ಮೆದುಳನ್ನು ಚುರುಕುಗೊಳಿಸುವದು ಹೇಗೆ?..ಹಲವು ಸರಳ ಕಾರ್ಯಗಳು ಸಾಕು ಚುರುಕುಗೊಳಿಸಲು.

 ಬಹಳಷ್ಟು ಜನ ದೈಹಿಕವಾದ ಆರೋಗ್ಯವೇ ನಮ್ಮ ಆರೋಗ್ಯ ಎಂದು ತಿಳಿದಿದ್ದಾರೆ. ನಮ್ಮ ಆರೋಗ್ಯ ದೇಹಕ್ಕೆ ಸೀಮಿತವಾದರೆ ಅದು ನಮ್ಮ ತಪ್ಪು ಕಲ್ಪನೆ ನಮ್ಮ ಮಾನಸಿಕ ಆರೋಗ್ಯವು ತುಂಬಾ ಚೆನ್ನಾಗಿರಬೇಕು ಅದಕ್ಕಾಗಿ ಮೆದುಳಿನ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ ಬಹಳಷ್ಟು ಜನರು ಮೆದುಳಿನ ಆರೋಗ್ಯದ ಕಡೆಗೆ ಯಾವುದೇ ಗಮನಹರಿಸುವುದಿಲ್ಲ ಕೊನೆಗೆ ಹಲವಾರು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಾರೆ.

ಮೆದುಳಿನ ಆರೋಗ್ಯ ಎಂದರೇನು
?

ಮೆದುಳಿನ ಆರೋಗ್ಯ ಎಂದರೆ ಯಾವುದೇ ಒಂದು ವಿಚಾರವನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವುದು, ಅರ್ಥೈಸಿಕೊಳ್ಳುವುದು ,ಭಾವನೆಗಳನ್ನು ಸಮತೋಲಿಸುವುದು. ಒಂದು ವಿಷಯದ ಕುರಿತಾಗಿ ಏಕಾಗ್ರತೆ ವಹಿಸುವುದು ಮತ್ತು ನಿರ್ಧಾರ ಕೈಗೊಳ್ಳುವುದು ಮತ್ತು ಯಾವುದೇ ಒಂದು ವಿಷಯವನ್ನು ವೇಗವಾಗಿ ಕಲಿಯುವುದು ,ಅನುಭವಿಸುವುದು ಆಗಿದೆ.

ನಿಮ್ಮ ಮೆದುಳು ಆರೋಗ್ಯವಾಗಿದ್ದರೆ ನೀವು ತುಂಬಾ ವೇಗವಾಗಿ ಆಲೋಚನೆ ಮಾಡುವವರಾಗಿರುತ್ತೀರಿ, ಹೆಚ್ಚು ಕ್ರಿಯಾಶೀಲರಾಗಿರುತ್ತೀರಿ ಹೆಚ್ಚು ಸೃಜನಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತೀರಿ. ಇವೆಲ್ಲವನ್ನೂ ನೀವು ಮಾಡದಿದ್ದರೆ ನಿಮ್ಮ ಮೆದುಳಿನ ಆರೋಗ್ಯ ಸಮಸ್ಯೆಯಲ್ಲಿದೆ ಎಂದು ಅರ್ಥ.

ಮೆದುಳಿನ ಆರೋಗ್ಯ ಮುಖ್ಯ ಏಕೆ?

ನಮ್ಮ ಮೆದುಳು ನಮ್ಮ ದೇಹದ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ. ನಮ್ಮ ನರವ್ಯೂಹ ವ್ಯವಸ್ಥೆ, ಹಾರ್ಮೋನುಗಳ ಉತ್ಪತ್ತಿ, ದೇಹಕ್ಕೆ ಹೆಚ್ಚು ರೋಗನಿರೋಧಕ ಶಕ್ತಿಯನ್ನು ಒದಗಿಸುವುದು ಮುಂತಾದ ಅನೇಕ ಕಾರ್ಯಗಳನ್ನು ಮೆದುಳು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿರುತ್ತದೆ. ನಾವು ಮೆದುಳಿನ ಆರೋಗ್ಯವನ್ನು ನಿರ್ಲಕ್ಷಿಸಿದರೆ ಹಲವಾರು ಶಾಶ್ವತ ತೊಂದರೆಗಳಿಗೆ ಒಳಗಾಗುತ್ತೇವೆ ಉದಾಹರಣೆಗೆ ಬ್ರೈನ್ ಫಾಗ್‌,  ಮೂಡ್ ಸ್ವಿಂಗ್ಸ್ ,ಕಡಿಮೆ ನೆನಪಿನ ಶಕ್ತಿ ,ನರ ವ್ಯವಸ್ಥೆಗೆ ಸಂಬಂಧಿಸಿದ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತೇವೆ.

ಮೆದುಳಿನ ಆರೋಗ್ಯದ ನಾಶಕಾರಕಗಳು ಯಾವುವು?

 ಜಗತ್ತಿನಲ್ಲಿ ಹಲವಾರು ಅನಾರೋಗ್ಯಕರ ವಸ್ತುಗಳನ್ನು ಆರೋಗ್ಯಕರ ಎಂದು ಬಿತ್ತರಿಸುವುದರ ಮೂಲಕ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಾರೆ. ವಸ್ತುಗಳ ಕುರಿತ ಅನೇಕ ವಿಷಯಗಳನ್ನು ಗಮನಕ್ಕೆ ತಾರದೆ ಜನರಿಗೆ ಖರೀದಿ ಮಾಡಿಸಲಾಗುತ್ತದೆ .ತೂಕ ಇಳಿಕೆ,ನೆನಪಿನ ಶಕ್ತಿ ವೃದ್ದಿಸುವುದು ಹೀಗೆ ಆನೇಕ ಉತ್ಪನ್ನಗಳ ಮಾರಟವು ಮೋಸಗೊಳಿಸುವ ಉದ್ದೇಶ ಹೊಂದಿವೆ.  

ಮುಖ್ಯವಾಗಿ ಮೆದುಳಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ತೊಂದರೆ ಕಾರಕಗಳು ಯಾವುವೆಂದರೆ?

ಕಡಿಮೆ ನಿದ್ರೆ ಮಾಡುವುದು, ಪದೇ ಪದೇ ಒತ್ತಡಕ್ಕೆ ಒಳಗಾಗುವುದು, ಮೊಬೈಲ್ ಅಥವಾ ಕಂಪ್ಯುಟರ್‌ ಗಳಲ್ಲಿ ಹೆಚ್ಚಿನ ಸಮಯದ ವೀಕ್ಷಣೆ ಹೆಚ್ಚು, ಸಕ್ಕರೆ ಆಧಾರಿತ, ಅಥವಾ ಕೃತಕ ಬಣ್ಣ ಆಧಾರಿತ ವಸ್ತುಗಳ ಸೇವನೆ ಮಾಡುವುದು. ಬಹಳಷ್ಟು ಸಮಯದ ಕುಳಿತುಕೊಂಡಿರುವುದು ಮುಂತಾದ ಚಟುವಟಿಕೆಗಳು ನಮ್ಮ ಮೆದುಳಿನಲ್ಲಿ ನಿಷ್ಕ್ರಿಯತೆ ಉಂಟುಮಾಡುತ್ತವೆ. 

ನಮ್ಮ ಮೆದುಳಿನ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

ನಮ್ಮ ಮೆದುಳು ಎಲ್ಲಾ ಸನ್ನಿವೇಶಗಳಲ್ಲೂ ಹೊಂದಾಣಿಕೆ ಮಾಡಿಕೊಳ್ಳುವ ಗುಣವನ್ನು ಹೊಂದಿದೆ. ಸರಿಯಾದ ಮಾರ್ಗದಲ್ಲಿ ಚಿಕಿತ್ಸೆ ಹಾಗೂ ನಿರ್ದೇಶನ ಕೊಟ್ಟಾಗ ಸಂಪೂರ್ಣವಾಗಿ ಕ್ರಿಯಾಶೀಲವಾಗುತ್ತದೆ .ಹಾಗೂ ಹಲವಾರು ವಿಷಯಗಳ ಮೇಲೆ ನಿಯಂತ್ರಣ ಹೊಂದುತ್ತದೆ. ಮುಖ್ಯವಾಗಿ ಕೆಲವು ಬದಲಾವಣೆಗಳನ್ನು ನಮ್ಮ ಜೀವನದಲ್ಲಿ ಮಾಡಿಕೊಳ್ಳಬೇಕು ಅವು ಯಾವುವೆಂದರೆ.

ನಿದ್ರೆ : ಮೆದುಳಿಗೆ ದಿನಕ್ಕೆ ಏಳರಿಂದ ಎಂಟು ತಾಸುಗಳ ಕಾಲ ವಿಶ್ರಾಂತಿ ಅಗತ್ಯವಿದೆ ಈ ವಿಶ್ರಾಂತಿಯು ಮೆದುಳಿಗೆ ಪುನಶ್ಚೇತನ ನೀಡಿ ಚಟುವಟಿಕೆಯಿಂದ ಭಾಗವಹಿಸುವಂತೆ ಮಾಡುತ್ತದೆ.

ಆಹಾರ :ಉತ್ತಮ ಆಹಾರ ಮೆದುಳಿನಲ್ಲಿರುವ ನರಗಳಿಗೆ ಹೆಚ್ಚಿನ ಪ್ರಮಾಣದ ರಕ್ತ ಪರಿಚಲನೆ ಉಂಟು ಮಾಡಿ ಮೆದುಳಿನ ಜೀವಕೋಶಗಳಿಗೆ ಶಕ್ತಿ  ಉಂಟುಮಾಡುವುದರ ಜೊತೆಗೆ ಕ್ರಿಯಾಶೀಲತೆ ಹೆಚ್ಚಿಸುತ್ತದೆ ಮೆದುಳಿನ ಸಾಮರ್ಥ್ಯ ವೃದ್ಧಿಸುವ ಆಹಾರಗಳಾದ wallnut,apple,kiwi,    ಹಾಗೂ ಆರೋಗ್ಯಕರ ಎಣ್ಣೆ ಅಂಶಗಳಾದ  avo cado,olive oil, omega 3 fatty acids,berry fruits,  dark chacolate,  ಅಗಸೆ ಬೀಜ ಮೀನು ಮುಂತಾದ ಪದಾರ್ಥಗಳ  ಸೇವನೆ ಮೆದುಳಿನ ಕ್ರಿಯಾಶೀಲತೆ ಹೆಚ್ಚಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ.

ವ್ಯಾಯಾಮ :ವ್ಯಾಯಾಮ ಕೇವಲ ನಿಮ್ಮ ದೇಹಕ್ಕೆ ಮಾತ್ರವಲ್ಲ ಇದು ನಿಮ್ಮ ಮೆದುಳಿಗೂ ಕೂಡ ಆರೋಗ್ಯವನ್ನು ಉಂಟು ಮಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಇದು ನಮ್ಮ ದೇಹದಲ್ಲಿ ರಕ್ತ ಪರಿಚಲನೆಯ ವೇಗ ಹೆಚ್ಚಿಸುತ್ತದೆ ಹಾಗೂ ನಮ್ಮಲ್ಲಿ ಕ್ರಿಯಾಶೀಲತೆಯನ್ನು ತರುತ್ತದೆ. ಎರಡು ತಾಸುಗಳಿಗಿಂತ ಅಧಿಕ ಸಮಯ ಒಂದೇ ಕಡೆ ಕುಳಿತುಕೊಳ್ಳುವುದು ಸಹ ಮೆದುಳಿನ ನಿಷ್ಕ್ರಿಯತೆಗೆ ಒಂದು ಉದಾಹರಣೆಯಾಗಿದೆ ಹೆಚ್ಚು ಲವಲವಿಕೆಯಿಂದ ಓಡಾಡಿದಷ್ಟು ಹೆಚ್ಚು ಮೆದುಳು ಕ್ರಿಯಾಶೀಲವಾಗಿರುತ್ತದೆ.

ಒತ್ತಡರಹಿತ ಜೀವನ:ಮೆದುಳು ಸ್ಪಷ್ಟವಾಗಿ ಯೋಚನೆಗಳನ್ನು ಮಾಡಬೇಕೆಂದರೆ ಅದಕ್ಕೆ ಒತ್ತಡ ರಹಿತ ಸನ್ನಿವೇಶ  ಮುಖ್ಯವಾಗುತ್ತದೆ ಒತ್ತಡವನ್ನು ನಿಭಾಯಿಸಲು ಈ ಕೆಳಗಿನ ಚಟುವಟಿಕೆಗಳನ್ನು ಮಾಡುವುದು ಉತ್ತಮ.

ನಿಸರ್ಗದ ಮಡಿಲಲ್ಲಿ ಹೆಚ್ಚಿನ ಸಮಯ ಕಳೆಯುವುದು, ನಿಮ್ಮ ಪ್ರೀತಿ ಪಾತ್ರರೊಂದಿಗೆ ಹೆಚ್ಚಿನ ಸಮಯ ಕಳೆಯುವುದು ,ನಿಮ್ಮ ಭಾವನೆಗಳ ಬಗ್ಗೆ ಗಮನಹರಿಸುವುದು ಮತ್ತು ಅಭ್ಯಾಸ ಮಾಡುವುದು, ಒತ್ತಡ ನಿವಾರಣೆಗಾಗಿ ಪ್ರಾಣಾಯಾಮ ಮಾಡುವುದು, ಎಲ್ಲಾ ಕಾರ್ಯಗಳನ್ನು ಮಾಡುತ್ತಾ ನಮ್ಮಲ್ಲಿ ಶಾಂತತೆಯನ್ನು ನೆಲೆಗೊಳಿಸುವುದು ಉತ್ತಮ.

ಮೆದುಳಿನ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಉಳಿದ ಎಲ್ಲಾ ಕೆಲಸವನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯ. ಆದ್ದರಿಂದ ತಲೆಗೆ ತೊಂದರೆಯನ್ನುಂಟು ಮಾಡುವ ಯಾವುದೇ ಕೆಲಸಗಳನ್ನು ಮಾಡುವಾಗ ಮುಖ್ಯವಾಗಿ ಶಿರ ಕವಚವನ್ನು ಬಳಸುವುದು ಉತ್ತಮ .ಧೂಮಪಾನ ಮಧ್ಯಪಾನಗಳು ಮೆದುಳಿನ ಬೆಳವಣಿಗೆಗೆ ಅಪಾಯಕಾರಿ.

 ಸಾಮಾಜಿಕ ಸಂವಹನ:ಸಮಾಜದಲ್ಲಿನ ಅನೇಕ ವ್ಯಕ್ತಿತ್ವಗಳ ಜನರ ಜೊತೆ ಬೆರೆಯುವುದು ಮೆದುಳಿನ ಕ್ರಿಯಾಶೀಲತೆ ಹೆಚ್ಚಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ . ಹೀಗೆ ಮೆದುಳನ್ನು ಕ್ರಿಯಾಶೀಲವಾಗಿಟ್ಟುಕೊಳ್ಳುವುದು ನಮ್ಮ ಮುಖ್ಯ ಕಾರ್ಯವಾಗಬೇಕು.

 



ನಮ್ಮ ಮೆದುಳಿನ ಸಾಮರ್ಥ್ಯ ಹೆಚ್ಚಿಸುವದು ಹೇಗೆ?

 ಜೀವನದಲ್ಲಿ ಒಬ್ಬ ವ್ಯಕ್ತಿ ಯಶಸ್ಸು ಸಾಧಿಸಬೇಕಾದರೆ ಅನುಭವಗಳು ದೊಡ್ಡ ಪಾತ್ರವನ್ನು ವಹಿಸುತ್ತವೆ ಅವನ ಜ್ಞಾನ ವಿಕಾಸವು ಅನುಭವಗಳಿಂದ ಬೆಳೆಯುತ್ತದೆ. ಹೆಚ್ಚು ಕಷ್ಟಗಳನ್ನು ಎದುರಿಸಿದ ವ್ಯಕ್ತಿ ಹೆಚ್ಚು ಜ್ಞಾನವುಳ್ಳ ಬಲಶಾಲಿಯಾಗುತ್ತಾನೆ .ಕಷ್ಟಗಳು ನಮ್ಮನ್ನು ಕ್ರಿಯಾಶೀಲವಾಗಿಡುವುದರ ಜೊತೆಗೆ ಎಲ್ಲ ಸಂದರ್ಭಗಳನ್ನು ಎದುರಿಸಲು ಅಣಿಯಾಗುವಂತೆ ಮಾಡುತ್ತವೆ. ಮೆದುಳು ನಮ್ಮ ಎಲ್ಲ ಚಟುವಟಿಕೆಗಳಿಗೆ ತೀಕ್ಷ್ಣವಾಗಿ ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುತ್ತಾ ಹೋಗುತ್ತದೆ. ನಾವು ಕ್ರಿಯಾಶೀಲವಾಗಿದ್ದಷ್ಟು ನಮ್ಮ ಮೆದುಳಿನ ಆಲೋಚನ ಸಾಮರ್ಥ್ಯ ವೃದ್ಧಿಯಾಗುತ್ತಾ ಸಾಗುತ್ತದೆ .ಐದು ವಿಧಾನಗಳ ಮೂಲಕ ನಮ್ಮ ಮೆದುಳಿನ ನೆನಪಿನ ಶಕ್ತಿ, ಆಲೋಚಿಸುವ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವುದರ ಜೊತೆಗೆ ಎಲ್ಲ ಸಂದರ್ಭಗಳನ್ನು ನಾವು ಸದೃಢವಾಗಿ ಎದುರಿಸುವ ಮೂಲಕ ಅದರಿಂದ ಆಚೆ ಬರುವುದನ್ನು ಕಲಿಯಬಹುದಾಗಿದೆ. ನಮ್ಮ ಮೆದುಳಿನ ಬೆಳವಣಿಗೆಗೆ ಅಗತ್ಯವಾದ ಆಹಾರಗಳ ಸೇವನೆಯಿಂದ ಹಿಡಿದು ನಮ್ಮ ಮೆದುಳಿಗೆ ಸವಾಲು ಹಾಕುವ ವಿಧಾನಗಳವರಿಗೆ ಇದು ನಮಗೆ ಮತ್ತು ನಮ್ಮ ಭವಿಷ್ಯಕ್ಕೆ ಲಾಭಾಂಶವನ್ನು ನೀಡುತ್ತದೆ.

ಜ್ಞಾನದ ಸಾಮರ್ಥ್ಯ

ನಮ್ಮ ಜ್ಞಾನದ ಸಾಮರ್ಥ್ಯವು ನೆನಪಿನ ಶಕ್ತಿಯನ್ನು ಮೀರಿದ್ದು ಇದು ಆಲೋಚನೆ ,ಗುರುತಿಸುವಿಕೆ,. ಸಂವಹನ ಮತ್ತು ಉತ್ತಮ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಒಳಗೊಂಡಿದೆ .ಜ್ಞಾನದ ಸಾಮರ್ಥ್ಯವು ಸ್ವಾವಲಂಬಿ ಜೀವನದ ಅಡಿಪಾಯವಾಗಿದೆ.

ನಮ್ಮ ಜ್ಞಾನದ ಸಾಮರ್ಥ್ಯವನ್ನು ವೃದ್ಧಿಸುವಲ್ಲಿ ಐದು ವಿಧಾನಗಳನ್ನು ಅಳವಡಿಸಿಕೊಳ್ಳುವುದು ಬಹು ಮುಖ್ಯ.

ಅತ್ಯುತ್ತಮ ಪೋಷಣೆ ನೀಡುವ ಆಹಾರ ಸೇವಿಸುವುದು

ಹೆಚ್ಚು ಆಮ್ಲಜನಕವನ್ನು ಮೆದುಳಿಗೆ ರವಾನಿಸುವ ವ್ಯಾಯಾಮಗಳನ್ನು ಮಾಡುವುದು

ಒತ್ತಡ ಕಡಿಮೆ ಮಾಡಿಕೊಳ್ಳುವುದು

ಸಾಮಾಜಿಕ ಸಂವಹನ ನಡೆಸುವುದು

ಉತ್ತಮ ನಿದ್ರೆ ಮಾಡುವುದು

ಮೆದುಳಿಗೆ ವ್ಯಾಯಾಮ: ಆರೋಗ್ಯಕರ ಮನಸ್ಸು ಆರೋಗ್ಯಕರ ದೇಹದಲ್ಲಿ ವಾಸಿಸುತ್ತದೆ ಎಂಬ ಹಿರಿಯರ ಮಾತಿನಂತೆ ನಮ್ಮ ಮನಸ್ಸು ಆರೋಗ್ಯವಾಗಿರಬೇಕಾದರೆ ದೇಹವು ಆರೋಗ್ಯವಾಗಿರಬೇಕು. ಅದಕ್ಕಾಗಿ ದಿನನಿತ್ಯ ವ್ಯಾಯಾಮ ಮಾಡಬೇಕು ವ್ಯಾಯಾಮಗಳು ಶ್ವಾಸಕೋಶಗಳನ್ನು ವಿಸ್ತರಿಸುವ ,ರಕ್ತ ಪರಿಚಲನೆಯನ್ನು ಚುರುಕುಗೊಳಿಸುವ ಮತ್ತು ಸ್ನಾಯುಗಳ ಮೂಳೆಗಳ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ ದೇಹದ ಆರೋಗ್ಯವನ್ನು ಉಳಿಸಿಕೊಳ್ಳುತ್ತವೆ ಮತ್ತು ಸುಧಾರಿಸುತ್ತವೆ. ಈ ಎಲ್ಲ ಕೆಲಸಗಳನ್ನು ಮಾಡುವುದರ ಜೊತೆಗೆ ಮೆದುಳಿನ ಬೆಳವಣಿಗೆ ಮತ್ತು ಮಾನಸಿಕ ಸಾಮರ್ಥ್ಯಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತವೆ ಮುಖ್ಯವಾಗಿ ವ್ಯಾಯಾಮಗಳಲ್ಲಿ ಏರೋಬಿಕ್ಸ್, ಸ್ವಿಮ್ಮಿಂಗ್, ವಾಕಿಂಗ್, ಇತರೆ ಹೆಚ್ಚು ಆಮ್ಲಜನಕ ತೆಗೆದುಕೊಳ್ಳುವಂತಹ ವ್ಯಾಯಾಮಗಳು ಮೆದುಳಿನ ಕ್ರಿಯಾಶೀಲತೆ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

 ಪೋಷಾಕಾಂಶಯುಕ್ತ ಆಹಾರ ಸೇವನೆ

ಮೆದುಳು ಕ್ರಿಯಾಶೀಲವಾದರೆ ಮಾತ್ರ ನಮ್ಮ ದೈನಂದಿನ ಕೆಲಸಗಳನ್ನು ವೇಗವಾಗಿ ಮಾಡಿಕೊಳ್ಳಲು ನಮ್ಮಲ್ಲಿ ಸಾಮರ್ಥ್ಯ ವೃದ್ಧಿಯಾಗುತ್ತದೆ ಮೆದುಳು ವೇಗವಾಗಿ ಆಲೋಚಿಸಲು ಅದಕ್ಕೆ ಸೂಕ್ತ ತರಬೇತಿ ಅಗತ್ಯವಿದೆ ಈ ತರಬೇತಿಯು ಹಲವಾರು ವರ್ಷಗಳು ನಿರಂತರವಾಗಿ ಸಾಗಿದಾಗ ಮಾತ್ರ ಅದರ ಪ್ರತಿಫಲವನ್ನು ಕಾಣಲು ಸಾಧ್ಯ ಹಾಗೆ ಮೆದುಳಿಗೆ ಹೆಚ್ಚು ಆಲೋಚನೆ ಮಾಡುವ ತರ್ಕ ಮಾಡುವ ಅವಕಾಶಗಳನ್ನು ನೀಡಿದಾಗ ಅದು ಕ್ರಿಯಾಶೀಲವಾಗುತ್ತಾ ಹೋಗುತ್ತದೆ ಮತ್ತು ನಾವು ಸೇವಿಸುವ ಆಹಾರ ಮೆದುಳಿನ ಬೆಳವಣಿಗೆಯ ಮೇಲೆ ಪರೋಕ್ಷವಾಗಿ  ಅವಲಂಬನೆಯಾಗಿದೆ ಮುಖ್ಯವಾಗಿ ಹಣ್ಣುಗಳು ಡ್ರೈ ಫ್ರೂಟ್ ಗಳು omega 3 ಫ್ಯಾಟಿ ಆಸಿಡ್  ಇರುವಂತಹ ಆಹಾರಗಳು ಮೆದುಳಿನ ಸಾಮರ್ಥ್ಯ ವೃದ್ಧಿಸುವಲ್ಲಿ ಸಹಕಾರಿಯಾಗಿದೆ.

ಒತ್ತಡ ನಿಭಾಯಿಸುವುದು

ನಮ್ಮ ದೈನಂದಿನ ಜೀವನದಲ್ಲಿ ಹಲವಾರು ಕಾರಣಗಳಿಗಾಗಿ ನಾವು ಒತ್ತಡಕ್ಕೆ ಒಳಗಾಗುತ್ತೇವೆ ಇದರಿಂದ ಹೊರಬರಲು ಬೇರೆ ಬೇರೆ ದಾರಿಗಳನ್ನು ಹುಡುಕಿಕೊಳ್ಳುತ್ತೇವೆ ಕೆಲವರು ಋಣಾತ್ಮಕ ಅಭ್ಯಾಸಗಳಾದ ಧೂಮಪಾನ ಮದ್ಯಪಾನ ಇತರೆ ದೇಹಕ್ಕೆ ಹಾನಿಕರವಾದ ಅಭ್ಯಾಸಗಳನ್ನು ಬೆಳೆಸಿಕೊಂಡರೆ ಇನ್ನೂ ಕೆಲವರು ಓದುವುದು ಕ್ರೀಡೆ ಮಕ್ಕಳೊಂದಿಗೆ ಆಟ ಆಡುವುದು ಜನರೊಂದಿಗೆ ಬರೆಯುವುದು ಅಡುಗೆ ಮಾಡುವುದು ಪರೋಪಕಾರಿ ಕೆಲಸಗಳನ್ನ ಮಾಡುವುದು ಹೀಗೆ ಹಲವಾರು ಚಟುವಟಿಕೆಗಳ ಮುಖಾಂತರ ತಮ್ಮ ದೈನಂದಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳುತ್ತಾರೆ ನಾವು ಧನಾತ್ಮಕ ದಾರಿಯನ್ನು ಕೊಂಡುಕೊಂಡಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ನಮ್ಮ ಒತ್ತಡವನ್ನು ಕಡಿಮೆ ಮಾಡಿಕೊಂಡಷ್ಟು ನಮ್ಮ ಮೆದುಳಿನ ಸಾಮರ್ಥ್ಯವು ವೃದ್ಧಿಯಾಗುತ್ತಾ ಹೋಗುತ್ತದೆ ಮನುಷ್ಯ ಒತ್ತಡದಿಂದ ಮುಕ್ತನಾಗ ಮಾತ್ರ ಸಮಚಿತ್ತವಾಗಿ ಆಲೋಚನೆ ಮಾಡಬಲ್ಲ ಹಾಗೂ ಖುಷಿಯಾಗಿರಬಲ್ಲ ಒತ್ತಡ ಉದ್ವೇಗ ಮಾಡಿಕೊಳ್ಳುವುದು ಮೆದುಳಿನ ವಿಕಾಸಕ್ಕೆ ಹಾನಿ ಉಂಟುಮಾಡುತ್ತದೆ

ನಿದ್ರೆ ಅವಶ್ಯಕತೆ

ನಮ್ಮ ಮೆದುಳಿಗೆ ಶ್ರಮ ಎಷ್ಟು ಕೊಡುತ್ತೇವೆ ಅಷ್ಟೇ ಪ್ರಮಾಣದ ನಿದ್ರೆಯು ಅವಶ್ಯಕ ಮನುಷ್ಯ ಒಂದು ದಿನಕ್ಕೆ ಎಂಟು ಗಂಟೆಗಳ ಕಾಲ ನಿದ್ರೆ ಮಾಡುವುದು ಅವಶ್ಯಕ ನಿದ್ರೆಯು ನಮ್ಮನ್ನು ಪುನಶ್ಚೇತನ ಗೊಳಿಸುವ ಹಾಗೂ ದೇಹವನ್ನು ಬಲಗೊಳಿಸುವ ಒಂದು ಪ್ರಮುಖ ಶಕ್ತಿಯಾಗಿದೆ

ಸಾಮಾಜಿಕ ಸಂವಹನ

ಸಂವಹನವು ಮನುಷ್ಯನಿಗೆ ತನ್ನ ಆಲೋಚನಾ ಸಾಮರ್ಥ್ಯವನ್ನು ವೃದ್ಧಿಸುವ ಒಂದು ಪ್ರಮುಖ ಅಸ್ತ್ರವಾಗಿದೆ ಮನುಷ್ಯ ಎಷ್ಟು ಸಂವಹನ ನಡೆಸುತ್ತಾನೆಯೋ ಅಷ್ಟು ವಿವಿಧ ಕೋನಗಳಲ್ಲಿ ಆಲೋಚನೆ ಮಾಡುವ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತಾನೆ ಈ ನಿಟ್ಟಿನಲ್ಲಿ ಸಂವಹನ ಮಾಡೋದು ಪ್ರಮುಖವಾದ ಜೀವನದ ಭಾಗವಾಗಬೇಕು ಈ ಸಮಾನ ಧನಾತ್ಮಕವಾಗಿರಬೇಕು.

ಈ ಎಲ್ಲ ವಿಧಾನಗಳನ್ನು ಅನುಸರಿಸುವುದರ ಮುಖಾಂತರ ನಾವು ನಮ್ಮ ಮೆದುಳಿನ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬಹುದು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಹಣೆಯಾಗಬಹುದು.

ನ್ಯುಮೋನಿಯ(ಪುಪ್ಪಸ ಜ್ವರ) ಎಂದರೇನು? ಲಕ್ಷಣಗಳು ಮತ್ತು ಪರಿಹಾರ

 

ನ್ಯುಮೋನಿಯ(ಪುಪ್ಪಸ ಜ್ವರ) ಎಂದರೇನು? 

ಶ್ವಾಸಕೋಶಕ್ಕೆ ಉಂಟಾಗುವ ಸೋಂಕನ್ನು ನ್ಯುಮೋನಿಯ ಎಂದು ಕರೆಯುತ್ತೇವೆ .ಈ ಸೋಂಕು ಹೆಚ್ಚಾಗಿ ಎರಡು ವರ್ಷದೊಳಗಿನ ಮಕ್ಕಳು ಹಾಗೂ 65 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಿಗೆ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ .  ವಾತಾವರಣದಲ್ಲಿ ಉಂಟಾಗುವ ಬದಲಾವಣೆಯಿಂದ ಉದಾಹರಣೆಗೆ ಬೇಸಿಗೆಯಿಂದ ಮಳೆಗಾಲ ಹಾಗೂ  ಮಳೆಗಾಲದಿಂದ ಚಳಿಗಾಲ ಹೀಗೆ ಋತುಗಳ ಬದಲಾವಣೆ ಆದಾಗ  ಗಾಳಿಯಲ್ಲಿ ವೈರಸ್ ಗಳು, ಬ್ಯಾಕ್ಟೀರಿಯಾಗಳು ,ಶಿಲೀಂದ್ರಗಳು ,ಹೆಚ್ಚಾಗಿ ಬೆಳೆಯಲು ಅವಕಾಶ ಸಿಗುತ್ತದೆ ಇದರಿಂದ ನ್ಯುಮೋನಿಯ ಕಾಯಿಲೆ ಬೇಗ ಹರಡುವ ಅವಕಾಶವಿರುತ್ತದೆ.

ಎರಡು ವರ್ಷದೊಳಗಿನ ಮಕ್ಕಳಿಗೆ ಉಂಟಾಗುವ ನ್ಯುಮೋನಿಯ


ಪ್ರತಿ ವರ್ಷ ಜಗತ್ತಿನಲ್ಲಿ 75 ಲಕ್ಷ ಮಕ್ಕಳು ನ್ಯುಮೋನಿಯದಿಂದ ಮೃತರಾಗುತ್ತಿದ್ದಾರೆ .ಎರಡು ವರ್ಷದೊಳಗಿನ ಮಕ್ಕಳ ಸಾವಿಗೆ ನ್ಯುಮೋನಿಯ ಕಾಯಿಲೆಯು ಪ್ರಮುಖ ಕಾರಣವಾಗಿದೆ. ಪ್ರಾರಂಭದಲ್ಲಿ ಕೆಮ್ಮು ನೆಗಡಿಯಿಂದ ಆರಂಭವಾಗಿ ಮುಂದೆ ಗಂಭೀರವಾದ ಸಮಸ್ಯೆಯನ್ನು ಉಂಟುಮಾಡುತ್ತದೆ ಚಿಕ್ಕ ಮಕ್ಕಳಲ್ಲಿ ಜ್ವರ, ಕೆಮ್ಮು, ನೆಗಡಿ ನಿರಂತರವಾಗಿ ಮುಂದುವರೆದಂತೆ ಮೂಗಿನಿಂದ ಉಸಿರಾಡಲು ಸಾಧ್ಯವಾಗುವುದಿಲ್ಲ ಅಂತಹ ಸಂದರ್ಭದಲ್ಲಿ ಮಕ್ಕಳು ಬಾಯಿಂದ ಉಸಿರಾಡಲು ತುಂಬಾ ಪ್ರಯತ್ನ ಪಡುತ್ತಾರೆ ಆದರೆ ಉಸಿರಾಡಲು ಸಾಧ್ಯವಾಗುವುದಿಲ್ಲ ಕಾರಣ ಗಾಳಿಯನ್ನು ಸಾಗಿಸುವ ನಾಳಗಳು ಚಿಕ್ಕದಿರುವುದರಿಂದ ಅವರ ಉಸಿರಾಡುವುದು ತುಂಬಾ ಸಮಸ್ಯೆ ಆಗುತ್ತದೆ ಇದರಿಂದಾಗಿ ಮಕ್ಕಳಲ್ಲಿ ನ್ಯುಮೋನಿಯ ತುಂಬಾ ವೇಗವಾಗಿ ಹರಡುವ ಸಾಧ್ಯತೆ ಇರುತ್ತದೆ.

ಮಕ್ಕಳಲ್ಲಿ ನ್ಯುಮೋನಿಯ ಬಂದು ತಕ್ಷಣ ತೆಗೆದುಕೊಳ್ಳಬೇಕಾದ ಕ್ರಮಗಳು

ಮಕ್ಕಳಲ್ಲಿ ನೆಗಡಿ, ಕೆಮ್ಮು ಬಂದ ಸಂದರ್ಭದಲ್ಲಿ ಮಾಸ್ಕ್ ಗಳನ್ನು ಹಾಕಬೇಕು. ಮಕ್ಕಳಿಗಾಗಿ ಪ್ರತ್ಯೇಕ ಬಟ್ಟೆಗಳನ್ನು ಬಳಸಬೇಕು ಹಾಗೂ ಮಕ್ಕಳ ಕೈ ತೊಳೆಯುವುದು ಮುಖ ತೊಳೆಯುವುದು ಮಾಡುತ್ತಿರಬೇಕು ಹಾಗೂ ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡುತ್ತಿರಬೇಕು. ಬಾಟಲ್ ಗಳಲ್ಲಿ ಹಾಲುಣಿಸುವ ಅಭ್ಯಾಸವನ್ನು ನಿಲ್ಲಿಸಬೇಕು ಹಾಗೂ ನ್ಯುಮೋನಿಯ ವಿರುದ್ಧ ಲಸಿಕೆ ಅಭಿಯಾನ ಸಂದರ್ಭದಲ್ಲಿ ಲಸಿಕೆ ಹಾಕಿಸಬೇಕು.

ಮಕ್ಕಳಲ್ಲಿ ಕೆಮ್ಮು ಮೂರು ವಾರಗಳ ನಂತರವೂ ಮುಂದುವರೆದರೆ ತಕ್ಷಣವೇ ವೈದ್ಯರನ್ನ ಸಂಪರ್ಕಿಸಿ   x-ray ತೆಗೆಸುವುದು ,ರಕ್ತ ಪರೀಕ್ಷೆ ಮಾಡಿಸುವುದು, ಆಕ್ಸಿಜನ್ ಪೂರೈಕೆಯನ್ನು ಮಾಡುವುದು ಹಾಗೂ ರೋಗ ನಿರೋಧಕ ಔಷಧಿಗಳನ್ನು ನೀಡುವುದು ಮುಖ್ಯ. ಚಿಕ್ಕ ಮಕ್ಕಳನ್ನು ನ್ಯುಮೋನಿಯ ಕಾಯಿಲೆ ಲಕ್ಷಣಗಳುಕಂಡ ಬಂದ ತಕ್ಷಣ ಆರಂಭದಲ್ಲಿಯೇ ಕರೆದೊಯ್ಯುವುದು ಉತ್ತಮ

65 ವರ್ಷ ಮೇಲ್ಪಟ್ಟವರಲ್ಲಿ ನ್ಯುಮೋನಿಯದ ಲಕ್ಷಣಗಳು

ರೋಗದ ಮೊದಲ ರಕ್ಷಣಾ ಜ್ವರದಿಂದ ಪ್ರಾರಂಭವಾಗುತ್ತದೆ ಕಾರಣ ಗಾಳಿಯಲ್ಲಿರುವ ವೈರಸ್ ಬ್ಯಾಕ್ಟೀರಿಯಾ ಶಿಲೀಂದ್ರಗಳ ಸೋಂಕಿನಿಂದ ಇದು ಉಂಟಾಗುತ್ತದೆ ಮುಖ್ಯ ಕಾರಣ ಅವರ ನೆರವು ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ ಹಾಗೂ ಟಿಬಿ ಶುಗರ್ ನಂತಹ ಕಾಯಿಲೆಗಳು ಈಗಾಗಲೇ ಅವರಿಗೆ ಬಂದಿರುವ ಸಂಭವವಿರುತ್ತದೆ ಇಂತಹ ಸಂದರ್ಭದಲ್ಲಿ ನಾವು ಸೇವಿಸುವ ಗಾಡಿಯಲ್ಲಿ ಕಲುಷಿತ ರೋಗಾಣುಗಳು ಇತರೆ ಕಣಗಳು ನಿರಂತರವಾಗಿ ದೇಹದೊಳಗೆ ಸೇರಿಕೊಳ್ಳುವುದರಿಂದ ಇದು ಆರಂಭವಾಗುತ್ತದೆ ಮನುಷ್ಯ ದಿನಕ್ಕೆ 10 ಸಾವಿರ ಲೀಟರ್ ನಷ್ಟು ಗಾಳಿಯನ್ನು ಸೇವಿಸುತ್ತಾನೆ. ಈ ಗಾಳಿಯಲ್ಲಿರುವ ಎಲ್ಲ ಸೂಕ್ಷ್ಮ ರೋಗಾಣುಗಳನ್ನು ಎದುರಿಸುವ ರೋಗ ನಿರೋಧಕ ಶಕ್ತಿ 65 ವರ್ಷದಲ್ಲಿ ಕಡಿಮೆ ಇರುವುದರಿಂದ ಇದು ಬೇಗ ಉಂಟಾಗುವ ಅವಕಾಶಗಳು ಇರುತ್ತವೆ

ನ್ಯುಮೋನಿಯ ಉಂಟು ಮಾಡುವ ಇತರೆ ಅಪಾಯಕಾರಿ ಅಂಶಗಳು

ಧೂಮಪಾನ ಮಾಡುವ ವ್ಯಕ್ತಿಗಳಲ್ಲಿ ಶ್ವಾಸಕೋಶದ ರೋಗನಿರೋಧಕ ಸಾಮರ್ಥ್ಯ ಕುಂಠಿತವಾಗಿರುವುದರಿಂದ ಅವರಲ್ಲಿ ಈ ಕಾಯಿಲೆ ಹರಡುವ ಅವಕಾಶ ಹೆಚ್ಚಾಗಿರುತ್ತದೆ ಹಾಗೂ ಧೂಮಪಾನ ಸೇವನೆಯಿಂದ ಶ್ವಾಸಕೋಶದ ಕಿರುಶ್ವಾಸನಾಳಗಳು ಹಾನಿಗೊಳಗಾಗುವುದರಿಂದ ನಿಮೋನಿಯಾ ಬೇಗ ಹರಡುವ ಅವಕಾಶ ಹೆಚ್ಚಾಗಿರುತ್ತದೆ ಯಾವ ವ್ಯಕ್ತಿಗಳು ಹೆಚ್ಚು ಒಬ್ಬಸದಿಂದ ನರಳುತ್ತಿರುತ್ತಾರೋ ಅವರಿಗೆ ನಿಮೋನಿಯಾ ಬೇಗಾ  ಹರಡುವ ಅವಕಾಶವಿರುತ್ತದೆ ಅಸ್ತಮಾ ಕಾಯಿಲೆಯಿಂದ ಸ್ವಾಸನಾಳಗಳು ಸಮಸ್ಯೆ ಉಂಟಾಗಿ ಒಬ್ಬ ಸಹ ಉಂಟಾಗುತ್ತದೆ. ಜೊತೆಗೆ ಮಧುಮೇಹ ಇರುವರೆಗೂ ಮುನಿಯ ಬೇಗ ಹರಡುವುದು

ನ್ಯುಮೋನಿಯ ಮುಖ್ಯವಾಗಿ ಮೂರು ವಿಧಗಳಲ್ಲಿ ಹರಡುವ ಅವಕಾಶವಿರುತ್ತದೆ .

  

ಮೈಕ್ರೋ ಬ್ಯಾಕ್ಟೀರಿಯಲ್ ನ್ಯುಮೋನಿಯ 

ಭಾರತವು ನ್ಯುಮೋನಿಯ ಕೇಂದ್ರವಾಗಿದೆ ಇಲ್ಲಿ ಪ್ರತಿ ಮೂವರಲ್ಲಿ ಒಬ್ಬರಿಗೆ ಕ್ಷಯ ರೋಗ ಇರುವುದು ವರದಿಯಾಗಿದೆ .ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದ ತಕ್ಷಣ ಕ್ಷಯರೋಗ ಆವರಿಸಿಕೊಳ್ಳುತ್ತದೆ. ಮುಖ್ಯವಾಗಿ ತೂಕ ಕಡಿಮೆಯಾಗುವುದು .ಸಾಯಂಕಾಲ ಸಮಯದಲ್ಲಿ ಜ್ವರ ಹೆಚ್ಚಾಗುವುದು ವಿವಿಧ ರೀತಿಯ ಕಫಗಳು ಬರುವುದು ಕೆಮ್ಮು ಕೆಲವೊಮ್ಮೆ ಮೂರುವಾರಗಳಿಗಿಂತ ಹೆಚ್ಚು ಕಾಲ ನಿರಂತರವಾಗಿರುವುದು ಲಕ್ಷಣವಾಗಿದೆ

ವೈರಸ್ ಗಳಿಂದ ಸೋಂಕು ಇದರ ಲಕ್ಷಣ ಹೆಚ್ಚು ಜ್ವರ ಬರುವುದು, ಉಸಿರಾಟದ ತೊಂದರೆ ಉಂಟಾಗುವುದು, ದೇಹದಲ್ಲಿ ಆಮ್ಲಜನಕದ ಕೊರತೆ ಉಂಟಾಗುವುದು ಮುಖ್ಯವಾದ ಲಕ್ಷಣರೋಗ ನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳಲ್ಲೂ ಕೂಡ ನ್ಯುಮೋನಿಯ ಉಂಟಾಗುವ ಅವಕಾಶಗಳು ಹೆಚ್ಚಾಗಿರುತ್ತದೆ  

ಶಿಲೀಂದ್ರಗಳ ಮೂಲಕ ಸೋಂಕು ಕ್ಯಾನ್ಸರ್ ,ಕ್ಷಯರೋಗ, ಮಧುಮೇಹ ದಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ  ಈ ಸೋಂಕಿನ ಮೂಲಕ ಹರಡುವುದು ಹೆಚ್ಚಾಗಿದೆ.

ಮಕ್ಕಳು ಅಥವಾ ವಯಸ್ಕರಲ್ಲಿ ನ್ಯುಮೋನಿಯ ಲಕ್ಷಣ ಕಂಡುಬಂದ ಪ್ರಾರಂಭದಲ್ಲಿ ಮನೆ ಮದ್ದಿನ ಮೂಲಕ ಚಿಕಿತ್ಸೆ ನೀಡಲು ಪ್ರಯತ್ನಿಸಿ .ಅವರಲ್ಲಿ ಉಸಿರಾಟದ ತೊಂದರೆ, ತೀವ್ರ ಜ್ವರ ,ಮುಂತಾದ ಲಕ್ಷಣ ಗಳನ್ನು ಕಂಡು ಬಂದ   ತಕ್ಷಣ ವೈದ್ಯರನ್ನು ಸಂಪರ್ಕಿಸಿ.







ಪ್ರಥಮ ಭಾರಿಗೆ ವಿಧಾನ ಸೌಧದಲ್ಲಿ ಪುಸ್ತಕ ಮೇಳ ಮಾರ್ಚ 3 ವರೆಗೆ ....ವಿಶೇಷವೇನು?

ಕನ್ನಡ ಪುಸ್ತಕಮೇಳಗಳ ಅನಿವಾರ್ಯತೆ...



ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವಾರು ಕಡೆ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿದೆ.ನಾವು ಪುಸ್ತಕ ಓದಲೂ ಅಸಕ್ತರಾದರೆ ಮಾತ್ರ ಭಾಷೆಯು ಉಳಿಯಲಿದೆ. ಪುಸ್ತಕ ಮತ್ತು ಸಾಹಿತ್ಯದ ಓದು ಹೆಚ್ಚು ಹೆಚ್ಚು ಮಾನವೀಯಗೊಳಿಸುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಫೆಬ್ರವರಿ 27ರಿಂದ ಮಾರ್ಚ 3 ವರೆಗೆ  ವಿಧಾನಸೌಧದಲ್ಲಿ  ಪ್ರಪ್ರಥಮ ಬಾರಿಗೆ ಪುಸ್ತಕ ಮೇಳವನ್ನು ಆಯೋಜಿಸಲಾಗಿದೆ .ಇತ್ತೀಚಿನ ದಿನಗಳಲ್ಲಿ ಪುಸ್ತಕ ಓದುವ ಹವ್ಯಾಸವು ಹಾಗೂ  ಕನ್ನಡ ಬರೆಯುವ ಕೌಶಲವು ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಓದುಗರಲ್ಲಿ ಹಾಗೂ ಸಾಹಿತ್ಯ ಆಸಕ್ತರಲ್ಲಿ ಉತ್ಸಾಹ ಹಾಗೂ ಸ್ಪೂರ್ತಿ ತುಂಬಲು ಈ ಪುಸ್ತಕ ಮೇಳವನ್ನು ಆಯೋಜಿಸಲಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಇಂತಹ ಕಾರ್ಯಕ್ರಮಗಳಿಗೆ ಕರೆದುಕೊಂಡು ಬಂದು ವಿಧಾನಸೌಧ ಹಾಗೂ ಪುಸ್ತಕ ಮೇಳ ತೋರಿಸುವದರೊಂದಿಗೆ ಪುಸ್ತಕದ ಅಭಿರುಚಿಯನ್ನು ಬೆಳೆಸಲು ಪ್ರಯತ್ನಿಸಬೇಕು ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಹಾಗೂ ಇಂಟರ್ನೆಟ್ ಚಟಕ್ಕೆ ಅಂಟಿಕೊಳ್ಳುತ್ತಿದ್ದಾರೆ. ಇದರಿಂದ ಹೊರಬರಬೇಕಾದರೆ ಪುಸ್ತಕ ಓದುವ ಹವ್ಯಾಸವು ಪರ್ಯಾಯ ಮಾರ್ಗವಾಗುತ್ತದೆ.

  ಪುಸ್ತಕ ಮೇಳದಿಂದ ಪುಸ್ತಕಗಳನ್ನು ತೆಗೆದುಕೊಂಡು ಮನೆಯನ್ನು ಗ್ರಂಥಾಲಯವಾಗಿ ಮಾಡಿಕೊಳ್ಳುವುದು ನಮ್ಮ ಹವ್ಯಾಸವಾಗಬೇಕು ಇದು ಕನ್ನಡ ನಾಡು ನುಡಿಯ ಸೇವೆಯು ಹೌದು. ಇನ್ನು ಮುಂದೆ ಪ್ರತಿ ವರ್ಷವೂ ವಿಧಾನಸೌಧದಲ್ಲಿ ಪುಸ್ತಕ ಮೇಳವನ್ನು ಆಯೋಜಿಸಲಾಗುತ್ತದೆ.

 ಫೆಬ್ರವರಿ 27ರಿಂದ ಮಾರ್ಚ್ 3ರವರೆಗೆ ಪುಸ್ತಕ ಮೇಳವು ನಡೆಯಲಿದ್ದು ಸುಮಾರು 175 ಪುಸ್ತಕ ಮಳಿಗೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಹಾಗೂ ಕವಿಗೋಷ್ಠಿ, ಸಂವಾದ , ಪುಸ್ತಕ ಬಿಡುಗಡೆ, ಚರ್ಚೆ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.  ಈ ಕಾರ್ಯಕ್ರಮಕ್ಕೆ ವಿಧಾನಸೌಧ ಎಲ್ಲಾ ದ್ವಾರಗಳಿಂದ ಮುಕ್ತ ಪ್ರವೇಶ ನೀಡಲಾಗಿದೆ ಈ ಪುಸ್ತಕ ಮೇಳವು ಬೆಳಿಗ್ಗೆ 10 ಗಂಟೆಯಿಂದ ಸಂಜೆ 8 ಗಂಟೆಯವರೆಗೆ ಪ್ರತಿನಿತ್ಯ ಮಾರ್ಚ್ 3ರವರೆಗೆ ನಡೆಯಲಿದೆ. 

ರಾಜ್ಯದ ಹಲವಾರು ಜಿಲ್ಲೆಗಳಿಂದ ಪುಸ್ತಕ ಮಳಿಗೆಗಳು ಇಲ್ಲಿಗೆ ಆಗಮಿಸಲಿವೆ. ಎಲ್ಲ ರೀತಿಯ ಪುಸ್ತಕಗಳು ಇಲ್ಲಿ ದೊರೆಯುತ್ತವೆ ಇಂತಹ ಪುಸ್ತಕ ಮೇಳದಲ್ಲಿ ಭಾಗವಹಿಸಿ ಪುಸ್ತಕವನ್ನು ಕೊಂಡು ಅವುಗಳನ್ನು ಓದುವುದರ ಮೂಲಕ ನಮ್ಮ ಹವ್ಯಾಸವನ್ನು ಹೆಚ್ಚಿಸಿಕೊಂಡು ತನ್ಮೂಲಕ ನಾಡು ನುಡಿಯ ಸೇವೆ ಮಾಡಬೇಕು. ಕಾರ್ಯಕ್ರಮವನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶ್ರೀ ಚಂದ್ರಶೇಖರ್ ಕಂಬಾರ್ ಅವರು ಹಾಗೂ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಉದ್ಘಾಟಿಸಿದರು.

ದೇಶ ಸುತ್ತು ಕೋಶ ಓದು ಎಂಬ ನಾಣ್ನುಡಿ ಯಂತೆ ಪ್ರತಿಯೊಬ್ಬರಲ್ಲೂ ಜ್ಞಾನವಿಕಾಸವಾಗಬೇಕು ಪುಸ್ತಕಗಳ ಓದುವಿಕೆಯಿಂದ ಜ್ಞಾನವಿಕಸವಾಗುವುದರ ಜೊತೆಗೆ  ಓದುಗರನ್ನು ನಾಗರೀಕರನ್ನಾಗಿಸುತ್ತದೆ, ಕೇವಲ ಓದಿ ವಿದ್ಯಾವಂತರಾದರೆ ಸಾಲದು ಮನುಷ್ಯರಾಗಬೇಕು ನಾವು ಮನುಷ್ಯರಾಗಿ ರೂಪಗೊಳ್ಳುವುದಕ್ಕೆ ಪುಸ್ತಕಗಳು ಒಳ್ಳೆಯ ಮಿತ್ರರಾಗಿ ಸಹಕರಿಸುತ್ತವೆ. ಹಾಗೆಯೇ ಕಳೆದ ಮೂರು ನಾಲ್ಕು ವರ್ಷಗಳಿಂದ ಕನ್ನಡದ ಪ್ರಕಾಶಕರು ತೊಂದರೆಯಲ್ಲಿದ್ದು ಅಶಕ್ತರಾಗಿದ್ದಾರೆ ಕನ್ನಡ ಪುಸ್ತಕಗಳು ಹೆಚ್ಚು ಹೆಚ್ಚು ಮಾರಾಟವಾದರೆ ಕನ್ನಡದ ಬೆಳವಣಿಗೆ ಸಾಧ್ಯ ಆದರೆ ಸರ್ಕಾರ ಕಳೆದ ನಾಲ್ಕು ವರ್ಷಗಳಿಂದಲೂ ಕನ್ನಡ ಪುಸ್ತಕಗಳನ್ನು ಖರೀದಿಸುತ್ತಿಲ್ಲ 2020 ರಿಂದ ಪುಸ್ತಕಗಳ ಖರೀದಿಯಾಗಿಲ್ಲ ಸರ್ಕಾರ ಈಗಲಾದರೂ ಎಚ್ಚೆತ್ತು ಅಶಕ್ತ ಪ್ರಕಾಶಕರ ನೆರವಿಗೆ ಧಾವಿಸಿ ಕನ್ನಡ ಸಾಹಿತ್ಯ ಪರಂಪರೆಯನ್ನು ಉಳಿಸಬೇಕಾಗಿದೆ.

ಇಂದು ಕನ್ನಡಿಗರ ಮೇಲೆ ಹಲವಾರು ಭಾಷೆಗಳ ಏರಿಕೆಯಾಗುತ್ತಿದೆ ನಮ್ಮ ರಾಜ್ಯವು ಭಾಷಾವಾರು ಪ್ರಾಂತ್ಯದ ಮೇಲೆ ಅಸ್ತಿತ್ವಕ್ಕೆ ಬಂದಿದೆ ಎಂಬುದನ್ನು ಮರೆಯಬಾರದು ನಮ್ಮ ಅಸ್ಮಿತೆ ಇರುವುದು ನಮ್ಮ ಭಾಷೆಯಲ್ಲಿ ಇತ್ತೀಚಿಗೆ ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ವರದಿ ಪ್ರಚಲಿತದಲ್ಲಿದೆ ಕನ್ನಡನಾಡಿನಲ್ಲಿ ಕನ್ನಡಿಗರೇ ಕಡಿಮೆಯಾದರೆ ಮುಂದಿನ ಪರಿಸ್ಥಿತಿಯನ್ನು ನೋಯಿಸಲು ಸಾಧ್ಯವಿಲ್ಲ ಆದ್ದರಿಂದ ನಾವೆಲ್ಲರೂ ಎಚ್ಚೆತ್ತು ಕನ್ನಡ ನೆಲ ಜಲ ಭಾಷೆಯನ್ನು ಉಳಿಸಬೇಕಾದ ಅನಿವಾರ್ಯತೆಯಲ್ಲಿದ್ದೇವೆ .    

ಪ್ರತಿನಿತ್ಯ ಮಲಗುವ ಮುನ್ನ 30 ನಿಮಿಷಗಳ ಕಾಲ ಪುಸ್ತಕ ಓದುವುದು ಹಾಗೂ ಬೆಳಿಗ್ಗೆ ಎದ್ದ ನಂತರ 30 ನಿಮಿಷಗಳ ಕಾಲ ಪುಸ್ತಕ ಓದುವ ಹವ್ಯಾಸವನ್ನು ರೂಡಿಸಿಕೊಂಡರೆ ನಮ್ಮಲ್ಲಿನ ಮೆದುಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತದೆ.


 ಜೈ ಕನ್ನಡ....

ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಭಾರತೀಯ ವೈಜ್ಞಾನಿಕ ಕ್ಷೇತ್ರದ ಬೆಳವಣಿಗೆಯ ಒಂದು ನೋಟ.......

 ವಿಜ್ಞಾನ ಮತ್ತು ತಂತ್ರಜ್ಞಾನದ ಮಹತ್ವ....

ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲು ಸರ್ವತೋಮುಖ ಅಭಿವೃದ್ಧಿ ಹೊಂದಲು ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆ ಅಪಾರ. ವೈಜ್ಞಾನಿಕ ಮನೋಭಾವದಿಂದ ಮನುಷ್ಯನ ದೈನಂದಿನ ಬದುಕಿನಲ್ಲಿ ಮೌಢ್ಯತೆ ,ಕಂದಾಚಾರ ,ಮೂಡನಂಬಿಕೆ  ಅಂತಹ ಅನಿಷ್ಟ ಪದ್ದತಿಗಳನ್ನು ತೆಗೆದುಹಾಕಲು ವಿಜ್ಞಾನ ಬೇಕು .ಈ ನಿಟ್ಟಿನಲ್ಲಿ ಜನರಿಗೆ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಒಂದು ವೇದಿಕೆಯನ್ನಾಗಿ ರೂಪಿಸುವ ಅವಶ್ಯಕತೆ ಇದೆ. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಇನ್ನಷ್ಟು ಪಸರಿಸಲು ಎಲ್ಲ ಸರ್ಕಾರಗಳು ಪ್ರಯತ್ನಿಸಬೇಕು. ರಾಷ್ಟ್ರಕವಿ ಕುವೆಂಪುರವರು ವಿಜ್ಞಾನ ಮತ್ತು ಮಾನವೀಯತೆ ಕುರಿತು ಹೇಳಿರುವ ಮಾತು ಇಂದಿಗೂ ಪ್ರಚಲಿತವಾಗಿದೆ "ವಿಜ್ಞಾನವು ಮನುಷ್ಯನ ಬುದ್ಧಿಯ ಕೊಡುಗೆ ಆದರೆ ಮಾನವೀಯತೆ ಅವನ ಹೃದಯದ ಕೊಡುಗೆ" ಎಂಬ ವಾಕ್ಯವನ್ನು ನಾವೆಲ್ಲರೂ ಸ್ಮರಿಸಿಕೊಳ್ಳುವ ಅಗತ್ಯವಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಮನುಷ್ಯನ ಜೀವನದ ಅವಿಭಾಜ್ಯ ಅಂಗ . ಜೀವ ರಕ್ಷಕ ಔಷಧಗಳನ್ನು ಕಂಡುಹಿಡಿದ ಮನುಷ್ಯನೇ ವಿನಾಶಕಾರಿ ಅಣು ಬಾಂಬನ್ನು ಕಂಡುಹಿಡಿದಿದ್ದಾನೆ ಎನ್ನುವುದು ವಿಪರ್ಯಾಸ. ಆದ್ದರಿಂದ ವಿಜ್ಞಾನದ ಸಂಶೋಧನೆಗಳು ಹೆಚ್ಚು ಮಾನವೀಯವೂ ಮಂಗಳಕರವೂ ಆಗಿರಬೇಕು. ಆಗ ಮಾತ್ರ ವಿಜ್ಞಾನದಿಂದ ವಿಕಾಸ ಸಾಧ್ಯ.

ಫೆಬ್ರವರಿ 28 ರಾಷ್ಟೀಯ ವಿಜ್ಞಾನ ದಿನ ಏಕೆ?

ಪ್ರತಿ ವರ್ಷ ಫೆಬ್ರವರಿ 28ನ್ನು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಯಾಗಿ ಆಚರಿಸಲಾಗುತ್ತದೆ ಕಾರಣ ಭಾರತದ ಖ್ಯಾತ ಭೌತಶಾಸ್ತ್ರಜ್ಞ ಸರ್ ಸಿವಿ ರಾಮನ್ ರವರು" ರಾಮನ್ ಎಫೆಕ್ಟ್ "ಕಂಡುಹಿಡಿದ ಸವಿನೆನಪಿಗಾಗಿ ಆಚರಿಸಲಾಗುತ್ತದೆ. ಸಿವಿ ರಾಮನ್ ರವರು ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಕೇಂದ್ರ ಕೊಲ್ಕತ್ತಾದಲ್ಲಿ ಕೆಲಸವನ್ನು ಮಾಡುತ್ತಾ 1930ರಲ್ಲಿ ಭೌತಶಾಸ್ತ್ರದ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿಗೆ ಭಾಜನರಾದರು.


2025 ರ ಘೋಷವಾಕ್ಯ

ಪ್ರತಿ ವರ್ಷವೂ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಘೋಷವಾಕ್ಯಗಳನ್ನು ಕೈಗೊಳ್ಳುತ್ತೇವೆ 2025ರ ಘೋಷವಾಕ್ಯ ವಿಜ್ಞಾನ ಮತ್ತು ಸಂಶೋಧನೆಯಲ್ಲಿ "ವಿಕಸಿತ ಭಾರತಕ್ಕಾಗಿ ಭಾರತೀಯ ಯುವಕರ ನಾಯಕತ್ವವನ್ನು ಜಾಗತಿಕ ಮಟ್ಟದಲ್ಲಿ ಉತ್ತೇಜಿಸುವುದು"ಎಂಬುದಾಗಿದೆ.

ಭಾರತವು ಜಾಗತಿಕ ಮಟ್ಟದಲ್ಲಿವಿಜ್ಞಾನ & ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿದೆ. 2024ರ ಸಮೀಕ್ಷೆಯ ಪ್ರಕಾರ ಭಾರತವು ಜಾಗತಿಕ ಸಂಶೋಧನೆಯಲ್ಲಿ 39ನೇ ಸ್ಥಾನದಲ್ಲಿದೆ ಹಾಗೂ ಜಾಗತಿಕ ಬುದ್ಧಿವಂತರ ಮಟ್ಟದಲ್ಲಿ (IP) ಆರನೇ ಸ್ಥಾನದಲ್ಲಿದೆ.

  ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಕೈಗೊಂಡ ಕಾರ್ಯಕ್ರಮಗಳು...





ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಪ್ರೌಢಾವಸ್ಥೆಯಲ್ಲಿ ಮಕ್ಕಳಿಗೆ ಬೆಳೆಸಲು ಕೇಂದ್ರ ಸರ್ಕಾರವು ಹಲವಾರು ಪ್ರೌಢಶಾಲೆಗಳಲ್ಲಿ ಅಟಲ್ ಪ್ರಯೋಗಾಲಯಗಳನ್ನು ಪ್ರಾರಂಭಿಸಿದೆ. ಈ  ಪ್ರಯೋಗಾಲಯಗಳು ಆಧುನಿಕ ತಂತ್ರಜ್ಞಾನ ಉಪಕರಣಗಳನ್ನು ಹೊಂದಿದ್ದು ಮಕ್ಕಳು ತಮ್ಮದೇ ಆದ ಆಲೋಚನೆಗಳ ಮೂಲಕ ಸಮಾಜದಲ್ಲಿ ಉಪಯೋಗವಾಗುವ ಅನೇಕ ವಸ್ತುಗಳನ್ನು ಕಂಡುಹಿಡಿಯಬಹುದು. ಹಾಗೂ INSPIRE AWARD ಕಾರ್ಯಕ್ರಮದ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮಗಳನ್ನು ಏರ್ಪಡಿಸಿ ಮಕ್ಕಳಲ್ಲಿ ಸಂಶೋಧನಾ ಹಾಗೂ ವೈಜ್ಞಾನಿಕ ಗುಣವನ್ನು ಬೆಳೆಸಲು ಪ್ರಯತ್ನಿಸಲಾಗುತ್ತಿದೆ. ರಾಷ್ಟ್ರದ ಎಲ್ಲಾ ಶಿಕ್ಷಕರಿಗೆ ವಿಜ್ಞಾನ ಮತ್ತು ಗಣಿತ ವಿಷಯಗಳಿಗೆ ಸಂಬಂಧಿಸಿದಂತೆ ಅನೇಕ ತರಬೇತಿ ಕಾರ್ಯಗಾರಗಳನ್ನು ಆಯೋಜಿಸಿ ಮಕ್ಕಳಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಕುತೂಹಲ ಹೆಚ್ಚಿಸಲು ತಳಮಟ್ಟದಲ್ಲಿ ಪ್ರಯತ್ನಿಸಲಾಗುತ್ತಿದೆ.

 2025 ರಿಂದ INSPIRE MANAK ಎಂಬ ಯೋಜನೆಯನ್ನು ಪ್ರಾರಂಭಿಸಿದ್ದು ಈ ಯೋಜನೆಯು 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ವಿಜ್ಞಾನ ಪ್ರಯೋಗಗಳ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಿ ಅವರಲ್ಲಿರುವ ಕೌಶಲ್ಯ ಹಾಗೂ ಜ್ಞಾನವನ್ನು ಅಭಿವೃದ್ಧಿಪಡಿಸುವುದಾಗಿದೆ.

ಮಹಿಳೆಯರನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲು" WISE- KIRAN " "ವಿಜ್ಞಾನ ಜ್ಯೋತಿ ಕಾರ್ಯಕ್ರಮ,"ಎಂಬ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ರಾಷ್ಟ್ರೀಯ ವಿಜ್ಞಾನ ದಿನದಂದು ಘೋಷ ವಾಕ್ಯಗಳೊಂದಿಗೆ ವಿಜ್ಞಾನ ದಿನವನ್ನು ಆಚರಿಸುವ ಪದ್ಧತಿಯು 1987ರಿಂದ ಜಾರಿಗೆ ಬಂದಿತು. ಯುವಕರಲ್ಲಿ ವಿಜ್ಞಾನದ ಕುರಿತು ಕುತೂಹಲ ಹಾಗು ಉತ್ಸಾಹವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮೊದಲ ಬಾರಿಗೆ ಪ್ರಯತ್ನ ಮಾಡಲಾಯಿತು. ಇಂದಿನ ಸಂಶೋಧನಾ ಪ್ರಯತ್ನಗಳು ಮುಂದಿನ ಉಜ್ವಲ ಭವಿಷ್ಯಕ್ಕೆ ಹಾಕಿದ ಅಡಿಪಾಯಗಳಾಗುತ್ತವೆ. ಭಾರತವು ಕೃತಕ ಬುದ್ಧಿ ಮತ್ತೆ ದ್ರೋಣ ಸೌರಶಕ್ತಿ ವಾಯು ಶಕ್ತಿಗಳ ಬಲವರ್ಧನೆಗೆ ಸತತ ಪ್ರಯತ್ನವನ್ನು ಮಾಡುತ್ತಿದೆ. 2047ರ ಹೊತ್ತಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ನಾಯಕತ್ವವನ್ನು ವಹಿಸಿಕೊಳ್ಳುವ ಪ್ರಯತ್ನದಲ್ಲಿದೆ.

 ಭಾರತವು IT  ಕ್ಷೇತ್ರಕ್ಕೆ ಸಂಬಂಧಿಸಿದಂತೆ NQM (NATIONAL QUANTUM MISSION) ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದು ಸುಮಾರು 6003.65 ಕೋಟಿ ಹಣವನ್ನು ನೀಡಿದ್ದು ಇದು ಅಭಿವೃದ್ಧಿಪಡಿಸಿದ ಚಿಪ್ ಗಳ ತಯಾರಿಕೆ ,ಇತರೆ ಸಾಫ್ಟ್ವೇರ್ ವಸ್ತುಗಳನ್ನ ತಯಾರಿಸಲು  ಸುಮಾರು 152 ಸಂಶೋಧನ ಕಾರರಿಗೆ ಸಹಾಯವನ್ನು ಒದಗಿಸುತ್ತದೆ ಒಟ್ಟಾರೆಯಾಗಿ ಹೀಗೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪ್ರಗತಿಯನ್ನು ಸಾಧಿಸಲು ಸಾಕಷ್ಟು ಪ್ರಯತ್ನವನ್ನು ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯವು ರಾಷ್ಟ್ರೀಯ ವಿಜ್ಞಾನ ದಿನದಂದು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ತುಂಬಲು ವಿಜ್ಞಾನ ಪ್ರತಿಜ್ಞಾ ಕಾರ್ಯಕ್ರಮವನ್ನು ಪ್ರತಿ ಶಾಲೆಗಳಲ್ಲೂ ಕೈಗೊಂಡಿದೆ.