ಕಾಫಿ ಅಥವಾ ಟೀ ಗಳಲ್ಲಿ ಹಲವಾರು ವಿಧಗಳಿವೆ ಗ್ರೀನ್ ಟೀ, ಸಾಮಾನ್ಯ ಟೀ, ಹೀಗೆ ಹಲವಾರು ವಿಧ ಕಾಣುತ್ತೇವೆ.ಅದರೆ ನಮ್ಮ ದೇಹಕ್ಕೆ ಅಗತ್ಯವಾದ ಮತ್ತು ನಮ್ಮ ಆರೋಗ್ಯ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಪಾನೀಯದ ಕುರಿತು ತಿಳಿಯೋಣ.ತೂಕ ಇಳಿಕೆ,ಹಾಗು ಇನ್ನಿತರ ದೇಹ ಹಾಗು ಮಾನಸಿಕ ಸುಧಾರಣೆಗಾಗಿ ಬಹಳಷ್ಟು ಜನರು ಬೇರೆ ಬೇರೆ ಪಾನೀಯಗಳನ್ನು ಪ್ರಮೋಟ್ ಮಾಡುತ್ತಿದ್ದಾರೆ ಅದರೆ ಅವುಗಳಿಗೆ ಯಾವುದೇ ಆಧಾರವಿಲ್ಲ ಅದರೆ ಬ್ಲಾಕ್ ಕಾಫಿಯ ಕುರಿತು ಹಲವಾರು ಸಂಶೋದನೆಗಳು ಬಂದಿವೆ. ಈ ಸಂಶೋದನೆಗಳು ಬ್ಲಾಕ್ ಕಾಫಿ ಮಾನವನ ದೈಹಿಕ ಹಾಗು ಮಾನಸಿಕ ಆರೋಗ್ಯಕ್ಕೆ ಬಹಳ ಉತ್ತಮ ಎಂಬುದನ್ನು ತಿಳಿಸಿಕೊಟ್ಟಿವೆ ಇದರಲ್ಲಿರುವ ನಿಕೋಟಿನ್ ನರಮಂಡಲಗಳಲ್ಲಿ ರಕ್ತ ಸರಬರಾಜನ್ನು ವೇಗಗೊಳಿಸುತ್ತದೆ. ಇದರಿಂದ ನಮ್ಮ ಮೆದುಳು ಸಹ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತದೆ. ಹೀಗೆ ಹಲವಾರು ಉತ್ತಮ ಪ್ರಯೋಜನ ಗಳಿವೆ ಎಂಬುದನ್ನುತೋರಿಸಿವೆ.ಅದರೆ ಇದನ್ನು ಸರಿಯಾದ ವಿಧಾನದಲ್ಲಿ ಸೇವಿಸಿದಾಗ ಮಾತ್ರ ಇದರ ಉಪಯೋಗವಾಗುತ್ತದೆ.
ಬ್ಲಾಕ್ ಕಾಫಿ ಕುರಿತು ಮಾಹಿತಿ...
ನಾವು ಕಾಫಿ ಪುಡಿಗೆ ಯಾವುದೇ ಹಾಲು ,ಸಕ್ಕರೆ, ಮಿಶ್ರಣ ಮಾಡದಂತೆ ಕೇವಲ ಬಿಸಿ ನೀರನ್ನು ಸೇರಿಸಿ ಕುಡಿಯುವ ಕಾಫಿಯನ್ನು ಬ್ಲಾಕ್ ಕಾಫಿ(black coffe) ಎನ್ನುವರು .ಈ ಬ್ಲಾಕ್ ಕಾಫಿ ಸೇವನೆಯಿಂದ ನಮಗೆ ಬಹಳ ಉಪಯೋಗವಿದೆ . ಬ್ಲಾಕ್ ಕಾಫಿ ಒಂದು ಆರೋಗ್ಯ ಸಂಜೀವಿನಿಯಂತೆ ಕಾರ್ಯನಿರ್ವಹಿಸುತ್ತದೆ. ಸರಿಯಾದ ಸಮಯದಲ್ಲಿ ಸೇವನೆ ಮಾಡಿದರೆ ನಮ್ಮ ದೇಹದಲ್ಲಿ ಆರೋಗ್ಯಕರ ಬದಲಾವಣೆಗಳು ಉಂಟಾಗುತ್ತವೆ .ನಾವು ಜಿಮ್,ಅಥವಾ ಯಾವುದೇ ವ್ಯಾಯಮ ಮಾಡುತ್ತಿದ್ದರೆ ಬ್ಲಾಕ್ ಕಾಫಿ ತೆಗೆದುಕೊಂಡು ಶುರು ಮಾಡುವುದು ಉತ್ತಮ.ಎಕೆಂದರೆ ಇದು ನಮ್ಮ ದೇಹದಲ್ಲಿನ ಕೊಬ್ಬಿನ ಅಂಶಗಳನ್ನು ಕರಗಿಸಿ ಫ್ಯಾಟಿ ಕೋಶಗಳನ್ನು ಫ್ಯಾಟಿ ಆಸಿಡ್ಗಳಾಗಿ ಪರಿವರ್ತಿಸಿ ನಮ್ಮ ವ್ಯಾಯಮಕ್ಕೆ ಹೆಚ್ಚಿನ ಶಕ್ತಿ ದೊರೆಯುವಂತೆ ಮಾಡುತ್ತದೆ ಬ್ಲಾಕ್ ಕಾಫಿ ಕುಡಿದು ನಮ್ಮ ಕೆಲಸ ಶುರು ಮಾಡುವುದರಿಂದ ನಮ್ಮ ದೇಹದಲ್ಲಿ ಶೇ 50 ರಷ್ಟು metabolisam ಕಾರ್ಯೋನ್ಮಕವಾಗುತ್ತದೆ.ಈ ಮುಖಾಂತರ ಇಡೀ ದಿನ ನಾವು ಚಟುವಟಿಕೆಯಿಂದ ಕೆಲಸ ಮಾಡಲು ಸಹಕಾರಿಯಾಗುತ್ತದೆ.
ಬ್ಲಾಕ್ ಕಾಫಿ ಸೇವನೆಯಿಂದ ಉಂಟಾಗುವ ಲಾಭಗಳೇನು ತಿಳಿದುಕೊಳ್ಳೋಣ
ಸಾಮಾನ್ಯವಾಗಿ ಜನರಲ್ಲಿ ವಯಸ್ಸಾದಂತೆ ಜ್ಞಾಪಕ ಶಕ್ತಿಯ ಪ್ರಮಾಣ ಕುಸಿಯುತ್ತಾ ಹೋಗುತ್ತದೆ ಆದರೆ ಬ್ಲಾಕ್ ಕಾಫಿ ಸೇವನೆಯಿಂದ ನಮ್ಮ ಮೆದುಳಿನಲ್ಲಿರುವ ಜೀವಕೋಶಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ನಿಧಾನವಾಗಿ ಜ್ಞಾಪಕ ಶಕ್ತಿಯ ವೃದ್ಧಿ ಆಗುತ್ತದೆ ಹಾಗೂ ಇಡೀ ದಿನ ಚಟುವಟಿಕೆಯಿಂದ ಪಾಲ್ಗೊಳ್ಳುವಂತೆ ಕಾರ್ಯನಿರ್ವಹಿಸುತ್ತದೆ
ಹಾಗೆಯೇ ನರಮಂಡಲಕ್ಕೆ ಸಂಬಂಧಿಸಿದ ಡೆಮಾನ್ಷಿಯ ಎಂಬ ಕಾಯಿಲೆಯಿಂದ ನಮ್ಮನ್ನು ದೂರ ಮಾಡುತ್ತದೆ. ವ್ಯಾಯಾಮ ಮಾಡುವ ಮುನ್ನ ಬ್ಲಾಕ್ ಕಾಫಿ ಸೇವನೆಯಿಂದ ವ್ಯಾಯಾಮ ಮಾಡುವವರ ಕಾರ್ಯಕ್ಷಮತೆ ಹೆಚ್ಚುತ್ತಾ ಹೋಗುತ್ತದೆ
ಬ್ಲಾಕ್ ಕಾಫಿ ದೇಹದಲ್ಲಿನ ಕೊಬ್ಬಿನ ಜೀವಕೋಶಗಳನ್ನು ಕರಗಿಸಿ ಕೊಬ್ಬಿನ ಆಸಿಡ್ ಗಳಾಗಿ ಪರಿವರ್ತಿಸಿ ಇದನ್ನು ಶಕ್ತಿಯ ರೂಪದಲ್ಲಿ ಪರಿವರ್ತಿಸುತ್ತದೆ
ಬ್ಲಾಕ್ ಕಾಫಿ ನಮ್ಮ ಯಕೃತ್ತಿಗೆ ಅಮೃತವೆಂದೇ ಹೇಳಬಹುದು ಇದು ಯಕೃತ್ತಿನಲ್ಲಿರುವ ಕೊಬ್ಬಿನ ಅಂಶಗಳನ್ನು ಕರಗಿಸಿ ಯಕೃತ್ತನ್ನು ಸುಸ್ಥಿತಿಯಲ್ಲಿಡಲು ಸಹಕರಿಸುತ್ತದೆ ಹಾಗೂ ಯಕೃತ್ತಿಗೆ ಸಂಬಂಧಿಸಿದ ಅನೇಕ ಕಾಯಿಲೆಗಳಿಂದ ದೂರವಿಡುತ್ತದೆ ಮುಖ್ಯವಾಗಿ ಯಕೃತ್ತಿನ ಕ್ಯಾನ್ಸರ್ ಬೇಗ ಹರಡಬಹುದಾದ ಹಾಗೂ ವಾಸಿ ಮಾಡದ ಕಾಯಿಲೆಯಾಗಿದೆ ಇಂತಹ ಕಾಯಿಲೆಯಿಂದ ದೂರವಿರಲು ಬ್ಲಾಕ್ ಕಾಫಿ ಕುಡಿಯುವುದರಿಂದ ಸಾಧ್ಯ.
ನಮ್ಮ ಜಠರದಲ್ಲಿನ ಎಲ್ಲ ಕಲ್ಮಶಗಳನ್ನು ಹಾಗೂ ವಿಷಕಾರಿ ಅಂಶಗಳು ಬ್ಯಾಕ್ಟೀರಿಯಗಳನ್ನು ಮೂತ್ರದ ಮುಖಾಂತರ ಹೊರಹಾಕಲು ಬ್ಲಾಕ್ ಕಾಫಿ ಸಹಕಾರಿಯಾಗಿದೆ.
ಬ್ಲಾಕ್ ಕಾಫಿಯಲ್ಲಿರುವ ಕೆಫಿನ್ ಅಂಶವು ನಮ್ಮನ್ನು ಒತ್ತಡ ಮತ್ತು ಖಿನ್ನತೆಗಳಿಂದ ದೂರವಿರಿಸುತ್ತದೆ ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳಿಂದಾಗಿ ಕ್ಲೋರೋಜಿನಿಕ್ ಆಸಿಡ್ ಮತ್ತು ಮೆಲನೋಡಿನಿನ್ ಅಂಶಗಳು ದೇಹದಲ್ಲಿರುವ ಬ್ಯಾಕ್ಟೀರಿಯಗಳನ್ನು ನಿಯಂತ್ರಿಸುತ್ತವೆ ಕೆಫಿನ್ ನಮ್ಮ ದೇಹದಲ್ಲಿ ಹೆಚ್ಚು ಕ್ಯಾಲೋರಿಗಳು ಖರ್ಚಾಗುವಂತೆ ನೋಡಿಕೊಳ್ಳುತ್ತದೆ
ನಿದ್ರೆ ಬಾರದೇ ಇರುವವರು ಮಧ್ಯಾಹ್ನ 3:00 ಒಳಗೆ 2 ರಿಂದ 3 ಕಪ್ ಸೇವಿಸುವುದರಿಂದ ಇದರ ಉಪಯೋಗವನ್ನು ಪಡೆದುಕೊಳ್ಳಬಹುದು ಮೂರು ಗಂಟೆ ನಂತರ ತೆಗೆದುಕೊಂಡರೆ ಕೆಫಿನ್ ಎಂಬ ರಸಾಯನ ಎಂಟು ಗಂಟೆಯವರೆಗೂ ನಿದ್ರೆ ಬರದಂತೆ ನಮ್ಮ ಮೆದುಳನ್ನು ಕ್ರಿಯಾಶೀಲವಾಗಿಟ್ಟಿರುತ್ತದೆ ಆದ್ದರಿಂದ ಅವರಿಗೆ ರಾತ್ರಿ ನಿದ್ದೆ ಮಾಡಲು ಅನುಕೂಲವಾಗುವುದಿಲ್ಲ
ಬ್ಲಾಕ್ ಕಾಫಿಯಲ್ಲಿರುವ ಅಂಶಗಳು
ವಿಟಮಿನ್ d2, ವಿಟಮಿನ್ d3, ವಿಟಮಿನ್ d5, ಪೊಟ್ಯಾಶಿಯಂ, ಮೆಗ್ನೀಷಿಯಂ, ಮ್ಯಾಂಗನೀಸ್, ನಂತಹ ಅಮೂಲ್ಯ ವಿಟಮಿನ್ ಗಳನ್ನು ಬ್ಲಾಕ್ ಕಾಫಿ ಒಳಗೊಂಡಿದೆ ಹಾಗೂ ಒಂದು ಕಪ್ ಬ್ಲಾಕ್ ಕಾಫಿ2 ಕ್ಯಾಲೋರಿ ಯಷ್ಟು ಒಟ್ಟು ಶಕ್ತಿ ಇರುತ್ತದೆ ಅದರಲ್ಲಿ 0.3 ಗ್ರಾಂ ಪ್ರೋಟೀನ್ ಉಳಿದಂತೆ ವಿಟಮಿನ್ ಗಳು ಇರುತ್ತವೆ .
ಇಷ್ಟೆಲ್ಲಾ ಉಪಯೋಗವಿರುವ ಬ್ಲಾಕ್ ಕಾಫಿ ಯನ್ನು ದಿನನಿತ್ಯ ಸೇವಿಸಿ ಹಲವಾರು ರೋಗಗಳಿಂದ ವಿಮುಕ್ತರಾಗೋಣ ಹಾಗೂ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳೋಣ.

No comments:
Post a Comment