ನಮ್ಮ ಆಹಾರ ಸೇವನೆಯಲ್ಲಿ ಸಂಸ್ಕರಣೆ ಹೊಂದಿದ ಆಹಾರಗಳಾದ ಕೆ ಎಫ್ ಸಿ ,ಪಿಜ್ಜಾ, ಬರ್ಗರ್, ಸೇವಿಸುತ್ತಿದ್ದರೆ ಮತ್ತು ನಮಗೆ ಹಸಿವಾಗದೆ ಇರುವುದು, ಪದೇ ,ಪದೇ ತಲೆ ಸುತ್ತುವುದು, ಹಳಸಿದ ಆಹಾರ ಸೇವನೆ ಮಾಡುವುದು, ಆಹಾರದಲ್ಲಿ ನಾರಿನಂಶ ಇರದೆ ಇರುವ ಆಹಾರ ಸೇವಿಸುವುದು, ಒಂದೇ ಆಹಾರವನ್ನು ಸತತ ಸೇವಿಸುವುದು ಇವೆಲ್ಲವೂ ನಮ್ಮ ಕರುಳಿನ ಅನಾರೋಗ್ಯವನ್ನು ತೋರಿಸುತ್ತವೆ .
ನಮ್ಮ ಕರುಳಿನ ಆರೋಗ್ಯ ಉತ್ತಮವಾಗಬೇಕೆಂದರೆ ನಾವು ಊಟ ಮಾಡಿದ ಆಹಾರ ನಮ್ಮ ದೇಹಕ್ಕೆ ಪೂರ್ಣ ಪ್ರಮಾಣದಲ್ಲಿ ಹೀರಿಕೆಯಾಗಬೇಕು ಹಾಗು ಕರುಳಿನಲ್ಲಿರುವ ಆರೋಗ್ಯಕರ ಬ್ಯಾಕ್ಟೀರಿಯಗಳು ಉತ್ತಮವಾಗಿ ಬೆಳೆಯುವಂತಹ ಆಹಾರ ಸೇವಿಸುವುದು ನಮ್ಮ ಕರುಳು ಆರೋಗ್ಯವಾಗಿದ್ದರೆ ನಾವು ಊಟ ಮಾಡುವಂತಹ ಎಲ್ಲಾ ಆಹಾರಗಳು ನಮ್ಮ ದೇಹಕ್ಕೆ ಹೀರಿಕೆಯಾಗುತ್ತವೆ ಸಣ್ಣ ಕರುಳು ಆರೋಗ್ಯವಾಗಿ ಇರಬೇಕೆಂದರೆ .ನಮ್ಮ ದೇಹಕ್ಕೆ ವ್ಯಾಯಾಮ ಹಾಗೂ ಆರೋಗ್ಯಕರ ಭೋಜನ ಅಗತ್ಯ .ದಿನನಿತ್ಯದ ವ್ಯಾಯಾಮ ಸಣ್ಣ ಕರುಳನ್ನು ಆರೋಗ್ಯವಾಗಿಡುತ್ತದೆ ಈ ರೀತಿಯ ವ್ಯಾಯಾಮ ಮಾಡುವುದರಿಂದ ದೇಹಕ್ಕೆ ದಣಿವಾಗಿ ಆ ದಣಿವಿನಿಂದ ದೇಹಕ್ಕೆ ಒಳ್ಳೆ ನಿದ್ದೆ ಸಿಗುತ್ತದೆ .ಇದರಿಂದ ನಮ್ಮ ಕರಳುಗಳು ಆರೋಗ್ಯಕರವಾಗುತ್ತದೆ. ಹಾಗೂ ದಿನಕ್ಕೆ ನಾಲ್ಕರಿಂದ ಐದು ಲೀಟರ್ ನೀರು ಕುಡಿಯುವುದರಿಂದ ಕರುಳಿನ ಪಚನ ಕ್ರಿಯೆಯೂ ಉತ್ತಮವಾಗುತ್ತದೆ.
ನಮ್ಮ ಕರುಳು ಆರೋಗ್ಯವಾಗಿರಲು ನಾವು ಯಾವ ಆಹಾರವನ್ನು ಸೇವಿಸಬಾರದು
ಸಕ್ಕರೆಯು ನಮ್ಮ ದೇಹಕ್ಕೆ ಉತ್ತಮವಲ್ಲ ಎಂದು ಬಹಳಷ್ಟು ವೈದ್ಯರು ಈಗಾಗಲೇ ತಿಳಿಸಿರುತ್ತಾರೆ. ಇದು ಕರಳಿಗೂ ಕೂಡ ಉತ್ತಮವಲ್ಲ ಕಾರಣ ಸಕ್ಕರೆಯಲ್ಲಿರುವ ಅತಿಯಾದ ಗ್ಲುಕೋಸ್ ಅಂಶವು ಕರುಳಿನಲ್ಲಿಕೆಟ್ಟ ಬ್ಯಾಕ್ಟೀರಿಯಗಳನ್ನು ಬೆಳೆಯಲೂ ಸಹಕರಿಸುತ್ತದೆ. ಇದರಿಂದ ನಮ್ಮ ಜೀರ್ಣಕ್ರಿಯೆ ಹಾಗು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಕರಿದ ಪದಾರ್ಥಗಳನ್ನು ಸೇವಿಸುವುದು ನಮ್ಮ ಕರುಳಿಗೆ ಉತ್ತಮವಲ್ಲ ಏಕೆಂದರೆ ಈ ಪದಾರ್ಥಗಳು ಜೀರ್ಣ ಕ್ರಿಯೆಯನ್ನು ನಿಧಾನಗೊಳಿಸುತ್ತವೆ ಹಾಗೂ ಕರುಳಿನ ಆರೋಗ್ಯಕರ ಬ್ಯಾಕ್ಟೀರಿಯಾಗಳನ್ನು ನಾಶಗೊಳಿಸುತ್ತದೆ ಕಾರಣ ಈ ಆಹಾರಗಳು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವ ಆಹಾರಗಳಾಗಿವೆ ಎಣ್ಣೆಯಲ್ಲಿ ಕರೆದ ಪದಾರ್ಥಗಳನ್ನು ಆದಷ್ಟು ದೂರವಿಡಿ
ಫಾಸ್ಟ್ ಫುಡ್ ಅಥವಾ ಟ್ಯಾಕ್ಡ್ ಫುಡ್ ಉದಾಹರಣೆ ಪಿಜ್ಜಾ ಬರ್ಗರ್ ಮುಂತಾದ ಆಹಾರ ಪದಾರ್ಥಗಳನ್ನು ಆದಷ್ಟು ದೂರವಿಡಿ ಏಕೆಂದರೆ ಈ ಪದಾರ್ಥಗಳಲ್ಲಿ ಫೈಬರ್ ಪ್ರಮಾಣ ಬಹಳ ಕಡಿಮೆ ಇರುತ್ತದೆ ಹಾಗೂ ಹೆಚ್ಚಾಗಿ ನಾಲಗೆ ರುಚಿಗೋಸ್ಕರ ಕೃತಕ ರಸಾಯನಗಳನ್ನು ಸೇರಿಸಿರುತ್ತಾರೆ. ಈ ರೀತಿಯ ಆಹಾರಗಳು ಕ್ರಮೇಣ ಕರುಳಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಜೊತೆಗೆ ನಮ್ಮ ಕೆಲವು ಅಭ್ಯಾಸಗಳು ಉದಾಹರಣೆಗೆ ಧೂಮಪಾನ ,ಮಧ್ಯ ಸೇವನೆಂತಹ ಅಭ್ಯಾಸಗಳು ಕರುಳಿನ ಮೇಲೆ ದುಷ್ಪರಿಣಾಮವನ್ನು ಬೀರುತ್ತವೆ.
ಆಂಟಿಬಯೋಟಿಕ್ ಔಷಧಗಳನ್ನುಹೆಚ್ಚಾಗಿ ಸೇವಿಸುವುದರಿಂದ ನಮ್ಮ ಕರುಳಿಗೆ ಸಮಸ್ಯೆ ಆಗುತ್ತದೆ ಏಕೆಂದರೆ ಈ ಔಷಧಗಳು ಕೃತಕ ರಸಾಯನದಿಂದ ತುಂಬಿರುತ್ತವೆ. ಇವುಗಳು ನಮ್ಮ ಕರುಳಿನ ಆರೋಗ್ಯಕರ
ಬ್ಯಾಕ್ಟೀರಿಯಗಳನ್ನು ನಾಶಗೊಳಿಸಿ ಕೆಟ್ಟ ಬ್ಯಾಕ್ಟೀರಿಯ ಬೆಳೆಯಲು ಕಾರಣವಾಗುತ್ತದೆ
ನಮ್ಮ ಕರುಳಿನಲ್ಲಿ ಸುಮಾರು 300 ರಿಂದ ಸಾವಿರದವರೆಗೆ ಹಲವಾರು ವಿಧದ ಬ್ಯಾಕ್ಟೀರಿಯಗಳು ಇರುತ್ತವೆ ಇವು ಕರುಳನ್ನು ಆರೋಗ್ಯವಾಗಿಟ್ಟು ಜೀರ್ಣ ಕ್ರಿಯೆಗೆ ಸಹಕರಿಸುತ್ತವೆ ನಾವು ತಿನ್ನುವ ಆಹಾರವು ಕೃತಕ ರಸಾಯನಗಳಿಂದ ಕೂಡಿದ್ದು ಅದು ದೇಹ ಸೇರಿದಾಗ ಈ ಬ್ಯಾಕ್ಟೀರಿಯಗಳಿಗೆ ತೊಂದರೆಯನ್ನುಂಟು ಮಾಡಿ ಅವುಗಳ ನಾಶಕ್ಕೆ ಕಾರಣವಾಗುತ್ತದೆ
ಕರುಳು ಆರೋಗ್ಯವಾಗಿರಲು ನಾವು ಮಾಡಬೇಕಿರುವ ಕಾರ್ಯಗಳು
ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ನಮ್ಮ ಕರುಳಿನಲ್ಲಿರುವ ಅನಾರೋಗ್ಯಕರ ಬ್ಯಾಕ್ಟೀರಿಯಗಳು ನಾಶವಾಗಿ ಆರೋಗ್ಯಕರ ಬ್ಯಾಕ್ಟೀರಿಯಗಳು ಹೆಚ್ಚಾಗಿ ಬೆಳೆಯಲು ಸಹಕಾರಿಯಾಗುತ್ತದೆ
ಹೆಚ್ಚು ನಾರಿನಂಶ ಹೊಂದಿರುವ ಪದಾರ್ಥಗಳನ್ನು ಸೇವಿಸುವುದರಿಂದ ಕರುಳನ್ನು ಆರೋಗ್ಯವಾಗಿಡಬಹುದು ನಾರಿನ ಅಂಶದಿಂದ ಆರೋಗ್ಯಕರ ಬ್ಯಾಕ್ಟೀರಿಯಗಳ ಉತ್ಪತ್ತಿ ಹೆಚ್ಚಾಗಿ ಜೀರ್ಣಕ್ರಿಯೆ ಸುಲಭವಾಗುತ್ತದೆ
ಹೆಚ್ಚಾಗಿ ಸಸ್ಯಹಾರವನ್ನು ಸೇವಿಸುವುದರಿಂದ ಕರುಳಿನ ಆರೋಗ್ಯವನ್ನು ಕಾಪಾಡಬಹುದು . ಹಾಲು ಮೊಸರು ಮಜ್ಜಿಗೆ ಸೇವಿಸುವುದರಿಂದ ಹಾಗೂ ದೋಸೆ ಇಡ್ಲಿ ಮುಂತಾದ ಪದಾರ್ಥಗಳಲ್ಲಿ ಸೋಡಾ ಪುಡಿಯನ್ನು ಬೆರೆಸಿರುತ್ತೇವೆ ಇದು ಸಹ ನಮ್ಮ ಕರುಳಿನಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಗಳು ಬೆಳೆಯಲು ಸಹಕರಿಸುತ್ತವೆ ಇಂತಹ ಪದಾರ್ಥಗಳನ್ನು ಸೇವಿಸುವುದು ಉತ್ತಮ.
ಒಟ್ಟಾರೆಯಾಗಿ ಕರುಳಿನಿಂದ ಹಲವಾರು ಸಮಸ್ಯೆಗಳು ಪ್ರಾರಂಭವಾಗುತ್ತವೆ ಉದಾರಣೆಗೆ ತಲೆನೋವು ಆಮಶಂಕೆ ಹಾಗೂ ರೋಗ ನಿರೋಧಕ ಶಕ್ತಿ ಕುಂದುವುದು ಮೈ ಕೈ ನೋವು ಉಂಟಾಗುವುದು ಹೀಗೆ ಹಲವಾರು ತೊಂದರೆಗಳು ಕರುಳಿನ ಅನಾರೋಗ್ಯದಿಂದ ಉಂಟಾಗುತ್ತದೆ ಇಂತಹ ಸಂದರ್ಭದಲ್ಲಿ ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ .

No comments:
Post a Comment