ತೂಕ ಇಳಿಕೆಗಾಗಿ ಇಷ್ಟು ಮಾಡಿದರೇ ಸಾಕು.....



 ದೇಹದ ತೂಕ ಇಳಿಕೆ ಸವಾಲು ಅಲ್ಲ ...ಶಿಸ್ತು

ದೇಹದ ತೂಕ ಇಳಿಕೆಗಾಗಿ ಜನರು ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ ಹಾಗೂ  ಕೆಲವರಿಗೆ ನುಂಗಲಾರದ ತುತ್ತಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಬಹಳಷ್ಟು ಜನರು ಕೆಲವು ಆನಾರೋಗ್ಯಕರ ಪಾದರ್ಥಗಳನ್ನು  ನೀಡುವುದರ ಮುಖಾಂತರ ಹಣ ಸಂಪಾದನೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ನಾವು ಮುಖ್ಯವಾಗಿ ಅರ್ಥಮಾಡಿಕೊಳ್ಳ ಬೇಕಿರುವುದೇನಂದರೆ ನಮ್ಮ ದೇಹದಲ್ಲಿನ ಕೊಬ್ಬು ಕರಗಿಸದ ಹೊರತು ನಮ್ಮ ತೂಕ ಇಳಿಕೆಯಾಗುವುದಿಲ್ಲ. ಅದಕ್ಕಾಗಿ ನಾವು ಆಹಾರ ಸೇವನೆಯನ್ನೇ ಕಡಿಮೆಗೊಳಿಸಬೇಕು ಹಾಗೆಂದ ಮಾತ್ರಕ್ಕೆ  ಉಪವಾಸ ಮಾಡುವುದು ಎಂಬ ಅರ್ಥವಲ್ಲ. ಆಹಾರವನ್ನು ಯಾವ ಪ್ರಮಾಣದಲ್ಲಿ ಎಷ್ಟು ತೆಗೆದುಕೊಳ್ಳಬೇಕು ಎಂಬುದು ಮುಖ್ಯ. ಉದಾರಣೆಗೆ ಒಂದು ಪ್ಲೇಟ್ ದೋಸೆಯಿಂದ 500 ಕ್ಯಾಲರಿ ಶಕ್ತಿ ದೊರೆಯುತ್ತದೆ ಅಷ್ಟು ಶಕ್ತಿಯು ನಮ್ಮ ಇಡೀ ದಿನದ ಕೆಲಸ ಕಾರ್ಯಗಳಿಗೆ ಸಾಕಾಗುತ್ತದೆ ಆದರೆ ನಮ್ಮ ನಾಲಿಗೆಯ ರುಚಿಗಾಗಿ ನಾವು ಮನೆಯಲ್ಲಿ ಹೆಚ್ಚು ದೋಸೆಗಳನ್ನು ತಿನ್ನುತ್ತೇವೆ  ಈ ರೀತಿಯ ಚಟುವಟಿಕೆಗಳಿಂದ  ನಮ್ಮ ದೇಹದಲ್ಲಿ ಕ್ಯಾಲರಿಗಳು ಹೆಚ್ಚು ಶೇಖರಣೆ ಗೊಳ್ಳುತ್ತಾ ಹೋಗುತ್ತವೆ.

ನಮ್ಮ ಶರೀರಕ್ಕೆ ಬೇಕಾದ ಆಹಾರದ ಪ್ರಮಾಣ ತಿಳಿಯುವುದು ಮುಖ್ಯ...

ನಾವು ಭಾರತೀಯರು ಆಹಾರ ಪ್ರಿಯರು  ನಮ್ಮ ಮನೆಗೆ ಬಂದ ಅತಿಥಿಗಳನ್ನು ನಾವು ಹಾಗೇ ಕಳಿಸುವುದಿಲ್ಲ ಆದರೆ ನಾವು ತಿಳಿದುಕೊಳ್ಳಬೇಕಿರುವುದು ಎನೆಂದರೆ ನಮ್ಮ ದೇಹಕ್ಕೆ ಬೇಕಾಗುವ ಒಂದು ದಿನದ ಶಕ್ತಿ ಎಷ್ಟು ಎಂಬುದನ್ನು ಅರಿತುಕೊಂಡು ಅದಕ್ಕೆ ತಕ್ಕಂತೆ ಆಹಾರ ಸೇವನೆ ಮಾಡಿದಾಗ ನಮ್ಮ ದೇಹದ ತೂಕ ಇಳಿಕೆಯು ತಾನಾಗೆ ನಿಯಂತ್ರಣಗೊಳ್ಳುತ್ತದೆ ಶೇಕಡ 90ರಷ್ಟು ತೂಕ  ಇಳಿಕೆಯು ನಾವು ಸೇವಿಸುವ ಆಹಾರದ ಪ್ರಮಾಣದ ಮೇಲೆ ನಿಂತಿದೆ.

ನಾವು ದಿನನಿತ್ಯ ವ್ಯಾಯಾಮ ಮಾಡಿ ಕಸರತ್ತು ನಡೆಸಿ ಸಾಕಷ್ಟು ಆಹಾರವನ್ನು ಸೇವಿಸಿದರೆ ಅದರಿಂದ ತೂಕ ಹೇಳಿಕೆ ಸಾಧ್ಯವಿಲ್ಲ ತೂಕ ಇಳಿಕೆಯು ನೇರವಾಗಿ ನಾವು ಸೇವಿಸುವ ಆಹಾರದ ಮೇಲೆ ಅವಲಂಬನೆಯಾಗಿದೆ.

ತೂಕ ಇಳಿಕೆಗೆ ಪರ್ಯಾಯ ಮಾರ್ಗಗಳಿಲ್ಲ.....

ತೂಕ ಇಳಿಕೆಯನ್ನೆ ಬಂಡವಾಳ ಮಾಡಿಕೊಂಡ ಕೆಲವು ಕಂಪನಿಗಳು ಕೆಲವು ಪಾನೀಯ ಗಳನ್ನು(nutritional drinks) ಕುಡಿಯುವುದರಿಂದ ತೂಕ ಇಳಿಕೆ ಉಂಟಾಗುತ್ತದೆ ಎಂದು ಜನರನ್ನು ನಂಬಿಸಿ ಹಣ ಸಂಪಾದನೆಯಲ್ಲಿ ತೊಡಗಿವೆ ವಾಸ್ತವವಾಗಿ ಈ ಪಾನೀಯಗಳು ಕೇವಲ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತವೆ ಹಾಗೂ ಹಸಿವು  ಉಂಟಾಗದಂತೆ ನೋಡಿಕೊಳ್ಳುತ್ತವೆ ಇದರಿಂದಾಗಿ ಆ ವ್ಯಕ್ತಿಯು ತಾತ್ಕಾಲಿಕವಾಗಿ ತೂಕವನ್ನು ಕಳೆದುಕೊಳ್ಳುತ್ತಾನೆ ಇದನ್ನೆ  ಕಂಪನಿಗಳು ತಮ್ಮ ಬಂಡವಾಳವನ್ನಾಗಿ ಮಾಡಿಕೊಂಡು ಸಾಧನೆ ಎಂದು ತೋರಿಸಿ ಇದರ ಜೊತೆಗೆ ತಮ್ಮ ಕಂಪನಿಯ ಹಲವಾರು ಉತ್ಪನ್ನಗಳನ್ನು ಜನರಿಗೆ ಮಾರಾಟ ಮಾಡುವುದರ ಮುಖಾಂತರ ಜನರಿಗೆ ಮೋಸ ಮಾಡುತ್ತವೆ. ಈ ಕಂಪನಿಗಳ ಮುಖ್ಯ ಉದ್ದೇಶ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದೇ ಹೊರತು ಜನರಲ್ಲಿ ಯಾವುದೇ ಶಾಶ್ವತ ತೂಕ ಇಳಿಕೆಯನ್ನು ಉಂಟುಮಾಡುವುದಲ್ಲ ಉದಾಹರಣೆಗೆ ಆ ವ್ಯಕ್ತಿ ಪಾನೀಯಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದಾಗ ಪುನಃ ಅವನು ಮೊದಲಿನಂತೆ ತೂಕವನ್ನು ಹೆಚ್ಚಿಸಿಕೊಳ್ಳುತ್ತಾನೆ ಇಂತಹ ಅನುಭವಗಳು ಸಾಕಷ್ಟು ನಮ್ಮ ಮುಂದೆ ಕಾಣುತ್ತೇವೆ.

ಆದ್ದರಿಂದ ನಾವು ಅರ್ಥಮಾಡಿ ಕೊಳ್ಳಬೇಕಿರುವುದೆನೆಂದರೆ ತೂಕ ಇಳಿಕೆಗೆ ಯಾವುದೇ ಸುಲಭ ದಾರಿಗಳಿಲ್ಲ ಕೇವಲ ನಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡು ನಿರಂತರವಾಗಿ ಅದನ್ನು ಪಾಲಿಸಿದಾಗ ಮಾತ್ರ ನಾವು ತೂಕ ಇಳಿಕೆಯನ್ನು ಕಾಣಬಹುದು.


ನಮ್ಮ ಆರೋಗ್ಯ ಕಾಪಡಿಕೊಳ್ಳಲೂ ಅನುಸರಿಸಬೇಕಾದ ಇತರೆ ಕ್ರಮಗಳು....

ನಮ್ಮ ಆರೋಗ್ಯವನ್ನು ಸದೃಢವಾಗಿರಲು ನಾವು ಆಹಾರದ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದರ ಜೊತೆಗೆ ಕೆಲವು ವ್ಯಾಯಾಮಗಳನ್ನು ಮಾಡಿಕೊಳ್ಳುವುದು ಅನಿವಾರ್ಯವಾಗಿದೆ ಅದರಲ್ಲಿ ಮುಖ್ಯವಾಗಿ ದಿನನಿತ್ಯ ಕೆಲವು (cardio exercises) ಹೃದಯ ಸಂಬದಿತ ವ್ಯಾಯಮಗಳು ಮಾಡಬೇಕು ಉದಾಹರಣೆಗೆ: ವಾಕಿಂಗ್, ರನ್ನಿಂಗ್ ,ಸೈಕ್ಲಿಂಗ್, ಜಾಗಿಂಗ್, ಸ್ಕಿಪ್ಪಿಂಗ್, ಸ್ವಿಮ್ಮಿಂಗ್ ಇವುಗಳನ್ನು ಕಾರ್ಡಿಯೋ ವ್ಯಾಯಾಮ ಎಂದು ಕರೆಯುತ್ತಾರೆ .

ಈ ವ್ಯಾಯಾಮಗಳು ನಮ್ಮ ದೇಹದ ರಕ್ತದೊತ್ತಡ , ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣ, ತೂಕ ಇಳಿಕೆ, ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುತ್ತವೆ ಹಾಗೂ ನಮ್ಮ ಸ್ನಾಯುಗಳು ಗಟ್ಟಿಯಾಗಲು ಸಹಕರಿಸುತ್ತವೆ.

ಜಿಮ್ ನಲ್ಲಿ ವ್ಯಾಯಾಮ ಮಾಡುವುದರಿಂದ ನಮ್ಮ ಸ್ನಾಯುಗಳ ಬೆಳವಣಿಗೆ ಉಂಟಾಗುತ್ತದೆ ಮೂಳೆಗಳು ಗಟ್ಟಿಯಾಗುತ್ತವೆ  ನಮ್ಮ ಶರೀರದ ಸಾಮರ್ಥ್ಯ ಹೆಚ್ಚಾಗುತ್ತಾ ಹೋಗುತ್ತದೆ. ಹಾಗೆಯೇ ಯೋಗ ಮಾಡುವುದರಿಂದ ನಮ್ಮ ನಮ್ಮ ದೇಹದಲ್ಲಿ ಅಂಗಾಂಗಗಳ ಚಲನೆ ಸುಲಭವಾಗುತ್ತದೆ ಹಾಗೆಯೇ ಯೋಗದಿಂದ ಮಾನಸಿಕ ನೆಮ್ಮದಿ, ನಿದ್ರೆ,  ಹೆಚ್ಚಾಗುತ್ತಾ ನಮ್ಮ ಆರೋಗ್ಯಕ್ಕೆ ಪುಷ್ಟಿ ನೀಡುತ್ತದೆ.  ಮೆದುಳಿನ ಕ್ರಿಯಾಶೀಲತೆ ಹೆಚ್ಚುತ್ತದೆ ಮತ್ತು ಏಕಾಗ್ರತೆ ಬೆಳೆಯುತ್ತಾ ಹೋಗುತ್ತದೆ.  ಪ್ರಾಣಾಯಾಮ ಮಾಡುವುದರಿಂದ ನಮ್ಮ ಶಾಸಕೋಶಕ್ಕೆ ಹೆಚ್ಚು ಆಮ್ಲಜನಕ ಪೂರೈಕೆ ಉಂಟಾಗಿ ರಕ್ತದ ಉತ್ಪಾದನೆ ಹೆಚ್ಚಾಗುತ್ತದೆ. ಇದರಿಂದ  ಉದ್ವೇಗ ಒತ್ತಡಗಳು ಕಡಿಮೆಯಾಗುತ್ತದೆ.

 ಆಹಾರ ಪದ್ಧತಿಯಲ್ಲಿನ ಬದಲಾವಣೆಯ ಜೊತೆಗೆ ಕಾರ್ಡಿಯೋ ವ್ಯಾಯಾಮ ಯೋಗ ಪ್ರಾಣಾಯಾಮ ಇವುಗಳನ್ನು ನಮ್ಮ ದಿನನಿತ್ಯದ ಅಭ್ಯಾಸಗಳಾಗಿ ಪರಿವರ್ತಿಸಿಕೊಂಡಾಗ ನಮ್ಮ ತೂಕ ಇಳಿಕೆಯು ಸುಲಭವಾಗಿ ಆಗುತ್ತದೆ ಒಬ್ಬ ವ್ಯಕ್ತಿಯಲ್ಲಿ  35 ವರ್ಷಗಳ ನಂತರ ಅವನ ಮೂಳೆಗಳ ಸಾಮರ್ಥ್ಯ ಕಡಿಮೆಯಾಗುತ್ತಾ ಹೋಗುತ್ತದೆ ಇದನ್ನು ಸಾಕೋಪೀನಿಯ ಎಂದು ಕರೆಯುತ್ತಾರೆ ಇದರಿಂದ ನಮ್ಮ ಮಾಂಸಖಂಡಗಳಲ್ಲಿ ಫೈಬರ್ ಕುಸಿತ ಉಂಟಾಗುತ್ತಾ ವರ್ಷದಿಂದ ವರ್ಷಕ್ಕೆ ಶೇಕಡ ಒಂದರಿಂದ ಎರಡರಷ್ಟು ಪ್ರಮಾಣದಲ್ಲಿ ನಮ್ಮ ದೇಹದ ಶಕ್ತಿ ಸಾಮರ್ಥ್ಯ ಕುಸಿಯುತ್ತಾ ಹೋಗುತ್ತದೆ. ಆದ್ದರಿಂದ ನಮ್ಮ ದೇಹದಲ್ಲಿ ಇವುಗಳ ಕುಸಿತ ಉಂಟಾಗದಂತೆ ಮಾಡಲು ವ್ಯಾಯಮ,ಯೋಗ ಅಗತ್ಯವಾಗಿದೆ.

ನಮ್ಮ ಆಹಾರದಲ್ಲಿನ ಪೋಷಾಕಾಂಶಗಳ ಪ್ರಮಾಣ ಹೀಗಿರಲಿ...

ದಿನನಿತ್ಯದ ನಮ್ಮ ಆಹಾರದಲ್ಲಿ ಶೇಕಡ 25ರಷ್ಟು ಕಾರ್ಬೋಹೈಡ್ರೇಟ್ ಆಹಾರ ಹಾಗೂ ಶೇಕಡ 25% ರಷ್ಟು ಪ್ರೋಟೀನ್ ಆಹಾರವನ್ನು ತೆಗೆದುಕೊಳ್ಳಬೇಕು ಹಾಗೂ ಉಳಿದ 50ರಷ್ಟು ವಿಟಮಿನ್ ಮತ್ತು ಸ್ವಲ್ಪ ಪ್ರಮಾಣದಲ್ಲಿ ಲಿಪಿಡ್ ಉಳ್ಳ ಆಹಾರವನ್ನು ಸೇವಿಸಿದಾಗ ಮಾತ್ರ ನಾವು ಸಮತೋಲಿತ ಆಹಾರವನ್ನು ಸೇವಿಸಿದಂತೆ ಆಗುತ್ತದೆ.

ನಮ್ಮ ತೂಕ ಇಳಿಕೆಯು ನಮ್ಮ ಕೈಯಲ್ಲೇ ಇದೆ. ನಮ್ಮ ಸಮತೋಲಿತ ಆಹಾರ ಸೇವನೆ ಹಾಗೂ ನಾವು ಕೆಲಸ ಮಾಡುವಷ್ಟು ಆಹಾರವನ್ನೇ ಸೇವನೆ ಮಾಡುವ ಪದ್ಧತಿಯನ್ನು ರೂಡಿಸಿಕೊಳ್ಳಬೇಕು ಜೊತೆಗೆ  ದಿನನಿತ್ಯದ ವ್ಯಾಯಾಮ, ಯೋಗ ,ಪ್ರಾಣಾಯಾಮ ಇಂತಹ ಅಭ್ಯಾಸಗಳನ್ನು ರೂಡಿಸಿಕೊಂಡಾಗ ಖಂಡಿತವಾಗಿಯೂ ನಮ್ಮ ಜೀವನ ಬದಲಾವಣೆ ಕಡೆಗೆ ಸಾಗುತ್ತದೆ.







 


No comments:

Post a Comment