ನಮ್ಮ ಮೆದುಳಿನ ಸಾಮರ್ಥ್ಯ ಹೆಚ್ಚಿಸುವದು ಹೇಗೆ?

 ಜೀವನದಲ್ಲಿ ಒಬ್ಬ ವ್ಯಕ್ತಿ ಯಶಸ್ಸು ಸಾಧಿಸಬೇಕಾದರೆ ಅನುಭವಗಳು ದೊಡ್ಡ ಪಾತ್ರವನ್ನು ವಹಿಸುತ್ತವೆ ಅವನ ಜ್ಞಾನ ವಿಕಾಸವು ಅನುಭವಗಳಿಂದ ಬೆಳೆಯುತ್ತದೆ. ಹೆಚ್ಚು ಕಷ್ಟಗಳನ್ನು ಎದುರಿಸಿದ ವ್ಯಕ್ತಿ ಹೆಚ್ಚು ಜ್ಞಾನವುಳ್ಳ ಬಲಶಾಲಿಯಾಗುತ್ತಾನೆ .ಕಷ್ಟಗಳು ನಮ್ಮನ್ನು ಕ್ರಿಯಾಶೀಲವಾಗಿಡುವುದರ ಜೊತೆಗೆ ಎಲ್ಲ ಸಂದರ್ಭಗಳನ್ನು ಎದುರಿಸಲು ಅಣಿಯಾಗುವಂತೆ ಮಾಡುತ್ತವೆ. ಮೆದುಳು ನಮ್ಮ ಎಲ್ಲ ಚಟುವಟಿಕೆಗಳಿಗೆ ತೀಕ್ಷ್ಣವಾಗಿ ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುತ್ತಾ ಹೋಗುತ್ತದೆ. ನಾವು ಕ್ರಿಯಾಶೀಲವಾಗಿದ್ದಷ್ಟು ನಮ್ಮ ಮೆದುಳಿನ ಆಲೋಚನ ಸಾಮರ್ಥ್ಯ ವೃದ್ಧಿಯಾಗುತ್ತಾ ಸಾಗುತ್ತದೆ .ಐದು ವಿಧಾನಗಳ ಮೂಲಕ ನಮ್ಮ ಮೆದುಳಿನ ನೆನಪಿನ ಶಕ್ತಿ, ಆಲೋಚಿಸುವ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವುದರ ಜೊತೆಗೆ ಎಲ್ಲ ಸಂದರ್ಭಗಳನ್ನು ನಾವು ಸದೃಢವಾಗಿ ಎದುರಿಸುವ ಮೂಲಕ ಅದರಿಂದ ಆಚೆ ಬರುವುದನ್ನು ಕಲಿಯಬಹುದಾಗಿದೆ. ನಮ್ಮ ಮೆದುಳಿನ ಬೆಳವಣಿಗೆಗೆ ಅಗತ್ಯವಾದ ಆಹಾರಗಳ ಸೇವನೆಯಿಂದ ಹಿಡಿದು ನಮ್ಮ ಮೆದುಳಿಗೆ ಸವಾಲು ಹಾಕುವ ವಿಧಾನಗಳವರಿಗೆ ಇದು ನಮಗೆ ಮತ್ತು ನಮ್ಮ ಭವಿಷ್ಯಕ್ಕೆ ಲಾಭಾಂಶವನ್ನು ನೀಡುತ್ತದೆ.

ಜ್ಞಾನದ ಸಾಮರ್ಥ್ಯ

ನಮ್ಮ ಜ್ಞಾನದ ಸಾಮರ್ಥ್ಯವು ನೆನಪಿನ ಶಕ್ತಿಯನ್ನು ಮೀರಿದ್ದು ಇದು ಆಲೋಚನೆ ,ಗುರುತಿಸುವಿಕೆ,. ಸಂವಹನ ಮತ್ತು ಉತ್ತಮ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಒಳಗೊಂಡಿದೆ .ಜ್ಞಾನದ ಸಾಮರ್ಥ್ಯವು ಸ್ವಾವಲಂಬಿ ಜೀವನದ ಅಡಿಪಾಯವಾಗಿದೆ.

ನಮ್ಮ ಜ್ಞಾನದ ಸಾಮರ್ಥ್ಯವನ್ನು ವೃದ್ಧಿಸುವಲ್ಲಿ ಐದು ವಿಧಾನಗಳನ್ನು ಅಳವಡಿಸಿಕೊಳ್ಳುವುದು ಬಹು ಮುಖ್ಯ.

ಅತ್ಯುತ್ತಮ ಪೋಷಣೆ ನೀಡುವ ಆಹಾರ ಸೇವಿಸುವುದು

ಹೆಚ್ಚು ಆಮ್ಲಜನಕವನ್ನು ಮೆದುಳಿಗೆ ರವಾನಿಸುವ ವ್ಯಾಯಾಮಗಳನ್ನು ಮಾಡುವುದು

ಒತ್ತಡ ಕಡಿಮೆ ಮಾಡಿಕೊಳ್ಳುವುದು

ಸಾಮಾಜಿಕ ಸಂವಹನ ನಡೆಸುವುದು

ಉತ್ತಮ ನಿದ್ರೆ ಮಾಡುವುದು

ಮೆದುಳಿಗೆ ವ್ಯಾಯಾಮ: ಆರೋಗ್ಯಕರ ಮನಸ್ಸು ಆರೋಗ್ಯಕರ ದೇಹದಲ್ಲಿ ವಾಸಿಸುತ್ತದೆ ಎಂಬ ಹಿರಿಯರ ಮಾತಿನಂತೆ ನಮ್ಮ ಮನಸ್ಸು ಆರೋಗ್ಯವಾಗಿರಬೇಕಾದರೆ ದೇಹವು ಆರೋಗ್ಯವಾಗಿರಬೇಕು. ಅದಕ್ಕಾಗಿ ದಿನನಿತ್ಯ ವ್ಯಾಯಾಮ ಮಾಡಬೇಕು ವ್ಯಾಯಾಮಗಳು ಶ್ವಾಸಕೋಶಗಳನ್ನು ವಿಸ್ತರಿಸುವ ,ರಕ್ತ ಪರಿಚಲನೆಯನ್ನು ಚುರುಕುಗೊಳಿಸುವ ಮತ್ತು ಸ್ನಾಯುಗಳ ಮೂಳೆಗಳ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ ದೇಹದ ಆರೋಗ್ಯವನ್ನು ಉಳಿಸಿಕೊಳ್ಳುತ್ತವೆ ಮತ್ತು ಸುಧಾರಿಸುತ್ತವೆ. ಈ ಎಲ್ಲ ಕೆಲಸಗಳನ್ನು ಮಾಡುವುದರ ಜೊತೆಗೆ ಮೆದುಳಿನ ಬೆಳವಣಿಗೆ ಮತ್ತು ಮಾನಸಿಕ ಸಾಮರ್ಥ್ಯಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತವೆ ಮುಖ್ಯವಾಗಿ ವ್ಯಾಯಾಮಗಳಲ್ಲಿ ಏರೋಬಿಕ್ಸ್, ಸ್ವಿಮ್ಮಿಂಗ್, ವಾಕಿಂಗ್, ಇತರೆ ಹೆಚ್ಚು ಆಮ್ಲಜನಕ ತೆಗೆದುಕೊಳ್ಳುವಂತಹ ವ್ಯಾಯಾಮಗಳು ಮೆದುಳಿನ ಕ್ರಿಯಾಶೀಲತೆ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

 ಪೋಷಾಕಾಂಶಯುಕ್ತ ಆಹಾರ ಸೇವನೆ

ಮೆದುಳು ಕ್ರಿಯಾಶೀಲವಾದರೆ ಮಾತ್ರ ನಮ್ಮ ದೈನಂದಿನ ಕೆಲಸಗಳನ್ನು ವೇಗವಾಗಿ ಮಾಡಿಕೊಳ್ಳಲು ನಮ್ಮಲ್ಲಿ ಸಾಮರ್ಥ್ಯ ವೃದ್ಧಿಯಾಗುತ್ತದೆ ಮೆದುಳು ವೇಗವಾಗಿ ಆಲೋಚಿಸಲು ಅದಕ್ಕೆ ಸೂಕ್ತ ತರಬೇತಿ ಅಗತ್ಯವಿದೆ ಈ ತರಬೇತಿಯು ಹಲವಾರು ವರ್ಷಗಳು ನಿರಂತರವಾಗಿ ಸಾಗಿದಾಗ ಮಾತ್ರ ಅದರ ಪ್ರತಿಫಲವನ್ನು ಕಾಣಲು ಸಾಧ್ಯ ಹಾಗೆ ಮೆದುಳಿಗೆ ಹೆಚ್ಚು ಆಲೋಚನೆ ಮಾಡುವ ತರ್ಕ ಮಾಡುವ ಅವಕಾಶಗಳನ್ನು ನೀಡಿದಾಗ ಅದು ಕ್ರಿಯಾಶೀಲವಾಗುತ್ತಾ ಹೋಗುತ್ತದೆ ಮತ್ತು ನಾವು ಸೇವಿಸುವ ಆಹಾರ ಮೆದುಳಿನ ಬೆಳವಣಿಗೆಯ ಮೇಲೆ ಪರೋಕ್ಷವಾಗಿ  ಅವಲಂಬನೆಯಾಗಿದೆ ಮುಖ್ಯವಾಗಿ ಹಣ್ಣುಗಳು ಡ್ರೈ ಫ್ರೂಟ್ ಗಳು omega 3 ಫ್ಯಾಟಿ ಆಸಿಡ್  ಇರುವಂತಹ ಆಹಾರಗಳು ಮೆದುಳಿನ ಸಾಮರ್ಥ್ಯ ವೃದ್ಧಿಸುವಲ್ಲಿ ಸಹಕಾರಿಯಾಗಿದೆ.

ಒತ್ತಡ ನಿಭಾಯಿಸುವುದು

ನಮ್ಮ ದೈನಂದಿನ ಜೀವನದಲ್ಲಿ ಹಲವಾರು ಕಾರಣಗಳಿಗಾಗಿ ನಾವು ಒತ್ತಡಕ್ಕೆ ಒಳಗಾಗುತ್ತೇವೆ ಇದರಿಂದ ಹೊರಬರಲು ಬೇರೆ ಬೇರೆ ದಾರಿಗಳನ್ನು ಹುಡುಕಿಕೊಳ್ಳುತ್ತೇವೆ ಕೆಲವರು ಋಣಾತ್ಮಕ ಅಭ್ಯಾಸಗಳಾದ ಧೂಮಪಾನ ಮದ್ಯಪಾನ ಇತರೆ ದೇಹಕ್ಕೆ ಹಾನಿಕರವಾದ ಅಭ್ಯಾಸಗಳನ್ನು ಬೆಳೆಸಿಕೊಂಡರೆ ಇನ್ನೂ ಕೆಲವರು ಓದುವುದು ಕ್ರೀಡೆ ಮಕ್ಕಳೊಂದಿಗೆ ಆಟ ಆಡುವುದು ಜನರೊಂದಿಗೆ ಬರೆಯುವುದು ಅಡುಗೆ ಮಾಡುವುದು ಪರೋಪಕಾರಿ ಕೆಲಸಗಳನ್ನ ಮಾಡುವುದು ಹೀಗೆ ಹಲವಾರು ಚಟುವಟಿಕೆಗಳ ಮುಖಾಂತರ ತಮ್ಮ ದೈನಂದಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳುತ್ತಾರೆ ನಾವು ಧನಾತ್ಮಕ ದಾರಿಯನ್ನು ಕೊಂಡುಕೊಂಡಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ನಮ್ಮ ಒತ್ತಡವನ್ನು ಕಡಿಮೆ ಮಾಡಿಕೊಂಡಷ್ಟು ನಮ್ಮ ಮೆದುಳಿನ ಸಾಮರ್ಥ್ಯವು ವೃದ್ಧಿಯಾಗುತ್ತಾ ಹೋಗುತ್ತದೆ ಮನುಷ್ಯ ಒತ್ತಡದಿಂದ ಮುಕ್ತನಾಗ ಮಾತ್ರ ಸಮಚಿತ್ತವಾಗಿ ಆಲೋಚನೆ ಮಾಡಬಲ್ಲ ಹಾಗೂ ಖುಷಿಯಾಗಿರಬಲ್ಲ ಒತ್ತಡ ಉದ್ವೇಗ ಮಾಡಿಕೊಳ್ಳುವುದು ಮೆದುಳಿನ ವಿಕಾಸಕ್ಕೆ ಹಾನಿ ಉಂಟುಮಾಡುತ್ತದೆ

ನಿದ್ರೆ ಅವಶ್ಯಕತೆ

ನಮ್ಮ ಮೆದುಳಿಗೆ ಶ್ರಮ ಎಷ್ಟು ಕೊಡುತ್ತೇವೆ ಅಷ್ಟೇ ಪ್ರಮಾಣದ ನಿದ್ರೆಯು ಅವಶ್ಯಕ ಮನುಷ್ಯ ಒಂದು ದಿನಕ್ಕೆ ಎಂಟು ಗಂಟೆಗಳ ಕಾಲ ನಿದ್ರೆ ಮಾಡುವುದು ಅವಶ್ಯಕ ನಿದ್ರೆಯು ನಮ್ಮನ್ನು ಪುನಶ್ಚೇತನ ಗೊಳಿಸುವ ಹಾಗೂ ದೇಹವನ್ನು ಬಲಗೊಳಿಸುವ ಒಂದು ಪ್ರಮುಖ ಶಕ್ತಿಯಾಗಿದೆ

ಸಾಮಾಜಿಕ ಸಂವಹನ

ಸಂವಹನವು ಮನುಷ್ಯನಿಗೆ ತನ್ನ ಆಲೋಚನಾ ಸಾಮರ್ಥ್ಯವನ್ನು ವೃದ್ಧಿಸುವ ಒಂದು ಪ್ರಮುಖ ಅಸ್ತ್ರವಾಗಿದೆ ಮನುಷ್ಯ ಎಷ್ಟು ಸಂವಹನ ನಡೆಸುತ್ತಾನೆಯೋ ಅಷ್ಟು ವಿವಿಧ ಕೋನಗಳಲ್ಲಿ ಆಲೋಚನೆ ಮಾಡುವ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತಾನೆ ಈ ನಿಟ್ಟಿನಲ್ಲಿ ಸಂವಹನ ಮಾಡೋದು ಪ್ರಮುಖವಾದ ಜೀವನದ ಭಾಗವಾಗಬೇಕು ಈ ಸಮಾನ ಧನಾತ್ಮಕವಾಗಿರಬೇಕು.

ಈ ಎಲ್ಲ ವಿಧಾನಗಳನ್ನು ಅನುಸರಿಸುವುದರ ಮುಖಾಂತರ ನಾವು ನಮ್ಮ ಮೆದುಳಿನ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬಹುದು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಹಣೆಯಾಗಬಹುದು.

No comments:

Post a Comment