ಖಾಲಿ ಹೊಟ್ಟೆಗೆ ಬಿಸಿ ನೀರಿನೊಂದಿಗೆ ತುಪ್ಪ ಸೇರಿಸಿ ತೆಗೆದುಕೊಡರೆ ಉಂಟಾಗುವ ಲಾಭಗಳು.....


ತುಪ್ಪದ ಮಹತ್ವ...

ನಮ್ಮ ಭಾರತೀಯ ವೈದ್ಯಕೀಯ ಪದ್ಧತಿಯಲ್ಲಿ ತುಪ್ಪಕ್ಕೆ ಅಗ್ರಸ್ಥಾನ ಇದೆ ಹಲವಾರು ಶತಮಾನಗಳಿಂದ ಭಾರತದಲ್ಲಿ ತುಪ್ಪವನ್ನು ವೈದ್ಯಕೀಯ ಔಷಧಿಯಾಗಿ ಬಳಸುತ್ತಿದ್ದಾರೆ. ಸಾಲ ಮಾಡಿ ಆದರೂ ತುಪ್ಪ ತಿನ್ನು ಎಂದು ನಮ್ಮ ಹಿರಿಯರು ಹೇಳುತ್ತಿದ್ದರು ಅವರು ಹೀಗೆ ಹೇಳುವುದಕ್ಕೆ ಕಾರಣ ತುಪ್ಪದಲ್ಲಿರುವ ಅನೇಕ ಒಳ್ಳೆಯ ಅಂಶಗಳು ಔಷಧಿಯ ಗುಣಗಳು ತುಪ್ಪವು ದೇಹಕ್ಕೆ ಬಹಳ ಒಳ್ಳೆಯದು ಇದರಿಂದ ಬಿಡುಗಡೆಯಾಗುವ ಫ್ಯಾಟಿ ಆಸಿಡ್ ಗಳು ನಮ್ಮ ಚರ್ಮ ಹಾಗೂ ಇನ್ನಿತರೆ ಭಾಗಗಳನ್ನು ಸುರಕ್ಷಿತವಾಗಿಡುತ್ತವೆ

ಹಾಲುತುಪ್ಪ ದಿನನಿತ್ಯ ಸೇವಿಸುವುದು ತಮ್ಮ ಜೀವನದ ಒಂದು ಭಾಗ ಮಾಡಿಕೊಂಡವರ ಆರೋಗ್ಯ ತುಂಬಾ ಚೆನ್ನಾಗಿರುತ್ತೆ ಕಾರಣ ಹಾಲು ಮತ್ತು ತುಪ್ಪಗಳಲ್ಲಿರುವ ವಿಶೇಷ ಲ್ಯಾಕ್ಟಿನ್ ಎಂಬ ಪದಾರ್ಥ ಇದು ನಮ್ಮ ದೇಹದ ಎಲ್ಲಾ ಅಂಗಗಳಿಗೆ ಬೇಕಾದ ಫ್ಯಾಟಿ ಆಸಿಡ್ ಗಳನ್ನು ಸರಬರಾಜು ಮಾಡುತ್ತದೆ

ತುಪ್ಪದಲ್ಲಿರುವ ವೈರಸ್ , ಬ್ಯಾಕ್ಟೀರಿಯ ನೀರೊದಕ ಶಕ್ತಿಯು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ  ಕ್ಯಾನ್ಸರ್ ನಿರೋಧಕ ಗುಣಗಳಿವೆ ಕ್ಯಾನ್ಸರ್ ಬರದಂತೆ ಕಾಪಾಡುವ ಅಮೃತ  ತುಪ್ಪವಾಗಿದೆ.  ಆಯುರ್ವೇದ ಶಾಸ್ತ್ರದಲ್ಲಿ ತುಪ್ಪಕ್ಕೆ ಮೊದಲ ಸ್ಥಾನ ಇದನ್ನ ಭೂಲೋಕದ ಅಮೃತ ಎಂದು ಕರೆಯುತ್ತಾರೆ

ತುಪ್ಪದ ಔಷಧಿಯ ಗುಣಗಳು

ತುಪ್ಪವು ನಮ್ಮ ಆಯಸ್ಸನ್ನು ಹೆಚ್ಚು ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ .ಚರ್ಮಕ್ಕೆ ಒಳ್ಳೆಯ ಕಾಂತಿಯನ್ನು ನೀಡುತ್ತದೆ, ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ .ಮಲಬದ್ಧತೆ ನಿವಾರಣೆ ಮಾಡುತ್ತದೆ .ಕೂದಲು ಉದುರುವುದನ್ನು ತಡೆಯುತ್ತದೆ. ಬಿಳಿಯ ಕೂದಲುಗಳನ್ನು ಕಪ್ಪಾಗಿಸುತ್ತದೆ. ಮಕ್ಕಳಲ್ಲಿ ಬುದ್ಧಿಶಕ್ತಿ ಹೆಚ್ಚಾಗಲು ತುಪ್ಪ ಸೇವಿಸಬೇಕು. ವಯಸ್ಕರಲ್ಲಿ ಉಂಟಾಗುವ ಅಲ್ಜೈಮರ್ ಕಾಯಿಲೆ ತಡೆಗಟ್ಟಲು ಸಹಕಾರಿಯಾಗುತ್ತದೆ. ಮಂಡಿ ನೋವು  ನಿವಾರಕವಾಗಿ ಕೆಲಸ ಮಾಡುತ್ತದೆ ತುಪ್ಪವು ಆಸ್ತಿ ಮಜ್ಜೆ ಚಲನೆಗೆ ಸಹಕಾರಿಯಾಗುತ್ತದೆ .

ತುಪ್ಪ ಸೇವನೆ ಮಾಡದೆ ಇರುವುದರಿಂದ ಬರುವ ಕಾಯಿಲೆಗಳು

ಮರೆವಿನ ಕಾಯಿಲೆ. ಮಂಡಿ ನೋವು. ಹಲವಾರು ಚರ್ಮ ರೋಗಗಳು ಉಂಟಾಗುವ ಸಂಭವವಿರುತ್ತದೆ.

 ರಕ್ತದಲ್ಲಿ ಎಚ್ ಡಿ ಎಲ್ ಕಡಿಮೆಯಾಗುವ ಸಂಭವ ಇರುತ್ತೆ, 

ತುಪ್ಪ ತಯಾರಿಕೆ ವಿಧಾನ

ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಹಾಲನ್ನು ಕಾಸಿ ಅದರ ಕೆನೆಯಿಂದ ತುಪ್ಪವನ್ನು ತಯಾರಿಸುವ ಪದ್ಧತಿ ಹೆಚ್ಚಾಗುತ್ತಿದೆ .ಇದರಿಂದ ತುಪ್ಪದಲ್ಲಿರುವ ಅನೇಕ ಔಷಧೀಯ ಗುಣಗಳು ಈ ತುಪ್ಪವನ್ನು ಸೇವಿಸಿದಾಗ ನಮಗೆ ಸಿಗುವುದಿಲ್ಲ .ನಮಗೆ ತುಪ್ಪವನ್ನು ಸರಿಯಾದ ರೀತಿಯಲ್ಲಿ ತಯಾರಿಸಿದಾಗ ಮಾತ್ರ ಅದರ ಔಷಧಿಯ ಗುಣಗಳು ಸಿಗುತ್ತವೆ. ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ತಿಳಿಸಿದಂತೆ ಹಾಲಿನಿಂದ ಮೊಸರನ್ನ ತಯಾರಿಸಿ ಮೊಸರಿನಿಂದ ಬೆಣ್ಣೆ ತೆಗೆದು ತುಪ್ಪ ತಯಾರಿಸಿದಾಗ ಮಾತ್ರ ಅದರಲ್ಲಿನ ಔಷಧೀಯ ಗುಣಗಳು ನಮಗೆ ಸೇವಿಸಿದಾಗ ಲಭ್ಯವಾಗುತ್ತದೆ.ಹಸುವಿನ ಹಾಲಿನಿಂದ ತಯಾರಿಸಿದ ತುಪ್ಪವು ಬಹಳ ಶ್ರೇಷ್ಠವಾಗಿರುತ್ತದೆ.

ತುಪ್ಪವನ್ನು ಯಾವಾಗ ಸೇವಿಸಬೇಕು ಮತ್ತು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು.

ಬೆಳಗ್ಗೆ ಎದ್ದ ತಕ್ಷಣ   ಒಂದು ಲೋಟ ಬಿಸಿನೀರಿಗೆ  5 ರಿಂದ 10ml  ತುಪ್ಪ ಸೇರಿಸಿ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದು ಸರಿಯಾದ ವಿಧಾನವಾಗಿದೆ. ತುಪ್ಪ ಸೇವಿಸುವಾಗ ತೆಗೆದುಕೊಳ್ಳಬಹುದಾದ ಪಥ್ಯಗಳು  ತುಪ್ಪವನ್ನು ತಂಗಳು ಅನ್ನದ ಜೊತೆಗೆ ಬೆರೆಸಿ ಸೇವಿಸಬಾರದು, ಮೊಸರಿನ ಜೊತೆ ಸೇವಿಸಬಾರದು ,ಜೇನುತುಪ್ಪದ ಜೊತೆಗೆ  ಸಮ ಪ್ರಮಾಣದಲ್ಲಿ ಬೇರೆಸಿ ಸೇವಿಸಬಾರದು ಈ ರೀತಿ ಸೇವಿಸುವುದರಿಂದ ಅನಾರೋಗ್ಯಕರವಾದ  ಪರಿಣಾಮಗಳು ಉಂಟಾಗಬಹುದು

ತುಪ್ಪದಿಂದ ಮಾಡಿದ ಸಿಹಿ ಪದಾರ್ಥಗಳು ಸೇವಿಸಿದ ಮೇಲೆ ಬಿಸಿ ನೀರನ್ನ ಕುಡಿಯಲೇಬೇಕು. ಏಕೆಂದರೆ ಇದರಿಂದ ಅಜೀರ್ಣದ ಸಮಸ್ಯೆ. ಹಾಗೂ ಆಸಿಡಿಟಿ  ಉಂಟಾಗುವ ಸಾಧ್ಯತೆ ಇರುತ್ತದೆ .ಗಂಟಲಲ್ಲಿ ಕೆರೆತ ಉಂಟಾಗಬಹುದು ತುಪ್ಪವನ್ನು ಬಿಸಿ ಆಹಾರದ ಜೊತೆಗೆ ಸೇವಿಸಿದಾಗ ನಮಗೆ ಸರಿಯಾದ ಲಾಭ ಸಿಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ತುಪ್ಪಗಳಲ್ಲಿ ಅಷ್ಟು ಔಷಧೀಯ ಗುಣಗಳಿರುವುದಿಲ್ಲ ಏಕೆಂದರೆ ಅದು ತಯಾರು ಮಾಡುವ ವಿಧಾನ ಪಾಶ್ಚರೀಕರಣ ವಿಧಾನವಾಗಿದೆ . 

ಯಾವ ಯಾವ ಕಾಯಿಲೆಗಳಿಗೆ ಯಾವ  ವಿಧಾನದಲ್ಲಿ ತುಪ್ಪ ಸೇವಿಸುವುದರಿಂದ ಕಾಯಿಲೆಗಳು ವಾಸಿ ಮಾಡಬಹುದು

 ಮಲಬದ್ಧತೆಯಿಂದ ಮೂಲವ್ಯಾಧಿ ,ಮಹಿಳೆಯರಲ್ಲಿ ಋತುಸ್ರಾವದ ಸಮಸ್ಯೆಗಳು, ಗರ್ಭಧಾರಣೆಯ ಸಮಸ್ಯೆಗಳು ,ಮಂಡಿ ನೋವು ಈ ರೀತಿ ಎಲ್ಲಾ ಕಾಯಿಲೆಗಳಿಗೂ ತುಪ್ಪವನ್ನು ಉಪಹಾರ ಸೇವಿಸುವುದಕ್ಕೂ ಮುಂಚೆ ಒಂದು ಚಮಚ ತುಪ್ಪವನ್ನು ಒಂದು ಲೋಟ ಬಿಸಿ ನೀರಲ್ಲಿ ಬೆರೆಸಿ ಸೇವಿಸಿದರೆ ಉಪಯುಕ್ತವಾಗುತ್ತದೆ.

ಹೃದಯ ಸಂಬಂಧಿತ ಕಾಯಿಲೆಗಳಲ್ಲಿ ಕಾಯಿಲೆಗಳಿಗೆ ತುಪ್ಪವನ್ನು ಊಪಹಾರದ ನಂತರ ಒಂದು ಚಮಚ ಬಿಸ್ನೀರಿಗೆ ಬೆರೆಸಿ ತೆಗೆದುಕೊಳ್ಳುವುದರಿಂದ ಪರಿಹಾರ ಸಿಗುತ್ತದೆ

 ಒಣ ಕೆಮ್ಮು ಅಥವಾ ಇನ್ನಿತರೆ ಶ್ವಾಸಕೋಶಗಳ ಸಮಸ್ಯೆಗಳಿಗೆ ತುಪ್ಪವನ್ನು ಬಿಸಿ ಆಹಾರದ ಜೊತೆಗೆ ಸೇವಿಸುವುದರಿಂದ ಈ ಕಾಯಿಲೆಗಳಿಂದ ದೂರವಾಗ ಬಹುದು.

 ಕೂದಲು ಉದುರುವುದು,ತಲೆನೋವಿನ ಸಮಸ್ಯೆಗಳು, ಕಿವಿನೋವಿಗೆ  ಸಂಬಂಧಿಸಿದ ಕಾಯಿಲೆಗಳು, ಕಣ್ಣಿನ ದೃಷ್ಟಿ ಕಡಿಮೆಯಾಗುವುದು, ಹಾಗೂ ಮಲಬದ್ಧತೆಯ ಸಮಸ್ಯೆ ,,ನಿದ್ರೆ ಕಡಿಮೆ ಮಾನಸಿಕ ಒತ್ತಡ, ಉದ್ವೇಗ, ಇಂತಹ ಸಮಸ್ಯೆಗಳಿಗೆ ರಾತ್ರಿ ಊಟವಾದ ನಂತರ ಒಂದು ಚಮಚ ತುಪ್ಪವನ್ನು ಒಂದು ಲೋಟ ಬಿಸಿ ನೀರಿಗೆ ಸೇರಿಸಿ ತೆಗೆದುಕೊಳ್ಳುವುದರಿಂದ ಈ ಸಮಸ್ಯೆಗಳಿಗೆ ಮುಕ್ತಿ ಹಾಡಬಹುದು

ತುಪ್ಪವನ್ನು ಬಾಹ್ಯವಾಗಿ ಯಾವ್ಯಾವ ಸಮಸ್ಯೆಗಳಿಗೆ ತೆಗೆದುಕೊಳ್ಳಬಹುದು

ನಾವು ತೆಗೆದುಕೊಳ್ಳುವ ಪ್ರತಿ ವಾಸನೆಯೂ ನಮ್ಮ ಮೂಗಿನಿಂದ ನೇರವಾಗಿ ಮೆದಳಿಗೆ ರವಾನೆ ಆಗುತ್ತದೆ ಅಲ್ಲಿರುವ ಜೀವಕೋಶಗಳಿಗೆ  ಕ್ರಿಯಾಶೀಲತೆಯನ್ನು ನೀಡುತ್ತದೆ. ಆದ್ದರಿಂದ ತುಪ್ಪವನ್ನು ರಾತ್ರಿ ಮಲಗುವ ಮುಂಚೆ ಎರಡು ಹನಿ  ಮೂಗಿಗೆ ಹಾಕಿಕೊಂಡು ಮಲಗುವುದರಿಂದ ನಿದ್ರೆಯು ಉತ್ತಮವಾಗುತ್ತದೆ. ನೆಗಡಿ ,ಮಲಗಿದಾಗ ಗೊರಕೆ ಬರುವುದು ಕಡಿಮೆಯಾಗುತ್ತದೆ ಹಾಗೂ ಮೆದುಳಿನ ಕ್ರಿಯಾಶೀಲತೆ ಹೆಚ್ಚುತ್ತದೆ .  ಬಿಸಿಯಾದ ಆಹಾರ ಪದಾರ್ಥಗಳಿಗೆ ತುಪ್ಪವನ್ನು ಬೆರೆಸಿ ತಿನ್ನುವುದರಿಂದ ಆಹಾರ ಪದಾರ್ಥಗಳಲ್ಲಿರುವ ವಿಟಮಿನ್ ಗಳು ಪ್ರೋಟೀನ್ ಗಳು ದೇಹಕ್ಕೆ ಹೀರಿಕೊಳ್ಳಲು ತುಪ್ಪ ಸಹಕಾರಿ. ಒಳ್ಳೆಯ ಕೊಬ್ಬು ದೇಹಕ್ಕೆ ಪೂರಕ ಎನ್ನುವುದು  ವೈಜ್ಞಾನಿಕವಾಗಿ ಸಾಬೀತಾಗಿರುವ ಅಂಶವಾಗಿದೆ. ಪ್ರತಿದಿನ ಊಟದ ಜೊತೆ ಒಂದಷ್ಟು ತುಪ್ಪ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ತುಪ್ಪದಲ್ಲಿನ ಕ್ಯಾಲೋರಿ ಪೋಷಕಾಂಶಗಳು ಬ್ಯಾಕ್ಟೀರಿಯ ವಿರುದ್ಧ ಹೋರಾಡುವ ಗುಣವನ್ನು ಹೊಂದಿವೆ ಆದ್ದರಿಂದ ಅನೇಕ ಪ್ರಯೋಜನಗಳಿವೆ ತುಪ್ಪವನ್ನು ಪ್ರತಿದಿನ ಉಪಹಾರಕ್ಕೆ ಅರ್ಧ ತಾಸು ಮುಂಚೆ ಬಿಸಿನೀರಿನೊಂದಿಗೆ ಸೇವಿಸುವುದರಿಂದ ನಾವು ಹಲವಾರು ರೋಗಗಳಿಂದ ದೂರವಿರಬಹುದು.

ತುಪ್ಪವು ಕೊಬ್ಬು ಕರಗುವ ವಿಟಮಿನ್ ಗಳು ಹಾಗೂ ಆರೋಗ್ಯಕರ ಫ್ಯಾಟಿ ಆಸಿಡ್ ಗಳಿಂದ ಕೂಡಿದೆ ತುಪ್ಪದಲ್ಲಿರುವ ಪ್ಯಾಟಿಕ್ ಆಮ್ಲವು ಕರುಳಿನ ಪದರದ ಆರೋಗ್ಯಕ್ಕೆ ನೆರವಾಗುತ್ತದೆ. ತುಪ್ಪವು ಜೀರ್ಣಕ್ರಿಯೆ ಹೆಚ್ಚಾಗುವಂತೆ ಮಾಡುತ್ತದೆ .ಶೀತಾ ಮತ್ತು ಕಟ್ಟಿದ ಮೂಗಿಗೆ ತುಪ್ಪ ಸೇವನೆ ರಾಮಬಾಣ ಎಂದು ಹೇಳಬಹುದು .ತುಪ್ಪದಲ್ಲಿರುವ ಅಮೈನೋ ಆಮ್ಲಗಳು ಕೊಬ್ಬನ್ನು ಕರಗಲು ಸಜ್ಜುಗೊಳಿಸಿ ಕೊಬ್ಬನ್ನು ಕುಗ್ಗಿಸಲು ಸಹಕಾರಿಯಾಗುತ್ತದೆ.  ಮಧುಮೇಹದಿಂದ ಬಳಲುತ್ತಿದ್ದರೆ ಅನ್ನ ಹಾಗೂ ಗೋಧಿಯಿಂದ ತಯಾರಿಸಿದ ಆಹಾರ ಸೇವನೆಯು ಒಳ್ಳೆಯದಲ್ಲ ಇವುಗಳು ಅಧಿಕ ಗ್ಲೈಕೋಜನಿಕ್ ಸಂಕೀರ್ಣ ಆಹಾರ ಪದಾರ್ಥಗಳೆಂದು ಕರೆಯುತ್ತಾರೆ ಇಂತಹ ಪದಾರ್ಥಗಳಿಗೆ ತುಪ್ಪವನ್ನು ಸವರಿ ತಿನ್ನುವುದರಿಂದ ಅವುಗಳ ಜೀರ್ಣಕ್ರಿಯೆ ಸರಾಗವಾಗಿ ಸಾಗುತ್ತದೆ ತುಪ್ಪದಲ್ಲಿರುವ ಪರಿಪೂರ್ಣ ಕೊಬ್ಬು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ನಾಶ ಮಾಡುತ್ತದೆ.











No comments:

Post a Comment