ಫೆ-14 ಇಂದು ಅಂತರಾಷ್ಟ್ರೀಯ ಪುಸ್ತಕ ಕೊಡುಗೆ ದಿನ .....ಪುಸ್ತಕಗಳ ಕುರಿತ ವಿಶೇಷ

ಪುಸ್ತಕ ಎಂದರೆ ವಸ್ತುವಲ್ಲ ಅದು ನಮ್ಮ ಸ್ನೇಹಿತ.......

ನೂರು ಜನ ಸ್ನೇಹಿತರಿಗಿಂತ ಒಂದು ಪುಸ್ತಕ ಉತ್ತಮ ಎಂಬ ನಾಣ್ನುಡಿಯಂತೆ  ನಮ್ಮ ಮಾನಸಿಕ ಆರೋಗ್ಯಕ್ಕಾಗಿ ಹಾಗು ಪ್ರಪಂಚವನ್ನು ತಿಳಿದುಕೊಳ್ಳಲು ಪುಸ್ತಕಗಳು ಬೇಕು. ಜೀವನದ  ಪ್ರತಿ  ಹಂತದಲ್ಲು ಪುಸ್ತಕಗಳು ನಮಗೆ ಪ್ರೇರಣೆಯನ್ನು ನೀಡುತ್ತವೆ.ಪುಸ್ತಕಳನ್ನು ನಂಬಿಕೊಂಡ ವ್ಯಕ್ತಿಯ ಜೀವನ ಎಂದು ಕಷ್ಟಕ್ಕೆ ಒಳಗಾಗಿಲ್ಲ.


ಆದ್ಯಾತ್ಮದ ಮೂಲಸೆಲೆ ಪುಸ್ತಕಗಳು
ನಾವು ಸಮಾಜದಲ್ಲಿ ಉನ್ನತ ವ್ಯಕ್ತಿಗಳಾಗಬೇಕಾದರೆ ನಮ್ಮ ಜೀವನದಲ್ಲಿ ಮೌಲ್ಯಗಳನ್ನು ಉತ್ತಮ ತತ್ವ ಸಿದ್ದಾಂತಗಳನ್ನು  ಅಳವಡಿಸಿಕೊಳ್ಳಬೇಕು .ಮಹಾನ್ ಸಾಧು ಸಂತರು ತಾವು ಬರೆದ ತತ್ವಪದಗಳಲ್ಲಿ ಗ್ರಂಥಗಳಲ್ಲಿ ಉನ್ನತ ಮೌಲ್ಯಗಳನ್ನು ಹಾಕಿಕೊಟ್ಟಿದ್ದಾರೆ ಈ ಮೌಲ್ಯಗಳು ಮಾನವ ಸಮುದಾಯ ಭೂಮಿಯ ಮೇಲೆ ಇರುವವರೆಗೂ ಇರುತ್ತವೆ,. ಹಾಗಾಗಿ ಪುಸ್ತಕಗಳು ನಮ್ಮಲ್ಲಿ ಮೌಲ್ಯವನ್ನು ತುಂಬಿವೆ

ಪುಸ್ತಕಗಳಿಂದ ಆತ್ಮ ವಿಶ್ವಾಸ ಹೆಚ್ಚುತ್ತದೆ
ಪುಸ್ತಕಗಳು ನಮ್ಮ ಮಾನಸಿಕ ಬೆಳವಣಿಗೆಗೆ ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ  ವೈಜ್ಞಾನಿಕ ಸಮೀಕ್ಷೆಗಳ ಪ್ರಕಾರ ಪುಸ್ತಕಗಳನ್ನು ಓದುವವರಲ್ಲಿ ಸ್ಮರಣಶಕ್ತಿ ಹಾಗೂ ಕ್ರಿಯಾಶೀಲತೆ  ಗುಣಗಳು ಕೇವಲ ಪುಸ್ತಕಗಳನ್ನು ಓದುವುದರಿಂದ ಮಾತ್ರ ದೊರೆಯುತ್ತದೆ. ಸಮಾಜದಲ್ಲಿ ಇತರೆ ವ್ಯಕ್ತಿಗಳಿಗೆ ಹಾಗೂ ಪ್ರಾಣಿಗಳಿಗೆ ತಮ್ಮದೇ ಆದ ಮೌಲ್ಯವಿದೆ ಎಂಬುದನ್ನು ಪುಸ್ತಕಗಳಿಂದ ನಾವು ಕಲಿಯಬಹುದು

 ಜಗತ್ತಿನಲ್ಲಿರುವ ದೊಡ್ಡ ದೊಡ್ಡ ಕಂಪನಿಗಳ ಸಂಸ್ಥಾಪಕರು ಕೂಡ ಪುಸ್ತಕಗಳನ್ನು ಓದಿ ಅದರ ಮೂಲಕ ತಮ್ಮ ಜ್ಞಾನವನ್ನು, ಕ್ರಿಯಾಶೀಲತೆಯನ್ನು, ಸ್ಪೂರ್ತಿಗಳನ್ನು ,ಪ್ರೇರಣೆಯನ್ನು ತೆಗೆದುಕೊಂಡು ಹೊಸ ಹೊಸ ಆವಿಷ್ಕಾರಗಳಿಗೆ ಮನ್ವಂತರ ಬರೆದವರಾಗಿದ್ದಾರೆ

ಪುಸ್ತಕಗಳು ಉದ್ಯಮಿಗಳನ್ನು ಸೃಷ್ಟಿಸುತ್ತವೆ
 ಪುಸ್ತಕಗಳು ನಮ್ಮನ್ನು ಹಲವಾರು ಕ್ಷೇತ್ರಗಳಿಗೆ ಪರಿಚಯ ಮಾಡಿ ಕೊಡುತ್ತವೆ ಅದು ಕೈಗಾರಿಕೆ, ಕೃಷಿ ಇರಲಿ ,ಶಿಕ್ಷಣ ,ರಾಜಕೀಯ, ಉದ್ಯಮ, ಪ್ರೀತಿ, ಸ್ನೇಹ ,ನಂಬಿಕೆ ಎಲ್ಲ ವಿಷಯಗಳ ಬಗ್ಗೆ ನಮ್ಮಲ್ಲಿ ಪೂರ್ಣ ಪ್ರಮಾಣದ ಜ್ಞಾನ ನೀಡಲು ಪುಸ್ತಕಗಳಿಂದ ಮಾತ್ರ ಸಾಧ್ಯ .ಪುಸ್ತಕಗಳು ನಮ್ಮಲ್ಲಿ ಹೊಸ ಕಲ್ಪನೆಗಳು ಉತ್ಸಾಹವನ್ನು ಉಂಟುಮಾಡುತ್ತದೆ ನಮ್ಮ ಸುತ್ತಲಿನ ಪ್ರಪಂಚ ಹೇಗೆ ನೋಡಬೇಕು ಎಂಬುದನ್ನು ತಿಳಿಸಿಕೊಡುತ್ತದೆ ಇದರಿಂದ ನಾವು ಬಹಳಷ್ಟು ವಿಷಯಗಳನ್ನು ಕೌಶಲ್ಯಗಳನ್ನು ಕಲಿಯಲು ಸಾಧ್ಯವಾಗುತ್ತದೆ .

ಪುಸ್ತಕಗಳು ನಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಪ್ರತಿ ವಿದ್ಯಾರ್ಥಿಯು ತಾನು ಓದುತ್ತಿರುವಂತ ವಿಷಯದ ಬಗ್ಗೆ ನಿರಂತರತೆಯನ್ನು ಕಾಪಾಡಿಕೊಂಡಾಗ ಅವನು ವಿಶ್ವಾಸವನ್ನು ಪಡೆದುಕೊಳ್ಳುತ್ತಾನೆ ನಾನು ಇನ್ನು ಹೆಚ್ಚಿನ ವಿದ್ಯಾಭ್ಯಾಸ ಮಾಡಬಲ್ಲೆ ಹಾಗೂ ತನಗೆ ಇಷ್ಟವಾದ ಕ್ಷೇತ್ರದಲ್ಲಿ ಸಾಧನೆ ಮಾಡಬಲ್ಲೆ ಎನ್ನುವ ವ್ಯಕ್ತಿತ್ವಗಳು ಪುಸ್ತಕಗಳಿಂದ ನಿರ್ಮಾಣ ವಾಗುತ್ತವೆ. ನಮ್ಮನ್ನು ಮಾನಸಿಕವಾಗಿ ಭಾವನಾತ್ಮಕವಾಗಿ ದೃಢ ವ್ಯಕ್ತಿಗಳನ್ನಾಗಿ ಬೆಳೆಯಲು ಸಹಾಯ ಮಾಡುತ್ತದೆ ಒಬ್ಬ ವ್ಯಕ್ತಿ ಕೇವಲ ದೈಹಿಕವಾಗಿ ಶಕ್ತಿವಂತನಾದರೆ ಸಾಲದು ಅವನಲ್ಲಿ ಶಬ್ದಕೋಶದ ಭಂಡಾರ ,ಸಂವಹನ ಕೌಶಲ್ಯ, ಇತರ ಜನರೊಂದಿಗೆ ಉತ್ತಮ ಬಾಂಧವ್ಯ  ಹೊಂದುವುದು ಇವೆಲ್ಲವನ್ನು ಪಡೆಯಲು ಅವನ ಮಾನಸಿಕ ಹಾಗೂ ಭಾವನಾತ್ಮಕ ವ್ಯಕ್ತಿತ್ವ ಬಹಳ ಸದೃಢವಾಗಿರಬೇಕಾಗುತ್ತದೆ ಅಂತಹ ವ್ಯಕ್ತಿತ್ವವನ್ನು ಪುಸ್ತಕಗಳು ನೀಡುತ್ತವೆ. ಹೀಗೆ ಪುಸ್ತಕಗಳು ನಮ್ಮನ್ನು ಒಬ್ಬ ಪೂರ್ಣ ಪ್ರಮಾಣದ ವ್ಯಕ್ತಿತ್ವವುಳ್ಳ ವ್ಯಕ್ತಿಯನ್ನಾಗಿ ಪರಿವರ್ತಿಸುವಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸುತ್ತವೆ

ಪ್ರತಿ ರಾತ್ರಿ ಮಲಗುವ ಮುನ್ನ ಪುಸ್ತಕ ಓದಿ ಮಲಗಿ 
 ನಿಮ್ಮ ಜೀವನದಲ್ಲಿ ಪ್ರತಿ ರಾತ್ರಿ ಮಲಗುವ ಮುನ್ನ ಐದು ನಿಮಿಷಗಳು ಪುಸ್ತಕ ಓದಿ ಮಲಗಿ ಹಾಗೂ ನಿಮ್ಮ ಬಿಡುವಿನ ಸಂದರ್ಭ ದಲ್ಲಿ ಪುಸ್ತಕಗಳಿಗಾಗಿ ಸಮಯ ಮೀಸಲಿಡಿ. ನಿಮ್ಮ ಮೆಚ್ಚಿನ ವಿಷಯಗಳ ಬಗ್ಗೆ ಪುಸ್ತಕಗಳನ್ನು ಸಂಗ್ರಹಿಸಿ ಇದರಿಂದ ನಮ್ಮ ಮನೆಯಲ್ಲಿನ ಮಕ್ಕಳಿಗೂ ಪುಸ್ತಕದ ಮಹತ್ವ ತಿಳಿದು ಬರುತ್ತದೆ ಇಂದು ಫೆಬ್ರವರಿ 14 ಎಂದರೆ ಪ್ರೇಮಿಗಳ ದಿನ ಎಂಬುದನ್ನು ಎಲ್ಲಾ ಯುವಕ ಯುವತಿಯರು ಯುವತಿಯರು ತಲೆಯಲ್ಲಿ ತುಂಬಿಕೊಂಡಿದ್ದಾರೆ ಆದರೆ ಇಂದು ಅಂತರಾಷ್ಟ್ರೀಯ ಪುಸ್ತಕ ಕೊಡುವ ದಿನ ನಾವೆಲ್ಲರೂ ಪುಸ್ತಕಗಳನ್ನು ಒಬ್ಬರು ಮತ್ತೊಬ್ಬರಿಗೆ ಕೊಡುವ ಈ ಸಂಪ್ರದಾಯವನ್ನು ಬೆಳೆಸಿ ನಮ್ಮ ಮಕ್ಕಳು ಹಾಗೂ ಕುಟುಂಬಗಳನ್ನು ಓದಿನ ಕಡೆಗೆ ಬೆಳೆಸೋಣ ಎಂದು ಆಶಿಸುತ್ತಾ ತಮ್ಮೆಲ್ಲರಿಗೂ ಅಂತರರಾಷ್ಟ್ರೀಯ ಪುಸ್ತಕ ಕೊಡುವ ದಿನದ ಹಾರ್ದಿಕ ಶುಭಾಶಯಗಳು.

No comments:

Post a Comment