ನೀವು ಮಲಗಿದಾಗ ಬಾಯಿಂದ ಉಸಿರಾಡುವಿರಾ? ...ಹಾಗದರೆ ಈ ವಿಷಯಗಳನ್ನು ತಿಳಿದುಕೊಳ್ಳಲೇ ಬೇಕು.....

  ಶೇಕಡಾ 71 ರಷ್ಟು ವಯಸ್ಕರು ಮಲಗಿದಾಗ ಹೆಚ್ಚಾಗಿ ಬಾಯಿಂದ ಉಸಿರಾಡುವವರಿದ್ದಾರೆ ಎಂದು ಅಧ್ಯಯನಗಳು ತಿಳಿಸುತ್ತವೆ   .........

ಹಾಗದರೆ ನಾವು ಈ ರೀತಿ ಬಾಯಿಂದ ಉಸಿರಾಡುವುದರಿಂದ ಉಂಟಾಗುವ ತೊಂದರೆಗಳೇನು ಎಂಬುದನ್ನು ಗಮನಿಸೋಣ

ಬಾಯಿಂದ ಉಸಿರಾಡುವುದು ನಮಗೆ ನಿದ್ರಾಹೀನತೆ ಉಂಟಾಗುತ್ತದೆ . ಇದರಿಂದ  ನಮ್ಮಲ್ಲಿ ದಿನ ನಿತ್ಯದ ಉತ್ಸಾಹ, ಶಕ್ತಿಹೀನತೆ  ಉಂಟಾಗುತ್ತದೆ ಹಾಗೆಯೇ ಮೆದುಳಿನ ಕ್ರಿಯಾಶೀಲತೆ ಕುಂಟಿತಗೊಳಿಸುತ್ತದೆ.


ನಾವು ಬಾಯಿಂದ ಉಸಿರಾಡುವಾಗ ನಮ್ಮ ಮೆದುಳಿಗೆ ಕಡಿಮೆ ಆಕ್ಸಿಜನ್‌  ಸರಬರಾಜು ಆಗುತ್ತದೆ

ನಮ್ಮ ದೇಹದಲ್ಲಿ ಒತ್ತಡ ಹೆಚ್ಚಿಸುವ ಹಾರ್ಮೋನಗಳ ಉತ್ಪಾದನೆಗೆ ಕಾರಣವಾಗುತ್ತದೆ ಒಟ್ಟಾರೆಯಾಗಿ ನಮ್ಮ ನ್ನು ದುರ್ಬಲರನ್ನಾಗಿ ಮಾಡಲು ಇದು ಕಾರಣವಾಗುತ್ತದೆ

ಹಾಗದರೆ ನಾವು ಮೂಗಿನಿಂದ ಉಸಿರಾಡುವುದು ಹೇಗೆಲ್ಲ ಅನೂಕುಲವಾಗುತ್ತದೆ ಎಂಬುದನ್ನು ಗಮನಿಸೋಣ...ನಮ್ಮ ಮೂಗು ಕೇವಲ ವಾಸನೆ ಹಾಗೂ ಉಸಿರಾಟದ ಕಾರ್ಯವಷ್ಟೇ ಮಾಡುವುದಿಲ್ಲ

ಇದು ಬಹಳಷ್ಟು ಸೋಸುವ ಕಿಯೆಗಳನ್ನು ಮಾಡುತ್ತದೆ..

1) ನಾವು ಉಸಿರಾಡುವ ಗಾಳಿಯಲ್ಲಿ ಇರುವ ಕಲ್ಮಷಗಳನ್ನು ಮೂಗಿನ ಕೂದಲುಗಳು ತಡೆಯುತ್ತವೆ

2) ನಾವು ತೆಗೆದುಕೊಳ್ಳುವ ಗಾಳಿಯನ್ನು ಬಿಸಿಯಾಗಿಸಿ ನೈಟ್ರಿಕ್‌ ಆಕ್ಷೈಡ್ ಉತ್ಪಾದಿಸುತ್ತದೆ

3)  ನಮ್ಮ ಮೆದುಳಿಗೆ ಹೆಚ್ಚಿನ ಆಕ್ಸಿಜನ್‌ ಸಾಗುವಂತೆ ನೋಡಿಕೊಳ್ಳುತ್ತದೆ

ನಾವು ಮಲಗಿದಾಗ ಬಾಯಿಂದ ಉಸಿರಾಡಿದರೆ ಉಂಟಾಗುವ ತೊಂದರೆಗಳು

1) ಒತ್ತಡವನ್ನು ಉಂಟುಮಾಡುವ ಕಾರ್ಟಿಸೋಲ್‌  ಎಂಬ ಹಾರ್ಮೋನ್‌ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ.

2) ‌ ಇದು ಜಡತ್ವ,ತೂಕ, ಹೆಚ್ಚಾಗಲೂ ಕಾರಣವಾಗುತ್ತದೆ

3) ನೆಗಡಿ,ಇನ್ನಿತರೆ ಮೂಗಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ

4) ವಯ್ಯಸಾಗುವಿಕೆ ,ನಿದ್ರಾ ಹೀನತೆ , ಇನ್ನಿತರೆ ಸಮಸ್ಯೆಗಳಿಗೆ ಕಾರಣವಾಗುತ್ತದೆ.

5) ಎಕಗ್ರತೆ ಕುಂಟಿಗೊಳಿಸುತ್ತದೆ ,ಮೆದುಳಿನ ಕ್ರಿಯಾಶೀಲತೆಯನ್ನು ಕಡಿಮೆಗೊಳಿಸುತ್ತದೆ

ನಾವು ಮೂಗಿನಿಂದ ಉಸಿರಾಡಲು ದಿನನಿತ್ಯ ಪ್ರಾಣಯಾಮ,ಯೋಗ, ಮಾಡುವುದು ಉತ್ತಮ 

ನೀವು ಯಾವುದೇ ವ್ಯಾಯಮ ಮಾಡುವಾಗಲು ಮೂಗಿನಿಂದ ಧೀರ್ಘ ಉಸಿರು ತೆಗುಕೊಳ್ಳಿ ಇದರಿಂದ ನಮ್ಮ ಶ್ವಾಸಕೋಶಗಳು ಹೆಚ್ಚಿನ ಗಾಳಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತವೆ . ನಮ್ಮಲ್ಲಿ ಧನತ್ಮಾಕ ಬದಲವಾಣೆಗಳು ಉಂಟಾಗುವದನ್ನು ನಾವು ಕಾಣಬಹುದು




.

ಕಾರು ಕೊಳ್ಳುವುದಕ್ಕೆ ಸಾಲ ಮಾಡುವುದೋ ಅಥವಾ EMI ಮಾಡುವುದೋ.......


 ಭಾರತೀಯರ ಕೈಯಲ್ಲಿ ಕಾಸು ಇದ್ದರೆ ಮೊದಲು ಮಾಡುವ ಕೆಲಸ ವಾಹನಗಳ ಖರೀದಿ ಅದರಲ್ಲಿ ಮಧ್ಯಮ ವರ್ಗದ ಜನರು  ಯೋಚನೆ ಮಾಡುವ ರೀತಿ... ಮೊದಲು ಇರುವುದಕ್ಕೆ ಒಂದು ಮನೆಯಾದರೆ ಸಾಕು ಮುಂದಿನದು ಕಾರು ಬೇಕು.... ಅದು ಸಾಲ ಮಡಿಯಾದರು ಸರಿ.... ಸಮಾಜದಲ್ಲಿ ಕೆಲವರು ತಮ್ಮ ಪ್ರತಿಷ್ಟೆಯನ್ನು ತೋರಿಸಿಕೊಳ್ಳಲು ದುಬಾರಿ ವಾಹನಗಳ ಖರೀದಿ ಮಾಡುವುದು ಒಂದು ರೀತಿಯ ಫ್ಯಾಷನ್‌ ಆಗೀದೆ .ಈ ಎಲ್ಲವುದಕ್ಕೆ ಮುಖ್ಯ ಕಾರಣ ಸರಿಯಾದ ಅರ್ಥಿಕ ಶಿಕ್ಷಣ ಇಲ್ಲದೇ ಇರುವುದು 

ಬ್ಯಾಂಕುಗಳು ಜನರ ಈ ಮನಸ್ತಿತಿಯನ್ನು ಅರಿತು ಆಕರ್ಷಕ ಬಡ್ಡಿ ಯೋಜನೆಗಳನ್ನು ನೀಡುತ್ತಾ ಹೋಗುತ್ತವೆ.ಮತು ನಮ್ಮನ್ನು ತಮ್ಮ ದುಡಿಮೆಗೆ ಬಳಸಿಕೊಳ್ಳತ್ತವೆ 

ಕಾರನ್ನು ಕೊಳ್ಳುವ ಯೋಚನೆ ಇದ್ದಲ್ಲಿ ನಾವು ಮಡಬಹುದಾದ ಕೆಲವು ನಿರ್ಧಾರಗಳು

ಮಧ್ಯಮ ವರ್ಗದ ಜನರು ಕಾರು ಕೊಳ್ಳುವುದಕ್ಕೆ ಇ ಎಮ್‌ ಐ  ಮಾಡುವುದು ಸೂಕ್ತ ವಿಧಾನವಲ್ಲ

ನಿಮ್ಮ ಕೈಯಲ್ಲಿ ಪೂರ್ಣ ಪ್ರಮಾಣದ ಹಣ ಇದ್ದರೆ ಅಥವಾ ಕಾರು ಅತಿ ಅವಶ್ಯಕವಾಗಿದ್ದರೆ  ಮಾತ್ರ ಕೊಳ್ಳಿ ಎಕೆಂದರೆ................


❇ಕಾರ್ ಸಾಲದ ಬಡ್ಡಿದರಗಳು ಬಹಳ ಹೆಚ್ಚಿಗೆ ಇರುತ್ತದೆ. ಕಾರ್ ಶೋರೂಮಿನಿಂದ ಹೊರಗೆ ಬಂದ ಘಳಿಗೆಯಿಂದ ಬೆಲೆ ಕಳೆದುಕೊಳ್ಳುತ್ತಾ ಹೋಗುತ್ತೆ (Depreciating asset).


*ಏನಾದರೂ ಸಮಸ್ಯೆ ಬಂದು ಕಾರು ಮಾರಬೇಕಾದ ಸಂದರ್ಭದಲ್ಲಿ ಇನ್ನೂ ಸಾಲ ಉಳಿದಿದ್ದರೆ, ಕೈಗೆ ಸಿಗುವ ಹಣ ಬಹಳ ಕಡಿಮೆ ಇರುತ್ತದೆ.


1)ಒಂದು ವೇಳೆ ಕಾರ್ ಸಾಲ ಮಾಡಿದರೂ ಅದನ್ನು ಸಾಧ್ಯವಾದಷ್ಟು ಬೇಗ ತೀರಿಸುವ ಯೋಜನೆ ಹಾಕಿಕೊಳ್ಳಬೇಕು. ಪಾರ್ಟ್ ಪೇಮೆಂಟ್ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು.


2)ಈಗಾಗಲೇ ಒಂದು ಕಾರ್ ಇರುವವರು ಹೊಸ ಕಾರಿಗೆ upgrade ಮಾಡುವ ಚಿಂತನೆ ಇದ್ದರೆ, ಒಂದಷ್ಟು ತಿಂಗಳುಗಳು ಕಾದು ಹಣ ಕೂಡಿತ್ತು ಕೊಳ್ಳಬಹುದು. 


3)ಮೊದಲನೇ ಕಾರ್ ಕೊಳ್ಳುವವರಿಗೆ ಅದು ಕಷ್ಟ, ಹಾಗಾಗಿ ಕಡಿಮೆ ಬಜೆಟಿನ ಕಾರ್ ಮೊದಲ ಕಾರ್ ಆಗಿ ಕೊಳ್ಳುವುದು ಉತ್ತಮ. ದುಡಿಮೆ ಹೆಚ್ಚುತ್ತಿದ್ದಂತೆ ಒಂದಷ್ಟು ವರ್ಷಗಳ ಬಳಿಕ upgrade ಮಾಡಿಕೊಳ್ಳಬಹುದು.