ಮಾರಣಾಂತಿಕ ಮಕ್ಕಳ ಕ್ಯಾನ್ಸರ್ ಕುರಿತ ತಿಳುವಳಿಕೆ ಅಗತ್ಯ.....

 ಕ್ಯಾನ್ಸರ್ ಎಂದ ತಕ್ಷಣವೇ ಜನರಲ್ಲಿ ಸಾಮಾನ್ಯವಾಗಿರುವ ವಿಚಾರವೆಂದರೆ ಇದು ಗುಣಮುಖವಾಗಲಾರದ ಕಾಯಿಲೆ ಆಸ್ಪತ್ರೆಗೆ ಹೋದರು ನಾವು ಬದುಕುವುದಿಲ್ಲ ಎಂಬ ನಂಬಿಕೆ ಗ್ರಾಮೀಣ ಪ್ರದೇಶದಲ್ಲಿ ಹಾಗೂ ಕೆಲವು ನಗರ ಪ್ರದೇಶಗಳಲ್ಲಿ ಜನರಲ್ಲಿ ಇದೆ ಆದರೆ ಈ ಕಾಯಿಲೆ ಕಂಡುಬಂದ ತಕ್ಷಣ ಆದಷ್ಟು ಬೇಗ ಜಾಗೃತಿ ವಹಿಸಿದರೆ ಖಂಡಿತವಾಗಿ ವಾಸಿ ಮಾಡಬಹುದು

ಇತ್ತೀಚಿಗೆ ಕ್ಯಾನ್ಸರ್ ಎಲ್ಲ ವಯೋಮಾನದವರಲ್ಲೂ ಕಂಡು ಬರುತ್ತಿದೆ ನಮ್ಮ ದೇಶದಲ್ಲಿ ತಂಬಾಕು ಸೇವನೆಯಿಂದ  ಸತತ ಕುಡಿತದಿಂದ ಕ್ಯಾನ್ಸರ್ ಹೆಚ್ಚಾಗಿ ಬರುತ್ತಿದೆ ಎಂದು ಸಂಶೋಧನಾ ವರದಿಗಳು ಹೇಳುತ್ತಿವೆ ವಯಸ್ಸಾದವರಲ್ಲಿ ಇದರ ಪ್ರಮಾಣ ಹೆಚ್ಚಿದ್ದರೆ ಮಕ್ಕಳಲ್ಲೂ ಕೂಡ ಇದು ಕಾಣಿಸಿಕೊಳ್ಳುತ್ತಿದೆ

ಕ್ಯಾನ್ಸರ್ ಒಂದು  ಮಾರಣಾಂತಿಕ ಕಾಯಿಲೆ ಎಂಬುದು ನಿಜವಾದರೂ ಸರಿಯಾದ ಸಮಯದಲ್ಲಿ ಜಾಗೃತಿ ವಹಿಸಿದರೆ ಇದರಿಂದ ಗುಣಮುಖರಾಗಬಹುದು ಎಂಬುದು ಸತ್ಯ .ಇತ್ತೀಚೆಗೆ ಖ್ಯಾತ ಚಿತ್ರ ನಟ ಡಾ. ಶಿವರಾಜ್ ಕುಮಾರ್ ಅವರು ಕ್ಯಾನ್ಸರ್ ನಿಂ

ದ ಬಳಲುತ್ತಿದ್ದರು ನಂತರ ಸೂಕ್ತ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಿ ಚಿಕಿತ್ಸೆ ಪಡೆದ ಗುಣಮುಖರಾಗಿ ಬಂದಿದ್ದಾರೆ

ಈ ಕ್ಯಾನ್ಸರ್ ಮಕ್ಕಳಿಗೂ ಬರುತ್ತಾ ಅನ್ನೋ ಪ್ರಶ್ನೆ ನಮಗೆಲ್ಲ ಆಶ್ಚರ್ಯ ಮತ್ತು ಗಾಬರಿಯನ್ನುಂಟು ಮಾಡಬಹುದು ಆದರೆ ಇದು ಸತ್ಯವೂ ಕೂಡ ಹೌದು 0-19 ವರ್ಷದ ಮಕ್ಕಳಲ್ಲಿ ಕಾಣಿಸಿಕೊಳ್ಳಬಹುದು.

ಒಂದು ವರದಿಯ ಪ್ರಕಾರ ವಿಶ್ವದಾದ್ಯಂತ ಸುಮಾರು ನಾಲ್ಕು ಲಕ್ಷ ಮಕ್ಕಳು ಪ್ರತಿ ವರ್ಷ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆ ಭಾರತದಲ್ಲಿ ಸುಮಾರು 80,000 ಮಕ್ಕಳು ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆ .


ಕ್ಯಾನ್ಸರ್ ನಲ್ಲಿ ಹಲವಾರು ವಿಧಗಳಿವೆ

ಮುಖ್ಯವಾಗಿ ಮಕ್ಕಳಲ್ಲಿ ಬ್ಲಡ್ ಕ್ಯಾನ್ಸರ್ ಅಥವಾ ಲುಕೆಮಿಯ  ಎನ್ನುವ ಕ್ಯಾನ್ಸರ್ ಮಕ್ಕಳ ಮೂಳೆ ಮಜ್ಜೆಯಲ್ಲಿ ಉತ್ಪತ್ತಿಯಾಗಿ ರಕ್ತವನ್ನು ಸೇರಿಕೊಳ್ಳುತ್ತದೆ ಇದು ರಕ್ತದಲ್ಲಿ ಬಿಳಿ ರಕ್ತ ಕಣಗಳ ಉತ್ಪಾದನೆ ಹೆಚ್ಚು ಮಾಡುತ್ತಾ ಹೋಗಿ ಕೊನೆಗೆ ಮಕ್ಕಳ ಸಾವಿಗೆ ಕಾರಣವಾಗುತ್ತದೆ

ಈ ರಕ್ತ ಕ್ಯಾನ್ಸರ್ ನ ಗುಣಲಕ್ಷಣಗಳು ಪದೇ ಪದೇ ಜ್ವರ ಬರುವುದು, ವಾಂತಿಯಾಗುವುದು ,ಹೆಚ್ಚು ಸುಸ್ತಾಗುವುದು,ಬಾಯಿ ಮತ್ತು ಮೂಗಿನಿಂದ ರಕ್ತ ಬರುವುದು, ಮಕ್ಕಳ ಮೈಬಣ್ಣ ಬಿಳಿಯಾಗಿ ಬದಲಾಗುವುದು ,ಆಟ ಆಡಲು ಸಾಧ್ಯವಾಗದೇ ಇರುವುದು ,,ಚಿಕ್ಕ ಗಾಯವಾದರೂ ಹೆಚ್ಚು ರಕ್ತ ಸೂರಿಕೆಯಾಗುವುದು ಈ ರೀತಿಯ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಇದರ ಬಗ್ಗೆ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಬೇಕು 

 ಗಂಟಲು ಕ್ಯಾನ್ಸರ್ ಕತ್ತು ಹಾಗೂ ಕಂಕಳಲ್ಲಿ ಉಂಟಾಗುವ ಗಡ್ಡೆಗಳಿಂದ ಈ ಕ್ಯಾನ್ಸರ್ ಕಂಡುಬರುತ್ತದೆ ಮಕ್ಕಳಿಗೆ ಊಟ ಮಾಡಲು ಸಾಧ್ಯವಾಗದೇ ಇರುವುದು, ಗಂಟಲು ನೋವು ಕಾಣಿಸಿಕೊಳ್ಳುವುದು, ಪದೇ ಪದೇ ಜ್ವರ ಬರುವುದು ಇತ್ಯಾದಿ

ಬ್ರೈನ್ ಕ್ಯಾನ್ಸರ್ ಇದು ಮೆದುಳಿನ ಭಾಗದಲ್ಲಿ  ಜೀವಕೋಶಗಳ ಹೆಚ್ಚು ಉತ್ಪಾದನೆಯಾಗಿ ಉಂಟಾಗುವ ಒಂದು ಕಾಯಿಲೆಯಾಗಿದೆ .ಈ ಕ್ಯಾನ್ಸರ್ ನ ಲಕ್ಷಣಗಳು ಬೆಳಗಿನ ಜಾವ ತಲೆನೋವು ಬರುವುದು, ಪದೇ ಪದೇ ವಾಂತಿ ಯಾಗುವುದು ಮಕ್ಕಳು ಮಂಕಾಗಿ ವರ್ತಿಸುವುದು, ಮಡುತ್ತಾರೆ

ಚಿಕಿತ್ಸೆಗಳು

ಕಿಮೋಥೆರಫಿ  ಯಿಂದ ಶೇಕಡಾ 80ರಷ್ಟು ವಾಸಿ ಮಾಡುವ ಅವಕಾಶವಿದೆ.

ರೆಡಿಯೆಷನ್‌ ಥೆರಫಿ,

ಬೊನ್‌ ಮ್ಯಾರೋ ಟ್ರಾನ್ಸ್‌ ಪ್ಲಾಂಟ್‌

ಹಿಮೋಥೆರಫಿ ........

ಯಾವುದೇ ಕ್ಯಾನ್ಸರ್ ಇರಲ್ಲಿ ಮೊದಲು ಕಾಯಿಲೆಯನ್ನು ಗುರುತಿಸಿ   ಶೀಘ್ರ ಚಿಕಿತ್ಸೆ ಪ್ರಾರಂಭ ಮಾಡುವುದು ನಾವು ಮಾಡಬೇಕಾದ ಅತಿ ಮುಖ್ಯವಾದ ಜವಾಬ್ದಾರಿಯಾಗಿದೆ

ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಕುರಿತ ಸಂಶೋಧನೆಗಳು ಹೆಚ್ಚಾಗಿವೆ, ಇದರಿಂದ ಒಳ್ಳೆಯ ಗುಣಮಟ್ಟದ ಔಷಧಿಗಳು ರೇಡಿಯೋ ಥೆರಫಿ ಯಂತ್ರಗಳು ಗಳು ಹಾಗೂ ಸ್ಕ್ಯಾನಿಂಗ್ ಯಂತ್ರಗಳು ಗಳು ಆವಿಷ್ಕಾರ ಆಗಿರೋದ್ರಿಂದ ಪ್ರತಿ ಕ್ಯಾನ್ಸರ್ ಕಾಯಿಲೆಯನ್ನು ಬೇಗ ಪತ್ತೆ ಹಚ್ಚಿ ಚಿಕಿತ್ಸೆ ನೀಡಿ ಗುಣಪಡಿಸಬಹುದು

 ಇಂದು ಹಲವಾರು ಕ್ಯಾನ್ಸರ್ ಸಂಶೋಧನಾ ಕೇಂದ್ರಗಳು ಮತ್ತು ಕ್ಯಾನ್ಸರ್ ಗಾಗಿಯೇ ಚಿಕಿತ್ಸಾ ಆಸ್ಪತ್ರೆಗಳು ಭಾರತದಲ್ಲಿರುವುದರಿಂದ ಜನಸಾಮಾನ್ಯರು ಒಳ್ಳೆಯ ಚಿಕಿತ್ಸೆ ಪಡೆದು ಗುಣಮುಖರಾಗುವ ಅವಕಾಶ ಹೆಚ್ಚಾಗಿದೆ.

 ಹಿರಿಯರಿಗಿಂತ ಮಕ್ಕಳು ಈ ಕಾಯಿಲೆಗೆ ಹೆಚ್ಚುಸ್ಪಂದನೆ ನೀಡುವುದರಿಂದ ಮಕ್ಕಳು ಇದರಿಂದ ಹೊರ ಬರಬಹುದು ಕ್ಯಾನ್ಸರ್ ಬಂದು ವಾಸಿಯಾದ ಮೇಲೆ ಮತ್ತೆ ಬರೋ ಬರುವುದಿಲ್ಲ ಎಂಬುದೇನಿಲ್ಲ ಮತ್ತೆ ಬಂದರೂ ಬರಬಹುದು ಆದರೆ ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಆಹಾರ ವ್ಯಾಯಾಮ ಹಾಗೂ ದೇಹವನ್ನು ಆರೋಗ್ಯವಾಗಿಟ್ಟುಕೊಂಡಲ್ಲಿ ಮತ್ತೆ ಕ್ಯಾನ್ಸರ್ ಬರುವುದಿಲ್ಲ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಆದ್ದರಿಂದ ಮಕ್ಕಳ ಕುರಿತು ಮಾಹಿತಿ ತಿಳಿದಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ . ಇಂದು ಅಂತರಾಷ್ಟ್ರೀಯ ಮಕ್ಕಳ ಕ್ಯಾನ್ಸರ್ ದಿನ ಆದ್ದರಿಂದ ಕ್ಯಾನ್ಸರ್ ಕುರಿತಾಗಿ ಎಚ್ಚರಿಕೆವಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.







No comments:

Post a Comment