ಮಾರ್ಕೆಟ್‌ ದೃಷ್ಟಿಯಿಂದ ಫೆಬ್ರವರಿ ತಿಂಗಳು ಮುಖ್ಯ ಏಕೆ..........?

 

           ಫೆಬ್ರವರಿಯಲ್ಲಿ  ಮಾರ್ಕೆಟ್ ಉತ್ತಮ ಪ್ರದರ್ಶನ ತೋರಲು  ಮುಂದೆ ಇರುವ ಸವಾಲುಗಳು….

ಫೆಬ್ರವರಿ 1‌ ರ  ಬಜೆಟ್

ಸ್ಟಾಕ್‌ ಮಾರ್ಕೆಟ್‌ ಇಂದು ತುಸು ಚೇತರಿಕೆ ಕಂಡಿದ್ದು  ಮುಂದೆ ಇದೇ ರೀತಿ ಹೋಗಬೇಕಾದರೆ ಫೆಬ್ರವರಿ 1 ಬಹಳ ಮುಖ್ಯವಾದ ದಿನವಾಗಿದೆ  ಅಂದು  ನಿರ್ಮಾಲ ಸಿತರಾಮನ್ ಅವರು ಬಜೆಟ್ ಮಂಡಿಸಲಿದ್ದಾರೆ.  ಬಡ್ಜೆಟ್‌ನಲ್ಲಿ ಹೊಸದಾಗಿ ಯಾವುದೇ ಟ್ಯಾಕ್ಸಗಳನ್ನು ಹುಡಿಕೆದಾರರ ಮೇಲೆ ವಿದಿಸದಿದ್ದರೆ ಮಾರ್ಕೆಟ್‌ ಉತ್ತಮವಾಗಿ ಮುಂದುವರಿಯುತ್ತದೆ  ಕಾರಣ ಹುಡಿಕೆಯಲ್ಲಿ ಲಾಭದ  ಮೇಲಿನ ಹೆಚ್ಚನ ತೆರಿಗೆಯು ಹುಡಿಕೆದಾರರನ್ನು ಮಾರ್ಕೆಟ್ ನಿಂದ ವಿಮುಖರನ್ನಾಗಿ ಮಾಡುತ್ತದೆ . ಇದರಿಂದ ಹೊಸ ಹುಡಿಕೆದಾರರ ಆಗಮನ ಅಗುವುದಿಲ್ಲ  ಈ ಅಂಶವು ಮಾರ್ಕೆಟ್‌ನಲ್ಲಿ ಋಣಾತ್ಮಕ ಪರಿಣಾಮವನ್ನು ಉಂಟುಮಾಡುತ್ತ ಹೊಗುತ್ತದೆ.

 

ಫೆಬ್ರವರಿ 7ರ   RBI POLICY

ಸ್ಟಾಕ್‌ ಮಾರ್ಕೆಟ್‌ ಉತ್ತಮ ಪ್ರದರ್ಶನ ಕಾಣಬೇಕಾದರೆ ಅರ್ ಬಿ ಐ  ಬ್ಯಾಂಕ್ ಗಳು ವಿಧಿಸುವ ಬಡ್ಡಿ ದರವನ್ನು ಕಡಿಮೆ ಮಾಡಿದಲ್ಲಿ ಮಾರ್ಕೆಟ್ ಇದನ್ನು ಉತ್ತಮವಾಗಿ ಕಾಣುತ್ತದೆ ಅರ್‌ ಬಿ ಐ ಬಡ್ಡಿದರವನ್ನು ಕಡಿತಗೊಳಿಸುವುದರಿಂದ  ಹಣಕಾಸಿನ ಒಳ ಹರಿವು ಹೆಚ್ಚತ್ತಾ ಹೊಗುತ್ತದೆ ಇದರಿಂದ ಜನರ ಕೈಗಳಲ್ಲಿ ದುಡ್ಡನ ಓಡಟವು ಹೆಚ್ಚುವುದರಿಂದ ಕಂಪನಿಗಳು ಹೆಚ್ಚನ ಲಾಭವನ್ನು ಸಾದ್ಯವಾಗುತ್ತದೆ.

ಫೆಬ್ರವರಿ 8 ದೆಹಲಿ ಚುನಾವಣೆ

ದೆಹಲಿ ಚುನಾವಣೆಯು ಕೇಂದ್ರದ ಆಡಳಿತ  ಪರವಾಗಿ ಬಂದರೆ ಮಾರ್ಕೆಟ್ ನಲ್ಲಿ ಉತ್ತಮ ಪ್ರದರ್ಶನವನ್ನು ಕಾಣಬಹುದು ಆದ್ದರಿಂದ ಈ ದಿನಾಂಕವು ಮಾರ್ಕೆಟ್‌ಗೆ ಪ್ರಮುಖವಾದ ದಿನವಾಗಿದೆ

ಫೆಬ್ರವರಿ 26 ಮುಂದಿನ ವರ್ಷದ ಜಿಡಿಪಿ ESTIMATION

ಇಂದು ಮಾರ್ಕೆಟ್‌ ಕುಸಿತಕ್ಕೆ ಮುಖ್ಯ ಕಾರಣವೇ ದೇಶದ ಜಿಡಿಪಿ ಆದ್ದರಿಂದ ಮುಂದಿನ ವರ್ಷದ ಜಿಡಿಪಿಯು ಉತ್ತಮ ಪ್ರದರ್ಶನ ಕಂಡರೆ ಮಾತ್ರ ಮಾರ್ಕೆಟ್ ALL TIME HIGH ಹೋಗಬಹುದು ದೇಶದ ಒಟ್ಟಾರೆ ಅರ್ಥಿಕತೆಯನ್ನು  ಜಿಡಿಪಿಯ ಬೆಳವಣಿಗೆಯಿಂದ ಅಳೆಯಲಾಗುತ್ತದೆ ಆದ್ದರಿಂದ ಮಾರ್ಕೆಟ್‌ ದೃಷ್ಟಿಯಿಂದ ಮುಖ್ಯವಾದ ದಿನವಾಗಿದೆ.

 

No comments:

Post a Comment