ಭಾರತದ ಸ್ಟಾಕ್‌ ಮಾರ್ಕೆಟ್‌ ಕುಸಿತಕ್ಕೆ ಕಾರಣವೇನು.....?


  ಭಾರತದ ಸ್ಟಾಕ್‌ ಮಾರ್ಕೆಟ್‌  ಸತತವಾಗಿ ಕುಸಿತ ಕಾಣುತ್ತಿದೆ. ಇದಕ್ಕೆ ಮುಖ್ಯ ಕಾರಣ ಹಲವು ಅವುಗಳ ಕುರಿತು ಚರ್ಚಿಸೋಣ .......

1) ಟ್ರಂಪ್‌ ಅಧಿಕಾರಕ್ಕೆ ಬಂದಿರುವುದು...

ಆಮೆರಿಕಾದಲ್ಲಿ ಟ್ರಂಪ್ ಅವರ ಅಭೂತ ಪೂರ್ವ ಗೆಲುವು ಅಲ್ಲಿನ ಹೂಡಿಕೆದಾರರಲ್ಲಿ ದೊಡ್ಡ ವಿಶ್ವಾಸ ತುಂಬಿದೆ

ಹಲವು ದೇಶಗಳಲ್ಲಿ ಇರುವ ತಮ್ಮ ಹೂಡಿಕೆಯನ್ನು ಮರಳಿ ಆಮೆರಿಕಾಕ್ಕೆ ಸತತವಾಗಿ ಕೊಂಡೊಯ್ಯುತ್ತಿದ್ದಾರೆ.ಹಾಗು ಡಾಲರ್‌ ದಿನೇ ದಿನೇ ಪ್ರಬಲವಾಗುತ್ತಿದೆ  . ಟ್ರಂಪ್ ಅವರ ಮೊದಲು ಆಮೆರಿಕಾ ಎಂಬ ಘೋಷಣೆ ಇಡೀ ಪ್ರಪಂಚದ ಎಲ್ಲ ಮಾರುಕಟ್ಟೆಗಳ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ ಹಾಗು ಅಲ್ಲಿನ ವಲಸಿಗರ ಮೇಲೆ ಹುಟ್ಟಿನಿಂದ  ಇರುವ (ತಂದೆ ಅಥವಾ ತಾಯಿ ಒಬ್ಬರು ನಾಗರೀಕರಾಗಿರುವುದು ಕಡ್ಡಾಯ) ಹಕ್ಕನ್ನು ತೆಗೆಯುವ ಕಾಯಿದೆ ತೆಗೆಯಲೂ ಪ್ರಯತ್ನಿಸುತ್ತಿರುವುದು ಕೂಡ ಮಾರ್ಕೆಟ್‌ ಸತತ ಬೀಳಲು ಕಾರಣವಾಗಿದೆ.ಹಾಗು  ಅಕ್ರಮ ವಲಸಿಗರನ್ನು ಮರಳಿ ಅವರ ದೇಶಗಳಿಗೆ ಕಳಿಸುತ್ತಿರುವುದು ಯಾರು ಸ್ವಿಕರಿಸುವುದಿಲ್ಲವೊ ಅ ದೇಶಗಳ ಮೇಲೆ ರಪ್ತು ಸುಂಕ ಹೆಚ್ಚಿಸುವ ನಿರ್ಧಾರ ತೆಗೆದುಕೊಂಡಿರುವುದು ಉದಾ ..ಕೊಲಂಬಿಯಾ ಈ ಎಲ್ಲ ಕಾರಣಗಳಿಂದಾಗಿ ಮಾರ್ಕೆಟ್‌ ಸತತವಾಗಿ ಬೀಳುತ್ತಿದೆ...

2) ದೇಶದ ಜಿಡಿಪಿ ಕುಸಿಯುತ್ತಿರುವುದು.....

ಕಳೆದ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ದೊಡ್ಡ ಮಟ್ಟದಲ್ಲಿ ಕುಸಿಯುತ್ತಿರುವುದು ವಿದೇಶಿ ಹುಡಿಕೆದಾರರಲ್ಲಿ ನಂಬಿಕೆ ಕುಸಿಯುವಂತೆ ಮಾಡಿರುವುದರಿಂದ ತಮ್ಮ ಹುಡಿಕೆಯನ್ನು ಸತತವಾಗಿ ತೆಗೆಯುತ್ತಿದ್ದಾರೆ.  ಜಿಡಿಪಿ ಕುಸಿಯುವುದು ಒಂದು ರೀತಿಯಲ್ಲಿ ದೇಶದ ಜನರಲ್ಲಿ  ಹಣ ಇಲ್ಲದಿರುವುದು ತೊರಿಸಿಕೊಡುತ್ತದೆ .ಈ ಎಲ್ಲ ಕಾರಣಗಳಿಂದಾಗಿ ದೇಶದ ಕಂಪನಿಗಳ ವ್ಯಾಪರವು ಕುಸಿಯುತ್ತಿದೆ.

ಮಾರ್ಕೆಟ್ ಚೇತರಿಸಿಕೊಳ್ಳಲು‌ ಹಲವು ತಿಂಗಳುಗಳು ಬೇಕಾಗಬಹುದು ದೇಶಿಯ ಹುಡಿಕೆದಾರರು ತಾಳ್ಮೆಯನ್ನು ಹೊಂದಬೇಕು....

No comments:

Post a Comment