ಉತ್ತಮ ಅಭ್ಯಾಸಗಳಿಂದ ಜೀವನ ಬದಲಿಸಿಕೊಳ್ಳುವುದು ಹೇಗೆ.......



ಆರೋಗ್ಯಕರ ಅಭ್ಯಾಸಗಳಂದ ಜೀವನ ಬದಲಿಸಿಕೊಳ್ಳಬಹುದು.

 ಯಶಸ್ಸು ಜೀವನದಲ್ಲಿ ನಮಗೆ ಹೊರಗಡೆಯಿಂದ ಬರುವುದಿಲ್ಲ ಅದು ನಮ್ಮ ಅಭ್ಯಾಸಗಳ ಮುಖಾಂತರ ನಮ್ಮಲ್ಲಿಯೇ ಬೆಳೆಯುತ್ತಾ ಹೋಗುತ್ತದೆ ನಮ್ಮ ಸಾಮರ್ಥ್ಯವಾದರೂ , ದೌರ್ಬಲ್ಯವಾದರೂ,  ಎಲ್ಲವೂ ನಮ್ಮ ದಿನನಿತ್ಯದ ಅಭ್ಯಾಸಗಳಿಂದಲೇ ಉಂಟಾಗುತ್ತದೆ. ಆಕಾಶದಲ್ಲಿ ಹಾರಾಡುವ ಹಕ್ಕಿಯ ರೆಕ್ಕೆಗಳಂತೆ ನಮ್ಮನ್ನು ಎತ್ತರಕ್ಕೆ ಕೊಂಡಯುತ್ತವೆ ಅದು ಯಾವ ರೂಪದಲ್ಲಾದರೂ ಸರಿ ಸಮಾಜದಲ್ಲಿ ಗೌರವ ,ಪ್ರೀತಿ ,ಹಾಗೂ ಸುಖವಾಗಿ ಜೀವಿಸಲು ಬೇಕಾದ ಎಲ್ಲಾ ಅವಕಾಶಗಳನ್ನು ಒದಗಿಸುತ್ತದೆ .ಕಟ್ಟ ಅಭ್ಯಾಸಗಳು ಕಾಲಿಗೆ ಕಟ್ಟಿದ ಕಬ್ಬಿಣದ ಸರಪಳಿಯಂತೆ ನಮ್ಮನ್ನು ಬೆಳವಣಿಗೆಯತ್ತ ಮುಂದೆ ಹೋಗಲು ಬಿಡುವುದಿಲ್ಲ ನಮ್ಮನ್ನು ಎಲ್ಲಾ ರೀತಿಯ ಬೆಳವಣಿಗೆಯಿಂದ ನಿರ್ಬಂಧಿಸುತ್ತವೆ ನಮ್ಮ ಜೀವನದಲ್ಲಿ ನಾವು ಎತ್ತರಕ್ಕೆ ಬೆಳೆದರೂ ಅಥವಾ ಬೆಳೆಯದೆ ಇದ್ದರೂ ಅದು ಸಾಮಾಜಿಕವಾಗಿ , ಆರ್ಥಿಕವಾಗಿಯಾದರೂ, ಶೈಕ್ಷಣಿಕವಾಗಿ ಆದರೂ ಸಾಂಸ್ಕೃತಿಕವಾಗಿಯಾದರೂ ,ಯಾವುದೇ ಬೆಳವಣಿಗೆ ಆದರೂ ಈ ಎಲ್ಲದಕ್ಕೂ ಕಾರಣ ನಮ್ಮ ದೈನಂದಿನ ಅಭ್ಯಾಸಗಳೇ ಆಗಿದೆ.

ನಮ್ಮ ದೈನಂದಿನ ಅಭ್ಯಾಸಗಳು ನಮ್ಮನ್ನು ಒಳ್ಳೆಯ ಆರೋಗ್ಯವುಳ್ಳ ಅಥವಾ ಕೌಶಲ್ಯವುಳ್ಳ ವ್ಯಕ್ತಿಯಾಗಿ ರೂಪಿಸಬಲ್ಲವೂ ನಾವು ಒಳ್ಳೆಯ ದೈನಂದಿನ ಅಭ್ಯಾಸಗಳನ್ನು ಬೆಳೆಸಿಕೊಳ್ಳದಿದ್ದರೆ ಅದೇ ರೀತಿಯಾಗಿ ನಾವು ಅನಾರೋಗ್ಯ ಕ್ಕೆ ಗುರಿಯಾಗಬಹುದು. ಯಾವುದೇ ಚಟುವಟಿಕೆಗಳನ್ನು ಮಾಡದೇ ಇರುವಂತಹ ದುರ್ಬಲ ವ್ಯಕ್ತಿಯು ಆಗಬಹುದು, ಹಾಗಾದರೆ ನಾವು ಉತ್ತಮ ಬೆಳವಣಿಗೆಯತ್ತ  ಸಾಗಲು ಸಮಾಜದಲ್ಲಿ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಏನೆಲ್ಲ ದಿನನಿತ್ಯದ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂಬುದನ್ನು ನೋಡೋಣ.

ನಾವು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕೆಂದರೆ ದಿನನಿತ್ಯದ ಅಭ್ಯಾಸಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.

* ದಿನನಿತ್ಯ  ಒಂದು ಗಂಟೆ ಮುಂಚಿತವಾಗಿ ಏಳಬೇಕು

ಸಾಮಾನ್ಯವಾಗಿ ನಾವು ದಿನನಿತ್ಯ ಏಳುವ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಎದ್ದೇಳುವುದರಿಂದ ಆ ಸಮಯವನ್ನು ನಾವು ನಮ್ಮ ಆರೋಗ್ಯ ಅಥವಾ ಇತರೆ ಕೌಶಲ್ಯಗಳನ್ನು ಕಲಿಯುವುದಕ್ಕೆ ಬಳಸಿಕೊಳ್ಳಬಹುದು ವಿದ್ಯಾರ್ಥಿಗಳಾದರೆ ಓದಲು ಬರೆಯಲು ತಮ್ಮ ಶೈಕ್ಷಣಿಕ ಚಟುವಟಿಕೆ ಕಡೆಗೆ ಗಮನಹರಿಸಬಹುದು ವಯಸ್ಕರ ಆದರೆ ತಾವು ಪ್ರಗತಿ ಹೊಂದಬೇಕಿರುವ ಕ್ಷೇತ್ರದಲ್ಲಿ ಕೌಶಲ್ಯಗಳನ್ನು ಬಳಸಿಕೊಳ್ಳುವುದಕ್ಕೆ ಆ ಸಮಯವನ್ನು ಮೀಸಲಿಡಬೇಕಾಗುತ್ತದೆ ವಯಸ್ಕರ ಅಥವಾ ವೃದ್ಧರಾದರೆ ವ್ಯಾಯಾಮ ಯೋಗ ಮುಂತಾದ ಚಟುವಟಿಕೆಗಳಿಗೆ ಈ ಸಮಯವನ್ನು ಮೀಸಲಿಟ್ಟು ಆ ಕೆಲಸಗಳಲ್ಲಿ ಪರಿಣಿತಿಯನ್ನು ಕ್ರಮೇಣ ಸಾಧನೆ ಮಾಡಬಹುದು ಇದರಿಂದ ನಾವು ಮಾಡುತ್ತಿರುವ ವೃತ್ತಿಯಲ್ಲಿ ಹೆಚ್ಚಿನ ಕೌಶಲ್ಯವನ್ನು ಪಡೆದುಕೊಳ್ಳಲು ಹಾಗೂ ಸಾಧನೆ ಮಾಡಲು ಸಾಧ್ಯವಾಗುತ್ತದೆ ಹಾಗೂ ನಮ್ಮ ಗುರಿಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಬೇಗ ಸಾಧಿಸಲು ಸಾಧ್ಯವಾಗುತ್ತದೆ ಬೇಗ ಹೇಳುವುದರಿಂದ ಯಾವುದೇ ಒತ್ತಡವಿಲ್ಲದೆ ಅವಸರವಾಗಿ ಕೆಲಸಗಳನ್ನು ಮಾಡಿಕೊಳ್ಳುವ ಅನಿವಾರ್ಯ ಉಂಟಾಗುವುದಿಲ್ಲ ಮತ್ತು ಆ ದಿನ ನಾವು ಅಂದುಕೊಂಡಷ್ಟು ಯೋಜನಾ ಬದ್ಧವಾಗಿ ಮುಂದಕ್ಕೆ ಸಾಗುತ್ತದೆ ಅದರಲ್ಲೂ ವಿಶೇಷವಾಗಿ 20 ನಿಮಿಷಗಳ ವ್ಯಾಯಾಮ ಮಾಡುವುದರಿಂದ ಅಂದಿನ ಲವಲವಿಕೆಯು ಇಡೀ ದಿನ ಮುಂದುವರಿಯಲು ಸಾಧ್ಯವಾಗುತ್ತದೆ.


* ಮಾಡುವ ಪ್ರತಿ ಕೆಲಸವನ್ನು ಕ್ರೀಯಾಶೀಲಾವಾಗಿ ಹಾಗೂ ಸೃಜನಶೀಲವಾಗಿ ಮಾಡಬೇಕು

ನೀವು ಯಾವುದೇ ಕೆಲಸವನ್ನು ಮಾಡುತ್ತಿದ್ದರು ಅದನ್ನು ಸಾಧ್ಯವಾದಷ್ಟು ಕಡಿಮೆ ಅವಧಿಯಲ್ಲಿ ಮುಗಿಸಲು ಪ್ರಯತ್ನಿಸಿಕೊಳ್ಳುವುದು ಎರಡನೇ ವಿಧಾನವಾಗಿದೆ ಇದು ನಮ್ಮಲ್ಲಿ ಒಂದು ಕೆಲಸವನ್ನು ಆದಷ್ಟು ಶೀಘ್ರದಲ್ಲಿ ಮುಗಿಸುವ ಕ್ರಿಯಾಶೀಲತೆ ಮತ್ತು ಸೃಜನಶೀಲತೆಯನ್ನು ನಮ್ಮಲ್ಲಿ ಬೆಳೆಸುತ್ತದೆ ಉದಾಹರಣೆಗೆ ವಿದ್ಯಾರ್ಥಿಗಳಾಗಿದ್ದರೆ ನಿಮಗೆ ಕಷ್ಟವೆನಿಸುವ ವಿಷಯವನ್ನು ನೆನಪಿಟ್ಟುಕೊಳ್ಳಲು ನಿಮಗೆ ಸಾಧ್ಯವಾಗದಿದ್ದರೆ ನೀವು ಶಿಕ್ಷಕರ ಸಹಾಯದಿಂದ ಆ ವಿಷಯವನ್ನು ಎಷ್ಟು ಬೇಗ ಸಾಧ್ಯ ಅಷ್ಟು ಸುಲಭವಾಗಿ ನೆನಪಿಟ್ಟುಕೊಳ್ಳುವ ವಿಧಾನವನ್ನು ಅವರಿಂದ ತಿಳಿದುಕೊಳ್ಳಬಹುದು ಆ ಮೂಲಕ ನಿಮ್ಮ ಕೌಶಲ್ಯವನ್ನು ಬೆಳೆಸಿಕೊಳ್ಳಬಹುದು ಅದೇ ರೀತಿಯಾಗಿ ಕೃಷಿ ಚಟುವಟಿಕೆ ಆಗಿರಬಹುದು ಬೇರೆ ಬೇರೆ ವ್ಯಕ್ತಿಗಳಲ್ಲಿ ನಿರ್ವಹಿಸುತ್ತಿರುವವರು ತಮ್ಮ ವೃತ್ತಿಯಲ್ಲಿರುವ ಕೆಲಸಗಳನ್ನು ಆದಷ್ಟು ಕೌಶಲ್ಯದಿಂದ ಮಾಡಲು ಶ್ರಮವಹಿಸಿದರೆ ನಮ್ಮ ಕೆಲಸವು ಸುಲಭವಾಗಿರ ಜೊತೆಗೆ ಇನ್ನು ಹೆಚ್ಚಿನ ಸಾಧನೆಯನ್ನು ಆ ಕ್ಷೇತ್ರದಲ್ಲಿ ಮಾಡಲು ಸಾಧ್ಯವಾಗುತ್ತದೆ.


*  ಸ್ವಯಂ ಕಾಳಜಿಯ ಕಡೆಗೆ  ಗಮನಹರಿಸುವುದು

ದೈಹಿಕ ಸ್ವಯಂ ಕಾಳಜಿ.

ನಮ್ಮ ಸಮಯ ಶಕ್ತಿಯನ್ನು ನಾವು ನಮ್ಮ ಸ್ವ ಬೆಳವಣಿಗೆಗೆ ಬಳಸಬೇಕು ಬೇರೆಯವರ ಇಚ್ಛಾಶಕ್ತಿಗೆ ತಕ್ಕಂತೆ ಬದುಕಲು ನಾವು ಈ ಭೂಮಿಗೆ ಬಂದಿಲ್ಲ ಎಂಬುದನ್ನು ಸದಾ ನೆನಪಿನಲ್ಲಿಟ್ಟು ನಮ್ಮ ಕಾರ್ಯಗಳನ್ನು ಮಾಡುತ್ತಾ ಹೋಗಬೇಕು ಮುಖ್ಯವಾಗಿ ನಮ್ಮ ದೈಹಿಕ ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ವಿಷಯಗಳಿಗೆ ಸಂಬಂಧಿಸಿದಂತೆ ನಾವು ಹೆಚ್ಚು ಗಮನ ಹರಿಸಬೇಕು ನಾವು ನಮ್ಮ ದೇಹಕ್ಕೆ ಹಾನಿ ಮಾಡಿಕೊಳ್ಳುವುದು ಅಥವಾ ಅನಾರೋಗ್ಯಗೊಳಿಸಿಕೊಳ್ಳುವುದು ಸಮಂಜಸವಲ್ಲ ಮುಂದೆ ನಮ್ಮ ಆರೋಗ್ಯ ಕೆಟ್ಟರೆ ಯಾರು ಸಹಿತ ಅದನ್ನು ಸರಿಪಡಿಸಲಾಗುವುದಿಲ್ಲ ಅದರ ಕಷ್ಟವನ್ನು ನಾವೇ ಅನುಭವಿಸಬೇಕಾಗುತ್ತದೆ ಹಾಗಾಗಿ ನಮ್ಮ ಆರೋಗ್ಯ ಚೆನ್ನಾಗಿಟ್ಟುಕೊಳ್ಳುವುದು ಎಂದರೆ ನಮ್ಮ ದೇಹ ಗಟ್ಟಿಮುಟ್ಟಾಗಿ ನೋಡಿಕೊಳ್ಳುವುದು ಇದಕ್ಕಾಗಿ ನಾವು ಪ್ರತಿನಿತ್ಯದ ವ್ಯಾಯಾಮ ಯೋಗ ಕಸರತ್ತುಗಳನ್ನು ಮಾಡುವುದರ ಮುಖಾಂತರ ನಮ್ಮ ದೇಹದ ಆರೋಗ್ಯದ ಕಡೆಗೆ ಗಮನ ಹರಿಸಬೇಕು ಎಂದರೆ ದೇಹ ಆರೋಗ್ಯವಾಗಿರಬೇಕೆಂದರೆ ಒಳ್ಳೆಯ ಪ್ರೋಟೀನ್ ಯುಕ್ತ ಆಹಾರ ಸೇವನೆ ಅಗತ್ಯ ಹಾಗೂ ಅದಕ್ಕೆ ತಕ್ಕಂತೆ ವಿಶ್ರಾಂತಿ ಅಂದರೆ ದಿನಕ್ಕೆ ಎಂಟು ತಾಸುಗಳ ನಿದ್ದೆ ಬಹು ಮುಖ್ಯ ಇವುಗಳನ್ನು ಸಮಯಕ್ಕೆ ಸರಿಯಾಗಿ ನಿರ್ವಹಿಸಿದರೆ ನಮ್ಮ ಆರೋಗ್ಯವು ಚೆನ್ನಾಗಿರುವುದು ಜೊತೆಗೆ ನಮ್ಮ ದೇಹವು ಗಟ್ಟಿಮುಟ್ಟಾಗಿರುತ್ತದೆ.


* ಭಾವನಾತ್ಮಕ ಸ್ವಯಂ ಕಾಳಜಿ.

ಭಾವನಾತ್ಮಕ ಸ್ವಭಾವ ಬೆಳವಣಿಗೆಗೆ ಸಂಬಂಧಿಸಿದಂತೆ ನಾವು ಇತರರನ್ನು ಹೆಚ್ಚು ಹೆಚ್ಚಿಕೊಳ್ಳುವುದು ಅವರಿಗಾಗಿ ತ್ಯಾಗಗಳನ್ನು ಮಾಡುವುದು ಇಂತಹ ಮನೋಭಾವದಿಂದ ದೂರ ಇರುವುದು ಒಳಿತು ಇದರಿಂದಾಗಿ ಕೊನೆಗೆ ನೋವು ಉಂಟಾಗಿ ಮಾನಸಿಕ ಸಮಸ್ಯೆ ನಮ್ಮಲ್ಲಿ ಆವರಿಸಬಹುದು ಯಾವುದೇ ವಿಷಯದಲ್ಲಾದರೂ ಮೊದಲು ನಮ್ಮ ಕುರಿತಾಗಿ ಆಲೋಚನೆ ಮಾಡಿದ ನಂತರ ಇತರೆ ವಿಷಯಗಳ ಕುರಿತಾಗಿ ಯೋಚನೆ ಮಾಡುವುದು ಸೂಕ್ತ ನಮ್ಮ ಭಾವನಾತ್ಮಕ ವಿಷಯಗಳ ಮೇಲೆ ಋಣಾತ್ಮಕ ಪರಿಣಾಮ ಉಂಟಾಗದಂತೆ ನೋಡಿಕೊಳ್ಳುವುದು ಬಹು ಮುಖ್ಯವಾದ ಕೆಲಸವಾಗಿರುತ್ತದೆ.


* ಅಧ್ಯಾತ್ಮಿಕ ಸ್ವಯಂ ಕಾಳಜಿ

ಹಾಗೆ ಈ ಭೂಮಿಯ ಮೇಲೆ ನಮಗೆ ನೋವು ಕೊಡುವುದು ಯಾವುದಾದರೂ ಒಂದು ಶಕ್ತಿ ಇದೆ ಎಂದರೆ ನಮ್ಮ ಬೆಳವಣಿಗೆಯನ್ನು ಸಹಿಸಿಕೊಳ್ಳುವ ಶಕ್ತಿ ಯಾವುದಕ್ಕಾದರೂ ಇದೆ ಎಂದರೆ ಅದು ಆ ಭಗವಂತನಿಗೆ ಮಾತ್ರ. ದೇವರ ಸ್ಮರಣೆಯಿಂದ  ನಮ್ಮ ಮಾನಸಿಕ ನೆಮ್ಮದಿ  ಹಾಗೂ ಪ್ರಶಾಂತತೆ ,ಸಮಾಧಾನದಿಂದ ಜೀವಿಸಲು ಪ್ರಾರ್ಥನೆ ಮತ್ತು ಆಧ್ಯಾತ್ಮಿಕ ಜೀವನ ಅಗತ್ಯ. ಇದಕ್ಕಾಗಿ ನಾವು ಇಷ್ಟಪಡುವ ಯಾವುದೇ ದೇವರ ಆಗಲಿ ಅವರಿಗೆ ಬೆಳಗಿನ ಪ್ರಾರ್ಥನೆ ಮತ್ತು ನಮಸ್ಕಾರಗಳೊಂದಿಗೆ ಅಂದಿನ ದಿನ ಪ್ರಾರಂಭಿಸಬೇಕು ಏಕೆಂದರೆ ನಮ್ಮ ಎಲ್ಲ ಮನಸ್ಸಿನ ಮಾತುಗಳು ಸಂಕಟಗಳು ನೋವುಗಳನ್ನು ಕೇಳಿಸಿಕೊಂಡು ಅವುಗಳಿಗೆ ಯಾವುದೇ ತಕರಾರು ಇಲ್ಲದೆ ಸ್ವೀಕರಿಸುವವನು ಎಂದರೆ ಅದು ಭಗವಂತನು ಮಾತ್ರ ದೇವರ ಧ್ವನಿಯು ಯಾವಾಗಲೂ ನಮಗೆ ಸಕಾರಾತ್ಮಕವಾದ ಪರಿಹಾರವನ್ನು ನೀಡುತ್ತದೆ ಅಲ್ಲಿ ಋಣಾತ್ಮಕ ವಿಷಯಗಳಿಗೆ ಅವಕಾಶವಿಲ್ಲ ಆದ್ದರಿಂದ ನೀವು ಯಾವುದೇ ಕೆಲಸ ಕಾರ್ಯಗಳು ಆರಂಭಿಸುವ ಮುನ್ನ ನಿಮಗೆ ಹಿತವೆನಿಸುವ ದೇವರ ಸ್ಮರಣೆ ಮಾಡಿ ಆ ಮೂಲಕ ಮಾನಸಿಕ ಪ್ರಶಾಂತತೆ ಪಡೆದುಕೊಂಡು ಮುಂದಿನ ಕಾರ್ಯಗಳನ್ನು ಮಾಡುವುದು ಸೂಕ್ತ ಈ ರೀತಿಯ ಅಭ್ಯಾಸವು ದೀರ್ಘಾವಧಿಯಲ್ಲಿ ನಮಗೆ ಧನಾತ್ಮಕ ನಂಬಿಕೆಯನ್ನು ಉಂಟುಮಾಡುತ್ತದೆ ಅದರ ಫಲಗಳು ಮುಂದಿನ ದಿನಗಳಲ್ಲಿ ನಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಸಹಕಾರಿಯಾಗಿರುತ್ತದೆ.

ಈ ರೀತಿ ಅಭ್ಯಾಸಗಳಿಂದ ನಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

No comments:

Post a Comment