ದಿನ ನಿತ್ಯದ ಆಹಾರ ಪದರ್ಥಗಳಿಂದ ಕೀಲು ನೋವಿಗೆ ಪರಿಹಾರವಿದೆ ....


ಕೀಲು ನೋವು ಸಮಸ್ಯೆ ಎಕೆ ಬರುತ್ತದೆ....?
ನಮ್ಮ ದೇಶದಲ್ಲಿ ಕೀಲು ನೋವಿಗೆ ಸಂಬಂಧಿಸಿದಂತೆ ಶೇಕಡ 10 ರಷ್ಟು ಜನರು ಈ ಬಾದೆಯಿಂದ ಬಳಲುತ್ತಿದ್ದಾರೆ . ಮನುಷ್ಯ ಸತತ ಚಟುವಟಿಕೆಗಳಿಂದ ಉತ್ಸಾಹಿ ಆಗಿರಬೇಕಾದರೆ  ಕೈ ಕಾಲುಗಳು ಚೆನ್ನಾಗಿ ಕೆಲಸ ಮಾಡಬೇಕು ಆಗ ತಾನೇ ಅವನು ತಾನು ಅಂದುಕೊಂಡಿದ್ದನ್ನು ಸಾಧಿಸಬಹುದು.ಕೈ ಕಾಲುಗಳು ಚೆನ್ನಾಗಿ ಕೆಲಸ ಮಾಡಬೇಕಾದರೆ ಕೀಲುಗಳಲ್ಲಿರುವ ದ್ರವ್ಯ (synovial fluid) ಚೆನ್ನಾಗಿ ನಿರ್ವಹಿಸಬೇಕಾಗುತ್ತದೆ. ಕೀಲುಗಳು ನಮ್ಮ ದೇಹದಲ್ಲಿ ಸಹಉಪಯೋಗಿ ಅಂಗವಾಗಿ ಕೆಲಸ ಮಾಡುತ್ತವೆ. ನಾವು ತಿನ್ನುವ ಆಹಾರದಲ್ಲಿ ಪೋಷಕಾಂಶಗಳು ಕಡಿಮೆಯಾದರೆ ಕೀಲು  ನೋವು ಕಾಣಿಸಿಕೊಳ್ಳುತ್ತದೆ .ಹಾಗೂ ನಮ್ಮ ದೇಹದಲ್ಲಿ ನಂಜು(infection) ಉಂಟಾದರೆ  ಕಾಣಿಸಿಕೊಳ್ಳಬಹುದು ಕೀಲು ನೋವು ಹೆಚ್ಚಾಗಿ ನಮ್ಮ ವಂಶವಾಹಿಗಳಿಂದ ಬರಬಹುದು ಅಥವಾ ನಮ್ಮ ಜೀವನ ಶೈಲಿಯಿಂದ ಕೂಡ ಉಂಟಾಗಬಹುದು. ಹಳೆ ಕಾಲದಲ್ಲಿ ಜನರು ಹೆಚ್ಚು ಚಟುವಟಿಕೆಯಿಂದ ಕೆಲಸಗಳನ್ನು ಮಾಡುತ್ತಿದ್ದರು. ಆದರೆ ಇಂದಿನ ಜೀವನಶೈಲಿಯು ಕೇವಲ ಕುಳಿತಲ್ಲಿಯೇ ಜಗತ್ತನ್ನು ನಿರ್ವಹಿಸಬಹುದಾಗಿದೆ. ಯಾವುದೇ ಚಟುವಟಿಕೆ ಇಲ್ಲದೆ ಕುಳಿತಲ್ಲಿಯೇ ಎಲ್ಲವನ್ನು ಮಾಡುವ ನಮ್ಮ ಜೀವನ ಶೈಲಿ  ಈ ಕಾರಣದಿಂದಾಗಿಯೂ ಕೀಲು ನೋವು ಉಂಟಾಗುತ್ತದೆ. ಅಥವಾ ಮೂಳೆಗಳು ಫ್ರಾಕ್ಚರ್ ಆದಂತಹ ಸಂದರ್ಭದಲ್ಲಿ ಕೀಲು ನೋವುಗಳು ಕಾಣಿಸಿಕೊಳ್ಳಬಹುದು ಕ್ರೀಡೆಗಳಲ್ಲಿ ವ್ಯಾಯಾಮಗಳಲ್ಲಿ ತಮ್ಮನ್ನು ತಾವು ತೊಡಗಿಸದೆ ಇರುವುದರಿಂದ ಕಾಣಿಸಿಕೊಳ್ಳಬಹುದು.

ಸಾಮಾನ್ಯವಾಗಿ ವಯ್ಯಸ್ಸಾದಂತೆ ಮೊಣಕಾಲುಗಳಲ್ಲಿನ ದ್ರವ್ಯ ಸವೆಯುತ್ತ ಹೋಗುತ್ತದೆ.ಇದರಿಂದ ಪ್ರತಿ ಹೆಜ್ಜೆ ಇಟ್ಟಾಗಲೂ ನೋವು ಕಾಣಿಸಿಕೊಳ್ಳುತ್ತದೆ. ಕೀಲುಗಳಲ್ಲಿರುವ  ದ್ರವ್ಯ ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ ನಡೆಯಲು ಸಾದ್ಯವಾಗುವುದಿಲ್ಲ.ಈ ಸಮಸ್ಯೆಗಳು ಇತ್ತೀಚೆಗೆ 30 ವರ್ಷದವರಿಂದ ಪ್ರಾರಂಭವಾಗುತ್ತಿದೆ. ಇದನ್ನು ನಿರ್ಲಕ್ಷ್ಯ ಮಾಡುವುದರಿಂದ ಮೊಣಕಾಲು ಮೂಳೆಗಳ ಸವೆತ ಉಂಟಾಗಿ ಕೊನೆಗೆ ಸರ್ಜರಿ ಮಾಡಿಸಿಕೊಳ್ಳಬೇಕಾಗುತ್ತದೆ. ಇದನ್ನು ಆರಂಭದಲ್ಲಿಯೇ ಗುರುತಿಸಿ ಹಾಗು ಆಹಾರದಲ್ಲಿ ಬದಲವಾಣೆ ಮಾಡಿಕೊಳ್ಳುವುದರಿಂದ ಪುನಃ ಕೀಲುಗಳ  ದ್ರವ್ಯವನ್ನು ಹೆಚ್ಚಿಸಿ ಕೊಳ್ಳಬಹುದು. ವಾಹನಗಳಲ್ಲಿನ  ಭಾಗಗಳು ಸವೆಯದಂತೆ  ಹೇಗೆ ನಾವು ಗ್ರೀಸ್‌ ಬಳುಸುತ್ತವೆಯೋ ಹಾಗೆಯೇ  ನಮ್ಮ ಕೀಲುಗಳಲ್ಲಿರುವ ದ್ರವ್ಯ ಹೆಚ್ಚಾಗಬೇಕೆಂದರೆ ಅದಕ್ಕೆ ಸೂಕ್ತವಾದ ಆಹಾರ ಸೇವನೆ ಅಗತ್ಯ. ಮೂಳೆ ಮತ್ತು ಕೀಲು ಸವೆತ ಉಂಟಾಗುವುದು ನಮ್ಮ ದೇಹದಲ್ಲಿ ಸೋಡಿಯಂ ಶೇಖರಣೆಯಿಂದ  ನಮ್ಮ ಆಹಾರದಲ್ಲಿ ಸೋಡಿಯಂ ಸೇವನೆ ಕಡಿಮೆ ಮಾಡಬೇಕು.
   
ಈ ಕೀಲು ನೋವಿಗೆ ನಮ್ಮ ದಿನನಿತ್ಯ ಬಳಸುವ ಆಹಾರ ಪದಾರ್ಥಗಳೇ ಔಷಧಿಯಾಗಿ ಬಳಸಬಹುದು ಅಂತಹ ಪದಾರ್ಥಗಳು ಯಾವುವೆಂದು ನೋಡೊಣ .

ಅರಿಶಿಣ 
ಅರಿಶಿಣದಲ್ಲಿ(curcumin) ಕರ್ ಕ್ಯೂಮಿನ್ ಎಂಬ ಪದಾರ್ಥವಿದೆ  ಇದರಲ್ಲಿ(anti inflamentory & anti oxident) ಕೀಲುಗಳ ಉರಿಯುತವನ್ನು ಕಡಿಮೆ ಮಾಡುವ ಹಾಗೂ ಕೀಲುಗಳ ಒಳಗಡೆ ಆಮ್ಲಜನಕದ ಪ್ರವೇಶವನ್ನು ನಿರ್ಭಂಧಿಸುವ ಗುಣವಿದೆ  ಜೊತೆಗೆ ಅರಿಶಿಣವನ್ನು ಕೀಲುಗಳ ಮೇಲೆ ಹಚ್ಚಿದಾಗ  ವೇಗವಾಗಿ ಗಾಯಗಳು ಗುಣಮುಖರಾಗಲೂ ಸಹಕರಿಸುತ್ತದೆ.
 ಕೀಲು ನೋವುಗಳೆ ಅಲ್ಲ ಹೃದಯಾಘಾತದಂತಹ ಅವಗಡಗಳು ಕೂಡ ಅರಿಶಿಣ ಸೇವನೆಯಿಂದ ಕಡಿಮೆ ಮಾಡಬಹುದು. ಈ ಅರಿಶಿನವನ್ನು ಆಹಾರ ಪದಾರ್ಥಗಳಲ್ಲಿ ಸೇರಿಸಿ ದಿನನಿತ್ಯ ಊಟ ಮಾಡುವುದು ಅಳವಡಿಸಿಕೊಳ್ಳುವುದರಿಂದ ನಮ್ಮ ಕೀಲು ನೋವುಗಳು ಬರದಂತೆ ನೋಡಿಕೊಳ್ಳಬಹುದು.

ಬೆರ್ರಿ ಹಣ್ಣುಗಳು
ಬೆರ್ರಿ ಹಣ್ಣುಗಳು ಅಂದರೆ ಬ್ಲೂ ಬೆರ್ರಿ, ರಾಸ್ ಬೆರಿ ,ಚರ್ರಿ, ನೆಲ್ಲಿಕಾಯಿ, ನೆರಳೇಕಾಯಿ, ಅಂತಹ ಹಣ್ಣುಗಳಲ್ಲಿ(anthosyanin) ಎನ್ನುವಂತಹ ಪದಾರ್ಥ ಇರುತ್ತದೆ ಇದು(anti inflamentory & anti oxident) ಆಂಟಿ ಇನ್ಫ್ಲುಮೆಂಟರಿ ಹಾಗೂ ಆಂಟಿಆಕ್ಸಿಡೆಂಟ್ ಆಗಿ ಕೆಲಸ ಮಾಡುತ್ತದೆ ಮತ್ತು ನಮ್ಮ ದೇಹದ ಮೃದು ಎಲಬುಗಳಿಗೆ ಬೇಕಾದ ದ್ರವ್ಯ ಉತ್ಪತ್ತಿ ಮಾಡುತ್ತದೆ. ಇದರಿಂದ  ಕೀಲುಗಳ ನೋವು ಉರಿಯುತ ಕಡಿಮೆಯಾಗುತ್ತದೆ ಈ ಹಣ್ಣುಗಳಲ್ಲಿ ಕ್ಯಾಲೋರಿಗಳು ಕಡಿಮೆ  ಹಾಗೂ ನಾರಿನಂಶ ಹೆಚ್ಚಿರುವುದರಿಂದ ನಮ್ಮ ತೂಕ ಕಡಿಮೆಗೊಳಿಸಲು ಸಹಕಾರಿಯಾಗಿದೆ ತೂಕ ಕಡಿಮೆಯಾದಂತೆ ಕೀಲಿನ ತೊಂದರೆಯೂ ಕಡಿಮೆಯಾಗುತ್ತದೆ 

ಹಸಿರು ಸೊಪ್ಪುಗಳು
ಮೆಂತೆ, ಮೂಲಂಗಿ, ಪಾಲಕ್, ಪುದಿನ ,ಕರಿಬೇವು ,ಹಲವಾರು ಸೊಪ್ಪುಗಳು ನಮ್ಮ ಪ್ರತಿನಿತ್ಯದ ಆಹಾರ ಪದ್ಧತಿಯಲ್ಲಿ ಇರಬೇಕು ಇವುಗಳಲ್ಲಿ(anti inflamentory & anti oxident)  ಹಲವಾರು ವಿಟಮಿನ್ ,ಮಿನರಲ್ ಮತ್ತು ನಾರು ಪದಾರ್ಥಗಳಿಂದ ಕೂಡಿದೆ. ಮುಖ್ಯಗಳಲ್ಲಿ ಇವುಗಳಲ್ಲಿ ವಿಟಮಿನ್ ಸಿ, ಕೆ ,ಎ, ಬಿ9, ಇರುತ್ತದೆ ಇವು ಕೀಲುಗಳ ಚಲನೆಗೆ ಬೇಕಾದ ದ್ರವ್ಯವನ್ನು ಉತ್ಪತ್ತಿಗೆ ಮಾಡುತ್ತವೆ


ಶುಂಠಿ
ಪಾರಂಪರಿಕವಾಗಿ ಶುಂಠಿಯಲ್ಲಿ ಔಷಧೀಯ ಗುಣಗಳಿವೆ ಎಂಬುದು ನಮ್ಮೆಲ್ಲರಿಗೂ ತಿಳಿದ ವಿಚಾರ ನಮ್ಮ ಮನೆಗಳಲ್ಲಿ ಬರುವ ಸಣ್ಣಪುಟ್ಟ ನೆಗಡಿ ,ಕೆಮ್ಮು ಮುಂತಾದ ಸಮಸ್ಯೆಗಳಿಗೆ ಶುಂಠಿಯನ್ನು ಪರಿಹಾರವಾಗಿ ಉಪಯೋಗಿಸುತ್ತೇವೆ ಶುಂಠಿಯಲ್ಲಿರುವ ಜಿಂಜರ್ ಆಲ್ ಎಂಬ ಪದಾರ್ಥವು ನಮ್ಮ ಕೀಲುಗಳಿಗೆ ಬೇಕಾಗಿರುವ ಸೈನೋವಿಯಲ್ (liquid) ದ್ರವ್ಯವನ್ನು ಉತ್ಪತ್ತಿ ಮಾಡುತ್ತದೆ ಅದೇ ರೀತಿ ಮೂಳೆ ಮಾಂಸಗಳಿಂದ ಬರುವ ನೋವು ಕಡಿಮೆ ಮಾಡಿ ಪಚನ ಕ್ರಿಯೆ ವಾಂತಿ ಬರದೇ ಇರುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ

ಬೆಳ್ಳುಳ್ಳಿ

 ಬೆಳ್ಳುಳ್ಳಿಯಲ್ಲಿ ಇರುವ  ಅಲಿಸಿನ್ ಪದಾರ್ಥವು ಉರಿಯುತ ಕಡಿಮೆ ಮಾಡಲು ಸಹಕಾರಿಯಾಗಿದೆ ಇದರಲ್ಲಿರುವ ಸೆಲೆನೀಯಂ,ಕ್ಯುಯಿರ್ಸಿಟಿನ್  ಎಂಬ ಪದಾರ್ಥಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಹಾಗೂ ತಲೆನೋವು ಬರದಂತೆ ನಿದ್ರೆ ಹೆಚ್ಚಾಗಲು ಸಹಕರಿಸುತ್ತವೆ


ಆಲೀವ್‌ ಎಣ್ಣೆ
ಆಲೀವ್ ಎಣ್ಣೆ ಅದರಲ್ಲೂ EXTRA VIRGIN OLIVE OIL ವಿಶೇಷವಾಗಿ ಹೆಚ್ಚು ಉಪಯೋಗಿಸಿದಷ್ಟು ಒಳ್ಳೆಯದು ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ ಎಂದು ಅಧ್ಯಯನಗಳು ತಿಳಿಸಿವೆ. ದಕ್ಷಿಣ ಅಮೇರಿಕಾದ ಮೆಡಿಟೇರನಿಯನ್ ಪ್ರದೇಶಗಳಲ್ಲಿನ ಜನರಿಗೆ ಸಕ್ಕರೆ ಕಾಯಿಲೆ, ರಕ್ತದೊತ್ತಡ ದಂತಹ ಕಾಯಿಲೆಗಳು ಕಂಡುಬಂದಿಲ್ಲ ಇದರ ಆಧಾರದ ಮೇಲೆ ಅಲ್ಲಿ ಸಮೀಕ್ಷೆ  ಮಾಡಿದಾಗ ಆಲಿವ್ ಆಯಿಲ್ ನಿಂದ ಅವರ ಆರೋಗ್ಯ ಸುಧಾರಿಸಿದ ಅಂಶವು ಬೆಳಕಿಗೆ ಬಂದಿದೆ ಹಾಗಾಗಿ ಆಹಾರದಲ್ಲಿ ಹಾಲಿವು ಎಣ್ಣೆ ಉಪಯೋಗಿಸುವುದು ತುಂಬಾ ಉತ್ತಮ.

 ನಮ್ಮ ಸುತ್ತ ಮುತ್ತಲಿನ ದಿನ ನಿತ್ಯ ಉಪಯೋಗಿಸುವ ಹಲವಾರು ಆಹಾರ ಪದಾರ್ಥಗಳಿಂದ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಇವುಗಳು ಕೇವಲ ಆಹಾರವಲ್ಲ ಔಷಧಿಗಳಂತೆ ಕಾರ್ಯನಿರ್ವಹಿಸುತ್ತವೆ ಇಂತಹ ಆಹಾರ ಪದಾರ್ಥಗಳನ್ನು ಸೇವಿಸಿ ಆಹಾರ ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ


No comments:

Post a Comment