ಹೊಸ ಆದಾಯ ತೆರಿಗೆ ನೀತಿಯಿಂದ ಹಣದ ಚಲಾವಣೆ ಊಂಟಾಗಬಹುದಾದ ಕ್ಷೇತ್ರಗಳು.....ಇವು

 ಹೊಸ ಆದಾಯ ತೆರಿಗೆಯು ಮಧ್ಯಮ ವರ್ಗದ ಜನರಲ್ಲಿ ಬಹಳ ಖುಷಿಯನ್ನು ಉಂಟುಮಾಡಿದೆ ಈ ತೆರಿಗೆ ನೀತಿಯು12,75000 ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ವಿಧಿಸದಿರುವುದು ಇನ್ನು ಮುಂದೆ ಒಂದು ಲಕ್ಷದ ವರೆಗೆ ಸಂಬಳ ಪಡೆಯುವ ಎಲ್ಲ ನೌಕರರು ಸುಮಾರು 60,000 ದಿಂದ 1,00,000 ವರೆಗೆ ಹಣ ಅವರ ಬಳಿ ಉಳಿಯಲಿದೆ ಈ ಹಣವನ್ನು ಅವರು ಎಲ್ಲಿ ಹೂಡಿಕೆ ಮಾಡಬಹುದು ಎಂಬುದನ್ನು ನೋಡೊಣ...


ಹೀಗೆ ಉಳಿತಾಯವಾದ ತೆರಿಗೆ ಹಣವು ಮನೆಗೆ ಬೇಕಾದ ಅವಶ್ಯಕ ವಸ್ತುಗಳ ಖರೀದಿಗೆ ಬಳಸಬಹುದು ಎಂಬುದು ಸತ್ಯವಾದರು ಅಲ್ಲಿಯೆ ಏಲ್ಲ ಹಣವನ್ನು ಖರ್ಚು ಮಾಡಲು ಸಾಧ್ಯವಿಲ್ಲ ....ಈ ಹಣವು ವರ್ಗವಣೆಯಾಗಬಹುದಾದ ಕ್ಷೇತ್ರಗಳು ಇಂತಿವೆ.....

1) ಹೊಸ ಸ್ಕೂಟರ್‌  ಆಥವಾ ಕಾರುಗಳ ಖರೀದಿ ಹೆಚ್ಚಾಗಲಿದೆ

ನಮ್ಮ ಭಾರತದಲ್ಲಿ ಹಣ ಉಳಿತಾಯವಾದರೆ ಮೊದಲು ಮಾಡಬಹುದಾದ ಕೆಲಸಗಳಲ್ಲಿ ವಾಹನಗಳ ಖರೀದಿ ಆಗಿರುತ್ತದೆ ಇದರಿಂದ ವಾಹನ ತಯಾರಿಕ ಕಂಪನಿಗಳು ಹೆಚ್ಚು ಲಾಭ ಗಳಿಸಬಹುದಾದ ಅವಕಾಶಗಳು ಹೆಚ್ಚಿವೆ ಇಲ್ಲಿ ಹೂಡಿಕೆ ಮಾಡುವುದರಿಂದ ಮುಂದಿನ 2 ವರ್ಷಗಳಲ್ಲಿ ಒಳ್ಳೆ ಲಾಭ ಮಾಡುವ ಅವಕಾಶಗಳು ಹೆಚ್ಚಿವೆ ಎಂದು ಹೇಳಬಹುದು.

2) ಚಿನ್ನದ ಒಡವೆಗಳು ಹಾಗು ಬೆಳ್ಳಿಯ ವಸ್ತುಗಳು ಕೊಳ್ಳಬಹುದು

ಭಾರತದಲ್ಲಿ  ಮದುವೆ ಇತರೆ ಶುಭ ಸಮಾರಂಭಗಳಲ್ಲಿ ಆಭರಣ ಕೊಳ್ಳುವುದು ಹಳೆಯ ಕಾಲದಿಂದಲೂ ಬಂದಂತಹ ಪದ್ದತಿಯಾಗಿದೆ ಆದ್ದರಿಂದ ಜನರು ಇಲ್ಲಿ ಖರ್ಚು ಮಾಡಬಹುದಾದ ಅವಕಾಶಗಳು ಹೆಚ್ಚಿವೆ ಎಂದು ಹೇಳಬಹುದು ಚಿನ್ನ ಮತ್ತು ಬೆಳ್ಳಿ ಮಾರಟ ಮಾಡುವ ಕಂಪನಿಗಳು ಮುಂದಿನ ಎರಡು ವರ್ಷಗಳಲ್ಲಿ ಒಳ್ಳೆ ಲಾಭ ಮಾಡುವ ಅವಕಾಶಗಳು ಹೆಚ್ಚಿವೆ.

3) ಈ ಹಣವನ್ನು ಬ್ಯಾಂಕಿನಲ್ಲಿ ಡೆಪಾಸಿಟ್‌ ಮಾಡಬಹುದು...

ಹಣ ಉಳಿತಾಯ ಮಾಡುವವರೆಲ್ಲರು ಬ್ಯಾಂಕಿನಲ್ಲಿ ಎಫ್ ಡಿ ಇಡಬಹುದು ..ಹಾಗಗಿ  ಬ್ಯಾಂಕುಗಳು ಲಾಭ ಮಾಡಬಹುದು...

4) ಮ್ಯುಚುಯಲ್ ಫಂಡ್ , ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು.

ಮ್ಯುಚುಯಲ್ ಫಂಡ್ , ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ತಮ್ಮ ಹಣವನ್ನು  ಇಲ್ಲಿ ಹೆಚ್ಚಾಗಿ ಹೂಡಿಕೆ ಮಾಡಬಹುದು


5)ಪ್ರವಾಸಗಳು ಹೋಗಬಹುದು.

ಜನರು ಹೆಚ್ಚಾಗಿ ಪ್ರವಾಸ ಮಾಡಬಹುದು ಹಾಗೂ ರಿಯಲ್‌ ಎಸ್ಟೆಟ್‌ ಗಳಲ್ಲಿ ಹುಡಿಕೆ ಮಾಡಬಹುದು 


6)ಒಳ್ಳೊಳ್ಳೆ ಬಟ್ಟೆಗಳು ವಾಚುಗಳು ಚಪ್ಪಲಿ ಶೂಗಳು ಕೊಳ್ಳಬಹುದು.


7)ಹೋಟೆಲುಗಳಿಗೆ ಹೋಗಿ ಊಟ ತಿಂಡಿ ತಿನ್ನುವುದು ಹೆಚ್ಚಬಹುದು ಅಥವಾ ಮನೆಯಲ್ಲೇ ಕೂತು ಊಟ ತರಿಸಿಕೊಳ್ಳಬಹುದು


8)ಸಿನಿಮಾಗಳಿಗೆ ಹೆಚ್ಚು ಹೋಗಬಹುದು.


❇ತಕ್ಷಣ ಈ ಸೆಕ್ಟರ್ಗಳಲ್ಲಿ ಹೂಡಿಕೆ ಮಾಡೋಣ ಅದರಿಂದ ಲಾಭ ಬರುತ್ತದೆ ಅನ್ನುವ ಆಲೋಚನೆ ಬೇಡ. ಒಂದಷ್ಟು ಬ್ಯುಸಿನೆಸ್ ಸೈಕಲ್ ಗಳು ಹಿಡಿಯುತ್ತೆ ಇದೆಲ್ಲಾ ಲಾಭವಾಗಿ ಕಾಣಲು....ಎಲ್ಲಿ ಹೂಡಿಕೆ ಮಾಡುವುದು ಸೂಕ್ತ ಎಂಬುದನ್ನು ನೀವು ಆಲೋಚನೆ ಮಡಿ ಮುದುವರೆಯಿರಿ

No comments:

Post a Comment