ವಿವಿಧ ಹುದ್ದೆಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಿರುವವರು ಹಾಗೂ ತಮ್ಮ ವಾರ್ಷಿಕ ಪರೀಕ್ಷೆಗಳಿಗಾಗಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ತಾವು ಓದಿದ್ದನ್ನು ಪರಿಣಾಮಕಾರಿಯಾಗಿ ನೆನಪಿಟ್ಟುಕೊಳ್ಳಲು ಈ ಕೆಳಗಿನ ನಿಯಮಗಳನ್ನು ಪಾಲಿಸಿ
1) ನಾವು ಓದಬೇಕಾಗಿರುವುದನ್ನು ಬರವಣಿಗೆಯಲ್ಲಿ ನೋಟ್ ಮಾಡಿಕೊಳ್ಳಬೇಕು.
ಬರೆಯುತ್ತಾ ಓದುವುದು ಬಹಳ ಪರಿಣಾಮಕಾರಿಯಾದ ವಿಧಾನವಾಗಿದೆ. ಕಾರಣ ನಾವು ಬರೆಯುತ್ತಿರುವಾಗ ನಮ್ಮ ಕೈಗಳು ಹಾಗೂ ದೇಹವು ಕ್ರಿಯಾಶೀಲತೆಯಿಂದ ಕೂಡಿರುತ್ತವೆ. ಹಾಗೂ ನಮ್ಮ ಮೆದುಳು, ದೇಹ ಎರಡು ಕೂಡ ಕಾರ್ಯಪ್ರವೃತ್ತವಾಗಿರುತ್ತವೆ. ನಾವು ಭಾವನತ್ಮಕವಾಗಿ ಕಲಿಯುವಿಕೆಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗುತ್ತದೆ* ಇದು ನಮ್ಮನ್ನು ಹೊರಗಿನ ವಿಚಾರದಿಂದ ದೂರ ಇಡುವಲ್ಲಿ ಹಾಗೂ ನಮ್ಮನ್ನು ನಾವು ಕೆಲಸಗಳಲ್ಲಿ ತೊಡಗಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ *ಇದು ನಮ್ಮ ಮೆದುಳನ್ನು ಕ್ರಿಯಾಶೀಲವಾಗಿಡುತ್ತದೆ ಇದು ನಮ್ಮ ಬರವಣಿಗೆ ವೃದ್ಧಿಸುವಲ್ಲಿ ಸಹಾಯ ಮಾಡುತ್ತದೆ *ನಾವು ಬರೆಯುತ್ತಿರುವ ಮಾಹಿತಿಯನ್ನು ನಿಖರವಾಗಿ ಅರ್ಥ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ*
2) ವಿಚಾರ ಘೋಷ್ಠಿಗಳಲ್ಲಿ ಭಾಗವಹಿಸುವುದು
ಘೋಷ್ಠಿಗಳಲ್ಲಿ ಭಾಗವಹಿಸುವುದು ನಮ್ಮಲ್ಲಿ ಸ್ವತಂತ್ರವಾಗಿ ಆಲೋಚನೆ ಮಾಡುವ ಶಕ್ತಿಯನ್ನು ನೀಡುತ್ತದೆ .
ವಿಮರ್ಶೆ& ತರ್ಕ ಮಾಡುವ ಮನೋಭಾವವನ್ನು ಬೆಳೆಸುತ್ತದೆ. ಮಾತನಾಡುವ,ಆಲಿಸುವ ಕೌಶಲವನ್ನು ಬೆಳೆಸುತ್ತದೆ.
3) ಇತರರಿಗೆ ಕಲಿಸುವ ಮುಖಾಂತರ ಕಲಿಯುವುದು.
ನಾವು ಕಲಿತಿರುವುದನ್ನು ಇತರರಿಗೆ ತಿಳಿಸುವುದು ನಮ್ಮಲ್ಲಿ ವಿಶ್ವಾಸವನ್ನು ತುಂಬುತ್ತದೆ. ಒಂದು ಅಧ್ಯಯಾನದ ಪ್ರಕಾರ ನಮ್ಮಲ್ಲಿರುವ ವಿಚಾರ ಧಾರೆಗಳನ್ನು ಮತ್ತೊಬ್ಬರಿಗೆ ತಿಳಿಸಿದಾಗ ನಮ್ಮ ಕಲಿಕೆಯು ಗರಿಷ್ಟ ಮಟ್ಟದಲ್ಲಿರುತ್ತದೆ .ಹಾಗಾಗಿ ನಿಮ್ಮಲ್ಲಿರುವ ವಿಚಾರಗಳನ್ನು ಹಂಚಿಕೊಳ್ಳಿ ಅದು ಒಳ್ಳೆಯ ವಿಚಾರವಾಗಿರಲಿ .
4) ಪ್ರಯೊಗಾತ್ಮಕವಾಗಿ ಕಲಿಯಲೂ ಪ್ರಯತ್ನಿಸಿ.
ಕಲಿಕೆಗಳಲ್ಲಿ ನಮ್ಮನ್ನು ನಾವು ಪ್ರಯೋಗಗಳಿಗೆ ಒಡ್ಡಿ ಕೊಳ್ಳುವುದು ಬಹುಮುಖ್ಯ ಒಂದು ವಿಷಯವನ್ನು ಎಷ್ಠು ಅವಧಿಗಳಲ್ಲಿ ಕಲಿಯಬಲ್ಲೆ ಎಂಬುದನ್ನು ನಮಗೆ ನಾವೇ ಅನ್ವಯಿಸಿ ಕೊಂಡಾಗ ನಮ್ಮಲ್ಲಿನ ಸಾಮಾರ್ಥದ ಅರಿವಾಗುತ್ತದೆ. ನಿಮಗೆ ನೀವೆ ಕಲಿಯುವಿಕೆಯ ಸವಾಲುಗಳನ್ನು ಹಾಕಿಕೊಳ್ಳಿ . ಒಂದು ವಿಷಯದ ಕುರಿತಾಗಿ ನನ್ನ ಏಕಗ್ರತೆ ಎಷ್ಠು ಎಂದು ತಿಳಿದುಕೊಳ್ಳಿ. ಕಲಿಯುವಿಕೆಗೆ ಸಂಬದಿಸಿಂದಂತೆ ಯೋಜನೆಗಳನ್ನು ಹಾಕಿಕೊಳ್ಳಿ. ನಿಮಗೆ ನೀವೆ ನಿಮ್ಮ ಗುರಿ ಉದ್ದೇಶಗಳ ಮೇಲೆ ಪ್ರಶ್ನೆಗಳನ್ನು ಹಾಕಿಕೊಳ್ಳಿ. ನೀವು ಕಲಿತಿರುವ ವಿಷಯದ ಕುರಿತು ಪರೀಕ್ಷೆಗಳನ್ನು ಬರೆಯಿರಿ. ಒಳ್ಳೆಯ ವಿಚಾರಗಳು ಯಾರಿಂದಲೇ ಆಗಿರಲಿ ಕಲಿಯಲು ಹಿಂಜರಿಯ ಬೇಡಿ ನಿಮ್ಮದೆ ಆದ ರೀತಿಯಲ್ಲಿ ನಿಮ್ಮ ಕಲಿಕೆಯ ಪಯಣ ಸಾಗಲಿ. ನಿಮ್ಮ ಹಾಗೇಯೆ ಗುರಿ ಉದ್ದೇಶಗಳನ್ನು ಹೊಂದಿರುವ ವ್ಯಕ್ತಿಗಳನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಿ. ಎಲ್ಲದಕ್ಕಿಂತ ಮುಖ್ಯವಾಗಿ ನಿಮ್ಮ ಆರೋಗ್ಯ ಹಾಗು ನೆಮ್ಮದಿಯನ್ನು ಕಾಪಡಿಕೊಳ್ಳಿ .

No comments:
Post a Comment