ವೇಗವಾಗಿ ತೂಕ ಇಳಿಕೆ ಮಾಡಿಕೊಳ್ಳಲು ಪ್ರಥಮವಾಗಿ ನಮ್ಮ ದಿನಚರಿಯನ್ನು ಬದಲಿಸಬೇಕಿದೆ
ಯಾವುದೇ ವಿಚಾರ ಹಾಗು ಉದ್ದೇಶವಾಗಿರಲಿ ನಾವು ಸಾಧಿಸಬೇಕೆಂದರೆ ಆ ಉದ್ದೇಶದ ಕಡೆಗಿನ ನಮ್ಮ ದೃಷ್ಟಿಯು ಧೀರ್ಘಕಾಲದವರೆಗು ಸಾಗಬೇಕಿರುವುದು ಅನಿವಾರ್ಯ. ತೂಕ ಇಳಿಸಬೇಕು ಎಂಬ ನಿರ್ಧಾರಕ್ಕೆ ಬಂದ ಮೇಲೆ ಆ ಯೋಜನೆಯು ಧೀರ್ಘಕಾಲದ ವರೆಗೆ ತೆಗೆದುಕೊಂಡು ಹೋಗುವ ಛಲ ನಮ್ಮಲ್ಲಿ ಬರಬೇಕು ಆ ನಿಟ್ಟಿನಲ್ಲಿ ಕೆಲವೊಂದು ಮಾರ್ಗಗಳನ್ನು ನಿಮ್ಮ ಮುಂದೆ ಇಡಲೂ ಬಯಸುತ್ತೆನೆ....
ಆಹಾರ ಪಥ್ಯ,ಸರಿಯಾದ ವ್ಯಾಯಮ, ದಿನಚರಿಯಲ್ಲಿ ಬದಲವಾಣೆ ಅಗತ್ಯ.......
ಕಾರ್ಬೊಹೈಡ್ರೆಟ್‌ಯುಕ್ತ ಆಹಾರ ಪದಾರ್ಥ ಸೇವನೆಯನ್ನು ಕಡಿಮೆಗಳಿಸಬೇಕು . ಉದಾ: ಅಕ್ಕಿ ,ಗೋಧಿ...ಇತ್ತಾದಿ ನಮ್ಮ ದೇಹಕ್ಕೆ ಬೇಕಾದಷ್ಟೆ ಕ್ಯಾಲೋರಿಗಳು ಶಕ್ತಿ ನೀಡುವ ಆಹಾರವನ್ನು ತೆಗೆದುಕೊಳ್ಳಬೇಕು ಇದರಿಂದ ನಮ್ಮ ದೇಹದಲ್ಲಿ ಕಾರ್ಬೊಹೈಡ್ರೆಟ್ ಶೇಖರಣೆಯಾಗುವುದು ತಪ್ಪುತ್ತದೆ....
ಪೋಟಿನ್‌ಯುಕ್ತ ಆಹಾರ ಸೇವನೆ ಹೆಚ್ಚಿಸಬೇಕು ಉದಾ:ಬೇಳೆಕಾಳುಗಳು,ಮೊಟ್ಟೆ,ಮಾಂಸ,ಇತ್ಯಾದಿ
ಇದು ಮಾಂಸ ಖಂಡಗಳ ಗಟ್ಟಿಗೊಳಿಸಲು ಸಹಕಾರಿಯಾಗುತ್ತದೆ
ಎಣ್ಣೆಯುಕ್ತ ಹಾಗು ಸಕ್ಕರೆಯುಕ್ತ ಆಹಾರ ಸಂಪೂರ್ಣ ಕಡಿಮೆಗೊಳಿಸಬೇಕು ಇದರಿಂದ ದೇಹದಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬು ಶೇಖರಣೆಗೊಳ್ಳೂವುದು ತಪ್ಪುತ್ತದೆ
ನಾರುಪದಾರ್ಥಗಳ ಸೇವನೆ ಹೆಚ್ಚಿಸಬೇಕು ಇದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ ,ಹೆಚ್ಚು ನೀರನ್ನು ಕುಡಿಯಿರಿ ಇದು ನಿಮ್ಮನ್ನು ಯಾವಗಲೂ ಹಸಿವಾಗದಂತೆ ನೋಡಿ ಕೊಳ್ಳುತ್ತದೆ
ಊಟ ಮಾಡುವ ತಟ್ಟೆಯು ಚಿಕ್ಕದಾಗಿರುವಂತೆ ನೋಡಿಕೊಳ್ಳುವದು ಇದರಿಂದ ನಾವು ಕಡಿಮೆ ಆಹಾರವನ್ನು ಸೇವಿಸಲು ಸಹಕಾರಿಯಗುತ್ತದೆ.
ವಾಕಿಂಗ್, ಕಾರ್ಡಿಯೊ ವ್ಯಾಯಮ, ಮುಂತಾದವುಗಳು ನಮ್ಮ ದಿನ ನಿತ್ಯದ ಭಾಗವಾಗಬೇಕು
ಕೆಲವು ದಿನಚರಿಗಳಲ್ಲಿನ ಬದಲಾವಣೆಗಳು ಅಂದರೆ.. ನಿದ್ರೆ 7ರಿಂದ 8ತಾಸು, ಒತ್ತಡ ಕಡಿಮೆ ಮಾಡಲು ಮನರಂಜನೆ,..ಮಧ್ಯಪಾನ,ತಂಬಾಕು ಮುಂತಾದವುಗಳನ್ನು ತ್ಯಜಿಸಬೇಕು
ವೇಗವಾಗಿ ತೂಕ ಕಡಿಮೆಗೊಳಿಸುವುದು ಎಂದರೆ ಒಂದು ವಾರದಲ್ಲಿ 0.5 ರಿಂದ 1 ಕೆಜಿ ವರೆಗೆ ಎಂಬುದು ತಙ್ಙರ ಅಭಿಪ್ರಾಯವಾಗಿದೆ ಇನ್ನು ವೇಗವಾಗಿ ತೂಕ ಇಳಿಸುವುದು ದೇಹಕ್ಕೆ ಅಪಾಯವಾಗಬಹುದು.....