ಇತ್ತೀಚಿನ
ಆಧುನಿಕ ಯುಗದಲ್ಲಿ ಹಲವಾರು ಕೆಲಸಗಳ ಮಧ್ಯೆ ಮನುಷ್ಯ ಬಿಝಿಯಾಗಿದ್ದಾನೆ
ಅವನು ತನ್ನ ಆರೋಗ್ಯ ಹಾಗೂ ಸಂಬಂಧಗಳನ್ನು ಕಡೆಗಣಿಸುತ್ತಿದ್ದಾನೆ ಈ ಜೀವನ ಶೈಲಿನಿಂದಾಗಿ ನಾವು ಕೇವಲ
ಯಂತ್ರಗಳಂತೆ ಕೆಲಸ ಮಾಡಲು ಪ್ರಾರಂಭಿಸಿದ್ದೇವೆ ನಮ್ಮ ಆರೋಗ್ಯ ಒಂದು ದೊಡ್ಡ ಸಂಪತ್ತಾಗಿದೆ ಈ
ಆರೋಗ್ಯವನ್ನು ಕಾಪಾಡಿಕೊಂಡಾಗ ಮಾತ್ರ ನಾವು ಯಶಸ್ಸನ್ನು ಕೂಡ ನೋಡಬಹುದು. ಆರೋಗ್ಯವು
ಎಲ್ಲದಕ್ಕಿಂತ ಮುಖ್ಯವಾದ ಸಂಪತ್ತಾಗಿದೆ ಆಧುನಿಕ ಯುಗದ ಯಂತ್ರಗಳ ಆವಿಷ್ಕಾರದಿಂದಾಗಿ ನಾವು
ಕುಳಿತು ಕೆಲಸ ಮಾಡುವ ಅಭ್ಯಾಸಗಳು ಹೆಚ್ಚಾಗಿವೆ, ಈ ಅಭ್ಯಾಸಗಳಿಂದ ನಮ್ಮ ದೇಹದಲ್ಲಿ ಕೊಬ್ಬಿನ
ಪ್ರಮಾಣ ಹೆಚ್ಚಾಗಿ ಯಾವುದೇ ವ್ಯಾಯಾಮಯಿಲ್ಲದೆ ಹಾಗೂ ಶಕ್ತಿಯ ಬಳಕೆ ಇಲ್ಲದೆ ಮೂಳೆಗಳ ಶಕ್ತಿ
ದುರ್ಬಲವಾಗಿವೆ ಈ ಬೆಳವಣಿಗೆಯಿಂದಾಗಿ ನಮ್ಮ ಡಿಎನ್ಎ ಕೂಡ ದುರ್ಬಲವಾಗುತ್ತಾ ಹೋಗುತ್ತದೆ ಈ
ಎಲ್ಲವನ್ನ ಪರಿಹರಿಸಲು ನಾವು ನಮ್ಮ ಆಹಾರ
ಶೈಲಿಯ ಹಾಗೂ ಸೇವನೆ ವಿಧಾನವನ್ನು ಬದಲು ಮಾಡಿಕೊಳ್ಳಬೇಕಾಗಿದೆ.
ಇಂಟರ್ಮಿಟೆಂಟ್
ಉಪವಾಸ
ಇದು ಒಂದು
ದೇಹದ ತೂಕ ಇಳಿಸುವ ಹಾಗೂ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಒಂದು ವಿಧಾನವಾಗಿದೆ ಇಲ್ಲಿ
ನಾವು ಸುಮಾರು 12 ರಿಂದ 16 ತಾಸುಗಳು ಉಪವಾಸ ಕೈಗೊಂಡು ನಮ್ಮ ದೇಹವನ್ನು ಪುನಃ ಚೈತನ್ಯ ಯುತ ಹಾಗೂ
ಶಕ್ತಿಯುತವಾಗಿ ಮಾಡಿಕೊಳ್ಳಬಹುದು. ಹೇಗೆಂದರೆ ನಾವು ದಿನಾಲು ಸಾಯಂಕಾಲದ ಸಮಯದಲ್ಲಿ ಆರು ಗಂಟೆ 30
ನಿಮಿಷಕ್ಕೆ ಊಟ ಮಾಡಿ ನಂತರ ಬೆಳಿಗ್ಗೆ 10 ಗಂಟೆ 30 ನಿಮಿಷಕ್ಕೆ ಊಟ ಮಾಡಿದರೆ ನಾವು ಉಪವಾಸ
ಕೈಗೊಂಡ ಸಮಯ ಸುಮಾರು 16 ತಾಸುಗಳಾಗುತ್ತವೆ. ಈ ಸಮಯದಲ್ಲಿ ದೇಹವು
ಪುನರ್ಚಕ್ರೀಕರಣಕ್ಕೆ ಒಳಗೊಂಡು ಚೈತನ್ಯುಕ್ತ ಹಾಗು ಆರೋಗ್ಯಯುಕ್ತವಾಗುತ್ತದೆ ಈ ಆಭ್ಯಾಸದಿಂದ ದೇಹದ ತೂಕ ಇಳಕೆ,ರೋಗ
ನೀರೊಧಕ ಶಕ್ತಿ ಹೆಚ್ಚುವಿಕೆ,ಹಾಗೂ ವಯಸ್ಸಾಗುವಿಕೆ ಕಡಿಮೆಯಾಗುತ್ತದೆ.
ಈ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಇಂದಿನ ದಿನಗಳಲ್ಲಿ ಅನಿವಾರ್ಯವಾಗಿದೆ ಎಂದು ಹೇಳಬಹುದು.