"ದೊಡ್ಡ ಮಳೆ ಹೊಯ್ಯಲೆ ದೊಡ್ಡ ಕೆರೆ ತುಂಬಲೆ
ಗವಿಯಗಳೆಲ್ಲ ಹಯನಾಗಲೆ
ಹೊಯ್ಯೆ ಹೊಯ್ಯೆ ಮಳೆಯೆ ನಮ್ಮೂರಿಗೆ.".....
ಕರ್ನಾಟಕ ಹಲವು ಜಾನಪದ ಹಾಡುಗಳು ಹಾಗೂ ಕಲೆಗಳ ತವರೂರು ಅಂತಹ ಜಾನಪದ ಕೊಂಡಿಯೊಂದು ಕಳಚಿ ನಾಡಿಗೆ ತುಂಬಲಾರದ ನಷ್ಟವಾಗಿದೆ . ಹೌದು ನಾಡಿನ ಖ್ಯಾತ ಜಾನಪದ ಗಾಯಕಿ , ಕರ್ನಾಟಕದ ಹಾಲಕ್ಕಿ ಹಾಡುಗಳ ಕೋಗಿಲೆ ಎಂದೆ ಖ್ಯಾತಿ ಪಡೆದ ಸುಪ್ರಸಿದ್ಧ ಜಾನಪದ ಹಾಡುಗಾರ್ತಿ ಸುಕ್ರಿ ಬೊಮ್ಮನ ಗೌಡ ಇಂದು ನಿಧನರಾಗಿದ್ದಾರೆ
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮಂಗಳೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಮರಳಿ ಬರಲಿಲ್ಲ. ಸುಕ್ರಿ ಬೊಮ್ಮನಗೌಡ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾಲಕ್ಕಿ ಸಮುದಾಯಕ್ಕೆ ಸೇರಿದವರು. ಇವರು ಪಶ್ಚಿಮ ಘಟ್ಟಗಳ ಮಲೆನಾಡ ಕಾಡುಗಳಲ್ಲಿ ಜನಿಸಿ, ಜಾನಪದ ಹಾಡುಗಳ ಮೂಲಕ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದು ಯಾವ ಸಾಹಿತ್ಯ ಕಾರಣದಿಂದಲೂ ಕಡಿಮೆಯಲ್ಲ
ಇಂದು ಹಾಲಕ್ಕಿ ಪದಗಳು ಕರ್ನಾಟಕದಲ್ಲಿ ಕಳೆದು ಹೋಗುತ್ತಿರುವ ಸಾಹಿತ್ಯ ಪದಗಳಲ್ಲಿ ಒಂದಾಗಿದೆ ಇಂತಹ ಸುಮಾರು 5000 ಹಾಲಕ್ಕಿ ಪದಗಳನ್ನು ಬಾಯಿ ಪಾಠವಾಗಿ ನೆನಪಿಟ್ಟಿದ್ದರು.
ಸುಕ್ರಿ ಬೊಮ್ಮನಗೌಡ ಅವರು ಮಧ್ಯಪಾನ ನಿಷೇಧ ಹೋರಾಟದಲ್ಲಿ ಮುಂಚೂಣಿಯ ಹೋರಾಟಗಾರರಾಗಿದ್ದರು ಇದಕ್ಕೆ ಕಾರಣ ಅವರ ಗಂಡ ಮಧ್ಯಪಾನ ಸೇವಿಸಿ ಮೃತರಾಗಿದ್ದರು. ತನ್ನಂತೆ ಇತರೆ ಯಾವ ಮಹಿಳೆಯರು ವಿಧವೆಯಾಗಬಾರದು ಎಂದು ಮಧ್ಯಪಾನ ನಿಷೇದ ಹೋರಾಟದಲ್ಲಿ ಸುಧೀರ್ಘವಾಗಿ ಭಾಗವಹಿಸಿದ್ದರು. ಜೊತೆಗೆ ತಾವು ಅನಕ್ಷರಾಗಿದ್ದರು ತಮ್ಮಂತೆ ಕಾಡಿನ ಯಾವ ಮಕ್ಕಳು ಅನಕ್ಷರಸ್ಥರು ಆಗಬಾರದೆಂದು ಕಾರವಾರ ಸಾಕ್ಷರತಾ ಜಾಗೃತಿ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಎಲ್ಲಾ ಕಾರಣಗಳಿಂದಾಗಿ ಸುಕ್ರಿ ಬೊಮ್ಮನ ಗೌಡ ಅವರು ವಿಶೇಷ ಸಾಲಿನಲ್ಲಿ ನಿಲ್ಲುತ್ತಾರೆ .
ಅವರು ತಮ್ಮ ಹಾಲಕ್ಕಿ ಪದಗಳ ಮೂಲಕ ತಮ್ಮ ಜನಾಂಗದ ಒಟ್ಟು ಸಂಸ್ಕೃತಿಯನ್ನು ಇನ್ನು ಜೀವಂತವಾಗಿ ಉಳಿಸಿಕೊಂಡಿದ್ದರು. ಜೊತೆಗೆ ಸಮಾಜದ ಒಳಿತಿಗೆ ಹೋರಾಡುತ್ತ ಸರ್ಕಾರದ ಒಳಗಣ್ಣನ್ನು ತೆರೆಸಲು ಪ್ರಯತ್ನ ಮಾಡಿದ್ದರು. ಅವರ ಬದುಕು ನಮಗೆಲ್ಲ ಆದರ್ಶವಾಗಬೇಕು ಜೊತೆಗೆ ನಾವೆಲ್ಲರೂ ಸುಕ್ರಿ ಬೊಮ್ಮಗೌಡ ಅವರ ಜಾನಪದ ಸಂಸ್ಕೃತಿಯನ್ನು ದಾಖಲಿಸುವ ಉಳಿಸುವ ಪ್ರಯತ್ನ ಮಾಡಬೇಕು .
ನಮ್ಮ ಜಾನಪದರು ಓದು ಬರಹ ಕಲಿಯದವರು ಆದರೆ ಅವರಲ್ಲಿರುವ ವಿದ್ವತ್ತು, ಭಾಷಾ ಪ್ರೌಢಿಮೆ, ಲೋಕಜ್ಞಾನ, ನೆನಪಿನ ಶಕ್ತಿ ,ಎಂಥವರನ್ನು ಬೆರಗುಗೊಳಿಸುತ್ತದೆ ಪಶ್ಚಿಮ ಘಟ್ಟದ ದಟ್ಟ ಕಾಡುಗಳಲ್ಲಿ ಜನಿಸಿ ಇಷ್ಟೊಂದು ಅಮೋಘ ಹೋರಾಟದ ಮೂಲಕ ನಮಗೆಲ್ಲರಿಗೂ ಸುಕ್ರಿ ಬೊಮ್ಮಗೌಡ ಅವರು ಆದರ್ಶರಾಗಿದ್ದಾರೆ .
ಇಂತಹ ಮಹಾನ್ ಜಾನಪದ ಹಾಡುಗಾರ್ತಿ, ಸಾಮಾಜಿಕ ಹೋರಾಟಗಾರ್ತಿಯನ್ನು ಕಳೆದುಕೊಂಡು ಕನ್ನಡ ನಾಡು ಬಡವಾಯಿತು . ಸುಕ್ರಿ ಬೊಮ್ಮಗೌಡ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ . ಅವರ ಅಗಲಿಕೆಗೆ ನಾಡಿನ ಗಣ್ಯರು ಸಂತಾಪ ಸೂಚಿಸಿದ್ದಾರೆ.

No comments:
Post a Comment