ಈ ನಿಟ್ಟಿನಲ್ಲಿ ಕರ್ನಾಟಕಕ್ಕೆ ಎಷ್ಟು ಪ್ರಮಾಣದಲ್ಲಿ ಉದ್ಯೋಗ ಹಾಗು ತೆರಿಗೆ ಸಂಗ್ರಹಣೆಗೆ ಅನೂಕುಲವಾಗಬಹುದು ಎಂಬುದನ್ನು ಕಾದು ನೋಡಬೇಕಿದೆ ಇಲ್ಲಿನ ಜನರಿಗೆ ಹೊಸ ಉದ್ಯೋಗ ಅವಕಾಶಗಳು ಮತ್ತು ನಾಡಿಗೆ ಜಾಗತಿಕ ಪಾಲೂದಾರಿಕೆ ಪಡೆದ ಕೀರ್ತಿ ದೊರೆಯಲಿದೆ
ಫೆ-14 ರವರೆಗೆ ನಡೆಯಲಿರುವ ಈ ಸಮಾವೇಶಕ್ಕೆ ರಕ್ಷಣ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಲಿದ್ದಾರೆ
ಈಗಾಗಲೇ ಬಲ್ಡೋಟಾ ಕಂಪನಿಯು 54,000 ಕೋಟಿಯನ್ನು ಕೊಪ್ಪಳದಲ್ಲಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ತೆರೆಯುತ್ತೇವೆ ಎಂದು ಘೋಷಣೆ ಮಾಡುವುದರ ಮೂಲಕ ಸಮಾವೇಶಕ್ಕೆ ಭರ್ಜರಿ ಚಾಲನೆ ನೀಡಿದೆ.
ಈ ಸಮಾವೇಶವು ರಾಜ್ಯದಲ್ಲಿ ಒಟ್ಟರೆಯಾಗಿ ಹತ್ತು ಲಕ್ಷ ಕೋಟಿ ಹೂಡಿಯಾಗುವ ನೀರೀಕ್ಷೆಯನ್ನು ಉಂಟುಮಾಡಿದೆ .ಈ ಮೂಲಕ ತೆರಿಗೆ ಸಂಗ್ರಹಣೆ ಹಾಗೂ ಸುಮಾರು 15,000 ಹೊಸ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿದೆ .
ಯಾವುದೇ ರಾಜ್ಯದಲ್ಲಿ ಉದ್ಯಮಗಳು ಹೆಚ್ಚು ನೆಲಸಿದಾಗ ಅಲ್ಲಿ ಹಣದ ಒಳ ಹರಿವು ಉಂಟಾಗಿ ಆರ್ಥಿಕ ಸಮಾನತೆ ದೊರೆಯಲು ಸಹಕಾರಿಯಾಗುತ್ತದೆ,ಜನರು ತಮ್ಮ ಕುಟುಂಬವನ್ನು ಪೋಷಿಸಲು ,ಒಳ್ಳೆ ಗುಣಮಟ್ಟದ ಜೀವನ ನಿರ್ವಹಣೆ ಮಾಡಲು ಸಹಕಾರಿಯಾಗುತ್ತದೆ. ಅಲ್ಲದೇ ಆ ರಾಜ್ಯವು ಅರ್ಥಿಕವಾಗಿ ಪ್ರಗತಿ ಕಾಣುತ್ತದೆ ಇಂದಿನ ಆಧುನಿಕ ಯುಗದ ತಂತ್ರಙ್ಞನ ವು ಕೈಗಾರಿಕಣದಲ್ಲಿ ಹೇಗೆ ಉಪಯೋಗವಾಗುತ್ತಿದೆ ಎಂಬುದನ್ನು ತಿಳಿಯಲು ಅಲ್ಲಿ ನೆಲಸಿರುವ ಜನರಿಗೆ ಸಹಕಾರಿಯಗುತ್ತದೆ.
ಕೈಗಾರಿಕರಣವು ದೇಶದ ಬೆಳವಣಿಗೆಗೆ ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ ,ಜನರ ಜೀವನವು ಸುಲಭ ಗೊಳ್ಳುತ್ತದೆ ಹಾಗು ನಾಗರೀಕತೆಯ ಕಡೆಗೆ ಮಾನವ ಸಮೂಹ ಸಾಗುತ್ತದೆ .ಶಿಕ್ಷಣ,ಆರೋಗ್ಯ,ಅರ್ಥಿಕತೆ,ನಾಗರಿಕತೆ,ಮುಂತಾದ ವಿಷಯಗಳ ಕುರಿತು ತಿಳುವಳಿಕೆ ಜನರಲ್ಲಿ ಮೂಡಿಸುತ್ತದೆ.

No comments:
Post a Comment