ಕಾರು ಕೊಳ್ಳುವುದಕ್ಕೆ ಸಾಲ ಮಾಡುವುದೋ ಅಥವಾ EMI ಮಾಡುವುದೋ.......


 ಭಾರತೀಯರ ಕೈಯಲ್ಲಿ ಕಾಸು ಇದ್ದರೆ ಮೊದಲು ಮಾಡುವ ಕೆಲಸ ವಾಹನಗಳ ಖರೀದಿ ಅದರಲ್ಲಿ ಮಧ್ಯಮ ವರ್ಗದ ಜನರು  ಯೋಚನೆ ಮಾಡುವ ರೀತಿ... ಮೊದಲು ಇರುವುದಕ್ಕೆ ಒಂದು ಮನೆಯಾದರೆ ಸಾಕು ಮುಂದಿನದು ಕಾರು ಬೇಕು.... ಅದು ಸಾಲ ಮಡಿಯಾದರು ಸರಿ.... ಸಮಾಜದಲ್ಲಿ ಕೆಲವರು ತಮ್ಮ ಪ್ರತಿಷ್ಟೆಯನ್ನು ತೋರಿಸಿಕೊಳ್ಳಲು ದುಬಾರಿ ವಾಹನಗಳ ಖರೀದಿ ಮಾಡುವುದು ಒಂದು ರೀತಿಯ ಫ್ಯಾಷನ್‌ ಆಗೀದೆ .ಈ ಎಲ್ಲವುದಕ್ಕೆ ಮುಖ್ಯ ಕಾರಣ ಸರಿಯಾದ ಅರ್ಥಿಕ ಶಿಕ್ಷಣ ಇಲ್ಲದೇ ಇರುವುದು 

ಬ್ಯಾಂಕುಗಳು ಜನರ ಈ ಮನಸ್ತಿತಿಯನ್ನು ಅರಿತು ಆಕರ್ಷಕ ಬಡ್ಡಿ ಯೋಜನೆಗಳನ್ನು ನೀಡುತ್ತಾ ಹೋಗುತ್ತವೆ.ಮತು ನಮ್ಮನ್ನು ತಮ್ಮ ದುಡಿಮೆಗೆ ಬಳಸಿಕೊಳ್ಳತ್ತವೆ 

ಕಾರನ್ನು ಕೊಳ್ಳುವ ಯೋಚನೆ ಇದ್ದಲ್ಲಿ ನಾವು ಮಡಬಹುದಾದ ಕೆಲವು ನಿರ್ಧಾರಗಳು

ಮಧ್ಯಮ ವರ್ಗದ ಜನರು ಕಾರು ಕೊಳ್ಳುವುದಕ್ಕೆ ಇ ಎಮ್‌ ಐ  ಮಾಡುವುದು ಸೂಕ್ತ ವಿಧಾನವಲ್ಲ

ನಿಮ್ಮ ಕೈಯಲ್ಲಿ ಪೂರ್ಣ ಪ್ರಮಾಣದ ಹಣ ಇದ್ದರೆ ಅಥವಾ ಕಾರು ಅತಿ ಅವಶ್ಯಕವಾಗಿದ್ದರೆ  ಮಾತ್ರ ಕೊಳ್ಳಿ ಎಕೆಂದರೆ................


ಕಾರ್ ಸಾಲದ ಬಡ್ಡಿದರಗಳು ಬಹಳ ಹೆಚ್ಚಿಗೆ ಇರುತ್ತದೆ. ಕಾರ್ ಶೋರೂಮಿನಿಂದ ಹೊರಗೆ ಬಂದ ಘಳಿಗೆಯಿಂದ ಬೆಲೆ ಕಳೆದುಕೊಳ್ಳುತ್ತಾ ಹೋಗುತ್ತೆ (Depreciating asset).


*ಏನಾದರೂ ಸಮಸ್ಯೆ ಬಂದು ಕಾರು ಮಾರಬೇಕಾದ ಸಂದರ್ಭದಲ್ಲಿ ಇನ್ನೂ ಸಾಲ ಉಳಿದಿದ್ದರೆ, ಕೈಗೆ ಸಿಗುವ ಹಣ ಬಹಳ ಕಡಿಮೆ ಇರುತ್ತದೆ.


1)ಒಂದು ವೇಳೆ ಕಾರ್ ಸಾಲ ಮಾಡಿದರೂ ಅದನ್ನು ಸಾಧ್ಯವಾದಷ್ಟು ಬೇಗ ತೀರಿಸುವ ಯೋಜನೆ ಹಾಕಿಕೊಳ್ಳಬೇಕು. ಪಾರ್ಟ್ ಪೇಮೆಂಟ್ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು.


2)ಈಗಾಗಲೇ ಒಂದು ಕಾರ್ ಇರುವವರು ಹೊಸ ಕಾರಿಗೆ upgrade ಮಾಡುವ ಚಿಂತನೆ ಇದ್ದರೆ, ಒಂದಷ್ಟು ತಿಂಗಳುಗಳು ಕಾದು ಹಣ ಕೂಡಿತ್ತು ಕೊಳ್ಳಬಹುದು. 


3)ಮೊದಲನೇ ಕಾರ್ ಕೊಳ್ಳುವವರಿಗೆ ಅದು ಕಷ್ಟ, ಹಾಗಾಗಿ ಕಡಿಮೆ ಬಜೆಟಿನ ಕಾರ್ ಮೊದಲ ಕಾರ್ ಆಗಿ ಕೊಳ್ಳುವುದು ಉತ್ತಮ. ದುಡಿಮೆ ಹೆಚ್ಚುತ್ತಿದ್ದಂತೆ ಒಂದಷ್ಟು ವರ್ಷಗಳ ಬಳಿಕ upgrade ಮಾಡಿಕೊಳ್ಳಬಹುದು.


No comments:

Post a Comment