ಉತ್ತಮ ಆರೋಗ್ಯಕ್ಕಾಗಿ ನಾವು ಮಾಡಬೇಕಾದ ಮಹತ್ವದ ಬದಲಾವಣೆಗಳು


  21ನೇ ಶತಮಾನದಲ್ಲಿ ಕೈಯಲ್ಲಿ ಹಣವಿದ್ದರೆ ಸಾಕು ಯಾವ ವಸ್ತುವನ್ನಾದರು ನಾವು ಇದ್ದಲ್ಲಿಗೆ ತರಿಸಿಕೊಳ್ಳಬಹುದು ಕುಳಿತಲ್ಲಿಯೇ ಎಲ್ಲ ಕೆಲಸಗಳನ್ನು ಮಾಡಬಹುದು. ಆದರೆ ನಾವು ಎನನ್ನು ಕಳೆದು ಕೊಳ್ಳುತ್ತಿದ್ದೆವೆ ಎಂಬುದನ್ನು  ಯೋಚಿಸಿದಾಗ...ನಮ್ಮ ಆಮುಲ್ಯವಾದ ಆರೋಗ್ಯ.ಕ್ರಿಯಾಶೀಲತೆ. ಒಳ್ಳೆಯ ಮನಸ್ಥಿತಿ, ಆರೋಗ್ಯಕರ ದೇಹ, ಹಾಳು ಮಾಡಿಕೊಳ್ಳುತ್ತಿದ್ದೆವೆ 

ಹಿರಿಯರ ಗಾದೆ ಮಾತಿನಂತೆ "ಒಬ್ಬ ವ್ಯಕ್ತಿ ಹಣ ಕಳೆದುಕೊಂಡರೆ  ಎನು ಕಳೆದು ಕೊಂಡಂತೆ ಅಲ್ಲ . ಕಳೆದುಕೊಂಡರೆ ಸ್ವಲ್ಪ ಕಳೆದುಕೊಂಡತೆ,ಆದರೆ ವ್ಯಕ್ತಿತ್ವ ಕಳೆದು ಕೊಂಡರೆ ಎಲ್ಲವು ಕಳೆದುಕೊಂಡಂತೆ " ಎಂಬುದು ಅಕ್ಷರಶಃ ಸತ್ಯ . ಇಂದು  ಯೋಚಿಸುವುದಾದರೆ ನಮ್ಮ ಆರೋಗ್ಯ ಹಾಗು ವ್ಯಕ್ತಿತ್ವ ಎರಡನ್ನು ಇಂದಿನ ಯುವ ಜನರು ಕಳೆದು ಕೊಳ್ಳತ್ತಿದ್ದಾರೆ .

ಮೊಬೈಲ್‌ ಒಂದು ಒಳ್ಳೆ ಸಾಧನವು ಹೌದ ಕೆಟ್ಟ ಸಾಧನವು ಹೌದು ನಾವು ಬಳಸುವ ರೀತಿಯ ಮೇಲೆ ನಿಂತಿದೆ ....ಯಾವುದೇ ಸಾಧನವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿದಾಗ ನಮಗೆ ಒಳ್ಳೆ ಫಲಿತಾಂಶಗಳು ಸಿಗುತ್ತವೆ 

ನಮ್ಮ ಆರೋಗ್ಯವನ್ನು ಸುಧಾರಿಸಲೂ ನಾವು ತೆಗೆದುಕೊಳ್ಳಬೇಕಾದ ಕೆಲವು ಕ್ರಮಗಳು


1) ಉತ್ತಮ ನಿದ್ರೆ

ನಮ್ಮ ದೇಹಕ್ಕೆ ನಾವು ಎಷ್ಟು ವಿಶ್ರಾಂತಿ ನೀಡುತ್ತೇವೆ ಎನ್ನುವುದರ ಮೇಲೆ ನಮ್ಮ ದೇಹದ ಕ್ಷಮತೆ ಅವಲಂಬಿಸಿರುತ್ತದೆ.ದೇಹವು ಒಂದು ಯಂತ್ರದಂತೆ ಅದಕ್ಕೂ ಹಲವು ಭಾಗಗಳ ದುರಸ್ತಿ ಮಾಡಲು ಸಮಯ ಕೊಡ ಬೇಕಾಗುತ್ತದೆ.ಈ ನಿಟ್ಟಿನಲ್ಲಿ ನಿದ್ರೆಯು ದಿನಕ್ಕೆ ಕನಿಷ್ಟ 6 ರಿಂದ 8 ತಾಸುಗಳವರೆಗೆ ವಯಸ್ಕರಿಗೆ ಹಾಗೂ  ಮಕ್ಕಳಿಗೆ 10 ತಾಸು ನಿದ್ದೆ ಅವಶ್ಯಕವಿದೆ 

2) ಉತ್ತಮ ಆಹಾರ ಸೇವನೆ

ನಾವು ತಿನ್ನುವ ಆಹಾರದ ಮೇಲೆ ನಮ್ಮ ದೇಹವು ಬೆಳವಣಿಗೆ ಹೊಂದುತ್ತದೆ   ಎಂಬುದು ವಾಸ್ತವಆದ್ದರಿಂದ ನಮ್ಮ ಆಹಾರದ ಕಡೆ ಹೆಚ್ಚು ಗಮನಹರಿಸಬೇಕಾಗಿದೆ ಹೆಚ್ಚು ಎಣ್ಣೆಯಲ್ಲಿ ಕರಿದ ಆಹಾರ ಪಧಾರ್ಥಗಳ ಸೇವನೆಯನ್ನು ಪೂರ್ಣ ಪ್ರಮಾಣದಲ್ಲಿ ನಿಲ್ಲಿಸಬೇಕು ನಮ್ಮ ದೇಹಕ್ಕೆ ಅವಶ್ಯಕವಾದ ಪ್ರೋಟಿನ್‌,ವಿಟಮಿನ್ ಯುಕ್ತ ಆಹಾರವನ್ನು ಸೇವಿಸಬೇಕು ಕಾರ್ಬೊಹೈಡ್ರೇಟ್‌ ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು  ಸಕಕ್ಕರೆಯಿಂದ ಕೂಡಿದ ಸಿಹಿ ತಿನಿಸುಗಳ ಸೇವನೆ ಸಂಪೂರ್ಣ ನಿಲ್ಲಿಸಬೇಕು ಇದು ಹಲವು ತೊಂದರೆಗಳಿಗೆ   ದಾರಿ ಮಾಡಿಕೊಡುತ್ತದೆ


3) ಒತ್ತಡ ನಿವಾರಣೆಗೆ ವ್ಯಾಯಮ 

 ನಮ್ಮ ದೇಹವು ಹಲವು ಸಂಕಿರ್ಣಗಳಿಂದ ಕೂಡಿದ ವ್ಯವಸ್ಥೆ ಇಲ್ಲಿ ಹಾರ್ಮೋನ್ ಗಳ ಪಾತ್ರ ದೊಡ್ಡದು ದೇಹವು ಬಿಡುಗಡೆ ಮಾಡುವ ಹಾರ್ಮೋನ್ ಗಳಲ್ಲಿ ಒತ್ತಡವನ್ನು ಹೆಚ್ಚಿಸುವ ಹಾರ್ಮೋನ್‌ ಗಳು ಇವೆ  CORTISOL      ಎಂಬ ಹಾರ್ಮೋನ್‌ ನಮ್ಮಲ್ಲಿ ಒತ್ತಡವನ್ನು ಹೆಚ್ಚಿಸುತ್ತದೆ ಇದು ನಮ್ಮ ಮಾನಸಿಕತೆಯ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುವ ಅವಕಾಶ ಹೆಚ್ಚಿರುತ್ತದೆ. ನಾವು ಹೆಚ್ಚು ಕ್ರಿಯಾಶೀಲರಾಗಿದ್ದಷ್ಟುಈ ಹಾರ್ಮೋನ್‌ ಬಿಡುಗಡೆ ಕಡಿಮೆ ಇರುತ್ತದೆ ಹಾಗಾಗಿ ವ್ಯಾಯಮದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ಉತ್ತಮ  ಅದಕ್ಕಾಗಿ ಹಲವು ಉತ್ತಮ ಅಭಿರುಚಿಗಳಾದ  ಓದುವುದು,ಪ್ರವಾಸ ಕೈಗೊಳ್ಳವುದು,ಕೀಡೆಯಲ್ಲಿ ತೊಡಗಿಸಿಕೊಳ್ಳುವುದು,ಸಾಮಾಜಿಕ ಸೇವೆಯಲ್ಲಿ ತೊಡಗಿಸಿ ಕೊಳ್ಳುವುದು, ಉತ್ತಮ ಸ್ನೇಹಿತರ ಮಾಡಿಕೊಳ್ಳುವುದು,  ಮಕ್ಕಳ ಜೊತೆ ಆಡುವುದು ನಮ್ಮಲ್ಲಿನ ಒತ್ತಡ ನಿವಾರಣೆಮಾಡಲೂ ಸಹಕಾರಿಯಾಗುತ್ತದೆ.                                                                                                                                              

No comments:

Post a Comment