ಮೆದುಳಿಗೆ ಪುನಶ್ಚೇತನ ನೀಡಿ ಚಟುವಟಿಕೆಯಿಂದ ಭಾಗವಹಿಸುವಂತೆ ಮಾಡುತ್ತದೆ.
ಆಹಾರ :ಉತ್ತಮ ಆಹಾರ ಮೆದುಳಿನಲ್ಲಿರುವ ನರಗಳಿಗೆ ಹೆಚ್ಚಿನ ಪ್ರಮಾಣದ ರಕ್ತ ಪರಿಚಲನೆ ಉಂಟು ಮಾಡಿ ಮೆದುಳಿನ ಜೀವಕೋಶಗಳಿಗೆ ಶಕ್ತಿ ಉಂಟುಮಾಡುವುದರ ಜೊತೆಗೆ ಕ್ರಿಯಾಶೀಲತೆ ಹೆಚ್ಚಿಸುತ್ತದೆ ಮೆದುಳಿನ ಸಾಮರ್ಥ್ಯ ವೃದ್ಧಿಸುವ ಆಹಾರಗಳಾದ wallnut,apple,kiwi, ಹಾಗೂ ಆರೋಗ್ಯಕರ ಎಣ್ಣೆ ಅಂಶಗಳಾದ avo cado,olive oil, omega 3 fatty acids,berry fruits, dark chacolate, ಅಗಸೆ ಬೀಜ ಮೀನು ಮುಂತಾದ ಪದಾರ್ಥಗಳ ಸೇವನೆ ಮೆದುಳಿನ ಕ್ರಿಯಾಶೀಲತೆ ಹೆಚ್ಚಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ.
ವ್ಯಾಯಾಮ :ವ್ಯಾಯಾಮ ಕೇವಲ ನಿಮ್ಮ ದೇಹಕ್ಕೆ ಮಾತ್ರವಲ್ಲ ಇದು ನಿಮ್ಮ ಮೆದುಳಿಗೂ ಕೂಡ ಆರೋಗ್ಯವನ್ನು ಉಂಟು ಮಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಇದು ನಮ್ಮ ದೇಹದಲ್ಲಿ ರಕ್ತ ಪರಿಚಲನೆಯ ವೇಗ ಹೆಚ್ಚಿಸುತ್ತದೆ ಹಾಗೂ ನಮ್ಮಲ್ಲಿ ಕ್ರಿಯಾಶೀಲತೆಯನ್ನು ತರುತ್ತದೆ. ಎರಡು ತಾಸುಗಳಿಗಿಂತ ಅಧಿಕ ಸಮಯ ಒಂದೇ ಕಡೆ ಕುಳಿತುಕೊಳ್ಳುವುದು ಸಹ ಮೆದುಳಿನ ನಿಷ್ಕ್ರಿಯತೆಗೆ ಒಂದು ಉದಾಹರಣೆಯಾಗಿದೆ ಹೆಚ್ಚು ಲವಲವಿಕೆಯಿಂದ ಓಡಾಡಿದಷ್ಟು ಹೆಚ್ಚು ಮೆದುಳು ಕ್ರಿಯಾಶೀಲವಾಗಿರುತ್ತದೆ.
ಒತ್ತಡರಹಿತ ಜೀವನ:ಮೆದುಳು ಸ್ಪಷ್ಟವಾಗಿ ಯೋಚನೆಗಳನ್ನು ಮಾಡಬೇಕೆಂದರೆ ಅದಕ್ಕೆ ಒತ್ತಡ ರಹಿತ ಸನ್ನಿವೇಶ ಮುಖ್ಯವಾಗುತ್ತದೆ ಒತ್ತಡವನ್ನು ನಿಭಾಯಿಸಲು ಈ ಕೆಳಗಿನ ಚಟುವಟಿಕೆಗಳನ್ನು ಮಾಡುವುದು ಉತ್ತಮ.
ನಿಸರ್ಗದ ಮಡಿಲಲ್ಲಿ ಹೆಚ್ಚಿನ ಸಮಯ ಕಳೆಯುವುದು, ನಿಮ್ಮ ಪ್ರೀತಿ ಪಾತ್ರರೊಂದಿಗೆ ಹೆಚ್ಚಿನ ಸಮಯ ಕಳೆಯುವುದು ,ನಿಮ್ಮ ಭಾವನೆಗಳ ಬಗ್ಗೆ ಗಮನಹರಿಸುವುದು ಮತ್ತು ಅಭ್ಯಾಸ ಮಾಡುವುದು, ಒತ್ತಡ ನಿವಾರಣೆಗಾಗಿ ಪ್ರಾಣಾಯಾಮ ಮಾಡುವುದು, ಎಲ್ಲಾ ಕಾರ್ಯಗಳನ್ನು ಮಾಡುತ್ತಾ ನಮ್ಮಲ್ಲಿ ಶಾಂತತೆಯನ್ನು ನೆಲೆಗೊಳಿಸುವುದು ಉತ್ತಮ.
ಮೆದುಳಿನ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಉಳಿದ ಎಲ್ಲಾ ಕೆಲಸವನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯ. ಆದ್ದರಿಂದ ತಲೆಗೆ ತೊಂದರೆಯನ್ನುಂಟು ಮಾಡುವ ಯಾವುದೇ ಕೆಲಸಗಳನ್ನು ಮಾಡುವಾಗ ಮುಖ್ಯವಾಗಿ ಶಿರ ಕವಚವನ್ನು ಬಳಸುವುದು ಉತ್ತಮ .ಧೂಮಪಾನ ಮಧ್ಯಪಾನಗಳು ಮೆದುಳಿನ ಬೆಳವಣಿಗೆಗೆ ಅಪಾಯಕಾರಿ.
ಸಾಮಾಜಿಕ ಸಂವಹನ:ಸಮಾಜದಲ್ಲಿನ ಅನೇಕ ವ್ಯಕ್ತಿತ್ವಗಳ ಜನರ ಜೊತೆ ಬೆರೆಯುವುದು ಮೆದುಳಿನ ಕ್ರಿಯಾಶೀಲತೆ ಹೆಚ್ಚಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ . ಹೀಗೆ ಮೆದುಳನ್ನು ಕ್ರಿಯಾಶೀಲವಾಗಿಟ್ಟುಕೊಳ್ಳುವುದು ನಮ್ಮ ಮುಖ್ಯ ಕಾರ್ಯವಾಗಬೇಕು.
-
ಬಹಳಷ್ಟು ಜನ ದೈಹಿಕವಾದ ಆರೋಗ್ಯವೇ ನಮ್ಮ ಆರೋಗ್ಯ ಎಂದು ತಿಳಿದಿದ್ದಾರೆ. ನಮ್ಮ ಆರೋಗ್ಯ ದೇಹಕ್ಕೆ ಸೀಮಿತವಾದರೆ ಅದು ನಮ್ಮ ತಪ್ಪು ಕಲ್ಪನೆ ನಮ್ಮ ಮಾನಸಿಕ ಆರೋಗ್ಯವು ತುಂಬಾ...
-
ಎಸ್ ಎಸ್ ಎಲ್ ಸಿ ಪರೀಕ್ಷೆ -2 ಸಂಬಂಧಿಸಿದಂತೆ 2025 ಸಾಲಿನ ಹಾಜರಾತಿ ಕೊರತೆಯಿಂದಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ. ಈಗಾಗಲೇ 2025ರ ಎಸ್ ಎಸ್ ಎ...
-
ಹಣ ಉಳಿತಾಯ ಮಾಡಲು ಸರಳ ಜೀವನ ಶೈಲಿ ಅಗತ್ಯ..... ಇಂದಿನ ಯುವ ಪೀಳಿಗೆ ದುಡಿದ ಹಣವನ್ನು ಉಳಿತಾಯ ಹೇಗೆ ಮಾಡಬೇಕು ಎಂಬುದರ ಬಗ್ಗೆ ಗಮನ ಹರಿಸುತ್ತಿಲ್ಲ. ತಾವು ದುಡಿದ ಹಣವನ...


