ಕನ್ನಡ ಪುಸ್ತಕಮೇಳಗಳ ಅನಿವಾರ್ಯತೆ...
ಪುಸ್ತಕ ಮೇಳದಿಂದ ಪುಸ್ತಕಗಳನ್ನು ತೆಗೆದುಕೊಂಡು ಮನೆಯನ್ನು ಗ್ರಂಥಾಲಯವಾಗಿ ಮಾಡಿಕೊಳ್ಳುವುದು ನಮ್ಮ ಹವ್ಯಾಸವಾಗಬೇಕು ಇದು ಕನ್ನಡ ನಾಡು ನುಡಿಯ ಸೇವೆಯು ಹೌದು. ಇನ್ನು ಮುಂದೆ ಪ್ರತಿ ವರ್ಷವೂ ವಿಧಾನಸೌಧದಲ್ಲಿ ಪುಸ್ತಕ ಮೇಳವನ್ನು ಆಯೋಜಿಸಲಾಗುತ್ತದೆ.
ಫೆಬ್ರವರಿ 27ರಿಂದ ಮಾರ್ಚ್ 3ರವರೆಗೆ ಪುಸ್ತಕ ಮೇಳವು ನಡೆಯಲಿದ್ದು ಸುಮಾರು 175 ಪುಸ್ತಕ ಮಳಿಗೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಹಾಗೂ ಕವಿಗೋಷ್ಠಿ, ಸಂವಾದ , ಪುಸ್ತಕ ಬಿಡುಗಡೆ, ಚರ್ಚೆ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ವಿಧಾನಸೌಧ ಎಲ್ಲಾ ದ್ವಾರಗಳಿಂದ ಮುಕ್ತ ಪ್ರವೇಶ ನೀಡಲಾಗಿದೆ ಈ ಪುಸ್ತಕ ಮೇಳವು ಬೆಳಿಗ್ಗೆ 10 ಗಂಟೆಯಿಂದ ಸಂಜೆ 8 ಗಂಟೆಯವರೆಗೆ ಪ್ರತಿನಿತ್ಯ ಮಾರ್ಚ್ 3ರವರೆಗೆ ನಡೆಯಲಿದೆ.
ರಾಜ್ಯದ ಹಲವಾರು ಜಿಲ್ಲೆಗಳಿಂದ ಪುಸ್ತಕ ಮಳಿಗೆಗಳು ಇಲ್ಲಿಗೆ ಆಗಮಿಸಲಿವೆ. ಎಲ್ಲ ರೀತಿಯ ಪುಸ್ತಕಗಳು ಇಲ್ಲಿ ದೊರೆಯುತ್ತವೆ ಇಂತಹ ಪುಸ್ತಕ ಮೇಳದಲ್ಲಿ ಭಾಗವಹಿಸಿ ಪುಸ್ತಕವನ್ನು ಕೊಂಡು ಅವುಗಳನ್ನು ಓದುವುದರ ಮೂಲಕ ನಮ್ಮ ಹವ್ಯಾಸವನ್ನು ಹೆಚ್ಚಿಸಿಕೊಂಡು ತನ್ಮೂಲಕ ನಾಡು ನುಡಿಯ ಸೇವೆ ಮಾಡಬೇಕು. ಕಾರ್ಯಕ್ರಮವನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶ್ರೀ ಚಂದ್ರಶೇಖರ್ ಕಂಬಾರ್ ಅವರು ಹಾಗೂ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಉದ್ಘಾಟಿಸಿದರು.
ದೇಶ ಸುತ್ತು ಕೋಶ ಓದು ಎಂಬ ನಾಣ್ನುಡಿ ಯಂತೆ ಪ್ರತಿಯೊಬ್ಬರಲ್ಲೂ ಜ್ಞಾನವಿಕಾಸವಾಗಬೇಕು ಪುಸ್ತಕಗಳ ಓದುವಿಕೆಯಿಂದ ಜ್ಞಾನವಿಕಸವಾಗುವುದರ ಜೊತೆಗೆ ಓದುಗರನ್ನು ನಾಗರೀಕರನ್ನಾಗಿಸುತ್ತದೆ, ಕೇವಲ ಓದಿ ವಿದ್ಯಾವಂತರಾದರೆ ಸಾಲದು ಮನುಷ್ಯರಾಗಬೇಕು ನಾವು ಮನುಷ್ಯರಾಗಿ ರೂಪಗೊಳ್ಳುವುದಕ್ಕೆ ಪುಸ್ತಕಗಳು ಒಳ್ಳೆಯ ಮಿತ್ರರಾಗಿ ಸಹಕರಿಸುತ್ತವೆ. ಹಾಗೆಯೇ ಕಳೆದ ಮೂರು ನಾಲ್ಕು ವರ್ಷಗಳಿಂದ ಕನ್ನಡದ ಪ್ರಕಾಶಕರು ತೊಂದರೆಯಲ್ಲಿದ್ದು ಅಶಕ್ತರಾಗಿದ್ದಾರೆ ಕನ್ನಡ ಪುಸ್ತಕಗಳು ಹೆಚ್ಚು ಹೆಚ್ಚು ಮಾರಾಟವಾದರೆ ಕನ್ನಡದ ಬೆಳವಣಿಗೆ ಸಾಧ್ಯ ಆದರೆ ಸರ್ಕಾರ ಕಳೆದ ನಾಲ್ಕು ವರ್ಷಗಳಿಂದಲೂ ಕನ್ನಡ ಪುಸ್ತಕಗಳನ್ನು ಖರೀದಿಸುತ್ತಿಲ್ಲ 2020 ರಿಂದ ಪುಸ್ತಕಗಳ ಖರೀದಿಯಾಗಿಲ್ಲ ಸರ್ಕಾರ ಈಗಲಾದರೂ ಎಚ್ಚೆತ್ತು ಅಶಕ್ತ ಪ್ರಕಾಶಕರ ನೆರವಿಗೆ ಧಾವಿಸಿ ಕನ್ನಡ ಸಾಹಿತ್ಯ ಪರಂಪರೆಯನ್ನು ಉಳಿಸಬೇಕಾಗಿದೆ.
ಇಂದು ಕನ್ನಡಿಗರ ಮೇಲೆ ಹಲವಾರು ಭಾಷೆಗಳ ಏರಿಕೆಯಾಗುತ್ತಿದೆ ನಮ್ಮ ರಾಜ್ಯವು ಭಾಷಾವಾರು ಪ್ರಾಂತ್ಯದ ಮೇಲೆ ಅಸ್ತಿತ್ವಕ್ಕೆ ಬಂದಿದೆ ಎಂಬುದನ್ನು ಮರೆಯಬಾರದು ನಮ್ಮ ಅಸ್ಮಿತೆ ಇರುವುದು ನಮ್ಮ ಭಾಷೆಯಲ್ಲಿ ಇತ್ತೀಚಿಗೆ ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ವರದಿ ಪ್ರಚಲಿತದಲ್ಲಿದೆ ಕನ್ನಡನಾಡಿನಲ್ಲಿ ಕನ್ನಡಿಗರೇ ಕಡಿಮೆಯಾದರೆ ಮುಂದಿನ ಪರಿಸ್ಥಿತಿಯನ್ನು ನೋಯಿಸಲು ಸಾಧ್ಯವಿಲ್ಲ ಆದ್ದರಿಂದ ನಾವೆಲ್ಲರೂ ಎಚ್ಚೆತ್ತು ಕನ್ನಡ ನೆಲ ಜಲ ಭಾಷೆಯನ್ನು ಉಳಿಸಬೇಕಾದ ಅನಿವಾರ್ಯತೆಯಲ್ಲಿದ್ದೇವೆ .
ಪ್ರತಿನಿತ್ಯ ಮಲಗುವ ಮುನ್ನ 30 ನಿಮಿಷಗಳ ಕಾಲ ಪುಸ್ತಕ ಓದುವುದು ಹಾಗೂ ಬೆಳಿಗ್ಗೆ ಎದ್ದ ನಂತರ 30 ನಿಮಿಷಗಳ ಕಾಲ ಪುಸ್ತಕ ಓದುವ ಹವ್ಯಾಸವನ್ನು ರೂಡಿಸಿಕೊಂಡರೆ ನಮ್ಮಲ್ಲಿನ ಮೆದುಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತದೆ.
ಜೈ ಕನ್ನಡ....

No comments:
Post a Comment