ನರ ದೌರ್ಬಲ್ಯ ಉಂಟಾಗಲೂ ಕಾರಣ..
ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ನರ ದೌರ್ಬಲ್ಯವು ಒಂದು ಪ್ರಮುಖವಾದ ಖಾಯಿಲೆಯಾಗಿದೆ ಅದರಲ್ಲೂ ವಿಶೇಷವಾಗಿ ಯುವಕರಲ್ಲಿ ಇದು ಹೆಚ್ಚಾಗಿ ಕಾಣುತ್ತೇವೆ ಕಾರಣ ಮಾನಸಿಕ ಅಸಮತೋನತೆ ಚಿಕ್ಕ ವಿಷಯಗಳಿಗೆ ಬೇಸರ ಮಾಡಿಕೊಳ್ಳುವುದು ಇತ್ಯಾದಿ. ದೌರ್ಬಲ್ಯವು ನಮ್ಮ ಆಹಾರದಲ್ಲಿನ ಪೋಷಾಕಾಂಶಗಳ ಕೊರತೆಯಿಂದ ಉಂಟಾಗಬಹುದು ಅಥವಾ ಸಕ್ಕರೆ ಖಾಯಿಲೆಯಿಂದಾಗಿಯು ನರ ದೌರ್ಬಲ್ಯವು ಉಂಟಾಗಬಹುದು. ನಮ್ಮ ದೇಹದಲ್ಲಿ ನರ ದೌರ್ಬಲ್ಯ ಸಮಸ್ಯೆ ಉಂಟಾದಾಗ ಅನೇಕ ಲಕ್ಷಣಗಳನ್ನು ನಮ್ಮ ದೇಹವು ತೋರಿಸುತ್ತದೆ.ಇಂತಹ ಲಕ್ಷಣಗಳನ್ನು ಆರಂಭದಲ್ಲಿಯೇ ಗುರುತಿಸಿ ಸೂಕ್ತ ಚಿಕಿತ್ಸೆಯನ್ನು ತೆಗೆದುಕೊಡರೆ ಮುಂದೆ ಉಂಟಾಗಬಹುದಾದ ಸಮಸ್ಯೆಗಳಿಂದ ಹೊರಬರಬಹುದು.
ನರ ದೌರ್ಬಲ್ಯದ ಲಕ್ಷಣಗಳು
ನಡೆಯುವುದಕ್ಕೆ ತೊಂದರೆಯಾಗುವಂತೆ ನಮ್ಮ ಸ್ನಾಯುಗಳು ಮರಗಟ್ಟುವುದು.
ಬಾಹ್ಯ ಅಂಗಗಳ ವೈಫಲ್ಯ ಉಂಟಾಗುವುದು. ಉದಾ :ಬರವಣಿಗೆ ಮಾಡಲು ಸಾದ್ಯವಾಗದಿರುವುದು,
ಮಾಂಸಖಂಡಗಳಲ್ಲಿ ಸಡಲಿಕೆ ಹಾಗು ದೌರ್ಬಲ್ಯ ಉಂಟಾಗುವುದು,ಕೈ ,ಕಾಲುಗಳಲ್ಲಿ ನಡುಗುವಿಕೆ ಉಂಟಾಗುವುದು.
ನಡೆಯುವಾಗ ಹಾಗು ನಿಂತಾಗ ಕಾಲು& ಪಾದಗಳಲ್ಲಿ ವಿಪರೀತ ನೋವು ಉಂಟಾಗುವುದು.ಕೈಗಳಲ್ಲಿ ಸೆಳೆತ ಉಂಟಾಗವುದು.
ನಮ್ಮ ದಿನನಿತ್ಯದ ವೇಗವಾಗಿ ಮಾಡುವ ಕೆಲಸಗಳನ್ನು ವೇಗವಾಗಿ ಮಾಡಲು ಸಾಧ್ಯವಾಗದಿರುವುದು.
ಸಕ್ಕರೆ ಖಾಯಿಲೆ ಇರುವವರಲ್ಲಿ ನರ ದೌರ್ಬಲ್ಯವು ವೇಗವಾಗಿ ಉಂಟಾಗುತ್ತದೆ ಕಾರಣ ನಮ್ಮ ದೇಹದಲ್ಲಿ ಚಿಕ್ಕ ಚಿಕ್ಕ ರಕ್ತನಾಳಗಳಲ್ಲಿ ನಂಜು ಉಂಟಾಗಿ ಸರಬರಾಜು ಆಗುವ ರಕ್ತದಲ್ಲಿ ಆಮ್ಲಜನಕ,ಪೋಷಾಕಾಂಶಗಳ ಕೊರತೆಯಿಂದಾಗಿ ನರ ದೌರ್ಬಲ್ಯ ಉಂಟಾಗುತ್ತದೆ. ಇದರಿಂದ ಪಾದಗಳಲ್ಲಿ ಊರಿ ಉಂಟಾಗಿ ನಿದ್ದೆ ಬರದಂತಾಗುತ್ತದೆ ಪರಿಣಾಮವಾಗಿ ಇತರೆ ಮಾನಸಿಕ ಖಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ.
ನರಗಳಲ್ಲಿ ಉಂಟಾಗುವ ಸಮಸ್ಯೆಗಳಿಗೆ ನಮ್ಮ ಆಹಾರದ ಮೂಲಕ ಪ್ರಾರಂಭದಲ್ಲಿಯೇ ಗಮನಿಸಿ ನಮ್ಮ ಆಹಾರದಲ್ಲಿ ಬದಲಾವಣೆ ಮಾಡಿಕೊಂಡು ಸರಿ ಪಡಿಸಬಹುದು.
ನರಗಳಿಗೆ ಅಗತ್ಯವಾದ ವಿಟಮಿನ್ ಸಿ, B12 ,B6 ,OMEGA3 FATY ACIDS,BCOMPEX, ಕೂಡಿರುವ ಆಹಾರಗಳ ಸೇವನೆಯಿಂದ ದೂರಮಾಡಬಹುದು.
ನಮ್ಮ ಆಹಾರದಲ್ಲಿ ಕ್ಯಾಲ್ಸಿಯಂ ಸೇವನೆ ಕಡ್ಡಾಯವಾಗಿ ತೆಗೆದುಕೊಳ್ಳಬೇಕು.ಊದಾ ; ಹಾಲು,ಮೊಟ್ಟೆ...ಇತ್ಯಾದಿ
ನಾವು ಊಸಿರಾಡುವಾಗ ನಡೆಯುವ ಉಸಿರಾಟ ಕ್ರಿಯೆಯಿಂದಾಗಿ ಹಲವು ರೀತಿಯ ಬ್ಯಾಕ್ಟೀರಿಯಗಳು ಉತ್ಪತ್ತಿಯಾಗುತ್ತವೆ.ಇವು ನಮ್ಮ ದೇಹದ ನರಗಳು ಹಾಗು ಇತರೆ ಅಂಗಗಳ ಮೇಲೆಯು ದುಷ್ಪರಿಣಾಮ ಬೀರುತ್ತವೆ. ಆದ್ದರಿಂದ ನಮ್ಮ ಆಹಾರದಲ್ಲಿ ANTI -OXIDENT ಪದಾರ್ಥಗಳ ಸೇವನೆ ಮಾಡುವುದರಿಂದ ತಡೆಗಟ್ಟಬಹುದು ಊದಾ; ಅರಿಶಿಣ,ಶುಂಠಿ,ಬೆಳ್ಳುಳ್ಳಿ,ಗಳನ್ನು ದಿನ ನಿತ್ಯದ ಆಹಾರದಲ್ಲಿ ಸೇವಿಸಬೇಕು.
ಹೆಚ್ಚಿನ ಪ್ರಮಾಣದ ನೀರನ್ನು ಕುಡಿಯಬೇಕು , ನಮ್ಮ ಆಹಾರದಲ್ಲಿ ಸೊಪ್ಪುಗಳನ್ನು ಸೇರಿಸಿ ಕೊಳ್ಳವುದರಿಂದ ಹಾಗು(GREEN JUICE) ಸೊಪ್ಪಿನ ಜ್ಯುಸ್ ಗಳನ್ನು ಸೇವಿಸುವುದರಿಂದ ನರದೌರ್ಬಲ್ಯ ದಿಂದ ಹೊರಬರಬಹುದು. ಇದರಿಂದ ಮೆಗ್ನೇಶೀಯಂ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ.
ನರಗಳಲ್ಲಿ ರಕ್ತ ಸಂಚಾರ ಉತ್ತಮವಾಗಲೂ ಬೀಟ್ ರೂಟ್ ಸೇವನೆ ಉತ್ತಮ
ಹಣ್ಣುಗಳ ಸೇವೆನೆಯಿಂದ ಮುಖ್ಯವಾಗಿ ವಿಟಮಿನ್ ಸಿ ಇರುವ ಹಣ್ಣುಗಳ ಸೇವನೆ ಉತ್ತಮ. ಮುಖ್ಯವಾಗಿ ಡ್ರೈ ಫ್ರುಟ್ಸ್ ಸೇವನೆಯಿಂದ ವಿಟಮಿನ್ ಕೆ, ಜಿಂಕ್, ಮುಂತಾದ ಅಂಶಗಳು ದೇಹಕ್ಕೆ ದೊರೆಯುತ್ತವೆ.
ನಾವು ಉತ್ತಮ ರೀತಿಯ FATTY ACID ಇರುವ ಆಹಾರ ಸೇವನೆ ಮಾಡಿದಾಗ ನರ ದೌರ್ಬಲ್ಯದಿಂದ ಹೊರಬರಬಹುದು.ಎಕೆಂದರೆ ಒಳ್ಳೆಯ ಕೊಬ್ಬು ನರಗಳಿಗೆ ಆಹಾರ ವಿಶೇಷವಾಗಿ ಮೆದುಳಿಗೆ ನಮ್ಮ ಆಹಾರ ತಲುಪಬೇಕೆಂದರೆ ಕೊಬ್ಬಿನ ಮೂಲಕವೇ ಸಾಗಬೇಕು ಆದ್ದರಿಂದ ಹಾಲು,ತುಪ್ಪ,ಆವಕಾಡೋ ಹಣ್ಣುಗಳ ಸೇವನೆ ಮಾಡಬೇಕು. ಉತ್ತಮ ವ್ಯಾಯಮ ,ಪ್ರಾಣಾಯಾಮ ಗಳು ನಮ್ಮನರಗಳ ಆರೋಗ್ಯ ಉತ್ತಮ ವಾಗುತ್ತದೆ.ನಾಡಿಶೋಧನಾ ಪ್ರಾಣಯಾಮ, ವಾಯು ಮುದ್ರೆ, ಚಿನ್ಮ ಮುದ್ರೆ
ಯಂತಹ ವ್ಯಾಯಮ ಮಾಡುವುದು.ತಲೆಗೆ ತಣ್ಣೀರು ಅಥವಾ ಉಗುರು ಬೆಚ್ಚಗಿನ ನೀರನ್ನು ಸ್ನಾನ ಮಾಡುವುದರಿಂದ ನಮ್ಮ ನರಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ನರ ದೌರ್ಬಲ್ಯ ತಡೆಯಲು ಯಾವ ಆಹಾರಗಳನ್ನು ಸೇವಿಸಬಾರದು.
ಹೆಚ್ಚು ಸಕ್ಕರೆ ಇರುವ ಅಹಾರ ಪದಾರ್ಥಗಳ ಸೇವನೆಯಿಂದ ದೂರವಿರುವುದು, ಹಾಗು ಹೆಚ್ಚು ಸಂಶ್ಲೇಷಿತ ಆಹಾರ ಸೇವನೆಯಿಂದ ದೂರವಿರುವುದು ಅಂದರೆ ಪ್ಯಾಕ್ ಮಾಡಿರುವ ಆಹಾರ ಪದಾರ್ಥ ತೆಗೆದುಕೊಳ್ಳಬಾರದು,
ಜಂಕ್ ಫುಡ್ ಹಾಗು ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳ ಸೇವನೆಯಿಂದ ದೂರವಿರುವುದು, ಕೃತಕ ಬಣ್ಣ ಸೇರಿಸಿದ ಆಹಾರ ಪದಾರ್ಥಗಳು ,ನಮ್ಮ ಆಹಾರದಲ್ಲಿ ಉಪ್ಪು,ಮತ್ತು ಸಕ್ಕರೆ ಯನ್ನು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಂಡಷ್ಟು ನಮ್ಮ ಆರೋಗ್ಯ ಕಾಪಡಿಕೊಳ್ಳುತ್ತೇವೆ.
ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ಆಹಾರದಲ್ಲೂ ವಿಷ ತುಂಬಿಕೊಂಡಿದೆ. ಹೆಚ್ಚಾಗಿ ಪ್ಲಾಸ್ಟಿಕ್ ಗಳಲ್ಲಿ ಪ್ಯಾಕ್ ಮಾಡಿದ ಆಹಾರ ಸೇವನೆ ಉತ್ತಮವಲ್ಲ. ಇವು ಹಲವಾರು ಖಾಯಿಲೆಗಳಿಗೆ ದಾರಿ ಮಾಡಿಕೊಡುತ್ತವೆ.
ನಮ್ಮ ದೇಹಕ್ಕೆ ಉಂಟಾಗುವ ಪ್ರತಿ ಖಾಯಿಲೆಯು ಮುಂದೆ ಹಲವಾರು ಖಾಯಿಲೆಗಳಿಗೆ ದಾರಿ ಮಾಡಿಕೊಡುತ್ತವೆ ಆದ್ದರಿಂದ ಎಚ್ಚೆತ್ತುಕೊಳ್ಳುವುದು ಒಳಿತು.

No comments:
Post a Comment