ಕಣ್ಣುಗಳ ಆರೋಗ್ಯ ಮುಖ್ಯ ಎಕೆ..?
ಜಗತ್ತಿನ ಎಲ್ಲ ಜೀವಿಗಳಿಗೂ ಅತ್ಯವಶ್ಯಕವಾದ ದೇಹದ ಭಾಗ ಎಂದರೆ ಅದು ಕಣ್ಣು .ನಾವು ಜಗತ್ತಿನ ಸೌಂದರ್ಯ ಆಸ್ವಾದಿಸಲು ಸಂಭ್ರಮಿಸಲು ಕಣ್ಣುಗಳು ಮುಖ್ಯ ಪಾತ್ರವಹಿಸುತ್ತವೆ. ಆದರೆ ಇಂದಿನ ಡಿಜಿಟಲ್ ಯುಗದಲ್ಲಿ ಪ್ರತಿಯೊಂದು ವಿಷಯವನ್ನು ನಾವು ಆನ್ಲೈನ್ , ವಿಡಿಯೋ ಮುಖಾಂತರ ಹೆಚ್ಚಾಗಿ ತಿಳಿದುಕೊಳ್ಳುತ್ತೇವೆ ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ಚಿಕ್ಕ ,ಚಿಕ್ಕ ಮಕ್ಕಳಿಗೂ ಕನ್ನಡಕ ಹಾಕುವ ಪರಿಸ್ಥಿತಿ ಬಂದಿದೆ. ನಾವು.ಕಣ್ಣುಗಳ ಆರೋಗ್ಯವನ್ನು ಕಾಪಾಡದೇ ಇದ್ದರೆ ಮುಂದಿನ ದಿನಗಳಲ್ಲಿ ಅತಿ ವೇಗವಾಗಿ ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಅವಕಾಶವಿರುತ್ತದೆ. ಆಧುನಿಕಯುಗದಲ್ಲಿ ನಾವು ಮೊಬೈಲ್ ಹಾಗೂ ಕಂಪ್ಯೂಟರ್ಗಳ ವೀಕ್ಷಣೆಯನ್ನು ಕಡಿಮೆ ಮಾಡುವುದು ಅಸಾಧ್ಯವಾಗಿದೆ . ನಾವು ಅತಿ ಹೆಚ್ಚು ಡಿಜಿಟಲ್ ವಿಡಿಯೋಗಳನ್ನು ನೋಡುತ್ತಿದ್ದರೆ ಅದರಿಂದ ಕಣ್ಣಿಗೆ ಹೆಚ್ಚಿನ ಶ್ರಮ ಕೊಟ್ಟಂತಾಗುತ್ತದೆ ಇದನ್ನು ತಪ್ಪಿಸಲು ಆಗಾಗ ನಾವು ಹೊರಗಡೆ ಬಂದು ದೂರದ ವಸ್ತುಗಳನ್ನು ವೀಕ್ಷಣೆ ಮಾಡಿದಾಗ ನಮ್ಮ ಕಣ್ಣುಗಳ ಮೇಲೆ ಬೀಳುವ ಭಾರವು ಕಡಿಮೆಯಾಗಿ ಕಣ್ಣು ಪುನಶ್ಚೇತನಗೊಳ್ಳುತ್ತಾ ಹೋಗುತ್ತದೆ.
ಕಣ್ಣುಗಳ ರಕ್ಷಣೆಗಾಗಿ ವಿಟಮಿನ್ ಯುಕ್ತ ಪೋಷಕಾಂಶ ಆಹಾರವನ್ನು ಸೇವಿಸುವುದು ಒಳ್ಳೆಯದು ಉದಾಹರಣೆಗೆ ಮೀನು ,ಮೊಟ್ಟೆ, ಮಾಂಸ, ಹಸಿರು ತರಕಾರಿಗಳು ,ಹಣ್ಣುಗಳು ,ಇತ್ಯಾದಿ ಚಿಕ್ಕ ಮಕ್ಕಳಿಗೆ ಮೊಬೈಲ್ ಫೋನ್ಗಳನ್ನ ನೀಡುವುದು ಅವರ ಕಣ್ಣಿನ ಮೇಲೆ ಬಹಳ ಕೆಟ್ಟ ಪರಿಣಾಮ ಉಂಟುಮಾಡುತ್ತದೆ. ಏಕೆಂದರೆ ಮಕ್ಕಳ ಕಣ್ಣಿನಲ್ಲಿರುವ ರೆಟಿನಾದ ಮೇಲೆ ತೀವ್ರ ಒತ್ತಡ ಉಂಟಾಗಿ ಮುಂದೆ ಮಕ್ಕಳಿಗೆ ಕನ್ನಡಕ ಬರುವ ಸಾಧ್ಯತೆ ಇರುತ್ತದೆ . ಚಿಕ್ಕ ಮಕ್ಕಳು ಈ ಮೊಬೈಲ್ ಅಥವಾ ಇತರೆ ಡಿಜಿಟಲ್ ವಸ್ತುಗಳನ್ನು ಹತ್ತಿರದಿಂದ ವೀಕ್ಷಿಸುವುದರಿಂದ ಕಣ್ಣಿನ ಬೆಳವಣಿಗೆಯಲ್ಲಿ ತುಂಬಾ ಬದಲಾವಣೆ ಉಂಟಾಗಿ ಕಣ್ಣಿನ ಪೊರೆ ಸಹಿತ ಬರಬಹುದು. ಇದರ ಬದಲಾಗಿ ಮಕ್ಕಳನ್ನು ಸೂರ್ಯನ ಬಿಸಿಲಲ್ಲಿ ಆಟ ಆಡಲೂ ಬಿಡುವುದರಿಂದ ಅವರ ಕಣ್ಣುಗಳು ಹೆಚ್ಚಿನ ದೃಷ್ಟಿ ಸಾಮರ್ಥ್ಯವನ್ನು ಪಡೆಯುತ್ತವೆ. ಪಾಲಕರು ಮೊಬೈಲ್ ವೀಕ್ಷಣೆ ಕಡಿಮೆ ಮಾಡಬೇಕುಇದು ಮಕ್ಕಳ ಮೇಲೆ ಪರಿಣಾಮ ಬೀರಿ ಮಕ್ಕಳು ಸಹಿತ ಮೊಬೈಲ್ ವೀಕ್ಷಣೆಯನ್ನು ಕಡಿಮೆ ಮಾಡುತ್ತಾರೆ. ಮುಖ್ಯವಾಗಿ ಮಕ್ಕಳು ಅವರ ತಂದೆ ತಾಯಿಯ ಅಭ್ಯಾಸಗಳನ್ನು ಅನುಕರಣೆ ಮಾಡುತ್ತಿರುತ್ತಾರೆ ಆದ್ದರಿಂದ ಪಾಲಕರು ಮೊಬೈಲ್ ವೀಕ್ಷಣೆ ಕಡಿಮೆ ಮಾಡುವುದು ಒಳಿತು.
ಕಣ್ಣಿನ ಸುರಕ್ಷತೆ ಗೋಸ್ಕರ 20ರ ಸೂತ್ರವನ್ನು ಅಳವಡಿಸಿಕೊಳ್ಳಬೇಕು .
ನಮ್ಮ ಕಣ್ಣನ್ನು ಯಾವಾಗಲೂ ಒದ್ದೆ ಆಗಿರುವಂತೆ ಅಥವಾ ನೀರಿನಾಂಶದಿಂದ ತುಂಬಿರುವಂತೆ ನೋಡಿಕೊಳ್ಳುವುದು ಮುಖ್ಯ. ಕಣ್ಣಿನಲ್ಲಿ ನೀರಿನ ಅಂಶ ಕಾಣದೆ ಇದ್ದಲ್ಲಿ ಇದು ಸತತ ಕಣ್ಣುಗಳ ಮೇಲಿನ ಹೆಚ್ಚಿನ ಒತ್ತಡವನ್ನು ಪ್ರತಿನಿಧಿಸುತ್ತದೆ .ಆದ್ದರಿಂದ ಪ್ರತಿ 20 ನಿಮಿಷಕ್ಕೊಮ್ಮೆ 20 ಸೆಕೆಂಡುಗಳು 20 ಅಡಿ ದೂರದ ವಸ್ತುಗಳನ್ನು ನೋಡುವುದು ಅಭ್ಯಾಸ ಮಾಡಿಕೊಳ್ಳಬೇಕು ಇದನ್ನು ಕಣ್ಣಿನ 20 ರ ಸೂತ್ರ ಎನ್ನುತ್ತೇವೆ. ಇದನ್ನು ಅನುಕರಣೆ ಮಾಡುವುದರಿಂದ ನಮ್ಮ ಕಣ್ಣಿಗೆ ವಿಶ್ರಾಂತಿ ಸಿಗುವುದರ ಜೊತೆಗೆ ಕಣ್ಣಿನ ದೃಷ್ಟಿ ಸಾಮರ್ಥ್ಯ ವೃದ್ಧಿಸುತ್ತದೆ ಹಾಗೂ ನಮ್ಮ ಕಣ್ಣು ಒದ್ದೆಯಾಗಿರಲು ಇದು ಸಹಾಯಕಾರಿ .
ನಮ್ಮ ದೇಹದ ಇತರ ಭಾಗಗಳಿಗೆ ಕ್ಯಾನ್ಸರ್ ಹಡುವಂತೆ ಕಣ್ಣಿಗೂ ಕ್ಯಾನ್ಸರ್ ಹರಡುತ್ತದೆ ಕಣ್ಣಿನ ಕ್ಯಾನ್ಸರ್ ನಲ್ಲಿ ಹಲವಾರು ವಿಧಗಳಿವೆ ಕಣ್ಣಿನ ರೆಪ್ಪೆ, ಕಣ್ಣಿನ ರೆಟಿನಾ, ಕಣ್ಣಿನ ಸುತ್ತಲೂ ಕ್ಯಾನ್ಸರ್ ಹರಡುವುದು ಹೇಗೆ ಹಲವಾರು ವಿಧಗಳಿವೆ. ಕಣ್ಣಿಗೆ ಯಾವುದೇ ಸಮಸ್ಯೆ ಕಾಣಿಸದಲ್ಲಿ ತಕ್ಷಣವೇ ವೈದ್ಯರನ್ನ ಸಂಪರ್ಕಿಸುವುದು ಮುಖ್ಯ ಇಲ್ಲವಾದಲ್ಲಿ ಬೇಗ ಹರಡುವ ಅವಕಾಶವಿರುತ್ತದೆ.
ಕಣ್ಣಿನ ಆರೋಗ್ಯಕ್ಕಾಗಿ ಸೇವಿಸಬೇಕಾದ ಆಹಾರಗಳು
ಕಣ್ಣಿನ ಆರೋಗ್ಯವನ್ನು ಕಾಪಾಡಲು ನಾವು ಉತ್ತಮವಾದ ಆಹಾರ ಸೇವನೆಯನ್ನು ಅಳವಡಿಸಿಕೊಳ್ಳುವುದು ಮುಖ್ಯ ಮುಖ್ಯವಾಗಿ ಹಸಿರು ಸೊಪ್ಪುಗಳು ಮೊಟ್ಟೆ ಮೀನು ಮಾಂಸ ಹಣ್ಣುಗಳು ಹೀಗೆ ಎಲ್ಲ ಪೋಷಕಾಂಶವುಳ್ಳ ಆಹಾರವನ್ನು ಆಯಾ ಕಾಲಕ್ಕೆ ತಕ್ಕಂತೆ ಸೇವಿಸಿದಾಗ ನಮ್ಮ ಕಣ್ಣುಗಳಿಗೆ ಪೋಷಕಾಂಶಗಳು ದೊರೆತು ಆರೋಗ್ಯವಾಗಿರಲು ಸಾಧ್ಯವಾಗುತ್ತದೆ ಹಾಗೂ ಕಣ್ಣನ್ನು ವಿಪರೀತ ಉಜ್ಜುವುದು ಕಣ್ಣನ್ನು ಒತ್ತುವುದು ಮಾಡುವುದರಿಂದ ಕಣ್ಣಿಗೆ ತೊಂದರೆಯಾಗುವುದು ಜೊತೆಗೆ ಹಾನಿ ಕೂಡ ಆಗಬಹುದು ಆದ್ದರಿಂದ ಸಾಧ್ಯವಾದಷ್ಟು ಸ್ವಚ್ಛ ನೀರಿನಿಂದ ಕಣ್ಣನ್ನು ಆಗಾಗ ತೊಳೆಯುತ್ತಿರಿ ಸಾಧ್ಯವಾದಷ್ಟು ಕಣ್ಣನ್ನು ತೇವಾಂಶದಿಂದಿಡಿ.
ಕಣ್ಣಿಗೆ ಆಗಾಗ ಹರಳೆಣ್ಣೆಯಿಂದ ಮಸಾಜ್ ಮಾಡಿ ಇದರಿಂದ ಕಣ್ಣಿನ ಆರೋಗ್ಯವು ಹೆಚ್ಚುತ್ತದೆ ಹರಳೆಣ್ಣೆಗೆ ವಿರೇಚಕ ಗುಣವಿದೆ ಇದನ್ನು ಆಂತರಿಕವಾಗಿ ತೆಗೆದುಕೊಂಡಾಗ ನಮ್ಮ ದೇಹದಲ್ಲಿರುವ ತ್ಯಾಜ್ಯ ವಸ್ತುಗಳನ್ನು ಹೊರಹಾಕುತ್ತದೆ.ಬಾಹ್ಯವಾಗಿ ತೆಗೆದುಕೊಂಡಾಗ ಚರ್ಮದ ಮೂಲಕ ಹಾದು ಹೋಗಿ ನೋವನ್ನು ಗುಣಪಡಿಸುವ ಸಾಮಾರ್ಥ್ಯವಿದೆ .ಆದ್ದರಿಂದ ಹರಳೆಣ್ಣೆ ಬಳಸುತ್ತೀರಿ.
ಕಣ್ಣಿನ ಆರೋಗ್ಯಕ್ಕಾಗಿ ಹಲವಾರು ವ್ಯಾಯಾಮಗಳಿವೆ.
ಒಂದು ಕತ್ತಲೆಯ ಕೋಣೆಯಲ್ಲಿ ಒಂದು ಮೇಣದ ದೀಪವನ್ನು ಆ ದೀಪವನ್ನು 10 ಅಡಿ ದೂರದಿಂದ ಸಾಧ್ಯವಾದಷ್ಟು ಹೊತ್ತು ಏಕಾಗ್ರತೆಯಿಂದ ವೀಕ್ಷಿಸಿ ಇದರಿಂದ ಕಣ್ಣಿನ ಆರೋಗ್ಯ ವೃದ್ಧಿಸುತ್ತದೆ
ಕಣ್ಣಿನ ಆರೋಗ್ಯಕ್ಕಾಗಿ ಹಲವಾರು ಕಣ್ಣಿನ ವ್ಯಾಯಾಮಗಳಿವೆ, ಕಣ್ಣನ್ನು ತಿರುಗಿಸುವುದು ಹಾಗೂ ರೆಪ್ಪೆ ಮುಚ್ಚಿ ತೆಗೆಯುವುದು ಹಾಗೂ ಸ್ವಚ್ಛವಾದ ತಣ್ಣೀರಿನಲ್ಲಿ ಒಂದು ನಿಮಿಷಗಳ ಕಾಲ ತೆರೆದ ಕಣ್ಣನ್ನು ಮುಳುಗಿಸುವುದು ಹೀಗೆ ಹಲವಾರು ವ್ಯಾಯಾಮಗಳಿಗೆ ಇವುಗಳನ್ನು ಮಾಡಿ ನಮ್ಮ ಕಣ್ಣನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು ಕಣ್ಣಿನಿಂದ ಮಾತ್ರ ನಾವು ಈ ಸಮಾಜವನ್ನು ನೋಡಲು ಸಾಧ್ಯವಾಗುತ್ತದೆ ಅನುಭವಿಸಲು ಸಾಧ್ಯವಾಗುತ್ತದೆ.

























































