ಫೆ-10 ರಂದು ಪ್ರಧಾನಿ ಮೋದಿಯವರಿಂದ ಪರೀಕ್ಷೆ ಪೇ ಚರ್ಚಾ ...ಎಲ್ಲಿ ವೀಕ್ಷಣೆ ಮಾಡಬಹುದು?


 ದಿನಾಂಕ ಫೆ-10 ರಿಂದ ದೇಶದ್ಯಾಂತ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪರೀಕ್ಷೆ ಪೇ ಚರ್ಚಾ ಕಾರ್ಯಕ್ರಮ

ನಡೆಯಲಿದೆ. ಫೆಬ್ರವರಿ ತಿಂಗಳಿನಿಂದ  ರಾಷ್ಟ್ರದಲ್ಲಿ  ಪರೀಕ್ಷೆಗಳು ಪ್ರಾರಂಭ ಆಗಲಿವೆ ಈ 

ನಿಟ್ಟಿನಲ್ಲಿ ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ಪೇ ಚರ್ಚಾ ನಡೆಸಲಿದ್ದಾರೆ ವಿವಿಧ ವಿಷಯಗಳಲ್ಲಿ ಅವರ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ

ಇದು ಅವರ 8ನೇ ಆವೃತ್ತಿಯಾಗಿದ್ದು ಫೆ-10 ರಂದು ಬೆಳಿಗ್ಗೆ -11.00 ಕ್ಕೆ ಶುರುವಾಗಲಿದೆ ವಿದ್ಯಾರ್ಥಿಗಳಲ್ಲಿರುವ  ಪರೀಕ್ಷೆಯ ಒತ್ತಡವನ್ನು ಕಡಿಮೆ ಮಾಡುವುದರ ಕುರಿತು ಹಾಗು ಮಕ್ಕಳಲ್ಲಿರುವ ಪರೀಕ್ಷೆಯ ಸಂದೇಹಗಳನ್ನು ಪರಿಹರಿಸುವುದರ ಮೂಲಕ ಸಮಾಲೋಚನೆ ಮಾಡಲಿದ್ದರೆ 

ಮಾನ್ಯ ಪ್ರಧಾನಮಂತ್ರಿಗಳ ಈ ಸಂವಾದವು ಡಿಡಿ ದೂರದರ್ಶನ,ಅಲ್‌ ಇಂಡಿಯಾ ರೇಡಿಯೋ, ಎಫ್‌,ಎಮ್‌ ರೇಡಿಯೋ,ಇದರೊಂದಿಗೆ PMO, MoE,ಮತ್ತು  my govt.in ವೆಬ್ ಸೈಟ್ ಗಳಲ್ಲಿ ನೇರ ಪ್ರಸಾರವಾಗಲಿದೆ ಹಾಗೂ ವಿವಿದ youtube ಚಾನಲ್ ಗಳಲ್ಲಿ ಪ್ರಸಾರೆವಾಗಲಿದೆ ಇದು ಇತರೆ ಭಾರತೀಯ ಪ್ರಮುಖ ಭಾಷೆಗಳಲ್ಲಿ ಪ್ರಸಾರವಾಗಲಿದೆ

ಶಾಲೆಗಳಲ್ಲಿ ಮಕ್ಕಳು ವೀಕ್ಷಿಸಲು ಕೈಗೊಳ್ಳಬೇಕಾದ ಕ್ರಮಗಳು

1) ಎಲ್ಲಾ ಶಾಲೆಗಳಲ್ಲಿ ಮಕ್ಕಳು ಕಾರ್ಯಕ್ರಮ ವೀಕ್ಷಿಸಲು ಆಸನ ವ್ಯವಸ್ಥೆ ಮಾಡುವುದು.

2) ಶಾಲೆಗಳಲ್ಲಿ ವಿದ್ಯುತ್ಸಂಪರ್ಕ, ಅಂತರ್ಜಾಲದ ವ್ಯವಸ್ಥೆ ಮಾಡುವುದು

3) TV, LAPTOP, ಇಲ್ಲದೇ ಇರುವ ಸಂಧರ್ಭದಲ್ಲಿ ರೇಡಿಯೋ ವ್ಯವಸ್ಥೆ ಮಾಡುವುದು.


No comments:

Post a Comment