ಸ್ಟಾಕ್‌ ಮಾರ್ಕೆಟ್ ನಲ್ಲಿ ಹೂಡಿಕೆ ಪ್ರಾರಂಭಿಸುವುದು ಹೇಗೆ.... ಹಾಗು ಯಶಸ್ಸು ಗಳಿಸುವುದು ಹೇಗೆ?

 ಇಂದಿನ ದಿನಮಾನಗಳಲ್ಲಿ ಹಣ ಉಳಿತಾಯ ಮಾಡುವುದು ಅತಿ ಪ್ರಮುಖವಾದ ವಿಷಯವಾಗಿದೆ ಈ ಉಳಿತಾಯವನ್ನು ನಾವು ಎಲ್ಲಿ ಮತ್ತು ಹೇಗೆ ಮಾಡುವುದು ಎಂಬ ಗೊಂದಲವು ನಮ್ಮಲ್ಲಿ ಸತತ ಉಂಟಾಗುತ್ತಿರುತ್ತದೆ. 

ಬೆಲೆ ಎರಿಕೆ ಎನ್ನುವುದು ನಿರಂತರ ಪ್ರಕ್ರಿಯೆ ವರ್ಷದಿಂದ ವರ್ಷಕ್ಕೆ ಎಲ್ಲ ವಸ್ತುಗಳ ಬೆಲೆ ಎರಿಕೆ ಊಂಟಾಗುತಿರುತ್ತದೆ  .

 ಈ ನಿಟ್ಟಿನಲ್ಲಿನಮ್ಮ ಉಳಿತಾಯವು ಈ ಹಣದುಬ್ಬರವನ್ನು ದಾಟಿ ನಮಗೆ ಲಾಭ ಕೊಡುವಂತೆ ಇರಬೇಕು ಇಂತಹ ಉಳಿತಾಯಗಳು  ನಾವು ಸ್ಟಾಕ್‌ ಮಾರ್ಕೆಟ್ ನಲ್ಲಿ ಕಾಣಬಹುದು  ವರ್ಷಕೆ ಶೇಕಡಾ 12 ರಂತೆ ನಮ್ಮ ಹಣವು ಇಲ್ಲಿ ಬೆಳೆಯುತ್ತ ಹೋಗುತ್ತದೆ

 ಸ್ಟಾಕ್‌ ಮಾರ್ಕೆಟ್ ನಲ್ಲಿ ಹೂಡಿಕೆ ಪ್ರಾರಂಭಿಸುವುದು ಹೇಗೆ..

ನಮ್ಮಲ್ಲಿ ಇರುವ ಎಲ್ಲ ಹಣವನ್ನು ಒಟ್ಟಿಗೆ ತಂದು  ಹೂಡುವುದು ಕೂಡ ಸರಿಯಾದ ಮಾರ್ಗವಲ್ಲ 

ಮೊದಲ ಎರಡು ವರ್ಷಗಳು ಬಹಳ ಕಡಿಮೆ ಹಣದಿಂದ ಪ್ರಾರಂಭಿಸಬೇಕು  ನಿಮ್ಮ ಸಂಬಳದ ಶೇಕಡಾ 1 ಅಥಾವ 2 ರಷ್ಟು ಹಣದಿಂದ ಪ್ರಾರಂಭಿಸಿ ಇದು ನಿಮಗೆ ಮಾರ್ಕೆಟ್‌ ಕುರಿತು ಉತ್ತಮ ಶಿಕ್ಷಣ ಪಡೆಯಲು ಸಹಕಾರ ನೀಡುತ್ತದೆ. 

ಹಂತ ಹಂತವಾಗಿ ನಿಮಗೆ ಮಾರ್ಕೆಟ್‌ ಕುರಿತ ಙ್ಞನ ಹೆಚ್ಚಾಗುತ್ತ ಹೊದಂತೆ ನಿಮ್ಮ ಹೂಡಿಕೆಯು  ಬೆಳೆಯುತ್ತಾ ಹೋಗುತ್ತದೆ.

ನೀವು ಸತತ ಐದು ವರ್ಷಗಳ ಕಾಲ ಮಾರ್ಕೆಟ್  ಅಲ್ಲಿ ಉಳಿದಿದ್ದರೆ ನಿಮಗೆ ಈಗಾಗಲೇ ಅದರ ಅಳ ,ಅಗಲಗಳು ತಿಳಿದಿವೆ ಎಂಬುದು ಗೊತ್ತಾಗುತ್ತದೆ. ಹಾಗು ಮರ್ಕೆಟ್‌ ನ ಸ್ವಭಾವವು ನಿಮಗೆ ಅರ್ಥವಾಗುತ್ತ ಹೋಗುತ್ತದೆ. ಇದರಿಂದಾಗಿ ಭವಿಷ್ಯದಲ್ಲಿ ಉತ್ತಮ ಲಾಭ ಮಾಡಲು ಸಾಧ್ಯವಾಗುತ್ತದೆ.



No comments:

Post a Comment