ಹಣ ಉಳಿತಾಯ ಮಾಡಲು ಸರಳ ಜೀವನ ಶೈಲಿ ಅಗತ್ಯ.....
ಇಂದಿನ ಯುವ ಪೀಳಿಗೆ ದುಡಿದ ಹಣವನ್ನು ಉಳಿತಾಯ ಹೇಗೆ ಮಾಡಬೇಕು ಎಂಬುದರ ಬಗ್ಗೆ ಗಮನ ಹರಿಸುತ್ತಿಲ್ಲ. ತಾವು ದುಡಿದ ಹಣವನ್ನು ದುಬಾರಿ ಬಟ್ಟೆ, ದುಬಾರಿ ವಸ್ತುಗಳ ಖರೀದಿಗೆ ವಿನಿಯೋಗಿಸುತ್ತಾರೆ ಇದರಿಂದ ನಾವು ಮಧ್ಯಮ ವರ್ಗದಿಂದ ಆಚೆಗೆ ಬರಲು ಆಗುವುದಿಲ್ಲ ನಮ್ಮ ಇಂದಿನ ಪರಿಸ್ಥಿತಿಗೆ ನಮ್ಮ ಆಲೋಚನೆಗಳೆ ಕಾರಣ . ನಮ್ಮ ಜೀವನ ಶೈಲಿಯು ನಮ್ಮ ಅರ್ಥಿಕ ಸ್ಥಿತಿಯನ್ನು ತಿಳಿಸಿಕೊಡುತ್ತದೆ .ನಮ್ಮ ಅರ್ಥಿಕ ಪರಿಸ್ಥಿತಿ ಸುಧಾರಿಸಬೇಕಾದರೆ ನಾವು ಸರಳ ಜೀವನ ಶೈಲಿ ರೂಢಿಸಿಕೊಂಡಾಗ ಮಾತ್ರ ಸಾಧ್ಯ .
ಉಳಿತಾಯ ಮಾಡುವುದು ಎಂದರೆ ಸರಳ ಜೀವನ ಶೈಲಿಯ ಭಾಗವು ಆಗಿದೆ ನಾವು ಮಧ್ಯಮ ವರ್ಗದವರಾಗಿದ್ದರೇ ಶ್ರೀಮಂತರಂತೆ ಕಾರು ಖರೀದಿಸುವುದು, ಇತರೆ ದುಂದು ವೆಚ್ಚಗಳನ್ನು ಮಾಡಿದಾಗ ನಾವು ಅರ್ಥಿಕವಾಗಿ ಸಬಲರಾಗುವುದಿಲ್ಲ ನಮ್ಮ ಬಳಿ ಎಷ್ಟೇ ಹಣವಿದ್ದರು ನಾವು ನಮಗೆ ಅವಶ್ಯಕತೆ ಇರುವಷ್ಟು ಖರ್ಚನ್ನು ಮಾಡಿದಾಗ ಮಾತ್ರ ನಾವು ಸರಿಯಾದ ದಾರಿಯಲ್ಲಿ ನಡೆಯುತ್ತಿದ್ದೆವೆ ಎಂದರ್ಥ. ಬದುಕಿನ ಹಲವಾರು ತೊಂದರೆಗಳಿಗೆ ಹಣದಿಂದ ಪರಿಹಾರ ಸಿಗುತ್ತದೆ ಎಂಬುದು ಕಟು ಸತ್ಯ. ನಮ್ಮ ಆನೇಕ ಒತ್ತಡ,ಹಾಗೂ ಉದ್ವಿ಼ಙ್ಞಗಳಿಗೆ ಹಣವೇ ಕಾರಣವಾಗಿರುತ್ತದೆ.
ಮನೆ ಬಜೆಟ್ ಅಗತ್ಯ ಎಕೆ?
ನಮ್ಮ ಹಣಕಾಸು ಉಳಿತಾಯದ ಯೋಜನೆಯನ್ನು ಸಣ್ಣ ವಯಸ್ಸಿನಿಂದ ಪ್ರಾರಂಭಿಸಬೇಕು ಅಂದರೆ 23 ಅಥವಾ 24 ನೇ ವರ್ಷದಿಂದ ಪ್ರಾರಂಭಿಸಿದಾಗ ಧೀರ್ಘ ಅವಧಿಯಲ್ಲಿ ನಾವು ಮಧ್ಯಮ ವರ್ಗದಿಂದ ಆಚೆ ಬಂದು ನಾವು ಅಂದುಕೊಂಡಿರುವ ಜೀವನ ಸಾಗಿಸಲೂ ಸಹಕಾರಿಯಾಗುತ್ತದೆ ನಮಗೆ ಬರುವ ಸಂಬಳ ಎಷ್ಟೇ ಚಿಕ್ಕದಾಗಿರಲಿ ನಾವು ಅದರ ಶೇಕಡಾ 25 ರಷ್ಟು ಭಾಗವನ್ನು ಉಳಿತಾಯಕ್ಕಾಗಿ ಎತ್ತಿಡಬೇಕು . ಅದರಲ್ಲಿ ಸಲ್ಪ ಪ್ರಮಾಣದ ಹಣವನ್ನು ಬ್ಯಾಂಕಗಳ ಎಫ್ ಡಿ ಯಲ್ಲಿ ಈ ಹಣ ಅವಶ್ಯಕತೆಗೆ ತಕ್ಕಂತೆ ಬಳಸಲು ಸಾಧ್ಯವಾಗುತ್ತದೆ ಮತ್ತು ಸ್ವಲ್ಪ ಪ್ರಮಾಣದ ಹಣವನ್ನು ಷೇರು ಮಾರುಕಟ್ಟೆಯಲ್ಲಿ ನಾವು ಚಿಕ್ಕ ವಯಸ್ಸಿನಿಂದ ಹೂಡಿಕೆ ಮಾಡುತ್ತಾ ಹೋದಾಗ ಧೀರ್ಘ ಅವಧಿಯಲ್ಲಿ ಅದು ನಮ್ಮನ್ನು ಸ್ವಾವಲಂಬಿಯಾಗಿ ರೂಪಿಸುತ್ತದೆ .ಆದ್ದರಿಂದ ಹಣ ಉಳಿತಾಯದ ಮೊದಲ ಹೆಜ್ಜೆಯನ್ನು ನಾವು ಮನೆಯ ಬಜೆಟ್ ನಿಂದ ಆರಂಭಿಸಬೇಕು. ಮನೆಯ ಬಜೆಟ್ ಎಂಬುದು ಎಲ್ಲರೂ ನಿರ್ಲಕ್ಷ ಮಾಡುವ ವಿಷಯವಾಗಿದೆ. ಆದರೆ ನಾವು ಮಾಡುವ ಸಣ್ಣ ಸಣ್ಣ ಖರ್ಚುಗಳೇ ದೀರ್ಘಾವಧಿಯಲ್ಲಿ ಗಮನಿಸಿದಾಗ ದೊಡ್ಡ ಮೊತ್ತವಾಗಿ ಕಾಣುತ್ತವೆ. ದೇಶದಲ್ಲಿನ ಹಾಗೂ ಹೋಗು ಗಳನ್ನು ಎಲ್ಲ ಗಮನಿಸುತ್ತೇವೆ, ಆದರೆ ಸ್ವಯಂ ನಮ್ಮ ಮನೆಯಲ್ಲಿ ಉಂಟಾಗುವ ಖರ್ಚುಗಳ ಬಗ್ಗೆ ಬಹಳಷ್ಟು ಜನ ನಾವು ಗಮನಿಸುವುದೇ ಇಲ್ಲ ಆದ್ದರಿಂದ ನಾವು ಮನೆಯ ಬಜೆಟನ್ನು ಗಮನಿಸುತ್ತಾ ಹೋಗಬೇಕು ದೇಶಕ್ಕೆ ಯಾವ ರೀತಿ ಬಜೆಟ್ ಇದೆಯೋ ಹಾಗಯೇ ನಮ್ಮ ಮನೆಗೂ ಬಜೆಟ್‌ನ್ನು ನಾವು ಹಾಕಿಕೊಳ್ಳಬೇಕು.
ಇಂದಿನ ಯುವಕರಲ್ಲಿ ಹಣ ಉಳಿತಾಯದ ಕುರಿತಾಗಿ ಯಾವುದೇ ನಿಯಮಗಳನ್ನು ಹಾಕಿಕೊಂಡಿಲ್ಲ ಆದರೆ ನಮ್ಮ ಹಿರಿಯರು ಮನೆಯಲ್ಲಿ ಯಾವುದಕ್ಕೆ ಎಷ್ಟು ಖರ್ಚಾಯಿತು ಎನ್ನುವುದನ್ನು ಬರೆದಿಟ್ಟುಕೊಳ್ಳುತ್ತಿದ್ದರು ಅಥವಾ ಗಮನಿಸುತ್ತಿದ್ದರು. ಆದರೆ ಇಂದು ಬಹಳಷ್ಟು ಜನರು ಅದನ್ನೆಲ್ಲ ಕಡೆಗಣಿಸುತ್ತಿದ್ದಾರೆ ಹಣ ಉಳಿತಾಯ ಅನ್ನುವುದು ಗಡಿಯಾರದಲ್ಲಿನ ಮುಳ್ಳುಗಳಿದ್ದಂತೆ ಅದರಲ್ಲಿ ನಿಮಿಷದ ಮುಳ್ಳುಗಳು ದೈನಂದಿನ ಖರ್ಚುಗಳನ್ನು ತೋರಿಸಿದರೆ ಗಂಟೆಯ ಮುಳ್ಳುಗಳು ತಿಂಗಳಿನಲ್ಲಿ ಉಂಟಾಗುವ ಒಟ್ಟು ಹಣದ ಖರ್ಚಿಗೆ ಲೆಕ್ಕವನ್ನು ತೋರಿಸಿದಂತೆ .ನಮ್ಮ ಮನೆಯ ಬಜೆಟ್ ನ್ನು ಹೇಗೆ ರೂಪಿಸಬೇಕು ಹಾಗೂ ಇದರಿಂದ ನಮಗೆ ಉಂಟಾಗುವ ಅನುಕೂಲಗಳು ಯಾವುವು ಎಂಬುದನ್ನು ಗಮನಿಸೋಣ.
ನಮ್ಮ ಮನೆಯ ಬಜೆಟ್ ನಲ್ಲಿ ಮುಖ್ಯವಾಗಿ ಮೂರು ಭಾಗಗಳನ್ನಾಗಿ ಮಾಡಿಕೊಳ್ಳಬೇಕು.
ನಮ್ಮ ಎಲ್ಲ ಮೂಲಗಳಿಂದ ಬರುವ ತಿಂಗಳಿನ ಆದಾಯದ ಪಟ್ಟಿ
ತಿಂಗಳಿನ ನಮ್ಮ ಎಲ್ಲ ಖರ್ಚುಗಳ ಪಟ್ಟಿ
ತಿಂಗಳಿನಲ್ಲಿ ನಮ್ಮ ಅನಿವಾರ್ಯ ಖರ್ಚುಗಳು
ತಿಂಗಳಿನಲ್ಲಿ ಅನಿವಾರ್ಯವಲ್ಲದ ಇತರೆ ಖರ್ಚುಗಳು
ತಿಂಗಳಿನಲ್ಲಿ ಉಳಿತಾಯ ಮಾಡಿದ ಹಣ ಹಾಗೂ ಅದನ್ನು ನಮ್ಮ ಗುರಿ ಸಾಧಿಸಲು ಬಳಸಿದ ರೀತಿ .ಹೀಗೆ ನಮ್ಮ ವರಮಾನ ,ಖರ್ಚು ಹಾಗೂ ಉಳಿತಾಯಕ್ಕೆ ಬಳಸಿದ ಹಣಗಳನ್ನು ಪಟ್ಟಿ ಮಾಡುತ್ತಾ ಹೋಗಬೇಕು ಇದರಲ್ಲಿ ಆ ತಿಂಗಳಿನಲ್ಲಿ ಉಂಟಾದ ಅನಿವಾರ್ಯವಲ್ಲದ ಇತರೆ ಖರ್ಚುಗಳನ್ನು ಮುಂದಿನ ದಿನಗಳಲ್ಲಿ ಹೇಗೆ ನಿಯಂತ್ರಿಸಬಹುದು ಎಂಬುದನ್ನು ನಮಗೆ ನಾವೇ ತಿಳಿದುಕೊಳ್ಳುತ್ತೇವೆ. ಹಾಗೂ ಇದನ್ನು ಆ ಒಂದು ಹಾಳೆಯಲ್ಲಿ ಪ್ರತಿನಿತ್ಯ ಅಥವಾ ವಾರದಲ್ಲಿ ಉಂಟಾದ ಖರ್ಚುಗಳು ಹಾಗೂ ವರಮಾನಗಳನ್ನು ಪಟ್ಟಿ ಮಾಡುತ್ತಾ ಹೋದಂತೆ ನಮಗೆ ನಮ್ಮ ಮನೆಯ ಬಜೆಟ್ ಅರಿವಾಗುತ್ತಾ ಹೋಗುತ್ತದೆ ಮತ್ತು ಕುಟುಂಬದವರೊಡನೆ ಈ ರೀತಿಯ ಬಜೆಟ್ ನ ಚರ್ಚೆ ಮಾಡುವುದರಿಂದ ಮನೆಯ ಕುಟುಂಬದವರು ಒಟ್ಟಿಗೆ ಕುಳಿತು ಮಾತನಾಡಲು ಹಾಗೂ ಸಾಮರಸ್ಯ ಬೆಳೆಯಲು ಸಹ ಇದು ಸಹಕಾರಿಯಾಗುತ್ತದೆ. ಹಾಗೆಯೇ ನಮಗೆ ಬ್ಯಾಂಕ್ ಸಾಲಗಳಿದ್ದರೆ ಆ ಬ್ಯಾಂಕ್ ಸಾಲಗಳಲ್ಲಿ ಅತಿ ಹೆಚ್ಚು ಬಡ್ಡಿ ಇರುವಂತಹ ಸಾಲಗಳನ್ನು ಆದಷ್ಟು ಬೇಗ ತೀರಿಸಲು ಪ್ರಯತ್ನಿಸಬೇಕು.
ಹೀಗೆ ನಾವು ಉಳಿತಾಯ ಮಾಡಿದ ಹಣವನ್ನು ಎರಡು ರೀತಿಗಳಲ್ಲಿ ವಿಭಾಗಿಸಿ ಹೂಡಿಕೆ ಮಾಡಬೇಕು ಮೊದಲನೆಯದು ನಮಗೆ ಷೇರು ಮಾರುಕಟ್ಟೆ ಬಗ್ಗೆ ತಿಳಿದಿದ್ದರೆ ನೇರವಾಗಿ ಹೂಡಿಕೆ ಮಾಡುವುದು ಇಲ್ಲವಾದಲ್ಲಿ ಮ್ಯೂಚುವಲ್ ಫಂಡ್ ಗಳ ಮೂಲಕ ಸೇಫಾಗಿ ಹೂಡಿಕೆ ಮಾಡುವುದು ಈ ರೀತಿಯ ಹೂಡಿಕೆ ಮಾಡುವುದರಿಂದ ಮುಂದಿನ ಹತ್ತರಿಂದ ಹದಿನೈದು ವರ್ಷಗಳಲ್ಲಿ ನಾವು ಒಳ್ಳೆಯ ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ .ಈ ಹಣವನ್ನು ಮಕ್ಕಳ ವಿದ್ಯಾಭ್ಯಾಸ,ಸಾಲವಿಲ್ಲದೇ ಮನೆ ಕಟ್ಟಲು ಬೇರೆ ಬೇರೆ ವಿಧಗಳಲ್ಲಿ ಬಳಸಲು ನೇರವಾಗುತ್ತದೆ.
ನಾವು ಮಾಡಬಾರದ ಕೆಲವು ವಿಷಯಗಳು
ಇದರ ಮಧ್ಯದಲ್ಲಿ ನಾವು ಮತ್ತೊಬ್ಬರನ್ನು ನೋಡಿ ಜೀವನ ಮಾಡಲು ಹೋದರೆ ನಮ್ಮ ಕೈಯಲ್ಲಿ ಯಾವುದೇ ಹಣ ಉಳಿತಾಯವಾಗುವುದಿಲ್ಲ ನಮ್ಮ ಸ್ನೇಹಿತರು ಕಾರು ತೆಗೆದುಕೊಂಡು ನಾವು ತೆಗೆದುಕೊಳ್ಳುವುದು ಆಭರಣ ಕೊಂದರೆ ನಾವು ಕೊಳ್ಳುವುದು ಈ ರೀತಿಯ ಈ ರೀತಿಯ ಅಭ್ಯಾಸಗಳಿಂದ ನಾವು ನಮ್ಮ ಗುರಿಯನ್ನು ಮುಟ್ಟಲು ಸಾಧ್ಯವಿಲ್ಲ.
ಪರ್ಯಾಯ ಅದಾಯದ ಮೂಲಗಳನ್ನು ಸೃಷ್ಟಿಸಿಕೊಳ್ಳುವುದು
ನಮ್ಮ ಗುರಿಯನ್ನು ಮುಟ್ಟಲು ನಾವು ಆದಾಯವನ್ನು ಹೆಚ್ಚಿಸಿಕೊಳ್ಳುವುದು ಅನಿವಾರ್ಯ ಇದಕ್ಕಾಗಿ ಹೊಸ ಕೌಶಲ್ಯಗಳನ್ನು ಕಲಿಯುವುದು ಹಾಗೂ ಇತರೆ ಹಣ ಸಂಪಾದನೆ ಮಾಡುವ ಕೌಶಲ್ಯಗಳ ಕಡೆಗೆ ಗಮನಹರಿಸುವುದರಿಂದ ನಾವು ನಮ್ಮ ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತದೆ. ನಮ್ಮ ಬದುಕಿನ 60 ಅಥವಾ 70 ನೇ ವಸಂತಗಳಲ್ಲಿ ನಾವು ಹಣಕ್ಕಾಗಿ ನಮ್ಮ ಮಕ್ಕಳ ಬಳಿ ಕೈ ಚಾಚುವಂತಿರಬಾರದು ಅದಕ್ಕೆ ಬೇಕಾದ ವ್ಯವಸ್ಥೆಯನ್ನು ನಾವು ಈಗಿನಿಂದಲೇ ನಿರ್ಮಿಸಿಕೊಳ್ಳುವುದು ಉತ್ತಮ.

No comments:
Post a Comment