ನಿಮ್ಮ ಮಕ್ಕಳು ಸರಿಯಾಗಿ ಊಟ ಮಾಡುತ್ತಿಲ್ಲವೇ ಹಾಗದರೆ ಗಮನಿಸಿ......

 

ಮಕ್ಕಳಿಗೆ ಬಲವಂತದ ಊಟ ಸರಿಯಲ್ಲ....
ಎಲ್ಲಾ ಪೋಷಕರ ಸಾಮಾನ್ಯ ತೊಂದರೆ ಎಂದರೆ ತಮ್ಮ ಮಗು ಹೆಚ್ಚು ಊಟ ಮಾಡುತ್ತಿಲ್ಲ .ಅವರ ತೂಕದಲ್ಲಿ ಎರಿಕೆ ಆಗುತ್ತಿಲ್ಲ ಎಂಬ ಅಳಲು ಇರುತ್ತದೆ.ಅದಕ್ಕಾಗಿ ನಾವು ಎನನ್ನು ಅರ್ಥ ,ಮಾಡಿಕೊಳ್ಳಬೇಕೆಂದರೆ  ಅವರ ಸಾಮರ್ಥಕ್ಕೆ ಅನುಗುಣವಾಗಿ ಉಟ ಮಾಡುತ್ತಿರುತ್ತಾರೆ ನಾವು ಅವರಿಗೆ ಬಲವಂತವಾಗಿ ಊಟ ಮಾಡಿಸುವುದರಿಂದ ಮಕ್ಕಳಿಗೆ ಬಟ್ಟಲು & ಚಮಚ ನೋಡಿದ ತಕ್ಷಣ ಭಯದ ಭಾವನೆ ಉಂಟಾಗುತ್ತದೆ. ಊಟವನ್ನು ಶಿಕ್ಷೆ ಎಂದು ಭಾವಿಸುತ್ತಾ ಹೋಗುತ್ತವೆ.

 6 ತಿಂಗಳಿನಿಂದ 1 ವರ್ಷದೊಳಗಿನ ಮಕ್ಕಳು 2 ರಿಂದ 4 ಚಮಚದ ವರೆಗೆ ತಿನ್ನಬಹುದು ಎಂಬುದು ನೆನಪಿಡಿ.ಹಾಗೆಯೇ 1 ವರ್ಷದ ನಂತರ ಬಾಟಲ್ಗಳಲ್ಲಿ ಹಾಲುಣಿಸುವ ವಿಧಾನವನ್ನು ಕಡಿಮೆ ಮಾಡಿ ಕಾರಣ ಮುಂದೆ ಮಕ್ಕಳು ಆಹಾರ ಸ್ವಿಕರಿಸುವ ವಿಧಾನ ರೂಢಿಸಿಕೊಂಡಿರದ ಕಾರಣ ಆಹಾರ ಸೇವನೆ ಕಡಿಮೆ ಆಗಬಹುದು.ಹೊರಗಿನ ಪದಾರ್ಥಗಳನ್ನು ನೀಡುವುದುಅಂದರೆ ಬೇಕರಿ ಪದಾರ್ಥಗಳು,ಕರಿದ ಪದಾರ್ಥಗಳು,ಪ್ಯಾಕ್‌ ಮಾಡಿದ ಆಹಾರ ಪೊಟ್ಟಣಗಳು ಈ ರೀತಿಯ ಆಹಾರಗಲನ್ನು ಮಕ್ಕಳ ಸೇವನೆಗೆ ಕೊಡಬೇಡಿ ಇದರಿಂದ ಅವರ ಜಿರ್ಣ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.ಮನೆಯಲ್ಲಿ ಟೀ,ಬಿಸ್ಕೆಟ್‌ ನಂತಹ ಆಹಾರಗಳನ್ನು  ನೀಡಬೇಡಿ. ಇದರಿಂದ ಮಕ್ಕಳಿಗೆ ಹಸಿವು ಊಂಟಾಗುವುದಿಲ್ಲ. ಹಾಗೆಯೇ ಮಕ್ಕಳ ಊಟವನ್ನು ಎಲ್ಲರೊಂದಿಗೆ ಊಟ ಮಾಡಿಸಿ ಇತರರು ಊಟ ಮಾಡುವುದನ್ನು ನೋಡಿ ತಾವು ಊಟ ಮಾಡಬೇಕು ಎಂಬ ಭಾವನೆ ಮಕ್ಕಳಲ್ಲಿ ಬೆಳೆಯುತ್ತದೆ.

ಮಕ್ಕಳ ಊಟದ ಸಾಮರ್ಥ್ಯವು ಅವರ ಬೊಗಸೆ ಎಷ್ಟಿರುತ್ತದೆ ಅವರಿಗೆ ಹೆಚ್ಚಿನ ಪ್ರಮಾಣದ ಬಲವಂತದ ಊಟ ಮಾಡಿಸಿ ತೂಕ ಹೆಚ್ಚಿಸಲು ಸಾಧ್ಯವಿಲ್ಲ ಮಕ್ಕಳು ನೈಸರ್ಗಿಕವಾಗಿ ಊಟ ಮಾಡುವ ವಿಧಾನದಲ್ಲೇ ಪೌಷ್ಟಿಕಾಂಶಗಳನ್ನು ಬೆರೆಸಿ ಊಟ ಮಾಡಿಸುವುದು ಉತ್ತಮ ಉದಾಹರಣೆಗೆ ಮಕ್ಕಳು ಊಟ ಮಾಡುವ ಆಹಾರದಲ್ಲಿ ತುಪ್ಪವನ್ನು ಬೆರೆಸಿ ತಿನಿಸುವುದರಿಂದ ಮಕ್ಕಳ ಮೆದುಳಿಗೆ ಸರಿಯಾದ ಪೋಷಕಾಂಶಗಳ ರವಾನೆ ಆಗುತ್ತದೆ ಕೆಲವು ಪೋಷಕರಲ್ಲಿ ತುಪ್ಪ ತಿನ್ನಿಸುವುದರ ಕುರಿತಾಗಿ ಗೊಂದಲವಿದೆ ಇದರಿಂದ ಮಕ್ಕಳಲ್ಲಿ ನೆಗಡಿ, ಕೆಮ್ಮು ಕಫ ಉಂಟಾಗಬಹುದು ಎಂಬ ಭಯವಿದೆ ಆದರೆ ತುಪ್ಪವು ಪೌಷ್ಟಿಕಾಂಶ ವಾಗಿದ್ದು ಇದು ನಮ್ಮ ಆಹಾರವನ್ನು ಮೆದುಳಿಗೆ ರವಾನಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ

 ತುಪ್ಪವು ಕೊಬ್ಬು ಪದಾರ್ಥವಾಗಿದ್ದು ಇದು ಆಹಾರದಲ್ಲಿ ಮಿಶ್ರಣವಾಗಿ ಮೆದುಳಿಗೆ ರವಾನಿಸುವಲ್ಲಿ ತುಪ್ಪದ ಕೊಬ್ಬು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಶುದ್ಧವಾದ ದೇಸಿ ತುಪ್ಪವನ್ನು ಬಳಸುವುದು ಉತ್ತಮ. ಹಣ್ಣುಗಳನ್ನು ಮಕ್ಕಳಿಗೆ ಸರಳ ರೂಪದಲ್ಲಿ ನೀಡಿ ಅಂದರೆ ಜ್ಯೂಸ್ ಗಳ ರೂಪದಲ್ಲಿ ಮಕ್ಕಳಿಗೆ ನೀಡಿ. ಹಾಗೆ ಆಹಾರದಲ್ಲಿ ಹಾಲನ್ನು ಸೇರಿಸಿ ನೀಡುತ್ತಿದ್ದರೆ ಕೆನೆಭರಿತ ಹಾಲನ್ನು ಬಳಸಿ ಇದರಿಂದ ಪೋಷಕಾಂಶಗಳು ದೇಹದ ಎಲ್ಲಾ ಭಾಗಗಳಿಗೆ ಸಾಗಿಸಲು ಕೊಬ್ಬು ಸಹಕಾರಿಯಾಗುತ್ತದೆ. ಹಾಲಿಗೆ ನೀರನ್ನು ಬೆರೆಸಿ ತಿನ್ನಿಸುವುದರಿಂದ ಪೋಷಕಾಂಶಗಳು ಪೂರ್ಣ ಪ್ರಮಾಣದಲ್ಲಿ ಮಕ್ಕಳ ದೇಹದಲ್ಲಿ ಹೀರಿಕೆ ಆಗುವುದಿಲ್ಲ. ಮಕ್ಕಳಿಗೆ ಮಾಲ್ಟ್ ಗಳನ್ನು ತಿನ್ನಿಸುತ್ತಿದ್ದರೆ ಅದರಲ್ಲಿ ಬಳಸುವ ಕಾಳುಗಳನ್ನು ನೆನೆಸಿ ಮೊಳಕೆ ಬರಿಸಿ ನಂತರ ಒಣಗಿಸಿ ಅವುಗಳನ್ನು ಪುಡಿ ಮಾಡಿಕೊಳ್ಳುವುದು ಸೂಕ್ತ ಏಕೆಂದರೆ ಇಂತಹ ಕಾಳುಗಳಲ್ಲಿ ಸಮೃದ್ಧ ಭರಿತ ಪೋಷಕಾಂಶಗಳಿದ್ದು ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗುತ್ತವೆ . ಹಾಗೆಯೇ ಮಕ್ಕಳಿಗೆ ಜೇನುತುಪ್ಪ ಬೆಲ್ಲ ದಿಂದ ತಯಾರಿಸಿದ ಸಿಹಿ ತಿನಿಸುಗಳನ್ನು ನೀಡಿ .ಮೊಟ್ಟೆ ಮಾಂಸ ನೀಡಿ ಇದರಲ್ಲಿ ಸಿಗುವ ಪ್ರೋಟೀನ್ ಗಳು ಮಕ್ಕಳ ಬೆಳವಣಿಗೆ ಹಾಗೂ ತೂಕ ಹೆಚ್ಚಿಸಲು ಸಹಕಾರಿ ಆಗುತ್ತದೆ. ಮಕ್ಕಳು ಊಟ ಮಾಡುವ ಸಂದರ್ಭದಲ್ಲಿ ಫೋನ್ ಗಳನ್ನು ನೀಡಬೇಡಿ ಇದರಿಂದ ಸಹಜವಾಗಿ ಬಿಡುಗಡೆಯಾಗುವ ಲಾಲಾರಸ ಮಕ್ಕಳಲ್ಲಿ ಬಿಡುಗಡೆಯಾಗುವುದಿಲ್ಲ.

 ಮಕ್ಕಳ ತೂಕದ ಕುರಿತು

ನಿಯಮಿತವಾಗಿ ಸರಿಯಾದ ಸಮಯಕ್ಕೆ ಪ್ರತಿನಿತ್ಯ ಮಕ್ಕಳಿಗೆ ಊಟ ಮಾಡಿಸಿ ಇದರಿಂದ ಮಕ್ಕಳು ಹಠ ಮಾಡದೆ ಸಹಜವಾಗಿ ಊಟ ಮಾಡಲು ಸಾಧ್ಯವಾಗುತ್ತದೆ. ಮಕ್ಕಳ ತೂಕವು ಹುಟ್ಟಿನಿಂದ ಆರು ತಿಂಗಳಲ್ಲಿ ಎರಡು ಪಟ್ಟು ಹೆಚ್ಚುತ್ತದೆ ಹಾಗೆ ಒಂದು ವರ್ಷದಲ್ಲಿ ಮೂರು ಪಟ್ಟು ಹೆಚ್ಚಾಗುತ್ತದೆ. ಮಕ್ಕಳ ತೂಕದ ಬೆಳವಣಿಗೆಯು ಅವರು ಹುಟ್ಟಿದಾಗ ಇದ್ದ ತೂಕವನ್ನು ಅವಲಂಬಿಸಿರುತ್ತದೆ ಅದರ ಮೇಲೆ ಮಗುವಿನ ಬೆಳವಣಿಗೆ ಸಾಗುತ್ತದೆ ಹಾಗಾಗಿ ಪೋಷಕರು ಮಕ್ಕಳನ್ನು ಗುಂಪಿನಲ್ಲಿ ಊಟ ಮಾಡಿಸುವುದು ಅಭ್ಯಾಸ ಮಾಡಿಸಬೇಕು.ಇದರಿಂದ ಮಕ್ಕಳು ಎಲ್ಲರೊಂದಿಗೆ ಬೆರೆತು ಹೆಚ್ಚು ಊಟ ಮಾಡಲು ಕಲಿಯುತ್ತಾರೆ. 

 ಮಕ್ಕಳ ತೂಕದ ಚಾರ್ಟಗಳನ್ನು ಗಮನಿಸುವ ಮೂಲಕ ಮಕ್ಕಳ ಬೆಳವಣಿಗೆ ಗಮನಿಸಿ ನಿಜಕ್ಕೂ ಕುಂಠಿತವಾಗಿದ್ದರೆ ವೈದ್ಯರನ್ನು ಭೇಟಿ ಮಾಡಿ .

No comments:

Post a Comment