ವಿಜ್ಞಾನ ಮತ್ತು ತಂತ್ರಜ್ಞಾನದ ಮಹತ್ವ....
ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲು ಸರ್ವತೋಮುಖ ಅಭಿವೃದ್ಧಿ ಹೊಂದಲು ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆ ಅಪಾರ. ವೈಜ್ಞಾನಿಕ ಮನೋಭಾವದಿಂದ ಮನುಷ್ಯನ ದೈನಂದಿನ ಬದುಕಿನಲ್ಲಿ ಮೌಢ್ಯತೆ ,ಕಂದಾಚಾರ ,ಮೂಡನಂಬಿಕೆ ಅಂತಹ ಅನಿಷ್ಟ ಪದ್ದತಿಗಳನ್ನು ತೆಗೆದುಹಾಕಲು ವಿಜ್ಞಾನ ಬೇಕು .ಈ ನಿಟ್ಟಿನಲ್ಲಿ ಜನರಿಗೆ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಒಂದು ವೇದಿಕೆಯನ್ನಾಗಿ ರೂಪಿಸುವ ಅವಶ್ಯಕತೆ ಇದೆ. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಇನ್ನಷ್ಟು ಪಸರಿಸಲು ಎಲ್ಲ ಸರ್ಕಾರಗಳು ಪ್ರಯತ್ನಿಸಬೇಕು. ರಾಷ್ಟ್ರಕವಿ ಕುವೆಂಪುರವರು ವಿಜ್ಞಾನ ಮತ್ತು ಮಾನವೀಯತೆ ಕುರಿತು ಹೇಳಿರುವ ಮಾತು ಇಂದಿಗೂ ಪ್ರಚಲಿತವಾಗಿದೆ "ವಿಜ್ಞಾನವು ಮನುಷ್ಯನ ಬುದ್ಧಿಯ ಕೊಡುಗೆ ಆದರೆ ಮಾನವೀಯತೆ ಅವನ ಹೃದಯದ ಕೊಡುಗೆ" ಎಂಬ ವಾಕ್ಯವನ್ನು ನಾವೆಲ್ಲರೂ ಸ್ಮರಿಸಿಕೊಳ್ಳುವ ಅಗತ್ಯವಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಮನುಷ್ಯನ ಜೀವನದ ಅವಿಭಾಜ್ಯ ಅಂಗ . ಜೀವ ರಕ್ಷಕ ಔಷಧಗಳನ್ನು ಕಂಡುಹಿಡಿದ ಮನುಷ್ಯನೇ ವಿನಾಶಕಾರಿ ಅಣು ಬಾಂಬನ್ನು ಕಂಡುಹಿಡಿದಿದ್ದಾನೆ ಎನ್ನುವುದು ವಿಪರ್ಯಾಸ. ಆದ್ದರಿಂದ ವಿಜ್ಞಾನದ ಸಂಶೋಧನೆಗಳು ಹೆಚ್ಚು ಮಾನವೀಯವೂ ಮಂಗಳಕರವೂ ಆಗಿರಬೇಕು. ಆಗ ಮಾತ್ರ ವಿಜ್ಞಾನದಿಂದ ವಿಕಾಸ ಸಾಧ್ಯ.
ಫೆಬ್ರವರಿ 28 ರಾಷ್ಟೀಯ ವಿಜ್ಞಾನ ದಿನ ಏಕೆ?
ಪ್ರತಿ ವರ್ಷ ಫೆಬ್ರವರಿ 28ನ್ನು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಯಾಗಿ ಆಚರಿಸಲಾಗುತ್ತದೆ ಕಾರಣ ಭಾರತದ ಖ್ಯಾತ ಭೌತಶಾಸ್ತ್ರಜ್ಞ ಸರ್ ಸಿವಿ ರಾಮನ್ ರವರು" ರಾಮನ್ ಎಫೆಕ್ಟ್ "ಕಂಡುಹಿಡಿದ ಸವಿನೆನಪಿಗಾಗಿ ಆಚರಿಸಲಾಗುತ್ತದೆ. ಸಿವಿ ರಾಮನ್ ರವರು ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಕೇಂದ್ರ ಕೊಲ್ಕತ್ತಾದಲ್ಲಿ ಕೆಲಸವನ್ನು ಮಾಡುತ್ತಾ 1930ರಲ್ಲಿ ಭೌತಶಾಸ್ತ್ರದ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿಗೆ ಭಾಜನರಾದರು.
2025 ರ ಘೋಷವಾಕ್ಯ
ಪ್ರತಿ ವರ್ಷವೂ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಘೋಷವಾಕ್ಯಗಳನ್ನು ಕೈಗೊಳ್ಳುತ್ತೇವೆ 2025ರ ಘೋಷವಾಕ್ಯ ವಿಜ್ಞಾನ ಮತ್ತು ಸಂಶೋಧನೆಯಲ್ಲಿ "ವಿಕಸಿತ ಭಾರತಕ್ಕಾಗಿ ಭಾರತೀಯ ಯುವಕರ ನಾಯಕತ್ವವನ್ನು ಜಾಗತಿಕ ಮಟ್ಟದಲ್ಲಿ ಉತ್ತೇಜಿಸುವುದು"ಎಂಬುದಾಗಿದೆ.
ಭಾರತವು ಜಾಗತಿಕ ಮಟ್ಟದಲ್ಲಿವಿಜ್ಞಾನ & ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿದೆ. 2024ರ ಸಮೀಕ್ಷೆಯ ಪ್ರಕಾರ ಭಾರತವು ಜಾಗತಿಕ ಸಂಶೋಧನೆಯಲ್ಲಿ 39ನೇ ಸ್ಥಾನದಲ್ಲಿದೆ ಹಾಗೂ ಜಾಗತಿಕ ಬುದ್ಧಿವಂತರ ಮಟ್ಟದಲ್ಲಿ (IP) ಆರನೇ ಸ್ಥಾನದಲ್ಲಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಕೈಗೊಂಡ ಕಾರ್ಯಕ್ರಮಗಳು...
ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಪ್ರೌಢಾವಸ್ಥೆಯಲ್ಲಿ ಮಕ್ಕಳಿಗೆ ಬೆಳೆಸಲು ಕೇಂದ್ರ ಸರ್ಕಾರವು ಹಲವಾರು ಪ್ರೌಢಶಾಲೆಗಳಲ್ಲಿ ಅಟಲ್ ಪ್ರಯೋಗಾಲಯಗಳನ್ನು ಪ್ರಾರಂಭಿಸಿದೆ. ಈ ಪ್ರಯೋಗಾಲಯಗಳು ಆಧುನಿಕ ತಂತ್ರಜ್ಞಾನ ಉಪಕರಣಗಳನ್ನು ಹೊಂದಿದ್ದು ಮಕ್ಕಳು ತಮ್ಮದೇ ಆದ ಆಲೋಚನೆಗಳ ಮೂಲಕ ಸಮಾಜದಲ್ಲಿ ಉಪಯೋಗವಾಗುವ ಅನೇಕ ವಸ್ತುಗಳನ್ನು ಕಂಡುಹಿಡಿಯಬಹುದು. ಹಾಗೂ INSPIRE AWARD ಕಾರ್ಯಕ್ರಮದ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮಗಳನ್ನು ಏರ್ಪಡಿಸಿ ಮಕ್ಕಳಲ್ಲಿ ಸಂಶೋಧನಾ ಹಾಗೂ ವೈಜ್ಞಾನಿಕ ಗುಣವನ್ನು ಬೆಳೆಸಲು ಪ್ರಯತ್ನಿಸಲಾಗುತ್ತಿದೆ. ರಾಷ್ಟ್ರದ ಎಲ್ಲಾ ಶಿಕ್ಷಕರಿಗೆ ವಿಜ್ಞಾನ ಮತ್ತು ಗಣಿತ ವಿಷಯಗಳಿಗೆ ಸಂಬಂಧಿಸಿದಂತೆ ಅನೇಕ ತರಬೇತಿ ಕಾರ್ಯಗಾರಗಳನ್ನು ಆಯೋಜಿಸಿ ಮಕ್ಕಳಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಕುತೂಹಲ ಹೆಚ್ಚಿಸಲು ತಳಮಟ್ಟದಲ್ಲಿ ಪ್ರಯತ್ನಿಸಲಾಗುತ್ತಿದೆ.
2025 ರಿಂದ INSPIRE MANAK ಎಂಬ ಯೋಜನೆಯನ್ನು ಪ್ರಾರಂಭಿಸಿದ್ದು ಈ ಯೋಜನೆಯು 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ವಿಜ್ಞಾನ ಪ್ರಯೋಗಗಳ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಿ ಅವರಲ್ಲಿರುವ ಕೌಶಲ್ಯ ಹಾಗೂ ಜ್ಞಾನವನ್ನು ಅಭಿವೃದ್ಧಿಪಡಿಸುವುದಾಗಿದೆ.
ಮಹಿಳೆಯರನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲು" WISE- KIRAN " "ವಿಜ್ಞಾನ ಜ್ಯೋತಿ ಕಾರ್ಯಕ್ರಮ,"ಎಂಬ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ರಾಷ್ಟ್ರೀಯ ವಿಜ್ಞಾನ ದಿನದಂದು ಘೋಷ ವಾಕ್ಯಗಳೊಂದಿಗೆ ವಿಜ್ಞಾನ ದಿನವನ್ನು ಆಚರಿಸುವ ಪದ್ಧತಿಯು 1987ರಿಂದ ಜಾರಿಗೆ ಬಂದಿತು. ಯುವಕರಲ್ಲಿ ವಿಜ್ಞಾನದ ಕುರಿತು ಕುತೂಹಲ ಹಾಗು ಉತ್ಸಾಹವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮೊದಲ ಬಾರಿಗೆ ಪ್ರಯತ್ನ ಮಾಡಲಾಯಿತು. ಇಂದಿನ ಸಂಶೋಧನಾ ಪ್ರಯತ್ನಗಳು ಮುಂದಿನ ಉಜ್ವಲ ಭವಿಷ್ಯಕ್ಕೆ ಹಾಕಿದ ಅಡಿಪಾಯಗಳಾಗುತ್ತವೆ. ಭಾರತವು ಕೃತಕ ಬುದ್ಧಿ ಮತ್ತೆ ದ್ರೋಣ ಸೌರಶಕ್ತಿ ವಾಯು ಶಕ್ತಿಗಳ ಬಲವರ್ಧನೆಗೆ ಸತತ ಪ್ರಯತ್ನವನ್ನು ಮಾಡುತ್ತಿದೆ. 2047ರ ಹೊತ್ತಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ನಾಯಕತ್ವವನ್ನು ವಹಿಸಿಕೊಳ್ಳುವ ಪ್ರಯತ್ನದಲ್ಲಿದೆ.
ಭಾರತವು IT ಕ್ಷೇತ್ರಕ್ಕೆ ಸಂಬಂಧಿಸಿದಂತೆ NQM (NATIONAL QUANTUM MISSION) ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದು ಸುಮಾರು 6003.65 ಕೋಟಿ ಹಣವನ್ನು ನೀಡಿದ್ದು ಇದು ಅಭಿವೃದ್ಧಿಪಡಿಸಿದ ಚಿಪ್ ಗಳ ತಯಾರಿಕೆ ,ಇತರೆ ಸಾಫ್ಟ್ವೇರ್ ವಸ್ತುಗಳನ್ನ ತಯಾರಿಸಲು ಸುಮಾರು 152 ಸಂಶೋಧನ ಕಾರರಿಗೆ ಸಹಾಯವನ್ನು ಒದಗಿಸುತ್ತದೆ ಒಟ್ಟಾರೆಯಾಗಿ ಹೀಗೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪ್ರಗತಿಯನ್ನು ಸಾಧಿಸಲು ಸಾಕಷ್ಟು ಪ್ರಯತ್ನವನ್ನು ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯವು ರಾಷ್ಟ್ರೀಯ ವಿಜ್ಞಾನ ದಿನದಂದು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ತುಂಬಲು ವಿಜ್ಞಾನ ಪ್ರತಿಜ್ಞಾ ಕಾರ್ಯಕ್ರಮವನ್ನು ಪ್ರತಿ ಶಾಲೆಗಳಲ್ಲೂ ಕೈಗೊಂಡಿದೆ.




No comments:
Post a Comment