ಕರ್ನಾಟಕದ ಗಾಂಧಿ ಎಂದೇ ಖ್ಯಾತರಾದ ವಿಶೇಷ ವ್ಯಕ್ತಿಯ ಕುರಿತು ಇಂದಿನ ಸಮಾಜ ತಿಳಿದುಕೊಳ್ಳುವುದು ಅವಶ್ಯಕ.......


 ಹರ್ಡೇಕರ್‌  ಮಂಜಪ್ಪನವರದು ಕರ್ನಾಟಕದ ರಾಷ್ರೀಯ ಸ್ವಾತಂತ್ರ್ಯ ಹೋರಾಟದಲ್ಲಿ ಬಹಳ ದೊಡ್ಡ ಹೆಸರು  ಬಾಲಗಂಗಾದರ ತಿಲಕ್‌ ರವರ ಪ್ರೇರಣೆಯಿಂದ ಸ್ವಾತಂತ್ರ್ಯ ಚಳುವಳಿಗೆ ದುಮುಕಿ ಮುಂದೆ ಗಾಂಧಿವಾದಗಳಾಗಿ ಗಾಂಧಿಜೀಯವರ ತತ್ವಗಳ ಮಾರ್ಗದಲ್ಲಿ ನಡೆದು  ಕರ್ನಾಟಕದ ಗಾಂಧಿ ಎಂದೇ  ಹೆಸರನ್ನು ಗಳಿಸಿದರು . ಅವರು  ಆಜನ್ಮ ಬಹ್ಮಚಾರಿಗಳಾಗಿದ್ದರು ತಮ್ಮ ಜೀವನೋಪಾಯಕ್ಕಾಗಿ ಶಿರಸಿಯಲ್ಲಿ ಶಾಲಾ ಶಿಕ್ಷಕ ವೃತ್ತಿ ಮಾಡುತ್ತಿದ್ದರು . ಶಾಲಾ ಶಿಕ್ಷಕರಾಗಿ  ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೋಳ್ಳಲು ಸಾಧ್ಯವಾಗುವುದಿಲ್ಲ ಎಂಬುದನ್ನು ಅರಿತು ಮಂಜಪ್ಪನವರು ತಮ್ಮ ವೃತ್ತಿಗೆ ರಾಜಿನಾಮೆ ನೀಡಿ ದಾವಣಗೆರೆಗೆ ಆಗಮಿಸುತ್ತಾರೆ. ಅಲ್ಲಿ  1906‌ ಸೆಪ್ಟೆಂಬರ್ 6 ರಂದು  ಧನುರ್ಧಾರಿ ಎಂಬ ವಾರ ಪತ್ರಿಕೆಯನ್ನು ಪ್ರಾರಂಭಿಸುತ್ತಾರೆ.ಇದರ ಉದ್ದೇಶ ಜನರಲ್ಲಿ ದೇಶಭಕ್ತಿಯನ್ನು ಬೆಳಸಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವಂತೆ ಮಾಡುವುದಾಗಿತ್ತು.

ಮಂಜಪ್ಪನವರ  ಜನನ ಮತ್ತು ಬಾಲ್ಯ

ಹರ್ಡೇಕರ್ ಮಂಜಪ್ಪನವರು 1886 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಳಿಯ ಪಂಪನ ಬನವಾಸಿಯಲ್ಲಿ ಜನಿಸಿದರು.ಚಿಕ್ಕಂದಿನಲ್ಲಿಯೆ ತಂದೆಯನ್ನುಕಳೆದುಕೊಂಡು  ಅಣ್ಣನ ಆಶ್ರಯದಲ್ಲಿ ಬೆಳೆದ ಮಂಜಪ್ಪನವರು ಮುಂದೆ  ಶಿಕ್ಷಕರಾಗಿ ಸೇವೆಯನ್ನು ಪ್ರಾರಂಭಿಸಿದರು ಅದರೆ ಸ್ವಾತಂತ್ರ್ಯ ಚಳುವಳಿಯು  ಅವರಲ್ಲಿ ದೇಶ ಭಕ್ತಿಯ ಕಿಚ್ಚನ್ನು ಹಚ್ಚಿ ಶಿಕ್ಷಕ ವೃತ್ತಿಯನ್ನು ತ್ಯಾಗ ಮಾಡಿ ಹೋರಾಟದಲ್ಲಿ ದುಮುಕುವಂತೆ ಮಾಡಿತು.ದಾವಣಗೆರೆಯ ತಮ್ಮ ವಾರ ಪತ್ರಿಕೆಯ ಮುಖಾಂತರ ಜನರಲ್ಲಿ ರಾಷ್ಟ್ರೀಯ ಪ್ರಜ್ಞೆ ಊಂಟಾಮಾಡುವ ಲೇಖನಗಳನ್ನು ಬರೆಯುತ್ತಾರೆ.ಇವರ ಬರವಣಿಗೆಯಿಂದ ಪ್ರೇರಣೆಗೊಂಡು ಆನೇಕರು  ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುತ್ತಾರೆ.

ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಾ ಇದ್ದ ಬ್ರಿಟಿಷ್ ಸರ್ಕಾರ ಮಂಜಪ್ಪ ಅವರನ್ನು ಹೀಗೆ ಬಿಟ್ಟರೆ ನಾವು ಆಡಳಿತ ಮಾಡೋದು ಕಷ್ಟ ಎನಿಸಿ ಅವರನ್ನು ಬಂಧಿಸಲು ಪ್ರಯತ್ನಿಸುತ್ತಾರೆ ಆದರೆ ಸತ್ಯ ಮತ್ತು ದೇಶಭಕ್ತಿ ಮೇಲೆ ನಂಬಿಕೆಯಿದ್ದ ಮಂಜಪ್ಪನವರು ಯಾವುದಕ್ಕೂ ಹೆದರುವುದಿಲ್ಲ ಬಂಧನಕ್ಕೆ ಒಳಗಾದರೂ ತಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ. ಕೇವಲ ಪತ್ರಿಕೋದ್ಯಮ ಅಲ್ಲದೆ ಹಲವಾರು ಪುಸ್ತಕಗಳನ್ನು ಬರೆಯುತ್ತಾರೆ 1921 ರಲ್ಲಿ ರಾಷ್ಟ್ರ ಜೀವನ ಎಂಬ ಗ್ರಂಥವನ್ನು ಬರೆಯುತ್ತಾರೆ. ನಂತರ ಭಾರತೀಯರ ದೇಶಭಕ್ತಿ ಎಂಬ ಮೊದಲ ಗ್ರಂಥವನ್ನು ಅವರೇ ಪ್ರಕಟಿಸುತ್ತಾರೆ ಅದು ತತ್ವಜ್ಞಾನದ ದೃಷ್ಟಿಯಿಂದ ಆಲೋಚಿಸಿ ಬರೆದ ವಿಭಿನ್ನ ಗ್ರಂಥವಾಗಿತ್ತು. ವೀರಶೈವ ಧರ್ಮದ ಬಗ್ಗೆ ವೀರಶೈವ ಸಮಾಜ ಸುಧಾರಣೆ , ಸಮಾಜದಲ್ಲಿ ಸ್ತ್ರೀಯರಿಗೆ ಸಮಾನ ಹಕ್ಕುಗಳು ಗೌರವಗಳನ್ನು ನೀಡಲು ಜಾಗೃತಿ ಮೂಡಿಸುವ ಸಲುವಾಗಿ ಸ್ತ್ರೀ ನೀತಿ ಸಂಗ್ರಹ ಎಂಬ ಮಹಿಳಾ ಕೇಂದ್ರಿತ ಪುಸ್ತಕವನ್ನು ಬರೆಯುತ್ತಾರೆ ಈ ಪುಸ್ತಕಗಳು ಸಮಾಜದಲ್ಲಿ ಮಹತ್ತರ ಬದಲಾವಣೆಗಳನ್ನು ತರುತ್ತದೆ. ಹಾಗೆಯೇ ಮಂಜಪ್ಪನವರು ಆಧ್ಯಾತ್ಮಿಕ ವಾಗಿ ದೇವರಲ್ಲಿ ನಂಬಿಕೆ ಉಳ್ಳವರು ಹಾಗೂ ಜನರು ಆಧ್ಯಾತ್ಮಿಕತೆಯಿಂದ ಮಾತ್ರ ನೆಮ್ಮದಿ ಕಂಡುಕೊಳ್ಳಲು ಸಾಧ್ಯ ಎಂಬುದನ್ನು ಬಲವಾಗಿ ನಂಬಿದ್ದರು. ಹಾಗಾಗಿ ತಮ್ಮ ಆಶ್ರಮದಲ್ಲಿ ಭಜನಾ ಕಾರ್ಯಕ್ರಮಗಳು ಧಾರ್ಮಿಕ ಸೇವೆ ಸಮಾಜ ಸೇವೆ ಮುಂತಾದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು

ಗಾಂಧೀಜಿಯವರೊಂದಿಗೆ ಒಡನಾಟ

ಹುಬ್ಬಳ್ಳಿಯಲ್ಲಿ 1922 ರಲ್ಲಿ ಗಾಂಧೀಜಿಯವರ ನೈತಿಕ ತತ್ವ ಆದರ್ಶಗಳನ್ನು  ಅನುಷ್ಠಾನಗೊಳಿಸಲು ಸತ್ಯಾಗ್ರಹ ಸಮಾಜ ಎಂಬ ಸಂಸ್ಥೆಯನ್ನು ಆರಂಭಿಸುತ್ತಾರೆ. ಅದರ ಮರುವ ವರ್ಷವೇ ಹರಿಹರದ ಬಳಿ ಸತ್ಯಾಗ್ರಹ ಆಶ್ರಮವನ್ನು ಸ್ಥಾಪನೆ ಮಾಡುತ್ತಾರೆ ಆದರೆ ದುರಾದೃಷ್ಟವಶಾತ್ ಕೆಲವೇ ವರ್ಷಗಳಲ್ಲಿ ಮಳೆಗಾಲ ಆವರಿಸಿ ಪ್ರವಾಹಕ್ಕೆ ಕೊಚ್ಚಿ ಹೋಗುತ್ತದೆ ಮುಂದೆ ಗಾಂಧೀಜಿಯವರನ್ನು ಭೇಟಿ ಮಾಡಬೇಕೆಂಬ ಅವರ ಸಂಕಲ್ಪಕ್ಕಾಗಿ  ಸಬರಮತಿ ಆಶ್ರಮಕ್ಕೆ ತೆರಳುತ್ತಾರೆ ಅಲ್ಲಿ ಗಾಂಧೀಜಿಯವರ ದೈನಂದಿನ ಚಟುವಟಿಕೆಗಳನ್ನು ತೀರಾ ಹತ್ತಿರದಿಂದ ಕಂಡು ಅವರಿಂದ ಪ್ರಭಾವಿತರಾಗುತ್ತಾರೆ.

 ಹರ್ಡೇಕರ್ ಮಂಜಪ್ಪನವರು
ಸಮ ಸಮಾಜವನ್ನು ನಿರ್ಮಾಣ ಮಾಡಬೇಕೆಂಬ ಪರಿಕಲ್ಪನೆ ಯೊಂದಿಗೆ ಬಸವ ಚರಿತ್ರೆ ಎಂಬ ಪುಸ್ತಕವನ್ನು ಬರೆಯುತ್ತಾರೆ. ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ವೀರಶೈವ ವಿದ್ಯಾಲಯವನ್ನು 1927 ಮೇ 13 ರಂದು ಸ್ಥಾಪನೆ ಮಾಡುತ್ತಾರೆ ತಮ್ಮ ಜೀವನದ ಕೊನೆಯವರೆಗೂ ಸಂಸ್ಥೆಯನ್ನು ಮುನ್ನಡೆಸಿಕೊಂಡು ಎಲ್ಲ ವರ್ಗದ ಜನರಿಗೆ ವಿದ್ಯಾಯನ ತಲುಪಿಸಲು ಶ್ರಮಿಸುತ್ತಾರೆ

ಗಾಂಧೀಜಿಯವರು ಉತ್ತರ ಕರ್ನಾಟಕದಲ್ಲಿ ಅಸ್ಪೃಶ್ಯತೆ ನಿವಾರಣೆಗಾಗಿ ಪ್ರವಾಸ ಕೈಗೊಂಡಾಗ ಅವರ ಜೊತೆಗಿದ್ದು ಹೋರಾಟವನ್ನು ಮಾಡುತ್ತಾರೆ ನಾಡಿನ ಜನರಲ್ಲಿ ರಾಷ್ಟ್ರಭಕ್ತಿ ಕೌಶಲ್ಯಗಳ ಕಲಿಕೆ, ಶರಣ ಸಂದೇಶ ಖಾದಿ ಉದ್ಯೋಗ ಹೀಗೆ ಹಲವಾರು ಪುಸ್ತಕಗಳನ್ನು ಬರೆದು ಜನರಲ್ಲಿ ಜಾಗೃತಿ ಮೂಡಿಸಲು ಶ್ರಮಿಸುತ್ತಾರೆ

ತಮ್ಮ ಸರಳ ಜೀವನ ಹಾಗೂ ಅಹಿಂಸಾ ಧರ್ಮ ಸಾಮಾಜಿಕ ಹೋರಾಟಕ್ಕಾಗಿ ಹರಡೇಕರ್ ಮಂಜಪ್ಪ ಅವರನ್ನು ಕರ್ನಾಟಕದ ಗಾಂಧಿ ಎಂಬ ಹೆಸರಿನಿಂದ ಕರೆಯಲು ಪ್ರಾರಂಭಿಸುತ್ತಾರೆ ಇಂತಹ ಸರಳ ವ್ಯಕ್ತಿತ್ವ ಮಂಜಪ್ಪನವರು 1947 ಜನವರಿ ಮೂರರಂದು ಇಹಲೋಕ ತ್ಯಜಿಸುತ್ತಾರೆ ಕೊನೆಗೂ ಸ್ವತಂತ್ರ ಭಾರತದಲ್ಲಿ ಕೊನೆಯ ಹೆಸರು ಬಿಡಬೇಕೆಂಬ ಅವರ ಆಸೆ ಈಡೇರಲಿಲ್ಲ ಮಂಜಪ್ಪನವರು ಸ್ವತಂತ್ರ ಚಳುವಳಿ ಸಮಾಜ ಸುಧಾರಣೆ ಹಾಗೂ ಸರಳ ವ್ಯಕ್ತಿತ್ವದಿಂದ ಇಡೀ ನಾಡಿಗೆ ಕೀರ್ತಿ ಹಾಗೂ ಹೆಮ್ಮೆಯ ಪ್ರತೀಕವಾಗಿದ್ದಾರೆ ಇಂತಹ ಮಹಾನೀಯರ ಸ್ಮರಣೆ ನಮ್ಮೆಲ್ಲರ ಜವಾಬ್ದಾರಿ ಇಂದು ಹರ್ಡೆಕರ್ ಮಂಜಪ್ಪ ಅವರ ಜಯಂತಿಯ ದಿನ ಅವರನ್ನು ಸ್ಮರಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಎಂದು ಭಾವಿಸುತ್ತೇನೆ.







No comments:

Post a Comment