ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲೂ ಅಸಕ್ತಿ ಇದ್ದಲ್ಲಿ ನೀವು ತಿಳಿದುಕೊಳ್ಳಬೇಕಾದ ಅಂಶಗಳು
ಹಣ ಉಳಿತಾಯ ಮಾಡಲು ನಾವು ಹಲವಾರು ವಿಧಾನಗಳನ್ನು ಆಯ್ಕೆ ಮಾಡಿ ಕೊಳ್ಳುತ್ತೇವೆ ದುಡಿದ ಹಣವನ್ನು ಕೆಲವರು ಬ್ಯಾಂಕಿನಲ್ಲಿ ಇನ್ನೂ ಕೆಲವರು ಚೀಟಿ ಕಟ್ಟಿ ಹಣ ಉಳಿತಾಯ ಮಾಡುತ್ತಾರೆ ಹಾಗೆಯೆ ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ
ಷೇರು ಮಾರುಕಟ್ಟೆಯು ಈಗ ಹೂಡಿಕೆ ಮಾಡಲು ಸರಿಯಾದ ಸಮಯ ಎಂದು ಭಾವಿಸಬಹುದು ಏಕೆಂದರೆ ಇದುವರೆಗೂ ಕಂಪನಿಗಳು ಹೆಚ್ಚು ಬೆಲೆಯಲ್ಲಿ ವಹಿವಾಟು ಆಗುತ್ತಿದ್ದವು ಅದನ್ನು HIGH PE RATIO ಎನ್ನುತ್ತೇವೆ. ಆದರೆ ಕಳೆದ ಆರು ತಿಂಗಳಿನಿಂದ ಮಾರುಕಟ್ಟೆ ಕುಸಿತ ಕಂಡು ಒಂದು ಹಂತದಲ್ಲಿದೆ ಇಲ್ಲಿಂದ ನಿಧಾನವಾಗಿ ಚೇತರಿಸಿಕೊಳ್ಳಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕಾದರೆ ನಾವು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು
sector analysis and sector growth
ನಾವು ಹೂಡಿಕೆ ಮಾಡುವ ಕ್ಷೇತ್ರದ(sector)ವ್ಯಾಪ್ತಿ ಮತ್ತು ತಿಳುವಳಿಕೆ ಅಗತ್ಯ .ಆ ಕ್ಷೇತ್ರದಲ್ಲಿ ಅಲ್ಪಕಾಲದ ಬೆಳವಣಿಗೆ ಇದೆಯೋ ಅಥವಾ ದೀರ್ಘಕಾಲದ ಬೆಳವಣಿಗೆ ಇದೆಯೋ ಎಂಬುದನ್ನು ಗಮನಿಸಬೇಕು ಉದಾಹರಣೆಗೆ ಸೋಲಾರ್ ಎನರ್ಜಿ, ವಿಂಡ್ ಎನರ್ಜಿ, ನೈಸರ್ಗಿಕ ಅನಿಲಗಳು, ಇವುಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಇದೆ ಮತ್ತು ನಮ್ಮ ಹೂಡಿಕೆಯು ಕನಿಷ್ಠ ಐದು ವರ್ಷಗಳಿಂದ ಹಿಡಿದು ಗರಿಷ್ಠ 30 ರಿಂದ 40 ವರ್ಷಗಳು ದೀರ್ಘವಾಗಿರಬೇಕು ಆಗ ಮಾತ್ರ ನಾವು ಮಾರುಕಟ್ಟೆಯಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಇಲ್ಲವಾದಲ್ಲಿ ನಾವು ನಷ್ಟದಲ್ಲೇ ಉಳಿಯಬೇಕಾಗಬಹುದು
ನಾವು ಹೂಡಿಕೆ ಮಾಡುವ ಕಂಪನಿಯ ಮ್ಯಾನೇಜ್ಮೆಂಟ್ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ.
ನಾವು ಹೂಡಿಕೆ ಮಾಡುವ ಮ್ಯಾನೇಜ್ಮೆಂಟ್ ಯಾವುದೇ ರೀತಿಯ ಅವ್ಯವಹಾರ ದಲ್ಲಿ ತೊಡಗಿರಬಾರದು ಮತ್ತು ತಮ್ಮ ಸಂಬಳಗಳನ್ನು ಹೆಚ್ಚು ಮಾಡಿಕೊಳ್ಳುತ್ತಾ ಹೋಗಬಾರದು. ಕಂಪನಿಯ ಲಾಭ ಕಡಿಮೆಯಾದರೂ ತಮ್ಮ ಸಂಬಳಗಳನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ ಎಂದರೆ ಅವರಿಗೆ ಕಂಪನಿಯ ಬೆಳವಣಿಗೆ ಬಗ್ಗೆ ಆಸಕ್ತಿ ಇಲ್ಲ ಎಂಬುದು ತೋರಿಸುತ್ತದೆ ಅದೇ ರೀತಿಯಾಗಿ ಅಕ್ರಮ ಹಣದ ವಹಿವಾಟು ಕೂಡ ಕಂಪನಿಯ ಕಂಪನಿಯಲ್ಲಿ ಮಾಡಬಾರದು
ಕಂಪನಿಯ ಮಾಲೀಕರು ತಮ್ಮ ಶೇರುಗಳನ್ನು ಮಾರಿಕೊಳ್ಳಬಾರದು ಏಕೆಂದರೆ ಇದು ಅವರು ಕಂಪನಿಯ ಬೆಳವಣಿಗೆಯನ್ನು ಮುಂದುವರಿಸುತ್ತಿಲ್ಲ ಎಂಬುದು ತೋರಿಸುತ್ತದೆ ಹಾಗೂ ತಮ್ಮ ತ್ರೈಮಾಸಿಕ ವರದಿಯಲ್ಲಿ ತಮ್ಮ ಕಂಪನಿಯು ಮುಂದಿನ ದಿನಗಳಲ್ಲಿ ಮಾಡಬಹುದಾದ ಸಾಧನೆಗಳ ಬಗ್ಗೆ ಹಾಗೂ ತಾವು ವಿಸ್ತರಿಸಬಹುದಾದ ಕ್ಷೇತ್ರದ ಬಗ್ಗೆ ಹೂಡಿಕೆದಾರರಲ್ಲಿ ನಂಬಿಕೆಯನ್ನು ಮೂಡಿಸಬೇಕು ಆಗ ಮಾತ್ರ ಕಂಪನಿಯ ಮ್ಯಾನೇಜ್ಮೆಂಟ್ ಮೇಲೆ ಒಂದು ನಂಬಿಕೆ ಬರುತ್ತದೆ
ಕಂಪನಿಯ ದೊಡ್ಡ ಹುದ್ದೆಗಳಲ್ಲಿರುವ ಅಧಿಕಾರಿಗಳ ಶಿಕ್ಷಣ, ಜ್ಞಾನ, ಅರ್ಹತೆ ,ಅನುಭವ, ಇವೆಲ್ಲವೂ ಹೂಡಿಕೆದಾರರು ಗಮನಿಸಬೇಕು ಕಂಪನಿಯಲ್ಲಿರುವ ಮ್ಯಾನೇಜ್ಮೆಂಟ್ ಅನುಭವ ಹೆಚ್ಚಿದ್ದರೆ ಅವರು ಹೆಚ್ಚು ಲಾಭಗಳಿಸಲು ಸಾಧ್ಯವಾಗುತ್ತದೆ
ಯಾವುದೇ ಕಂಪನಿಯಲ್ಲಿ ಹೂಡಿಕೆ ಮಾಡುವ ಮೊದಲು ಆ ಕಂಪನಿಯ ಮೂಲಭೂತ ಅಂಶಗಳನ್ನು(fundamental analysis) ಗಮನಿಸಬೇಕು.
ಅಂದರೆ ಕಂಪನಿಯಲ್ಲಿ ಮಾಲೀಕರ ಶೇರುಗಳ ಸಂಖ್ಯೆ,ಕಂಪನಿ ,ಪ್ರತಿ ತ್ರೈಮಾಸಿಕ ಹಾಗೂ ವರ್ಷದಲ್ಲಿ ಗಳಿಸುವ ಲಾಭ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆಯಾ? ಹಾಗೂ ಆದಾಯದಲ್ಲಿ ಏರಿಕೆ ಮಾಡುತ್ತಿದೆಯಾ? ಎಂಬುದನ್ನು ಗಮನಿಸಬೇಕು ಹಾಗೂ ಪ್ರತಿ ವರ್ಷವೂ ಡಿವಿಡೆಂಟ್ ಅನ್ನು ತನ್ನ ಷೇರುದಾರರಿಗೆ ನೀಡುತ್ತಿದೆಯೇ ?ಎಂಬುದನ್ನು ಗಮನಿಸಬೇಕು ಹಾಗೂ ಕಂಪನಿ PE RATIO ಎಷ್ಟಿದೆ ಎಂಬುದನ್ನು ಗಮನಿಸಬೇಕು
diversification of stocks(ನಮ್ಮ ಹೂಡಿಕೆಯು ಹಲವಾರು ಕ್ಷೇತ್ರಗಳ ಕಂಪನಿಗಳ ಮೇಲಿರಬೇಕು)
ಹಾಗೂ ನಮ್ಮ ಹೂಡಿಕೆಯು ಕೇವಲ ಒಂದೇ ಕ್ಷೇತ್ರಕ್ಕೆ ಸಂಬಧಿಸಿದ ಕಂಪನಿಗಳಿಗೆ ಸೀಮಿತವಾಗಿರಬಾರದು. ಇದು ಹಲವಾರು ಕ್ಷೇತ್ರಗಳನ್ನು ಒಳಗೊಂಡಿರಬೇಕು ಉದಾಹರಣೆಗೆ ನಮ್ಮ ಬಳಿ ಒಂದು ಲಕ್ಷ ಹಣವಿದ್ದರೆ ಅದನ್ನುಬೇರೆ ಬೇರೆ ಕ್ಷೇತ್ರಕ್ಕೆ ಸಂಬದಿಸಿದ ಪ್ರತಿ ಕಂಪನಿಯ ಮೇಲೆ 20,000 ದಂತೆ ಹೂಡಿಕೆ ಮಾಡಬೇಕು
ಹೂಡಿಕೆದಾರರಲ್ಲಿ ಮಾರುಕಟ್ಟೆ ಏರಿಳಿತಗಳನ್ನು ಸಹಿಸಿಕೊಳ್ಳುವ ತಾಳ್ಮೆ ಬೆಳಿಸಿಕೊಳ್ಳಬೇಕು
ಮುಖ್ಯವಾಗಿ ಶೇರು ಮಾರುಕಟ್ಟೆಯಲ್ಲಿ ಉಂಟಾಗುವ ಏರಿಳಿತಗಳನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನಾವು ಬೆಳೆಸಿಕೊಂಡಿರಬೇಕು ಆಗ ಮಾತ್ರ ನಾವು ಮಾರುಕಟ್ಟೆಯಲ್ಲಿ ಸಾಧನೆ ಮಾಡಲು ಸಾಧ್ಯ ಒಮ್ಮೆ ನಾವು ಮಾರುಕಟ್ಟೆಯಲ್ಲಿ ಹಣ ಹೂಡಿದ ನಂತರ ಆ ಹಣವು ಮಾರುಕಟ್ಟೆಯದು ಎಂಬ ನಂಬಿಕೆಯನ್ನು ನಾವು ಬೆಳೆಸಿಕೊಳ್ಳಬೇಕು ಉದಾಹರಣೆಗೆ, ನೀವು ಜೀವ ವಿಮಾ ಪಾಲಿಸಿಗಳಲ್ಲಿ ಹಣ ಹೂಡಿಕೆ ಮಾಡುತ್ತೀರಿ . ಆ ಹಣವು ಹೇಗೆ 30 ವರ್ಷಗಳ ನಂತರ ಕೊಡುತ್ತಾರೋ ಹಾಗೆಯೇ ಈ ಹಣ ಎಂದು ಭಾವಿಸಿದರೆ ಮಾತ್ರ ನಾವು ಇದರಲ್ಲಿ ಸಾಧನೆ ಮಾಡಲು ಸಾಧ್ಯ
ನೀವು ಶೇರು ಮಾರುಕಟ್ಟೆಗೆ ತೀರಾ ಹೊಸಬರಾಗಿದ್ದರೆ ಮ್ಯೂಚುಯಲ್ ಫಂಡ್ಗಳಲ್ಲಿ ಹೂಡಿಕೆ ಮಾಡಿ ಇದು ನಿಮ್ಮಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ವಿಶ್ವಾಸವನ್ನು ನಿಧಾನವಾಗಿ ಹೆಚ್ಚಿಸುತ್ತಾ ಹೋಗುತ್ತದೆ ಎರಡು ವರ್ಷ ಮೂರು ವರ್ಷಗಳ ನಂತರ ನಿಮಗೆ ಸಿಕ್ಕ ಅನುಭವದಿಂದ ನೀವು ನೇರವಾಗಿ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಪ್ರಾರಂಭಿಸಿ
ಗಮನಿಸಿ ಷೇರು ಮಾರುಕಟ್ಟೆಯು ನಾವು ಅಂದುಕೊಂಡಷ್ಟು ಸುಲಭವಾಗಿ ದುಡ್ಡನ್ನು ಗಳಿಸಿಕೊಡುವುದಿಲ್ಲ ಅದು ನಮ್ಮ ತಾಳ್ಮೆ ,ಬುದ್ಧಿಶಕ್ತಿ ,ಸಾಮಾನ್ಯ ಜ್ಞಾನವನ್ನು, ಪರೀಕ್ಷೆ ಮಾಡುತ್ತದೆ
ಶೇರು ಮಾರುಕಟ್ಟೆಯಲ್ಲಿ ಪ್ರಾರಂಭದಲ್ಲಿ ಹೂಡಿಕೆ ಮಾಡುವವರು ಬಹಳ ಸಣ್ಣ ಮೊತ್ತದಿಂದ ಪ್ರಾರಂಭಿಸಬೇಕು ಆಗ ಅದರಲ್ಲಿ ಉಂಟಾಗುವ ಏರಿಳಿತಗಳ ಬಗ್ಗೆ ಕಲ್ಪನೆ ಸಿಗುತ್ತದೆ ಕೊನೆಯದಾಗಿ ಮಾರುಕಟ್ಟೆ ನಿಧಾನವಾಗಿ ನಿಮ್ಮ ಹಣವನ್ನು ಹೆಚ್ಚು ಮಾಡುತ್ತಾ ಹೋಗಿ ನಿಮ್ಮ ಅನುಭವ ಹೇಗೆ ಹೆಚ್ಚುತ್ತಾ ಹೋಗುತ್ತಿರೋ ಹಾಗೆ ನಿಮ್ಮ ಹೂಡಿಕೆಯನ್ನು ಹೆಚ್ಚು ಮಾಡುತ್ತಾ ಹೋಗಿ ಇದು ನಿಮ್ಮಲ್ಲಿ ಯಾವುದೇ ಭಯ ಇರದೇ ಹೂಡಿಕೆ ಮಾಡುವ ಧೈರ್ಯವನ್ನು ಕೊಡುತ್ತದೆ
ಷೇರು ಮಾರುಕಟ್ಟೆಯಲ್ಲಿ ಎಷ್ಟು ಪ್ರಮಾಣದ ರಿಸ್ಕ್ ಇದೆಯೋ ಅಷ್ಟೇ ಪ್ರಮಾಣದ ಹಣ ಗಳಿಸುವ ಅವಕಾಶವೂ ಇದೆ, ಸಾಮಾನ್ಯ ಹೂಡಿಕೆದಾರರು ಇಲ್ಲಿಂದಲೇ ಶ್ರೀಮಂತರಾಗಿದ್ದಾರೆ. ಉದಾರಣೆಗೆ ರಾಕೇಶ್ ಜುಂಜುನ್ವಾಲ ,ರಮೇಶ್ ದಮನಿ, ವಿಜಯ್ ಕೇಡಿಯಾ,
ಈ ವ್ಯಕ್ತಿಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತಿಳಿದುಕೊಳ್ಳಿ ಹಾಗೂ ಹೇಗೆ ಇವರು ಸಾಮಾನ್ಯ ವ್ಯಕ್ತಿಯಾಗಿದ್ದವರು ಇಂದು ಕೋಟ್ಯಾಧಿಪತಿಗಳಾಗಿದ್ದಾರೆ ಎಂಬುದು ತಿಳಿದು ಬರುತ್ತದೆ ಇವರು ಮಾರುಕಟ್ಟೆಯಲ್ಲಿ ಎಲ್ಲ ರೀತಿಯ ನಷ್ಟಗಳು ಲಾಭಗಳನ್ನು ಕಂಡು ಕೊನೆಗೆ ಯಶಸ್ಸನ್ನು ಸಾಧಿಸಿದ್ದಾರೆ ಅವೆಲ್ಲವನ್ನು ಸ್ವೀಕರಿಸುವ ಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕು ಮುಂದಿನ ದಿನಗಳಲ್ಲಿ ಷೇರು ಮಾರುಕಟ್ಟೆ ಕುರಿತಾಗಿ ಹೆಚ್ಚಿನ ವಿಷಯಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ ತಾವು ಇಂತಹ ವಿಷಯಗಳನ್ನು ನನ್ನಿಂದ ಓದಲು ಇಷ್ಟ ಪಟ್ಟರೆ, ಕೆಳಗೆ ಕಾಮೆಂಟ್ಗಳನ್ನು ಮಾಡಿ ಈ ರೀತಿ ನೀವು ಕಮೆಂಟ್ ಮಾಡುವುದರಿಂದ ನಾನು ಯಾವ ವಿಷಯಗಳನ್ನು ನಿಮಗೆ ತಿಳಿಸಬೇಕು ಎಂಬುದು ನನಗೆ ಅರ್ಥವಾಗುತ್ತದೆ ಧನ್ಯವಾದಗಳು

No comments:
Post a Comment