ಇಂದಿನ ಆಧುನಿಕ ಯುಗದಲ್ಲಿ ಕೆಲಸ ಕಡಿಮೆಯಾಗಿ ಕೂತು ತಿನ್ನುವುದು ಜಾಸ್ತಿಯಾಗಿದೆ ಹಾಗೆ ನಾವು ಕರಿದ ತಿನಿಸುಗಳು ಫಾಸ್ಟ್ ಫುಡ್ ಮೊರೆ ಹೋಗಿದ್ದೇವೆ ದೇಹವು ಯಾವುದೇ ದೈಹಿಕ ಚಟುವಟಿಕೆ ಇಲ್ಲದೆ ಕೇವಲ ಕುಳಿತು ಕೆಲಸ ಮಾಡುವುದು ಹಾಗೂ ತಂತ್ರಜ್ಞಾನ ಯುತ ಕೆಲಸದಿಂದಾಗಿ ನಮ್ಮನ್ನು ದೈಹಿಕ ಚಟುವಟಿಕೆ ಇಲ್ಲದಂತೆ ಮಾಡಿಕೊಂಡಿದ್ದೆವೆ ಇದರ ಪ್ರಯುಕ್ತವಾಗಿ ನಾವೆಲ್ಲರೂ ಕೇವಲ ಕುಳಿತು ಕೆಲಸ ಮಾಡುವುದಕ್ಕೆ ಅಷ್ಟೇ ಸೀಮಿತವಾಗಿದೆ ಇದರಿಂದ ನಮಗೆ ಹಲವಾರು ಹೃದಯ ಸಂಬಂಧಿತ ಹಾಗೂ ದೇಹ ಭಾರ ಸಂಬಂಧಿತ ಮೊಣಕಾಲು ನೋವುಗಳು ಕಾಣಿಸಿಕೊಂಡು ಕೊನೆಗೆ ಅನೇಕ ಸರ್ಜರಿಗಳ ಮೊರೆ ಹೋಗುವಂತಹ ಸ್ಥಿತಿ ಎದುರಾಗಿದೆ ಈ ಎಲ್ಲವುಗಳಿಂದ ಹೊರಬರಲು ನಾವು ಹಿಂದಿನ ಉಪವಾಸ ಮತ್ತು ವೃತ ಪದ್ಧತಿಗಳ ಮೊರೆ ಹೋಗಬೇಕಾಗಿದೆ ಪಾಶ್ಚಾತ್ಯರು ಈಗ ನಮ್ಮ ಭಾರತದ ಆಹಾರ ಪದ್ಧತಿ ಹಾಗೂ ಉಪವಾಸ ಗಳನ್ನು ಅನುಸರಿಸುತ್ತಿದ್ದಾರೆ ಈ ಮುಖಾಂತರವಾಗಿ ತಮ್ಮ ದೇಹವನ್ನು ಅತ್ಯಂತ ನೀಳಯುತವಾಗಿ ಹಾಗೂ ಗಟ್ಟಿಮುಟ್ಟಾಗಿ ಅನುಸರಿಸುತ್ತಿದ್ದಾರೆ ಇದಕ್ಕೆ ಕಾರಣ ನಮ್ಮ ಉಪವಾಸ ಪದ್ದತಿಯೆಂದರೆ ತಪ್ಪಲ್ಲ
ಇಂಟರ್ಮಿಟೆಂಟ್ ಉಪವಾಸ…
ಇಂಟರ್ಮಿಟೆಂಟ್ ಉಪವಾಸ ಎಂದರೆ ಒಂದು ದಿನದಲ್ಲಿ 12 ರಿಂದ 16 ಗಂಟೆಗಳ ಕಾಲ ಆಹಾರವನ್ನು ಸೇವಿಸದೆ ಉಪವಾಸ ಇರುವುದು ಇದರಿಂದ ದೇಹದಲ್ಲಿ ಉಂಟಾಗುವ ಎಲ್ಲ ತ್ಯಾಜ್ಯಗಳು ಹಾಗೂ ಕೊಬ್ಬು ಕರಗಲು ಪ್ರಾರಂಭಿಸುತ್ತದೆ ಮತ್ತು ದೇಹವು ಪುನ: ಚೇತನಯುಕ್ತವಾಗುತ್ತದೆ ವಿಧಾನದಿಂದಾಗಿ ನಮ್ಮ ದೇಹದಲ್ಲಿ ಊಂಟಾಗುವ ಬದಲಾವಣೆಗಳನ್ನು ಗಮನಿಸ ಬಹುದು ಹಾಗೂ ಆರೋಗ್ಯವಾಗಿ ನೀಳ ಕಾಯ ವ್ಯಕ್ತಿಗಳಾಗಿ ಕಾಣಿಸಿಕೊಳ್ಳುತ್ತೇವೆ ಇಂದಿನ ನಮ್ಮ ಭಾರತೀಯ ನಾಗರಿಕರು ಈ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸೂಕ್ತ ಎಂದು ಅನಿಸುತ್ತದೆ
No comments:
Post a Comment