ಹತ್ತನೇ ತರಗತಿ ವಿದ್ಯಾರ್ಥಿಗಳು ಗಮನಿಸಬೇಕಾದ ವಿಷಯವೇನೆಂದರೆ ಈಗಗಾಲೇ ಶಾಲಾ ಹಂತದ ಪರೀಕ್ಷೆಗಳು ಮುಗಿದಿವೆ ಎಲ್ಲಾ ಶಾಲೆಗಳಲ್ಲಿ ಶೇಕಡಾ 90 ರಷ್ಟು ಪಾಠಗಳನ್ನು ಶಿಕ್ಷಕರು ಮುಗಿಸಿದ್ದು ಇನ್ನು ಮುಂದೆ ತಾಲೂಕು ಹಂತದ ,ಜಿಲ್ಲಾ ಹಂತದ ,ಹಾಗು ರಾಜ್ಯ ಹಂತದ ಪರೀಕ್ಷೆಗಳು ನಡೆಯಲಿವೆ ರಾಜ್ಯ ಹಂತದ ಪರೀಕ್ಷೆಯ ವೇಳಾಪಟ್ಟಿಯನ್ನು ಶಾಲಾ ಪರೀಕ್ಷೆ ಮತ್ತು ಮೌಲ್ಯಂಕನ ಮಂಡಳಿಯು ಫೆ-25 ರಿಂದ ಮಾರ್ಚ್-4 ವರೆಗೆ ನಡೆಸಲು ತಿರ್ಮಾನಿಸಿದೆ . ಈ ಪೂರ್ವ ಸಿದ್ದತಾ ಪರೀಕ್ಷೆಯು ಏಕರೂಪದ ಪ್ರಶ್ನೆ ಪತ್ರಿಕೆ ಗಳನ್ನು ಒಳಗೊಂಡಿದ್ದು ಆಯಾ ಜಿಲ್ಲೆಯ ಉಪನಿರ್ದೆಶಕರ ಲಾಗಿನ್ ಗೆ ಕಳುಹಿಸಲಾಗಿದೆ.
ಜಿಲ್ಲಾವಾರು ವಿಶೇಷ ಕೋಡ್ ಹೊಂದಿರುವ ಪ್ರಶ್ನೆ ಪತ್ರಿಕೆಯನ್ನುಜಿಲ್ಲಾ ಹಂತದಲ್ಲೆಮುದ್ರಿಸಿ ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ತಿರ್ಮಾನಿಸಿದೆ
ಶಾಲಾ ಪರೀಕ್ಷೆ ಮತ್ತು ಮೌಲ್ಯಾಂಕನ ಮಂಡಳಿಯು ತೆಗೆದುಕೊಂಡ ತಿರ್ಮಾನಗಳು
1) ಪರೀಕ್ಷೆ ನಡೆದ ಮರುದಿನವೇ ಮೌಲ್ಯಮಾಪನ ನಡೆಸಿ ಫಲಿತಾಂಶ ಪ್ರಕಟಿಸುವುದು
2) ಮಕ್ಕಳ ಕಲಿಕೆಯ ಕೊರತೆಯನ್ನುವಿದ್ಯಾರ್ಥಿ ಮತ್ತು ಪಾಲಕರ ಗಮನಕ್ಕೆ ತಂದು ಕಲಿಕಾ ಕೊರತೆಯನ್ನು ನೀಗಿಸಲೂಅಗತ್ಯ ಕ್ರಮ ವಹಿಸುವುದು
3) ಒಂದು ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆ ,ನಕಲು ನಕಲೂ ಮಾಡುವುದು, ಪ್ರಶ್ನೆ ಪತ್ರಿಕೆ ಪೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು ಮಾಡಿದರೆ ಅರ್ ಟಿಇ-2017 ರ ಪ್ರಕಾರಕ್ರಮ ಕೈಗೊಳ್ಳಲಾಗುತ್ತದೆ
4) ಶೇಕಡಾ 75 ಕ್ಕಿಂತ ಕಡಿಮೆ ಹಾಜರಾತಿ ಇರುವ ಮಕ್ಕಳಿಗೆ ಪರೀಕ್ಷೆ ಪ್ರವೇಶ ಪತ್ರ ದೊರೆಯುವುದಿಲ್ಲ ಎಂಬುದನ್ನು ಪಾಲಕರು ಹಾಗು ವಿದ್ಯಾರ್ಥಿಗಳ ಗಮನಕ್ಕೆ ಶಿಕ್ಷಕರು ತರಬೇಕು .
ಆದ್ದರಿಂದ ವಿದ್ಯಾರ್ಥಿಗಳು ಪರೀಕ್ಷೆಗೆ ಸರಿಯಾದ ಪೂರ್ವ ತಯಾರಿ ಮಾಡಿ ಕೊಳ್ಳಬೇಕು ಯಶಸ್ಸು ಸಾಧಿಸಬೇಕು.


No comments:
Post a Comment