ಸ್ಕೌಟ್ಸ್ ಮತ್ತು ಗೈಡ್ಸ್‌ ವಿಶೇಷ ಮಾಹಿತಿ........

ಸ್ಕೌಟ್ಸ್‌ ಮತ್ತು ಗೈಡ್ಸ್

 ಪ್ರತಿ ವರ್ಷ ಫೆಬ್ರವರಿ 22 ರಂದು ವಿಶ್ವದಾದ್ಯಂತ ಸ್ಕೌಟ್ಸ್ ಮತ್ತು ಗೈಡ್ಸ್‌  ದಿನವನ್ನಾಗಿ ಆಚರಿಸಲಾಗುತ್ತದೆ.ಈ ದಿನ ಅಂತರಾಷ್ರ್ಟೀಯ ಸಂಸ್ಥೆಯಾಗಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಾಪಕರಾದ ಲಾರ್ಡ್ ಬೇಡೆನ್‌ ಪೊವೆಲ್‌ ರವರ ಜನ್ಮ ದಿನವಾಗಿದೆ.ಸದ್ಯ ಈ ಸಂಸ್ಥೆಯ ಸದಸ್ಯರ ಸಂಖ್ಯೆ 5 ಕೋಟಿ 70 ಲಕ್ಷವಾಗಿದೆ ಜಗತ್ತಿನ 176 ದೇಶಗಳಲ್ಲಿ ಈ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದೆ.

ಬಾಯ್‌ ಸ್ಕೌಟ್ಸ್‌  ಅಥವಾ ಬಾಲಚಮೂಚಾರರು ಗಳ ಕಲ್ಪನೆ ಬಂದದ್ದು ಇಂಗ್ಲೆಡಿನ ಲಾರ್ಡ ಬೇಡೆನ್‌ ಪೊವೆಲ್‌ ರವರಿಗೆ1907 ರಲ್ಲಿ ಬಾಯ್‌ ಸ್ಕೌಟ್ಸ್ ಜನ್ಮ ತಾಳಲು ಕಾರಣವಾಯಿತು.

ಈ ಸಂಸ್ಥೆಯ ಗುರಿ ಮತ್ತು ಉದ್ದೇಶಗಳು

ಬಾಲಕರ ದೇಹ ಹಾಗು ಮನಸ್ಸುಗಳನ್ನು ಆರೋಗ್ಯಕರವಾಗಿ ಬೆಳೆಸುವುದು.

ಅವರನ್ನು ತಮ್ಮ ಸಮುದಾಯದ ಅಥವಾ ದೇಶದ ಅಥವಾ ಜಗತ್ತಿನ ಉತ್ತಮ ಪ್ರಜೆಗಳನ್ನಾಗಿ ಮಾಡುವುದು ಮತ್ತು ಇದಕ್ಕಾಗಿ ಅವರಿಗೆ ತರಬೇತಿ ನೀಡುವುದು

ವಿಶ್ವದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಚಳುವಳಿಯನ್ನು ಯಾವುದೇ ಮತ ಪಂಥಗಳಿಗೆ ಅನ್ವಯಿಸದಂತೆ ಬೆಳೆಸಿ ಯಶಸ್ಸು ಕಂಡವರು ಲಾರ್ಡ್ ಬೆಡನ್ ಪೊವೆಲ್ .

ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಧ್ಯೇಯ ವಾಕ್ಯ ಬಿ ಪ್ರಿಪೇರ್ಡ್ ಅಂದರೆ ನಿನ್ನ ಕರ್ತವ್ಯವನ್ನು ಮಾಡಲು ಸದಾ ಸಿದ್ದನಾಗಿರು ಎಂದು ಅರ್ಥ ಸೇವೆಯೇ ಸ್ಕೌಟ್ಸ್ ಮತ್ತು ಗೈಡ್ಸ್ ಗಳ ಪರಮ ಗುರಿ ನಿಸ್ವಾರ್ಥ ಮನೋಭಾವ ಪರೋಪಕಾರ ಇವು ಈ ಸಂಸ್ಥೆಯ ಆದರ್ಶಗಳು.

ಭಾರತದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಇದ್ದು ಇದರ  ಕರ್ನಾಟಕದ ಶಾಖೆ  ಬೆಂಗಳೂರಿನಲ್ಲಿ ಇದೆ ಈ ಸಂಸ್ಥೆಯು ಹಲವಾರು ಪರೋಪಕಾರಿಗಳಲ್ಲಿ ತೊಡಗಿದೆ ಈ ಸಂಸ್ಥೆಯ ಧ್ಯೇಯ ಉದಾತ್ತವಾಗಿದ್ದು . ಸಮಾಜದಲ್ಲಿನ ಎಲ್ಲರೂ ನಿನ್ನ ಬಂಧುಗಳು ಎಂಬುದನ್ನು ಚಿಕ್ಕಂದಿನಲ್ಲಿಯೇ ಕಲಿಸುತ್ತಾ ಹೋಗುತ್ತದೆ.

ಲಾರ್ಡ್ ಬೆಡನ್ ಪೊವೆಲ್‌ ರವರ ಸಂಕ್ಷೀಪ್ತ ಮಾಹಿತಿ

ಲಾರ್ಡ್ ಬೆಡನ್ ಪೊವೆಲ್‌ ರವರು 1857ರ ಫೆಬ್ರವರಿ 22ರಂದು ಲಂಡನ್ ಪಟ್ಟಣದಲ್ಲಿ ಜನಿಸಿದರು ಇವರ ತಂದೆ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದರು ಬಾಲ್ಯದಿಂದಲೂ ಪ್ರತಿಬಾವಂತರಾಗಿದ್ದಬೇಡೆನ್ ಪೊವೆಲ್‌ ರವರು ತಮ್ಮ ಹತ್ತೊಂಬತ್ತನೆ ವಯಸ್ಸಿಗೆ ಸೈನ್ಯಕ್ಕೆ ಸೇರಿದರು.ಸ್ವಾರಸ್ಯದ ಸಂಗತಿ ಎಂದರೆ ಭಾರತದಲ್ಲಿ ಹಲವು ವರ್ಷಗಲ ಕಾಲ ಸೈನ್ಯದಲ್ಲಿದ್ದು ಸೇನಾಧಿಕಾರಿಯಾಗಿ ಸೇವೆ ಸಲ್ಲಿಸಿದರು. ಅಫ್ಘಾನಿಸ್ಥಾನ,ಆಫ್ರಿಕಾಗಳಲ್ಲಿ ಕೂಡ ಸೇವೆ ಸಲ್ಲಿಸಿದ್ದಾರೆ. ಆಪ್ರಿಕಾದಲ್ಲಿ ನಡೆದ ಬೋಯರ್‌ ಯುದ್ದದಲ್ಲಿ ಭಾಗವಹಿಸಿದ್ದಾರು. ನಂತರ ಅವರಿಗೆ ಸೇನೆಯಲ್ಲಿ ಮೇಜರ್‌ ಜನರಲ್‌ ಹುದ್ದೆ ನೀಡಲಾಯಿತು.ಯುದ್ದ ಭೂಮಿಯಲ್ಲಿ ಪೊವೆಲ್‌ ವೀರ ಯೋಧರಾಗಿರುತ್ತಿದ್ದರು.

ಸ್ಕೌಟ್ಸ ಚಳುವಳಿಯನ್ನು ಪೊವೆಲ್‌ ರವರು ಆರಂಭಿಸಿದ್ದೆ  ಒಂದು ರೋಮಾಂಚಕಾರಿ ಅನುಭವ .ಒಮ್ಮೆ ಅಂದರೆ 1907 ರಲ್ಲಿ ಬ್ರೌನ್‌ ಸೀ ದ್ವೀಪದಲ್ಲಿ ಒಂದು ಶಿಬಿರ  ನಡೆದು ಯಶಸ್ವಿಯಾದಾಗ ಅಲ್ಲಿ ಪಡೆದ ಅನುಭವಗಳ ಕುರಿತು ಪೊವೆಲ್‌ 1908 ರಲ್ಲಿಸ್ಕೌಟಿಂಗ್‌ ಫಾರ್‌ ಬಾಯ್ಸ್‌ ಎಂಬ ಪುಸ್ತಕವನ್ನು ಬರೆದರು. ಇದೇ ಅವರಿಗೆ ಸ್ಕೌಟ್ಸ್‌  ಚಳುವಳಿ ಪ್ರಾರಂಭಿಸಲೂ ಸ್ಪೂರ್ತಿ ನೀಡಿತು ಇದು  ಆರಂಭವಾದ ಕೆಲವೇ ವರ್ಷಗಳಲ್ಲಿ ಇಡೀ ವಿಶ್ವದ ಹಲವೆಡೆಗಳಲ್ಲಿ ಅಸ್ತಿತ್ವಕ್ಕರ ಬಂದು ಬಾಲಕರು ಅಧಿಕ ಸಂಖ್ಯೆಯಲ್ಲಿ  ಸ್ಕೌಟ್ಸ್‌ ಕಾರ್ಯಕ್ರಮಗಳಲ್ಲಿ ಭಾಗವಹಿಸತೊಡಗಿದರು.ಸ್ಕೌಟಿಂಗ್‌ ಒಂದು ಸೇವಾ ಕಾರ್ಯ. ಬೇಡೆನ್‌ ಪೊವೆಲ್‌ ತಾವು ಗಳಿಸಿಕೊಂಡಿದ್ದ ಅಪಾರ ಅನುಭವವನ್ನು  ಸ್ಕೌಟ್ಸ್‌ ಚಳುವಳಿಯ ಉನ್ನತಿಗೆ ಧಾರೆ ಎರೆದರು.ಪ್ರತಿಯೊಬ್ಬ ಬಾಲಕ ಯುವಕನು ಸೇವಾಕಾರ್ಯಗಳಲ್ಲಿ ಭಾಗಿಯಾಗಿ ವಿಶ್ವಮಾನವ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲೂ ಈ ಚಳುವಳಿ ನೆರವಾಯಿತು.

ಕೇವಲ ಬಾಲಕರಿಗೆ ಅಲ್ಲದೆ ಬಾಲಕಿಯರಿಗೂ ಅವಕಾಶ ಕಲ್ಪಿಸಲು ಸ್ಕೌಟ್ಸ್‌ ಮಾದರಿಯ ಚಳುವಳಿಯನ್ನು  1910 ರಲ್ಲಿ ಆರಂಭಿಸಿದರು ಇದಕ್ಕಿಟ್ಟ ಹೆಸರು‌ ಗರ್ಲ್ ಗೈಡ್‌ ಚಳುವಳಿ  ಇದುಬಾಲಕಿಯರಲ್ಲಿ ಬಾಹ್ಯ ಚಟುವಟಿಕೆಗಳ ಜೊತೆಗೆ ಗೃಹ ಕೃತ್ಯಗಳಲ್ಲಿ ಅವರನ್ನು ಪರಿಣಿತಿಗೊಳಿಸಲು ತರಬೇತಿ ನೀಡಲಾಗುತ್ತದೆ . ಈ ಸಂಸ್ಥೆಯು ಇಂದು ಅಂತಾರರಾಷ್ಟೀಯ ಮಟ್ಟದವರೆಗು ಬೆಳೆದಿದೆ.

ನಮ್ಮ ರಾಜ್ಯದಲ್ಲಿ1918 ರಲ್ಲಿಬಾಯ್‌ ಸ್ಕೌಟ್ಸ ಸಂಸ್ಥೆಯೂ ,1927 ರಲ್ಲಿ ಗರ್ಲ್‌ ಗೈಡ್ಸ್‌ ಸಂಸ್ಥೆಯು ಆರಂಭವಾದವು ಈ ಸಮಸ್ಥೆಯು ಹಲವಾರು ಉಪಯುಕ್ತ ಚಟುವಟಿಕೆಗಳಲ್ಲಿ ತೊಡಗಿದೆ ಗ್ರಾಮೀಣ ಅಭಿವೃದ್ದಿ, ವಯಸ್ಕರ ಶಿಕ್ಷಣ, ಕುಷ್ಟರೋಗ ನಿಯಂತ್ರಣ ಮೊದಲಾದ ಸಮಾಜ ಸೇವಾ ಕಾರ್ಯ ಗಳಲ್ಲಿ ತೊಡಗಿದೆ .ಇಂದಿಗೂ ಇ ಸಮಸ್ಥೆಯು ಎಲ್ಲೆ ಅವಘಡಗಳಾಗಲಿ ಮುಂದಿರುತ್ತದೆ ಮತ್ತು ಹಲವಾರು ಕಾರ್ಯಕ್ರಮಗಳಲ್ಲಿ ಸೇವಾ ಕಾರ್ಯ ಮುಂದುವರೆಸಿದೆ.‌ ನಿಮ್ಮ ಮನೆಯ ಮಕ್ಕಳು ಯಾರಾದರು ಸ್ಕೌಟ್ಸ್‌ ಮತ್ತು ಗೈಡ್ಸ್‌ ಸೇರುತ್ತೇನೆ ಎಂದರೆ ಅನುಮತಿ ಕೊಡಿ ಅದು ನಿಮ್ಮ ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕಾರಣವಾಗುತ್ತದೆ. ಎಲ್ಲ ಮಕ್ಕಳೊಂದಿಗೆ ಬೆರೆತು ಕೂಡಿ ಬಾಳುವ ಹಾಗೂ ಹಂಚಿಕೊಂಡು ತಿನ್ನುವ ಗುಣ ಬೆಳೆಸಿಕೊಳ್ಳತ್ತಾರೆ.










No comments:

Post a Comment