ಇನ್ವೆಸ್ಟ್‌ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶ - 2025 ,ಮೊದಲ ದಿನ ಕರ್ನಾಟಕಕ್ಕೆ ಆದ ಹೂಡಿಕೆ ಎಷ್ಟು?

 ಕರ್ನಾಟಕವು  ಜಾಗತಿಕ ಹೂಡಿಕೆದಾರರ ಅಚ್ಚು ಮೆಚ್ಚಿನ ಸ್ಥಳ ಎನ್ನುವುದು ಮತ್ತೋಮ್ಮೆ ಸಾಬಿತಾಗಿದೆ  

   ಕರ್ನಾಟಕವು ಜಗತ್ತಿನಲ್ಲಿ 4 ನೇ ಅತಿದೊಡ್ಡ ತಂತ್ರಙ್ಞನ ಬೆಳವಣಿಗೆಯ ರಾಜ್ಯವಾಗಿದೆ ಹಾಗೂ  4ನೇ ಅತಿದೊಡ್ಡ ಆಟೋಮೊಬೈಲ್‌ ತಯಾರಿಕಾ ರಾಜ್ಯವಾಗಿದೆ. ಭಾರತದ ಅತಿ ಹೆಚ್ಚು ಪ್ರವಾಸಿ ತಾಣಗಳನ್ನು ಹೊಂದಿರುವ ರಾಜ್ಯವು ಹೌದು, ಹೀಗೆ ಹಲವು ವಿಷಯಗಳಲ್ಲಿ ತನ್ನ ಛಾಪನ್ನು ಹೊಂದಿರುವುದರಿಂದ ಇಲ್ಲಿ ಹೂಡಿಕೆ ಮಾಡಲು ಹಲವು ಕಂಪನಿಗಳು ಅಸಕ್ತಿ ತೋರುತ್ತವೆ

ಮೊದಲ ದಿನದ ಹೂಡಿಕೆ ಸಮಾವೇಶದಲ್ಲಿ  ರಾಜ್ಯಕ್ಕೆ 5 ಲಕ್ಷ ಕೋಟಿ ಹೂಡಿಕೆಯಾಗಿದೆ  ಒಟ್ಟಾರೆಯಾಗಿ ಸಮಾವೇಶದಲ್ಲಿ 10 ಲಕ್ಷ ಕೋಟಿ ಬಂಡವಾಳ ಹೂಡಿಕೆಯ ನಿರೀಕ್ಷೆಯನ್ನು ರಾಜ್ಯ ಸರ್ಕಾರ ಮಾಡಿದೆ  ಸರ್ಕಾರವು ಹೂಡಿಕೆದಾರರ ಅನೂಕೂಲಕ್ಕಾಗಿ  ಹೊಸ ಉದ್ಯಮಗಳನ್ನು ಸೃಷ್ಠಿಸುವವರಿಗೆ  new industrial policy 2025-2030  ಎಂಬ ಹೊಸ ಕೈಗಾರಿಕಾ ನೀತಿಯನ್ನು ಜಾರಿಗೆ ತಂದಿದೆ. ಇದರಿಂದಾಗಿ  2030 ರ ವೇಳೆಗೆ  7.5 ಲಕ್ಷ ಕೋಟಿ ಹೂಡಿಕೆಯಾಗಬಹುದು ಹಾಗೂ ರಾಜ್ಯದಲ್ಲಿ ಶೇಕಡಾ 12 ರಷ್ಟು ಕೈಗಾರಕಾ ಬೆಳವಣಿಗೆಯನ್ನು ಕಾಣಬಹುದು ಎಂದು ಅಂದಾಜಿಸಲಾಗಿದೆ ಹಾಗಾಗಿ 
ರಾಜ್ಯಕ್ಕೆ ಹೆಚ್ಚು ಕೈಗಾರಿಕೆಗಳು ಆಗಮಿಸುವ ನಿರೀಕ್ಷೆ ಇದೆ.

ಈ ಸಮಾವೇಶದಲ್ಲಿ 18 ದೇಶಗಳು, ಸುಮಾರು 5000 ಕ್ಕೂ ಹೆಚ್ಚು ಪ್ರತಿನಿಧಿಗಳು, 100ಕ್ಕೂ ಹೆಚ್ಚು ಕೈಗಾರಿಕಾ ಚಿಂತಕರು ಭಾಗಿಯಾಗಲಿದ್ದಾರೆ ಸರ್ಕಾರದ ಮಹತ್ವಾಕಾಂಕ್ಷೆKWIN CITY ಯೋಜನೆಗೆ ಚಾಲನೆ ಸಿಗಲಿದೆ ಈ ಯೋಜನೆಗಾಗಿ ಬೆಂಗಳೂರಿನ ಹೊರ ವಲಯದಲ್ಲಿ 2000 ಎಕರೆ ಭೂಮಿಯನ್ನು ಗುರುತಿಸಲಾಗಿದೆ ಹಾಗು ಸುಮಾರು 40,000 ಕೋಟಿ ಹೂಡಿಕೆಯ ನೀರೀಕ್ಷೆ ಮಾಡಲಾಗಿದೆ ಇದರಿಂದ ಸುಮಾರು 80,000 ಸಾವಿರ ಉದ್ಯೋಗ ಸೃಷ್ಟಿಯ ನಿರೀಕ್ಷೆ ಮಾಡಲಾಗಿದೆ

ಮೊದಲ ದಿನದ ಸಮಾವೇಶದಲ್ಲಿ ಹೂಡಿಕೆಯಾಗಿದ್ದೆಷ್ಟು....

2025 ರ ಹೂಡಿಕೆಯ ಸಮಾವೇಶಕ್ಕೆ ಭರ್ಜರಿ ಪ್ರತಿಕ್ರಿಯೆ ದೊರೆತಿದೆ ಹಲವು ಕಂಪನಿಗಳು ಹಲವು ಕ್ಷೇತ್ರಗಳಲ್ಲಿ ಮಹತ್ವದ ಹೂಡಿಕೆ ಮಾಡಿವೆ.

ಹೂಡಿಕೆ ಮಾಡಿದ ಕಂಪನಿಗಳು ಈ ಕೆಳಗಿನಂತಿವೆ

JSW NEO ENERGY-56,000 CR

JSW CEMENT AND STEEL - 43,900  CR

TATA [POWER RENEWABLE - 50,000 CR

MAHINDRA SUSTEN - 35,000 CR

LAN RESEARCH - 10,000 CR 

ಮುಂದುವರೆದು 3.43 ಲಕ್ಷ ಕೋಟಿ ಗ್ರೀನ್‌ ಎನರ್ಜಿಯ ಮೇಲೆ ಕಂಪನಿಗಳು ಹೂಡಿಕೆ ಮಾಡಬಹುದು ಎಂದು ಅಂದಾಜಿಸಲಾಗಿದೆ ವಿಮಾನಯಾನ,ಆಟೋಮೊಬೈಲ್‌, ರೋಬೊಟಿಕ್‌ ತಂತ್ರಙ್ಞನ, ಹಲವು ಕ್ಷೇತ್ರಗಳಲ್ಲಿ  ಮುಂದಿನ ದಿನಗಳಲ್ಲಿ ಹೂಡಿಕೆಯನ್ನು ನೀರಿಕ್ಷೆ ಮಾಡಬಹುದಾಗಿದೆ.

ಒಟ್ಟಾರೆಯಾಗಿ  ಮುಂದಿನ ದಿನಗಳಲ್ಲಿ ಜನರಿಗೆ ಉದ್ಯೋಗಗಳು ಖಾಸಗಿ ಕ್ಷೇತ್ರದಲ್ಲಿ ಸಿಗಲಿವೆ ಹಾಗೂ ರಾಜ್ಯ ಸರ್ಕಾರಕ್ಕೆ ಬರುವ ತೆರಿಗೆಯಿಂದಾಗಿ ರಾಜ್ಯದ ಅಭಿವೃದ್ದಿ ಮಾಡಲೂ ಸಹಕಾರಿಯಾಗುತ್ತದೆ.




No comments:

Post a Comment